ಭಾರತವು ಒಂದು ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣರಾಜ್ಯವಾಗಿದ್ದು, ಸ್ವತಂತ್ರ್ಯ, ಸಮಾನತೆ, ನ್ಯಾಯಯುತ, ಸಮಾಜವಾದಿ, ಜಾತ್ಯತೀತ, ಐಕ್ಯತೆ ಮತ್ತು ಭಾತೃತ್ವ ಹೊಂದಿರುವ ರಾಷ್ಟ್ರ ನಮ್ಮದಾಗಿದ್ದು 71 ನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿದ್ದೇವೆ
ಒಂದು ದೇಶ ಎಂದು ಕರೆಯಿಸಿಕೊಳ್ಳಲು ಅದಕ್ಕೆ ಒಂದು ಸಂವಿಧಾನ, ಭಾಷೆ, ಭೌಗೋಳಿಕ ವ್ಯಾಪ್ತಿ ಇವೆಲ್ಲವೂ ಇರಬೇಕಾಗುತ್ತದೆ. ವಿಶ್ವದ ಪ್ರತಿಯೊಂದು ರಾಷ್ಟ್ರವು ತನ್ನ ಆಡಳಿತ ವ್ಯವಸ್ಥೆಯನ್ನು ಸೂಕ್ತ ಹಾಗೂ ಕ್ರಮಬದ್ಧವಾಗಿ ನಡೆಸಲು ಬಯಸುತ್ತಾರೆ. ಅದಕ್ಕೆಂದೇ ಹಲವಾರು ನಿಯಮಗಳನ್ನು ರಚಿಸಿಕೊಂಡು, ಜನತೆಯಿಂದ ಅದಕ್ಕೆ ಒಪ್ಪಿಗೆ ಪಡೆಯುತ್ತಾರೆ. ಈ ರೀತಿ ನಿಯಮಾವಳಿಗಳಿಗೆ ಸಂವಿಧಾನ ಎಂದು ಕರೆಯಲಾಗುತ್ತದೆ. ಕ್ರಿ.ಶ 1946 ಸೆಪ್ಟೆಂಬರ್‍ನಲ್ಲಿ ಪಂಡಿತ ನೆಹರೂರವರ ನೇತೃತ್ವದಲ್ಲಿ, 308 ಸದಸ್ಯರಿರುವ ಸಂವಿಧಾನ ರಚನಾ ಸಮಿತಿಯು ನವೆಂಬರ್ 26 ರಿಂದ ಸಂವಿಧಾನ ರಚನಾಸಭೆ ಕಾರ್ಯಕೈಗೊಂಡಿತು. ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿ ಡಾ. ಬಾಬುರಾಜೇಂದ್ರ ಪ್ರಸಾದ್ ಹಾಗೂ ಕರಡು ಸಮಿತಿ ಅಧ್ಯಕ್ಷರಾಗಿ ಡಾ. ಅಂಬೇಡ್ಕರ್ ನೇಮಕಗೊಂಡರು. ಸಂವಿಧಾನ ರಚನಾ ಸಭೆಯಲ್ಲಿ ಕರ್ನಾಟಕದವರಾದ ಕೆ.ಸಿ ರೆಡ್ಡಿ, ಟಿ. ಸಿದ್ದಲಿಂಗಯ್ಯ, ಕೆ. ಹನುಮಂತಯ್ಯ, ಹೆಚ್. ಸಿದ್ಧವೀರಪ್ಪ, ಟಿ. ಚನ್ನಯ್ಯ, ಕೆ. ಎಂ ಪೂಣಚ್ಚ, ಎಸ್. ನಿಜಲಿಂಗಪ್ಪ, ಆರ್ ದಿವಾಕರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
1949 ರ ನವೆಂಬರ್ 26 ರಂದು ಅಂಗೀಕಾರಗೊಂಡ ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. 950 ಜನವರಿ 26 ರಂದು ಭಾರತದ ಸಂವಿಧಾನವನ್ನು ಅಳವಡಿಸಿಕೊಂಡು ಪೂರ್ಣ ಸ್ವರಾಜ್ಯದ ಕಲ್ಪನೆ ಭಿತ್ತರಿಸುವುದರ ಮೂಲಕ ಭಾರತ ಗಣರಾಜ್ಯವಾಯಿತು. ಅಂದಿನಿಂದ ಪ್ರತಿವರ್ಷ ಜನವರಿ 26 ರಂದು ರಾಷ್ಟ್ರಾದ್ಯಂತ ಗಣರಾಜ್ಯ ದಿನಾಚರಣೆ ಸಮಾರಂಭವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಗಣರಾಜ್ಯ ದಿನಾಚರಣೆ 7ನೇ ದಶಕದಲ್ಲಿ. ಇಂದು ನಾವು ದೇಶಾದ್ಯಂತ 71 ನೇ ಗಣರಾಜ್ಯ ದಿನಾಚರಣೆ ಆಚರಿಸುತ್ತಿದ್ದೇವೆ. ಹಾಗಿದ್ದರೇ ಸಂವಿಧಾನ ರಚನೆಯಲ್ಲಿ ಪಾಲ್ಗೊಂಡ ಮಹನೀಯರು, ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳ ಕುರಿತ ಸಂಪೂರ್ಣ ಮಾಹಿತಿ ಚರ್ಚಿಸೋಣ.
ಗಣರಾಜ್ಯ ಎಂದರೇ, ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ, ಪ್ರಜೆಗಳೇ ನಿರ್ಮಿಸುವ ಸರ್ಕಾರ ಗಣರಾಜ್ಯವಾಗಿದೆ ಎಂಬ ಅಬ್ರಾಹಂ ಲಿಂಕನ್‍ನರ ವಾಕ್ಯ ಸ್ಮರಿಸಬಹುದು. ಭಾರತ ಗಣರಾಜ್ಯ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ ಯಾವುದೇ ರಾಜಮನೆತನಗಳು ಆಡಳಿತ ನಡೆಸಲು ಅವಕಾಶವಿಲ್ಲ. ಜನರು ಚುನಾವಣೆ ಮೂಲಕ ಅವರ ನಾಯಕರನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ದೇಶದ ಸರ್ಕಾರ ಜನರಿಂದ ರಚನರಯಾಗಿದ್ದು, ಜನಪರ ಕಾರ್ಯ ಮಾಡುತ್ತಾ, ಸಾರ್ವಜನಿಕರ ಎಲ್ಲಾ ವಿಷಯಗಳನ್ನು ಪರಿಗಣಿಸುವುದರ ಮೂಲಕ ಜನಪರ ಕಾಳಜಿ ಹೊಂದಿರುತ್ತದೆ, ಭಾರತವು 1950 ರ ಜನವರಿ 26 ರಂದು ಭಾರತ ಸಂವಿಧಾನ ಜಾರಿಗೊಳಿಸುವುದರ ಮೂಲಕ ಗಣರಾಜ್ಯವಾಯಿತು. 1929 ಜನವರಿ 26 ರಂದು ಲಾಹೋರ್‍ನಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣಸ್ವರಾಜ್ ಎಂದು ಘೋಷಿಸಲಾಯಿತು. ಇದೇ ಕಾರಣಕ್ಕಾಗಿ 1950 ಜನವರಿ 26 ರಂದು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ.
ಸಂವಿಧಾನವೆಂದರೆ ಅದೊಂದು ಭಾರತದ ಎಲ್ಲಾ ನಾಗರೀಕರು ಅನುಸರಿಸಬೇಕಾದ ಮೂಲಭೂತ ನಿಯಮ ಮತ್ತು ಹಕ್ಕುಗಳ ಸ್ಥಾಪನೆ ಕುರಿತ ರಚಿಸಲಾಗಿರುವ ಕಾಯಿದೆ ಇದಾಗಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತ ಸಂವಿಧಾನ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಸ್ತುತ ಸಂವಿಧಾನದಲ್ಲಿ 25 ಭಾಗಗಳಿದ್ದು, 103 ತಿದ್ದುಪಡಿಗಳು, 448 ಕ್ಕೂ ಹೆಚ್ಚು ವಿಧಿಗಳು ಹಾಗೂ 12 ಅನುಸೂಚಿಗಳಿವೆ. ಸಂವಿಧಾನ ಶುರುವಾದಗಿನಿಂದ ಇಲ್ಲಿಯವರೆಗೂ 103 ತಿದ್ದುಪಡಿಗಳಾಗಿವೆ, ಆ ಕುರಿತ ಕೆಲವು ಪ್ರಮುಖ ಅಂಶಗಳು.
ಸಂವಿಧಾನದಲ್ಲಿ 14-32 ನೇ ವಿಧಿವರೆಗೆ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಮೂಲಭೂತ ಹಕ್ಕುಗಳು ಸಮಾನತೆ, ಸ್ವಾತಂತ್ರ್ಯ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ, ಸಾಂಸ್ಕøತಿಕ ಮತ್ತು ಶೈಕ್ಷಣಿಕ ಹಕ್ಕು ಹಾಗೂ ಸಂವಿಧಾನಾತ್ಮಕ ಪರಿಹಾರ ಹಕ್ಕುಗಳನ್ನು ಒಳಗೊಂಡಿದೆ.
ಭಾರತ ಸಂವಿಧಾನವು ನಮಗೆ ಹಲವಾರು ರೀತಿಯ ಹಕ್ಕುಗಳನ್ನು ನೀಡಿದೆ. ಹಕ್ಕಗಳನ್ನು ಪಡೆಯುವವರು ಕರ್ತವ್ಯಗಳ ಪ್ರಜ್ಞೆಯನ್ನು ಹೊಂದಿರಬೇಕು. ವ್ಯಕ್ತಿಯು ತನ್ನ ಕರ್ತವ್ಯಗಳನ್ನು ತಾನಾಗಿಯೇ ಅರಿತು ಅವುಗಲನ್ನು ನೇರವೇರಿಸಿದರೇ ಮಾತ್ರ ರಾಷ್ಟ್ರದ ಏಳಿಗೆ ಸಾಧ್ಯ. 1976 ರಲ್ಲಿ 42 ನೇ ತಿದ್ದುಪಡಿಯ ಮೂಲಕ ಮೂಲಭೂತ ಕರ್ತವ್ಯಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಸಂವಿಧಾನ 4 (ಎ) ಭಾಗದ 51 ನೇ ಎ ವಿಧಿಯಲ್ಲಿ ಈ ಕರ್ತವ್ಯಗಳನ್ನು ನಿರೂಪಿಸಲಾಗಿದೆ.

  1. ಸಂವಿಧಾನವನ್ನು ಅದರ ಆದರ್ಶಗಳನ್ನು ಮತ್ತು ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯನ್ನು ಗೌರವಿಸಬೇಕು.
  2. ಸ್ವಂತತ್ರ್ಯಕ್ಕಾಗಿ ನಡೆದ ರಾಷ್ಟ್ರೀಯ ಹೋರಾಟಕ್ಕೆ ಸ್ಪೂರ್ತಿ ನೀಡಿದ ಉದಾತ್ತ ಆದರ್ಶ ದ್ಯೇಯಗಳನ್ನು ಪಾಲಿಸಬೇಕು.
  3. ಭಾರತದ ಪರಮಾಧಿಕಾರ, ಐಕ್ಯತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿದು ಸಂರಕ್ಷಿಸಬೇಕು.
  4. ರಾಷ್ಟ್ರದ ರಕ್ಷಣೆಗೆ ಸದಾ ಸಿದ್ಧರಾಗಿರಬೇಕು. ರಾಷ್ಟ್ರ ಸೇವೆ ಸಲ್ಲಿಸಲು ಕರೆ ಬಂದಾಗ ಓಗೊಡಬೇಕು.
  5. ಧರ್ಮ, ಭಾಷೆ, ಪ್ರದೇಶ ಮತ್ತು ಪಂಗಡಗಳ ಭಾವನೆ ತೊರೆದು ಸೋದರಭಾವ ಮತ್ತು ಸಾಮರಸ್ಯವನ್ನು ಉತ್ತೇಜಿಸಬೇಕು. ಸ್ತ್ರೀಯರ ಗೌರವಕ್ಕೆ ಚ್ಯುತಿ ಬರದಂತೆ ವರ್ತಿಸಬೇಕು
  6. ನಮ್ಮ ಸಮ್ಮಿಶ್ರ ಸಂಸ್ಕøತಿಯ ಭವ್ಯ ಪರಂಪರೆಯನ್ನು ಗೌರವಿಸಿ ಕಾಪಾಡಬೇಕು.
  7. ಅರಣ್ಯ, ಸರೋವರ, ನದಿ ಮತ್ತು ವನ್ಯ ಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಹಾಗೂ ಅಭಿವೃದ್ಧಿಗೊಳಿಸುವುದು ಮತ್ತು ಪ್ರಾಣಿಗಳಿಗೆ ಅನುಕಂಪ ತೋರಿಸುವುದು.
  8. ವೈಜ್ಞಾನಿಕ ಮನೋಭಾವನೆ ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ದೃಷ್ಠಿಯನ್ನು ಬೆಳೆಸಿಕೊಳ್ಳಬೇಕು.
  9. ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ರಕ್ಷಿಸಬೇಕು ಹಾಗೂ ಹಿಂಸಾಚಾರವನ್ನು ತ್ಯಜ

Leave a Reply

Your email address will not be published. Required fields are marked *