Author: Aravind S

ಸದಾಶಿವಪುರದಲ್ಲಿ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶ್ರೀ ಮಲ್ಲಿಕಾರ್ಜುನ್ ಬಡಿಗೇರ ಅವರಿಗೆ ಸನ್ಮಾನ.

ಹೊನ್ನಾಳಿ: ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ ಪಡೆಯುವುದು ಅತಿ ಕಠಿಣವಾದ ಕೆಲಸ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರೊಂದಿಗೆ ಶಾಲೆಯ ಅಭಿವೃದ್ಧಿಯನ್ನು ಕೈಗೊಂಡಾಗ ಆ ಕಿರೀಟ ತಾನಾಗಿಯೇ ಒಲಿದು ಬರುತ್ತದೆ. ಅಂತಹ ಮಹತ್ ಕಾರ್ಯವನ್ನು ಸದಾಶಿವಪುರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಬಡಿಗೇರ ಅವರು…

ಪ್ರಜಾಸೇವೆ’ ಅಭಿಯಾನಕ್ಕೆ ಚಾಲನೆ: ಜನಸಾಮಾನ್ಯರ ಮನೆಬಾಗಿಲಿಗೆ ಸರ್ಕಾರಿ ಸೇವೆಗಳು : ಸಚಿವ ಎಸ್ ಎಸ್ ಮಲ್ಲಿಕಾರ್ಜುನ.

ದಾವಣಗೆರೆ ಸೆಪ್ಟೆಂಬರ್ 05 : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಜಾಸೇವೆ’ ಅಭಿಯಾನ ಜಿಲ್ಲೆಯ ಜನರಿಗೆ ಸರ್ಕಾರದ ಸೌಲಭ್ಯಗಳು ಹಾಗೂ ಆಡಳಿತವನ್ನು ನೇರವಾಗಿ ಸಾರ್ವಜನಿಕರ ಮನೆಬಾಗಿಲಿಗೆ ತಲುಪಿಸುವ ಯೋಜನೆ ಯಾಗಿದ್ದು ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ತೋಟಗಾರಿಕೆ…

ಎಸ್ಎಸ್ಎಂ ಕುಟುಂಬದ ಬಗ್ಗೆ ಹೇಳಿಕೆ ನೀಡುವಾಗ ಭಾಷೆ ಮೇಲೆ ಹಿಡಿತವಿರಲಿ, ವೈಯಕ್ತಿಕ ಟೀಕೆ ಸಲ್ಲದು: ಸೈಯದ್ ಖಾಲಿದ್ ಅಹ್ಮದ್.

ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಸಮರ್ಥ್ ಶಾಮನೂರು ಅವರ ಬಗ್ಗೆ ಮಾತನಾಡುವಾಗ ಬಿಜೆಪಿ ನಾಯಕರು ನಾಲಗೆ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಬೇಕು. ಅವಹೇಳನಕಾರಿಯಾಗಿ ವೈಯಕ್ತಿಕವಾಗಿ ಟೀಕೆ ಮಾಡುವುದು…

ಮೇವು ಮತ್ತು ಕುಡಿಯುವ ನೀರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ, ಎಸ್. ಐ. ಆರ್: ಅರ್ಹ ಮತದಾರರ ಮತದಾರ ಪಟ್ಟಿಯಿಂದ ಹೊರಗುಳಿಯದಂತೆ ಕ್ರಮವಹಿಸಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್‌.

ದಾವಣಗೆರೆ , ಸೆಪ್ಟೆಂಬರ್‌ , 04 (ಕರ್ನಾಟಕ ವಾರ್ತೆ):ಜಿಲ್ಲೆಯ ನ್ಯಾಮತಿ ಹೊನ್ನಾಳಿ, ದಾವಣಗೆರೆ, ಚನ್ನಗಿರಿ ತಾಲ್ಲೂಕನ್ನು ಬರ ತಾಲ್ಲೂಕು ಎಂದು ಘೋಷಿಸಲಾಗಿದ್ದು, ಪಶುಗಳಿಗೆ ಮೇವು ಕೊರತೆಯಾಗದಂತೆ ಮತ್ತು ಕುಡಿಯುವ ನೀರು ಪೂರೈಕೆಯಲ್ಲಿ ಲೋಪವಾಗದಂತೆ ಅಗತ್ಯ ಸಿದ್ದತೆ ಮಾಡುವ ಜೊತೆಗೆ, ಅಂತಿಮ ಮತದಾರರ…

ಶ್ರೀಕೃಷ್ಣನ ಆದರ್ಶ ಗುಣ ಮೈಗೂಡಿಸಿಕೊಳ್ಳಿ: ಡಾ. ಶಕುಂತಲ ರಾಜಕುಮಾರ್.

ಹೊನ್ನಾಳಿ: ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಗ ಶ್ರೀಕೃಷ್ಣನಂತೆ ಆಗಬೇಕು ಎಂಬ ಆಶಯ ಇರುತ್ತದೆ. ಕೃಷ್ಣನ ತುಂಟಾಟವನ್ನು ಸವಿಯುವುದರ ಜೊತೆಗೆ ಅವನ ಆದರ್ಶ ಹಾಗೂ ಲೌಕಿಕ ಗುಣಗಳನ್ನು ಮಕ್ಕಳು ಜೀವನದಲ್ಲಿ ಮೈಗೂಡಿಸಿಕೊಳ್ಳುವಂತೆ ಮಾಡುವುದು ಪೋಷಕರ ಕರ್ತವ್ಯ ಎಂದು ವಿಜ್ಞಾನ ಸಂಘದ ಅಧ್ಯಕ್ಷೆ ಡಾ.…

ಬಹುಮುಖ ಪ್ರತಿಭೆಯ ಅಪರೂಪದ ಮುಖ್ಯ ಶಿಕ್ಷಕ T. ಸುರೇಶ್.

ಎಲ್ಲಾ ಶಿಕ್ಷಕರು ಪದವಿಯಲ್ಲಿ ಓದಿದ ವಿಷಯಗಳನ್ನು ಬೋಧಿಸುತ್ತಾರೆ. ದಾವಣಗೆರೆ ದಕ್ಷಿಣ ವಲಯದ ಅಣಬೇರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ T. ಸುರೇಶ್ ಅವರು ಶಾಲೆಯಲ್ಲಿ ಶಿಕ್ಷಕರ ಕೊರತೆ /ರಜೆ ಇದ್ದಲ್ಲಿ ಆ ಶಿಕ್ಷಕರು ಬೋಧಿಸುವ ವಿಷಯವನ್ನು ಬೋಧಿಸುತ್ತಾರೆ. ಹೀಗೆ ಸಂದರ್ಭನುಸಾರ…

ಹೊನ್ನಾಳಿ: ಮನೆ ಊಟ ನೀಡುವ ಸಾಂಪ್ರದಾಯಿಕ ಹೋಟೆಲ್‌ಗಳ ಅಗತ್ಯತೆ ಹೆಚ್ಚಿದೆ: ಡಾ. ರಾಜಕುಮಾರ್.

ಹೊನ್ನಾಳಿ: ಬದುಕುವ ಪ್ರೇರಣೆ ಹಲವರಿಗೆ ಹಲವು ಮಾರ್ಗಗಳನ್ನು ನೀಡುತ್ತದೆ. ಎಲ್ಲರೂ ತಮ್ಮ ಜೀವನೋಪಾಯಕ್ಕಾಗಿ ಹೊಸ ಹೊಸ ಉದ್ಯೋಗಗಳನ್ನು ಹುಡುಕಿಕೊಳ್ಳುತ್ತಿರುವ ಈ ದಿನಗಳಲ್ಲಿ, ಯುವಕ ವೀರಭದ್ರ ಹೋಟೆಲ್ ಉದ್ಯಮ ಆಯ್ಕೆ ಮಾಡಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಖ್ಯಾತ ವೈದ್ಯ ಡಾ.…

ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿ  ಜನಸೇವಾ ಕಾರ್ಯಕ್ರಮಕ್ಕೆ ಅಗತ್ಯ ಕ್ರಮವಹಿಸಿ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ.

ದಾವಣಗೆರೆ , ಸೆಪ್ಟೆಂಬರ್‌ 02 : ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿಯ ತರಳಬಾಳು ಸಮುದಾಯ ಭವನದಲ್ಲಿ ಸೆಪ್ಟಂಬರ್‌ 05 ರಂದು ಏರ್ಪಡಿಸಿರುವ ಜನಸೇವಾ ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳು ಒಂದಾಗಿ, ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸುವ ನಿಟ್ಟಿನಲ್ಲಿ ಸಮಗ್ರ…

ಸಮಾಜ ಸುಧಾರಣೆ ಮತ್ತು ಸೌಹಾರ್ದತೆಗೆ ತ್ಯಾಗ, ಸೇವೆಯೇ ಮೂಲ: ಜಿಲ್ಲಾಧಿಕಾರಿ ಜಿ.ಎಂ ಗಂಗಾಧರ ಸ್ವಾಮಿ.

ದಾವಣಗೆರೆ, ಆಗಸ್ಟ್ 28: ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಮತ್ತು ಸ್ವಸ್ಥ ವಾತಾವರಣ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರಲ್ಲೂ ತ್ಯಾಗ ಹಾಗೂ ಸೇವಾ ಮನೋಭಾವ ಅತ್ಯಗತ್ಯ , ಮಹಾತ್ಮರು ಹಾಗೂ ದಾರ್ಶನಿಕರು ತೋರಿಸಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯೋಣ ಎಂದು ಜಿಲ್ಲಾಧಿಕಾರಿ ಜಿ. ಎಂ ಗಂಗಾಧರಸ್ವಾಮಿ ತಿಳಿಸಿದರು.…

ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ಮುತ್ತೂಟ್ ಫಿನ್ ಕಾರ್ಪ್‌ನಿಂದ ಚಿತ್ರಕಲಾ ಸ್ಪರ್ಧೆ.

ಹೊನ್ನಾಳಿ: “ಚಿತ್ರಕಲಾ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುತ್ತವೆ. ಇಂತಹ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸುವುದರಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ಮತ್ತು ಪ್ರೋತ್ಸಾಹ ದ್ವಿಗುಣಗೊಳ್ಳುತ್ತದೆ” ಎಂದು ಸಂಸ್ಥೆಯ ಖಜಾಂಚಿ ಸೋಮಶೇಖರಪ್ಪ ಕೆ, ಅಭಿಪ್ರಾಯಪಟ್ಟರು.ಇಲ್ಲಿನ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ಮುತ್ತೂಟ್ ಫಿನ್ ಕಾರ್ಪ್ ವತಿಯಿಂದ…