ಹೊನ್ನಾಳಿ : ರಾಜಕೀಯ, ಶೈಕ್ಷಣಿಕ, ಆಧ್ಯಾತ್ಮೀಕ, ಧಾರ್ಮಿಕವಾಗಿ ಎಲ್ಲ ದೃಷ್ಟಿಯಿಂದಲೂ ಪರಿಪೂರ್ಣತೆ ಹೊಂದಿರುವ ನರೇಂದ್ರ ಮೋದಿ ಜೀ ಅಂತಹ ಇನ್ನೊಬ್ಬ ನಾಯಕ 100 ವರ್ಷ ಕಳೆದರೂ ಈ ದೇಶಕ್ಕೆ ಸಿಗುವುದಿಲ್ಲ. ಎಲ್ಲರೂ ಮೆಚ್ಚುವಂತಹ, ಸೋಜಿಗ ಪಡುವಂತಹ ವ್ಯಕ್ತಿತ್ವ ಮೋದಿ ಜೀ ಅವರದ್ದು ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅಭಿಪ್ರಾಯಪಟ್ಟರು.

ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಅರಕೆರೆ, ಹಿರೇಗೋಣಿಗೆರೆ, ಬೇಲಿಮಲ್ಲೂರು ಗ್ರಾಮಗಳಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಮತಯಾಚಿಸಿ ಮಾತನಾಡಿದ ಅವರು, ಮೋದಿ ಜೀ ಅಂತಹ ನಾಯಕ ಬೇರೆ ದೇಶದಲ್ಲಿ ಜನಿಸಿದ್ದರೆ ದೇಶದ ಜನರೆಲ್ಲರೂ ಅವರನ್ನು ಪೂಜಿಸುತ್ತಿದ್ದರು. ಇಂತಹ ಮೇರು ವ್ಯಕ್ತಿತ್ವದ ಮೋದಿ ಜೀ ಅವರನ್ನು ವಿರೋಧಿಸುವಂತಹ ಮಾನಸಿಕ ಸ್ಥಿತಿ ಕೆಲವರಲ್ಲಿದೆ. ಇಂತಹ ಮನಸ್ಥಿತಿ ಇರುವ ಕಾಂಗ್ರೆಸ್ ಪಕ್ಷದಿಂದ ದೇಶಕ್ಕೆ ಯಾವ ಲಾಭವಿದೆ ಎಂದು ಪ್ರಶ್ನಿಸಿದರು.

ಮೋದಿ ಜೀ ಕೇವಲ ವ್ಯಕ್ತಿಯಲ್ಲ, ಅವರೊಂದು ಶಕ್ತಿ. 23 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಅವರ ರಾಜಕೀಯ ಜೀವನದಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೆ 16 ರಿಂದ 18 ತಾಸು ಈ ದೇಶದ ಸರ್ವರ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ನೀವು ಕಮಲದ ಗುರುತಿಗೆ ಮತ ಹಾಕಿ ನನ್ನು ಇಲ್ಲಿ ಗೆಲ್ಲಿಸಿದರೆ ಅಲ್ಲಿ ಮೋದಿ ಅವರು ಗೆದ್ದು ಪ್ರಧಾನಿ ಆಗುತ್ತಾರೆ. ಇಂತಹ ಅವಕಾಶವನ್ನು ನೀವ್ಯಾರು ಬಿಡಬಾರದು ಎಂದು ಮನವಿ ಮಾಡಿದರು.

ಅರ್ಬನ್ ನಕ್ಸಲ್ ಮನಸ್ಥಿತಿ : ಕಾಂಗ್ರೆಸ್ನವರದ್ದು ಅರ್ಬನ್ ನಕ್ಸಲ್ ಮನಸ್ಥಿತಿ. ಈ ದೇಶದ ಸಂಪತ್ತಿನ ಹೆಚ್ಚಿನ ಪಾಲು ಮುಸ್ಲಿಮರಿಗೆ ಸಿಗಬೇಕು ಎನ್ನುವ ಮನಸ್ಥಿತಿ ಅವರದ್ದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಆರ್ಥಿಕ ಸರ್ವೆ ಮಾಡುವುದಾಗಿ ಹೇಳುತ್ತಿದ್ದಾರೆ. ಕಷ್ಟಪಟ್ಟು ನೀವು ದುಡಿದ ಆಸ್ತಿ ಕಂಡವರ ಪಾಲಾಗಲು ಯಾವುದೇ ಕಾರಣಕ್ಕೂ ಬಿಡಬೇಡಿ. ಆರ್ಥಿಕ ಸಮೀಕ್ಷೆ ನಡೆಸುತ್ತೇವೆ ಎನ್ನುವವರನ್ನು ಮನೆಗೆ ಕಳುಹಿಸಲು ಸಿದ್ಧರಾಗಿ. ಕಾಂಗ್ರೆಸ್ ಅಭಿವೃದ್ಧಿಯ ಬಗ್ಗೆ ಎಲ್ಲಿಯೂ ಮಾತನಾಡುತ್ತಿಲ್ಲ. ಅದರ ಬದಲಾಗಿ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಸಲ ಮಾಡುತ್ತಿದ್ದಾರೆ. 60 ವರ್ಷಗಳ ಕಾಲ ಈ ದೇಶದ ಜನರ ಹಣ ಲೂಟಿ ಮಾಡಿದ ಕಾಂಗ್ರೆಸ್ ಈಗ ನಿಮ್ಮ ಮರಣದ ನಂತರ ನಿಮ್ಮ ಆಸ್ತಿಯಲ್ಲಿ ಶೇ.55 ರಷ್ಟ ಪಾಲು ಸರ್ಕಾರಕ್ಕೆ, 45 ರಷ್ಟು ಪಾಲು ಆಸ್ತಿಯ ಒಡೆಯರ ವಾರಸುದಾರರಿಗೆ ಎನ್ನುವ ಬಗ್ಗೆ ಚಿಂತನೆ ನಡೆಸುತ್ತಿದೆ. ಇದು ಈ ದೇಶದ ಜನರಿಗೆ ಮಾಡುತ್ತಿರುವ ಮಹಾ ಮೋಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಪರ ಮತಯಾಚಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅವರ ಬ್ರದರ್ಸ್ಗಳ ಗೂಂಡಾ ವರ್ತನೆ, ಭಯೋತ್ಪಾದನೆ ಹೆಚ್ಚಾಗುತ್ತದೆ ಎನ್ನುವುದಕ್ಕೆ ಅನೇಕ ಸಾಕ್ಷಿಗಳಿವೆ ಎಂದರು. ಮೊನ್ನೆ ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹತ್ಯೆ, ಪಕ್ಕದ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಜೈ ಶ್ರೀರಾಮ್ ಎಂದಿದ್ದಕ್ಕೆ ದಲಿತ ಯುವಕರ ಮೇಲೆ ಹಲ್ಲೆ, ಮಂಡ್ಯದಲ್ಲಿ ಹನುಮಾನ್ ಧ್ವಜ ಇಳಿಸಿದ್ದು, ಬೆಂಗಳೂರಿನಲ್ಲಿ ಜೈಶ್ರೀರಾಮ್ ಎಂದಿದ್ದಕ್ಕೆ ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿರುವುದು, ಮೋದಿ ಬಗ್ಗೆ ಹಾಡು ಬರೆದಿದ್ದಕ್ಕೆ ಹಿಂದೂ ಯುವಕನ ಮೇಲೆ ಮಾಡಿರುವುದು. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದು.. ಒಂದಾ, ಎರಡಾ ಪಟ್ಟಿ ಮಾಡುತ್ತಾ ಹೋದರೆ ಇಡೀ ದಿನ ಸಾಕಾಗುವುದಿಲ್ಲ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದು ನಮ್ಮ ಪಕ್ಕದ ಜಿಲ್ಲೆಯ ಕಾಂಗ್ರೆಸ್ ಬ್ರದರ್. ಅವರನ್ನು ಬಂದಿಸಿದ್ದು, ಎನ್ಐಎ ತಂಡ. ಇಂಹವರಿಗೆ ಅಧಿಕಾರ ಕೊಡಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಜೀ ಪ್ರಧಾನಿಯಾದ ಮೇಲೆ ದೇಶದಲ್ಲಿ ಭಯೋತ್ಪಾದನೆ ಮಟ್ಟಹಾಕಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮತ್ತೆ ಜೀಹಾದಿಗಳು ತಲೆ ಎತ್ತುತ್ತಿದ್ದಾರೆ. ಅಂತಹವರು ತಲೆ ಎತ್ತ ಬಾರದು ಎಂದರೆ ನಾವು-ನೀವು ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕು. ಅವರು ಪ್ರಧಾನಿ ಆಗಬೇಕು ಎಂದರೆ ಇಲ್ಲಿ ಗಾಯಿತ್ರಿ ಅಕ್ಕ ಹೆಚ್ಚು ಮತಗಳ ಅಂತರದಿಂದ ಗೆದ್ದು ದೆಹಲಿಗೆ ಹೋಗಬೇಕು. ಈ ನಿಟ್ಟಿನಲ್ಲಿ ನಮ್ಮ ಮುಖಂಡರು, ಕಾರ್ಯಕರ್ತರು ಮನೆ ಮನೆಗೂ ತೆರಳಿ ಗಾಯಿತ್ರಿ ಅಕ್ಕನ ಪರ ಮತಯಾಚಿಸಬೇಕು ಎಂದು ಕರೆ ನೀಡಿದರು.

ಮಂಡಲ ಅಧ್ಯಕ್ಷ ಸುರೇಶ್, ಬಿಜೆಪ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಬಿಜೆಪಿ ಮುಖಂಡ ಮಹೇಶ್, ಕುಬೇರಪ್ಪ, ಸಂತೋಷ ಕುಮಾರ್, ಎಲ್.ಕೆ ಮಂಜಪ್ಪ, ಪ್ರಭು, ರವಿ, ಹೊನ್ನಪ್ಪ, ರಾಮಣ್ಣ, ಶಾಂತರಾಜ್ ಪಾಟೀಲ್, ಹನುಮಂತಪ್ಪ, ಅರೆಕೆರೆ ನಾಗರಾಜ್, ರಂಗನಾಥ್, ಸುರೇಂದ್ರ, ಯೋಗೇಶ್, ಮಂಡಲದ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ ಹೊನ್ನಾಳಿ ವಿಧಾನ ಸಭಾ ಕ್ಷೇತ್ರದ ಮುಖಂಡರು ಇದ್ದರು.
ಕಾಂಗ್ರೆಸ್ ಸರ್ಕಾರ 60 ವರ್ಷಗಳ ಕಾಲ ಜನರ ಕೈಗೆ ಚೊಂಬು ಬಯಲು ಶೌಚಾಲಯಕ್ಕೆ ಪ್ರೋತ್ಸಾಹ ಕೊಟ್ಟಿತ್ತು. ಮೋದಿ ಜೀ ನೇತೃತ್ವದ ಸರ್ಕಾರ ಕೇವಲ 5 ವರ್ಷಗಳಲ್ಲಿ ಸ್ವಚ್ಛಭಾರತ್ ಮಿಷನ್ ಯೋಜನೆ ಅಡಿ ಬಯಲು ಶೌಚಾಲಯ ಮುಕ್ತ ದೇಶವನ್ನಾಗಿ ಮಾಡಿ, ಮಹಿಳೆಯರ, ಪುರುಷರ ಗೌರವ ಉಳಿಸಲು ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದೆ. ದಾವಣಗೆರೆ ಜಿಲ್ಲೆ ಒಂದರಲ್ಲೇ 1.71 ಲಕ್ಷ ಶೌಚಾಲಯ ಕಟ್ಟಿಸಿಕೊಟ್ಟಿದ್ದಾರೆ. ಹೀಗಿದ್ದರೂ ಕಾಂಗ್ರೆಸ್ನವರು ಈಗಲೂ ಬೀದಿ ಬೀದಿಗಳಲ್ಲಿ ಚೊಂಬು ಹಿಡಿದುಕೊಂಡು ಓಡಾಡುತ್ತಿದ್ಧಾರೆ.

Leave a Reply

Your email address will not be published. Required fields are marked *