ಈ ಯೋಜನೆಗೆ ಏಪ್ರಿಲ್-2020ರ ಅಂತ್ಯದವರೆಗೆ
ಅವಕಾಶವಿರುತ್ತದೆ. ಪ್ರತಿ ಮಾಹೆಯ 1ನೇ ತಾರೀಖಿನಿಂದ 10ನೇ
ತಾರೀಖಿನವರೆಗೆ ಕಡ್ಡಾಯವಾಗಿ ಆಧಾರ್ ಕಾರ್ಡ್‍ಗಳ ದೃಡೀಕರಣ(ಇ-
ಕೆವೈಸಿ)ಯನ್ನು ನಿರ್ವಹಿಸಲಾಗುವುದು. (ಪಡಿತರ ವಿತರಣಾ
ವೇಳೆ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ). ಪ್ರತಿ
ಮಾಹೆಯ 11ನೇ ತಾರೀಖಿನಿಂದ ಮಾಹೆಯ ಕೊನೆಯವರೆಗೆ
ಪಡಿತರದಾರರಿಗೆ ಆಹಾರಧಾನ್ಯಗಳ ವಿತರಣೆ ಜೊತೆಗೆ
ಇ-ಕೆವೈಸಿಯನ್ನು ನಿರ್ವಹಿಸಲಾಗುವುದು.
ಇ-ಕೆವೈಸಿ ಯು ಪಡಿತರ ಚೀಟಿ ಹೊಂದಾಣಿಕೆಯಾಗಿರುವ
ನ್ಯಾಯಬೆಲೆ ಅಂಗಡಿಯಲ್ಲೆ ನಡೆಯಬೇಕು. ಇ-ಕೆವೈಸಿಯನ್ನು
ಮಾಡಲು ಬೇರೆ ಯಾವುದೇ ಖಾಸಗಿ ಏಜೆನ್ಸಿಗಳಿಗೆ ನೀಡಿರುವುದಿಲ್ಲ.
ಇ-ಕೆವೈಸಿ ಪ್ರಕ್ರಿಯೆಯು ಉಚಿತವಾಗಿ ನಡೆಯಲಿದ್ದು, ಪಡಿತರ
ಚೀಟಿದಾರರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಯಾವುದೇ
ನ್ಯಾಯಬೆಲೆ ಅಂಗಡಿಯವರು ಇ-ಕೆವೈಸಿ ಮಾಡಲು ಬೆಲೆ
ನಿಗದಿಪಡಿಸಿದೆ ಹಣ ಕೇಳಿದರೆ ಜಂಟಿ ನಿರ್ದೇಶಕರ ಕಚೇರಿ, ಆಹಾರ
ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
ದಾವಣಗೆರೆ ಇಲ್ಲಿಗಾಗಲೀ ಅಥವಾ ತಾಲ್ಲೂಕು ಕಚೇರಿಗಾಗಲಿ ಅಥವಾ
ಉಚಿತ ಸಹಾಯವಾಣಿ ಸಂ: 1967ಗೆ ದೂರು ನೀಡಬಹುದು.
ಸರ್ಕಾರ ನಿಗದಿಪಡಿಸಿರುವ ಅವಧಿಯೊಳಗೆ ಇ-ಕೆವೈಸಿ ಮಾಡಿಸದ
ಪಡಿತರ ಚೀಟಿಗಳ ಸದಸ್ಯರುಗಳಿಗೆ ಹಂಚಿಕೆಯನ್ನು
ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಸಾರ್ವಜನಿಕರು
ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ತಮ್ಮ ಆಧಾರ್
ದೃಢೀಕರಣ ಮತ್ತು ಇ-ಕೆವೈಸಿ ಮಾಡಿಸಿಕೊಳ್ಳಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಕಚೇರಿಯಲ್ಲಿರುವ ಆಹಾರ
ಶಿರಸ್ತೇದಾರ್/ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದೆಂದು
ಅನರ್ಹರು ತಾವು ಹೊಂದಿರುವ ಬಿ.ಪಿ.ಎಲ್ ವರ್ಗದ ಪಡಿತರ
ಚೀಟಿಗಳನ್ನು ಸರ್ಕಾರಕ್ಕೆ ವಾಪಾಸ್ಸು ನೀಡಿ ಕಾನೂನು ಕ್ರಮದಿಂದ
ವಿಮುಕ್ತಿ ಹೊಂದಲು ಅವಕಾಶ ನೀಡಲಾಗಿದೆ.
ಅನರ್ಹರು ನಿಗದಿತ ದಿನಾಂಕದೊಳಗೆ ತಾವು ಹೊಂದಿರುವ
ಬಿ.ಪಿಎಲ್ ವರ್ಗದ ಪಡಿತರ ಚೀಟಿಗಳನ್ನು ತಾಲ್ಲೂಕು
ಕಚೇರಿಯಲ್ಲಿರುವ ಆಹಾರ ಶಿರಸ್ತೇದಾರ್/ ಆಹಾರ
ನೀರೀಕ್ಷಕರುಗಳನ್ನು ಸಂಪರ್ಕಿಸಿ ತಾವು ಹೊಂದಿರುವ ಬಿ.ಪಿಎಲ್
ವರ್ಗದ ಪಡಿತರ ಚೀಟಿಗಳನ್ನು ಎಪಿಎಲ್ ವರ್ಗಕ್ಕಾಗಲೀ ಅಥವಾ
ರದ್ದುಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಹೀಗೆ ತಾವೇ
ಸ್ವತಃ ಪಡಿತರ ಚೀಟಿಗಳನ್ನು ಹಿಂತಿರುಗಿಸಿದವರ ವಿರುದ್ದ
ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ.
ಅವಧಿ ಮುಗಿದ ನಂತರ ಇಲಾಖೆಯೇ ಕಾರ್ಯಾಚರಣೆ ನಡೆಸಿ
ಅನರ್ಹರು ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಟಿಗಳನ್ನು
ಪತ್ತೆ ಹಚ್ಚಿದಾಗ ಅಂತಹ ಕುಟುಂಬಗಳು ತಾವು ಪಡಿತರ
ಚೀಟಿಗಳನ್ನು ಹೊಂದಿದ ದಿನಾಂಕದಿಂದ ಪತ್ತೆ ಹಚ್ಚಿದ
ದಿನಾಂಕದವರೆವಿಗೆ ತಾವು ಪಡೆದ ಪಡಿತರ ಪದಾರ್ಥಗಳವಾರು
ಪ್ರತಿ ಕೆ.ಜಿ.ಗೆ ಮುಕ್ತ ಮಾರುಕಟ್ಟೆಯ ಬೆಲೆಯ ಅನುಸಾರ
ಹಣವನ್ನು ವಸೂಲಿ ಮಾಡಲಾಗುವುದು. ಜೊತೆಗೆ “ದಿ ಕರ್ನಾಟಕ
ಪ್ರಿವೆನ್ಷನ್ ಆಫ್ ಅನ್‍ಅಥರೈಜ್ಡ್ ಪೊಸಿಷನ್ ಆಫ್ ರೇಷನ್ ಕಾರ್ಡ್ ಆರ್ಡರ್
1977”ರ ರೀತ್ಯಾ ಕ್ರಮವಹಿಸಲಾಗುವುದು ಮತ್ತು ಕ್ರಿಮಿನಲ್
ಮೊಕದ್ದಮೆ ದಾಖಲಿಸಲಾಗುವುದು.
ಸರ್ಕಾರಿ ನೌಕರರು/ ವೇತನವನ್ನು ಗಣನೆಗೆ
ತೆಗೆದುಕೊಳ್ಳದೆ ಎಲ್ಲಾ ಖಾಸಗಿ ನೌಕರರು/ಸರ್ಕಾರಿ ಅನುದಾನಿತ
ನೌಕರರು/ನಿಗಮಗಳು/ಮಂಡಳಿಗಳು/ಸರ್ಕಾರಿ ಸ್ವಾಮ್ಯದ
ಸಂಸ್ಥೆಗಳು ಇತ್ಯಾದಿ ಒಳಗೊಂಡತೆ ಆದಾಯ ತೆರಿಗೆ/ಸೇವಾ
ತೆರಿಗೆ/ವ್ಯಾಟ್/ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು
ಹೊಂದಿರುವುದು ಕಾನೂನು ಬಾಹಿರ ಕ್ರಮವಾಗಿರುತ್ತದೆ.
ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ
ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು
ಹಾಗೂ ನಗರ ಪ್ರದೇಶದಲ್ಲಿ 1000 ಚ.ಅಡಿಗಳಿಗಿಂತಲೂ ಹೆಚ್ಚಿನ
ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ
ಕುಟುಂಬಗಳು ಹಾಗೂ ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ
ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್,
ಟ್ಯಾಕ್ಸಿ, ಇತ್ಯಾದಿಗಳನ್ನು ಹೊಂದಿರುವ ಕುಟುಂಬವನ್ನು ಹೊರತು
ಪಡಿಸಿ 4 ಚಕ್ರದ ವಾಹನಗಳನ್ನು ಹೊಂದಿರುವ ಕುಟುಂಬಗಳು.
ಹಾಗೂ ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷಗಳಿಗಿಂತಲೂ
ಹೆಚ್ಚು ಇರುವ ಕುಟುಂಬಗಳು ಮತ್ತು ಒಂದೆ
ಕುಟುಂಬದಲ್ಲಿದ್ದರೂ/ಒಟ್ಟಿಗೆ ವಾಸಿಸುತ್ತಿದ್ದರೂ ಪ್ರತ್ಯೇಕ
ಪಡಿತರ ಚೀಟಿ ಹೋಂದಿರುವ ಕುಟುಂಬಗಳು ಬಿಪಿಎಲ್ ವರ್ಗದ
ಪಡಿತರ ಚೀಟಿಗಳನ್ನು ಹೊಂದಿರುವುದು ಕಾನೂನು
ಬಾಹಿರವಾಗಿರುತ್ತದೆ.
ಆದ್ದರಿಂದ ಅನರ್ಹರು ಮೇಲೆ ಹೇಳಿದಂತೆ ತಾವು ಹೊಂದಿರುವ
ಬಿಪಿಎಲ್ ವರ್ಗದ ಪಡಿತರ ಚೀಟಿಗಳನ್ನು ಸರ್ಕಾರಕ್ಕೆ ವಾಪಸ್ಸು ನೀಡಿ
ಕಾನೂನು ಕ್ರಮದಿಂದ ವಿಮುಕ್ತಿ ಹೊಂದಬಹುದೆಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.