ಹಳ್ಳಿಯವರನ್ನು ನೋಡಿ ಬದುಕುವುದನ್ನು ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಎಸ್ ಎ ರವೀಂದ್ರನಾಥ್ ಕಿವಿ ಮಾತು ಹೇಳಿದ್ದರು.
ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಮಾ 09 ರಂದು ಕೊಂಡಜ್ಜಿ ಗ್ರಾಮದಲಿ 2019-20 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ 1 ಮತ್ತು 2 ರ ವಿಶೇಷ ಶಿಬಿರವನ್ನು ಉದ್ಠಾಟಿಸಿ ಮಾತನಾಡಿದ್ದರು.
ಗ್ರಾಮೀಣ ಪ್ರದೇಶದ ಜನರು ಯಾವುದೇ ಸ್ವಾರ್ಥವಿಲ್ಲದೇ ನಿಸ್ವಾರ್ಥ ಜೀವನ ನಡೆಸುತ್ತಾರೆ. ಇಂದಿನ ಯುವಜನತೆ ಶ್ರೀಮಂತಿಕೆಗೆ ಮಾರು ಹೋಗದೇ ನೆಮ್ಮದಿಯಿಂದ ಬದುಕುವುದನ್ನು ಗ್ರಾಮೀಣ ಜನರನ್ನು ನೋಡಿ ಕಲಿಯಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿದ್ಯಾವಂತರಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಪ್ರೊ ತೂ ಕ ಶಂಕರಯ್ಯ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಪುಸ್ತಕವನ್ನು ಓದಿ ಉತ್ತಮ ಅಂಕಗಳನ್ನು ಗಳಿಸುವ ಜೊತೆಗೆ ಪಠ್ಯತೇರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಹಳ್ಳಿಯ ಸಮಸ್ಯೆಗಳು ಜೊತೆಗೆ ಸಂಸ್ಕøತಿ ಧಾರ್ಮಿಕ ಆಚಾರಣೆಗಳು ಮತ್ತು ಆರ್ಥಿಕ ಪರಿಸ್ಥತಿಯನ್ನು ತಿಳಿದುಕೊಳ್ಳುವುದರ ಮೂಲಕ ಭವಿಷ್ಯದಲ್ಲಿ ಉತ್ತಮವಾದ ಜೀವನವನ್ನು ಸಾಗಿಸಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲರಾದ ಪ್ರೊ.ವಿರೇಶ್, ವ್ಯವಸ್ಥಾಪಕರು ಮಂಜುಳಾ, ಕಾರ್ಯಕ್ರಮಾಧಿಕಾರಿಗಳಾದ ಲಕ್ಷಣ ಬಿ. ಹೆಚ್, ಕರಿಸಬಪ್ಪ ನಂದಿಹಳ್ಳಿ, ಸಮಿತಿ ಸದಸ್ಯರಾದ ಗಿರಿಸ್ವಾಮಿ, ಡಾ ಸುರೇಶ್, ಕಾಲೇಜಿನ ಬೋಧಕ ಮತ್ತು ಬೋಧಕೆತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಭಾವಹಿಸಿದರು.