ದಾವಣಗೆರೆ ಮಾ.26
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಜನರ ಮೇಲೆ ದರ್ಪ ತೋರಿಸುತ್ತಿಲ್ಲ. ಜನರ ಆರೋಗ್ಯವನ್ನು ಕಾಪಾಡಬೇಕೆಂಬ ಹಿತದೃಷ್ಟಿಯಿಂದ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಮೂಲಕ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಈ ಎಲ್ಲಾ ಕ್ರಮಗಳನ್ನು ಆದೇಶಿಸಿದ್ದು, ಜನರು 21 ದಿನಗಳು ಮನೆಯಿಂದ ಹೊರಗೆ ಬಾರದಂತೆ ಸರ್ಕಾರದ ಈ ಆದೇಶವನ್ನು ಪಾಲಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ದಿನಸಿ, ತರಕಾರಿ, ಹಣ್ಣು ವ್ಯಾಪಾರಿಗಳು ಮತ್ತು ಹಾಲು ಮಾರಾಟಗಾರರಿಗೆ ಕೊರೊನಾ ವೈರಸ್ ಸೋಂಕಿ ಹಿನ್ನಲೆ ಅಗತ್ಯ ವಸ್ತುಗಳ ಪುರೈಕೆ ಹಿನ್ನಲೆಯಲ್ಲಿ ಆಯೊಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನರಿಗೆ ಯಾವುದೇ ಅನಾನುಕೂಲಗಳು ಉಂಟಾಗದಂತೆ ಕಾರ್ಯ ನಿರ್ವಹಿಸಲು ಜಿಲ್ಲಾಡಳಿತ ಸಿದ್ದವಿದೆ. ಜನರು ಯಾವುದೇ ಭಯ ಆತಂಕಕ್ಕೆ ಒಳಗಾಗದೇ ಮನೆಯಲ್ಲಿ ಇದ್ದು, ಸರ್ಕಾರದ ಆದೇಶವನ್ನು ಪಾಲನೆ ಮಾಡಿಕೊಳ್ಳಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.
ಕೊರೊನಾ ವೈರಸ್ ಹರಡುವುದನ್ನು ತಡೆಯಲು ಎಲ್ಲರೂ ಮನೆಯಲ್ಲಿ ಇರುವಂತೆ ಸರ್ಕಾರ ಆದೇಶ ಮಾಡಿದ್ದು, ಪ್ರತಿಯೊಬ್ಬ ನಾಗರಿಕರೂ ಈ ಆದೇಶ ಪಾಲನೆ ಮಾಡಬೇಕು. ಸರ್ಕಾರವು ಅನೇಕ ಸೇವೆಗಳ ಮೇಲೆ ನಿರ್ಬಂಧ ಏರಿ ಆದೇಶ ಹೊರಡಿಸಿದ್ದು, ಕೆಲವೊಂದು ಸೇವೆಗಳಿಗೆ ಆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.
ಸರ್ಕಾರಿ ಮತ್ತು ಖಾಸಗಿ ಹಾಸ್ಪಿಟಲ್, ಔಷಧಿ ಅಂಗಡಿಗಳು, ಲ್ಯಾಬೊರೇಟರ್, ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್, ಅಂಬ್ಯೂಲೆನ್ಸ್‍ಗಳು ಕಾರ್ಯ ನಿರ್ವಹಿಸಬೇಕು. ಮೆಡಿಕಲ್ ಸಾಮಗ್ರಿಗಳ ಸರಬರಾಜು ಮತ್ತು ಹಾಸ್ಪೇಟಲ್ ಮತ್ತು ಖಾಸಗಿ ನರ್ಸಿಂಗ್ ಹೋಮ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ದಿನನಿತ್ಯ ಓಡಾಡಕ್ಕೆ ಅನುಕೂಲವಾಗುವಂತೆ ಜಿಲ್ಲಾಡಳಿತ ವತಿಯಿಂದ ಪಾಸ್ ವ್ಯವಸ್ಥೆ ಮಾಡಲಾಗಿದೆ. ಅದನ್ನು ಬಳಸಿಕೊಂಡು ನೀವು ನಿಮ್ಮ ಕರ್ತವ್ಯ ನಿರ್ವಹಿಸಬಹುದು.
ವಾಣಿಜ್ಯ ಮತ್ತು ಖಾಸಗಿ ವ್ಯವಹಾರ ನಡೆಸುವ ಸಂಸ್ಥೆಗಳನ್ನು ಸಂಪೂರ್ಣ ಬಂದ್ ಮಾಡಬೇಕು. ಆಹಾರ ಸಾಮಗ್ರಿ, ಕಿರಾಣಿ ಅಂಗಡಿ, ಕಾಳು ಪದಾರ್ಥಗಳು, ಹಾಲು, ಹಣ್ಣು, ಮತ್ತು ಪಶು ಆಹಾರದ ಅಂಗಡಿಗಳನ್ನು ದಿನದ 24 ಗಂಟೆಯೂ ತೆರೆಯಲು ಅವಕಾಶ ನೀಡಿದೆ. ಮಾಂಸದಂಗಡಿಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದ್ದು, ಜಿಲ್ಲೆಯಲ್ಲಿ ಹಕ್ಕಿಜ್ವರದ ಭೀತಿ ಇರುವುದರಿಂದ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟವನ್ನು ನಿಷೇಧಿಸಲಾಗಿದೆ ಎಂದರು.
ಬ್ಯಾಂಕ್ ಮತ್ತು ಎಟಿಎಂಗಳು, ಮುದ್ರಣ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಟೆಲಿ ಕಮ್ಯುನಿಕೇಷನ್ ಮತ್ತು ಇಂಟರ್‍ನೆಟ್ ಸೇವೆ, ಕೇಬಲ್ ಸೇವೆಗಳು, ಐಪಿ ಸರ್ವೀಸ್‍ಗಳು ಲಭ್ಯವಿರುತ್ತವೆ.
ಆಹಾರ, ಔಷಧ ಮತ್ತು ವೈದ್ಯಕೀಯ ಉಪಕರಣಗಳನ್ನು ಮನೆಗೆ ತಲುಪಿಸುವ ಇ-ಕಾಮರ್ಸ್ ವ್ಯವಸ್ಥೆ ಲಭ್ಯವಿರುತ್ತದೆ. ಪೆಟ್ರೋಲ್ ಬಂಕ್, ಎಲ್‍ಪಿಜಿ, ಗ್ಯಾಸ್ ವ್ಯವಸ್ಥೆ ಕಾರ್ಯ ನಿರ್ವಹಸುತ್ತದೆ. ಕೋಲ್ಡ್ ಸ್ಟೋರೆಜ್, ಉಗ್ರಾಣಗಳು, ಖಾಸಗಿ ಸೆಕ್ಯೂರಿಟಿ ಸರ್ವೀಸ್ ಏಜೆನ್ಸಿಗಳು ತೆರೆದಿರುತ್ತವೆ. ದಿನ ನಿತ್ಯದ ಬಳಕೆಯ ಸಾಮಗ್ರಿಗಳನ್ನು ಉತ್ಪಾದಿಸುವ ಡೈರಿ ಉತ್ಪನ್ನಗಳು, ಬಿಸ್ಕೆಟ್, ಬ್ರೆಡ್ ಫ್ಯಾಕ್ಟರಿಗಳನ್ನು ಹೊರತು ಪಡಿಸಿ ಉಳಿದ ಯಾವುದೇ ಕೈಗಾರಿಕಾ ಸಂಸ್ಥೆಗಳನ್ನು ತೆರೆಯುವಂತಿಲ್ಲ.
ಮೆಡಿಕಲ್ ಸಾಮಗ್ರಿಗಳ ಮತ್ತು ಅಗತ್ಯ ಸಾಮಗ್ರಿಗಳ ಸರಬರಾಜು ಹೊರತು ಪಡಿಸಿ ಇತರೆ ಯಾವುದೇ ಸಾರಿಗೆ ವ್ಯವಸ್ಥೆಗಳು ಲಭ್ಯವಿರುವುದಿಲ್ಲ.
ಲಾಕ್‍ಡೌನ್ ಸಮಸ್ಯೆಯಿಂದಾಗಿ ಊರಿಗೆ ಹೋಗಲಾರದೇ ಇಲ್ಲೇ ಉಳಿದ ಕೊಂಡಿರುವವರಿಗೆ ಮತ್ತು ತೊಂದರೆಗೆ ಒಳಗಾದವರಿಗೆ, ಮೆಡಿಕಲ್ ಮತ್ತು ಏಮರ್ಜನ್ಸಿ ಸ್ಟಾಪ್‍ಗಳಿಗಾಗಿ ಹೋಟೆಲ್ ಮತ್ತು ಲಾಡ್ಜ್‍ಗಳನ್ನು ತೆರೆಯಲಾಗುತ್ತದೆ. ಮುಂಬರುವ ದಿನಗಳಲ್ಲಿ ಅಗತ್ಯವಿದ್ದರೆ ಲಾಡ್ಜ್‍ಗಳನ್ನು ಅತಿಗ್ರಹಣ ಮಾಡಿಕೊಂಡು ಕೋವಿಡ್-19 ಕ್ವಾರೆಂಟೆನ್‍ಗೆ(ಸೋಂಕಿತರನ್ನು ಪ್ರತ್ಯೇಕವಾಗು ಇರಿಸಲು) ಬಳಸಿಕೊಳ್ಳಲಾಗುವುದು. ಇದಕ್ಕೆ ಹೋಟೆಲ್ ಮತ್ತು ಲಾಡ್ಜ್ ಮಾಲಿಕರು ಜಿಲ್ಲಾಡಳಿತದೊಂದಿಗೆ ಸಹಕಾರಿಸಬೇಕು ಎಂದರು.
ಎಲ್ಲಾ ವಾರ್ಡ್‍ಗಳಲ್ಲಿ ಧಾರ್ಮಿಕ ಸೇವೆ, ಜಾತ್ರೆ ಮತ್ತು ಸಾಮೂಹಿಕ ಪ್ರಾರ್ಥನೆಗೆ ಜನ ಸೇರುವಂತಿಲ್ಲ. ಈ ಆದೇಶವನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಇನ್ನೂ ಯಾರಾದರೂ ಮರಣ ಹೊಂದಿದರೆ ಅಂತಹ ಸಮಯದಲ್ಲಿ 20 ಜನ ಮಾತ್ರ ಅಂತ್ಯ ಕ್ರಿಯೆಗೆ ಹೋಗಬೇಕು.

ಕ್ವಾರೆಂಟನ್‍ಗೆ ಆದೇಶಿಸಿದ್ದರೂ ಮನೆಯಲ್ಲಿ ಇರದೇ ಹೊರಗೆ ಬಂದರೆ ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು. ಈ ಎಲ್ಲಾ ಆದೇಶಗಳನ್ನು ನೋಡಿಕೊಳ್ಳಲು ಉಪವಿಭಾಗಧಿಕಾರಿ, ತಹಶೀಲ್ದಾರರು ಮತ್ತು ದಂಡಾಧಿಕಾರಿಗಳನ್ನು ನೇಮಿಸಲಾಗಿದೆ.
ಬ್ಯಾಂಕ್ ಮತ್ತು ಎಟಿಎಂ, ಕಿರಣಿ ಅಂಗಡಿ, ಪೆಟ್ರೋಲ್, ಎಲ್‍ಪಿಜಿ, ಗ್ಯಾಸ್, ಜೊಮ್ಯಾಟೋ, ಸ್ವಿಗ್ಗಿ ಫುಡ್ ಸರ್ವೀಸ್ ಸಿಬ್ಬಂದಿಗಳು, ಆನ್‍ಲೈನ್ ಡೆಲೆವರಿ ಕೊಡುವ ಸಿಬ್ಬಂದಿಗಳು, ಮಾಧ್ಯಮ ಮತ್ತು ವಿದ್ಯುದ್ಮಾನ ಮಾಧ್ಯಮಗಳು ಕಾರ್ಯ ನಿರ್ವಹಿಸುವವರಿಗೆ, ಪಶು ಆಹಾರ ಅಂಗಡಿಯವರಿಗೆ, ಟಿಲಿಕಾಂ ಮತ್ತು ಇಂಟರ್‍ನೆಟ್ ಸರ್ವಿಸ್‍ನವರಿಗೆ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಪಾಸ್ ನೀಡಲಾಗುವುದು. ನೀವು ಪೊಲೀಸರಿಗೆ ಪಾಸ್ ತೋರಿಸಿ ನಿಮ್ಮ ಕೆಲಸಕ್ಕೆ ಹೋಗಬಹುದು ಎಂದರು.
ಜಿಲ್ಲೆಯ ಎಲ್ಲಾ ಸಣ್ಣ-ಪುಟ್ಟ ಅಂಗಡಿಯ ವ್ಯಾಪಾರಿಗಳು ಜಿಲ್ಲೆಗೆ ಬಂದು ಕಿರಾಣಿ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬಹುದು. ಎಪಿಎಂಸಿ ಮತ್ತು ಹೋಲ್‍ಸೆಲ್ ಕಿರಾಣಿ ಅಂಗಡಿಗಳು , ಮೆಡಿಕಲ್ ಶಾಪ್‍ಗಳು ಪ್ರತಿದಿನ ತೆರೆದಿರಬೇಕು. ಕಿರಾಣಿ ಅಂಗಡಿ ಮತ್ತು ಎಟಿಎಂ ಸೇರಿದಂತೆ ಅಗತ್ಯ ಸೇವೆಗಳು ದಿನದ 24 ಗಂಟೆಯೂ ತೆರೆಯುವುದರ ಮೂಲಕ ಜನರ ಸೇವೆಗೆ ಮುಂದಾಗಬೇಕು. ಇದಕ್ಕೆ ಪೊಲೀಸ್ ಇಲಾಖೆ ವತಿಯಿಂದ ಸಹಕಾರ ನೀಡಲಾಗುತ್ತದೆ.
ತರಕಾರಿ ಮಾರುವವರು ನಗರದ 45 ವಾರ್ಡ್‍ಗಳಲ್ಲಿಯೂ ಪ್ರತಿದಿನ ತಳ್ಳುವ ಗಾಡಿಗಳ ಮೂಲಕ ಜನರಿಗೆ ತರಕಾರಿ ತಲುಪಿಸುವ ಪ್ರಯತ್

Leave a Reply

Your email address will not be published. Required fields are marked *