ದಾವಣಗೆರೆ, ಮಾ.28 –
ಜಿಲ್ಲೆಯಲ್ಲಿರುವ ಎಲ್ಲ ಸಂಘಟಿತ/ಅಸಂಘಟಿತ ಕಾರ್ಮಿಕರು ಉಪವಾಸ ಇರದಂತೆ ಹಾಗೂ ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಮ್ಮ ಜಿಲ್ಲಾಡಳಿತ ಶ್ರಮಿಸುತ್ತದೆ. ಇದಕ್ಕಾಗಿ ಅಸಂಘಟಿತ ಕಾರ್ಮಿಕರ ಬಗ್ಗೆ ಮಾಹಿತಿ ನೀಡಿ ಸಹಕರಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಇಂದು ಜಿಲ್ಲಾಡಳಿತ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ಕೋವಿಡ್-19 ಸೋಂಕು ಹಿನ್ನಲೆ ಘೋಷಿಸಿರುವ ಲಾಕ್‍ಡೌನ್ ಹಿನ್ನಲೆಯಲ್ಲಿ ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಸಮಸ್ಯೆಗಳ ಮತ್ತು ಅಹವಾಲು ಕುರಿತು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾನವನಿಗೆ ಬದುಕಲು ಮೂಲಭೂತ ಸೌಕರ್ಯಗಳಾದ ಆಹಾರ, ಆರೋಗ್ಯ, ವಸತಿ, ಇವುಗಳು ಬಹುಮುಖ್ಯವಾಗಿದ್ದು, ಜಿಲ್ಲೆಯಲ್ಲಿ ಯಾರೂ ಸಹ ಇವುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಹಾಗೂ ಜನಸಾಮಾನ್ಯರು ಬಳಸುವ ಅಗತ್ಯ ವಸ್ತುಗಳಿಗೆ ತೊಂದರೆಯಾಗದಂತೆ ಪೂರೈಸುವುದು ಜಿಲ್ಲಾಡಳಿತದ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.
ಕಾರ್ಮಿಕ ಮುಖಂಡ ಹೆಚ್.ಕೆ ರಾಮಚಂದ್ರಪ್ಪ ಮಾತಾನಾಡಿ, ಜಿಲ್ಲೆಯಲ್ಲಿ ಒಟ್ಟು 20 ರಿಂದ 22 ವಲಯಗಳಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಸೀವೆ ಮಾಡುತ್ತಿದ್ದು. ಈ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಬಸ್‍ಸ್ಟ್ಯಾಂಡ್‍ಗಳಲ್ಲಿ ಹಮಾಲಿ ಮಾಡುವವರು, ಕೈಗಾಡಿ ಎಳೆಯುವವರು, ಮನೆಯಲ್ಲಿ ಟೈಲರಿಂಗ್ ಮತ್ತು ಬೀಡಿ ಕಟ್ಟುವ ಕೆಲಸÀ ಮಾಡುವವರಿಗೆ ಲಾಕ್‍ಡೌನ್ ಆದೇಶ ಹೊರಡಿಸಿರುವುದರಿಂದ ಜೀವನ ಸಾಗಿಸಲು ತೀವ್ರ ಸಮಸ್ಯೆ ಉಂಟಾಗಿದೆ. ಹಾಗೂ ಮಂಡಕ್ಕಿ ಭಟ್ಟಿ ಹಾಗೂ ಕಟ್ಟಡ ಕೆಲಸಗಾರರು ಖಾಸಗಿಯವರ ಬಳಿ ಬೀಡಿಕಟ್ಟುವ ಕೆಲಸ ಮಾಡುತ್ತಿದ್ದು ಇಂತಹವರು ಇ.ಎಸ್.ಐ ಸೌಲಭ್ಯದಿಂದ ವಂಚಿತರಾಗಿದ್ದು ಜಿಲ್ಲಾಡಳಿತದಿಂದ ಪರವಾಗಿ ಇ.ಎಸ್.ಐ ಸೌಲಭ್ಯ ಒದಗಿಸಿಕೊಡಬೇಕು. ಶಿಕ್ಷಣ ಇಲಾಖೆಯಲ್ಲಿ ಬಿಸಿಯೂಟ ತಯಾರಿಸುವ ಕಾರ್ಯದಲ್ಲಿ ತೊಡಗಿರುವ ಮಹಿಳೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಾಯಕಿಯರಿಗೆ ಸೌಲಭ್ಯ ಕೊಡಿಸುವಂತೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಅಂಗನವಾಡಿಗಳು ಮುಚ್ಚಿರುವುದರಿಂದ ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುವ ಸಹಾಯಕಿಯರು ಮನೆ ಮನೆಗೆ ತೆರಳಿ ಜನರಿಗೆ ಆಹಾರ ಪರ್ದಾಥಗಳನ್ನು ತಲುಪಿಸಲು ಹೇಳಿದರು.
ಸಿಐಪಿಯು ಖಜಾಂಚಿ ಗುಡ್ಡಪ್ಪ ಮಾತಾನಾಡಿ, ಕಟ್ಟಡ ಕಾರ್ಮಿಕರ ಸ್ಥಿತಿ ಹೀನಾಯವಾಗಿದ್ದು ಸರ್ಕಾರದಿಂದ ಕೊಡಲಾಗುತ್ತಿರುವ 1 ಸಾವಿರ ಪರಿಹಾರ ಮೊತ್ತವನ್ನು 5 ಸಾವಿರಕ್ಕೆ ಏರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಕಟ್ಟಡ ಕಾರ್ಮಿಕರಿಗೆ ಬದುಕಲು ಅವಕಾಶಮಾಡಿಕೊಡಿ ಎಂದು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ನೋಡಲ್ ಆಫೀಸರ್ ಅವರಿಗೆ ಕಾರ್ಮಿಕರ ಮಾಹಿತಿಯನ್ನು ಕೊಡಲು ಹೇಳಿ ಯಾವುದೇ ಕಾರ್ಮಿಕರು ಸಹ ಹಸಿವಿನಿಂದ ಇರಬಾರದು ಅವರಿಗೆ ತಲುಪಬೇಕಾದನ್ನು ತಲುಪಿಸಲು ನಾನು ಶ್ರಮವಹಿಸುತ್ತೆನೆ ಎಂದರು.
ಎಐಟಿಯುಸಿ ಜಿಲ್ಲಾ ಸಂಚಾಲಕ ಮಂಜುನಾಥ್ ಮಾತಾನಾಡಿ, ನಗರದ ಮೆಡಿಕಲ್ ಶಾಪ್‍ಗಳಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಸಿಗದಿರುವ ಕಾರಣ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಬೇಕೆಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಿಲ್ಲಾಡಳಿತದ ವತಿಯಿಂದ ಮಾಸ್ಕ್ ನೀಡಲಾಗುವುದು ಎಂದು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಂಟೆಸ್ವಾಮಿ ಮಾತನಾಡಿ, ಆಹಾರ ಇಲಾಖೆಯಿಂದ ಅಂತ್ಯೋದಯ ಅನ್ನ ಯೋಜನೆಯಲ್ಲಿ 70ಕೆಜಿ ಧಾನ್ಯ ಹಾಗೂ ಬಿಪಿಲ್ ಕಾರ್ಡ್‍ದಾರರಿಗೆ ಒಬ್ಬ ವ್ಯಕ್ತಿಗೆ 10ಕೆಜಿ ಅಕ್ಕಿ , 2 ಕೆಜಿ ಬೇಳೆ, 4 ಕೆಜಿ ಗೋಧಿ 2 ತಿಂಗಳ ಅಗತ್ಯಕ್ಕೆ ಆಗುವಷ್ಟು ನೀಡಲಾಗುತ್ತದೆ. ಏ.1 ರಿಂದ ಇದಕ್ಕೆ ಕ್ರಮ ವಹಿಸಲಾಗುವುದು ಹಳ್ಳಿಗಳಲ್ಲಿ ಅಗತ್ಯ ವಸ್ತುಗಳನ್ನು ಪೂರೈಸುವ ವಿತರಕರರಿಗೆ ಹಳ್ಳಿಗಳಲ್ಲಿ ಅನಗತ್ಯವಾಗಿ ಬೇಲಿ ಹಾಕಿ ತೊಂದರೆ ನೀಡಿದಲ್ಲಿ ಅವರ ವೀರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಮಿಕ ಮುಖಂಡರಾದ ಉಮೇಶ್ ಮಾತಾನಾಡಿ, ಅಸಂಘಟಿತ ಕಾರ್ಮಿಕರ ಪರ ಮಾರ್ಚೆಂಟ್ ಅಸೋಸಿಯೇಷನ್ ಅವರ ಹತ್ತಿರ ಇರುತ್ತಾರೆ, ಅವರಿಂದ ಭರಿಸಿಕೊಂಡು ಅವರಿಗೆ ಸೌಲಭ್ಯ ನೀಡಬೇಕು. ಕೇಂದ್ರ ಸರ್ಕಾರದ ಒಂದು ಸಾವಿರ ಸಹಾಯ ಯಾವುದಕ್ಕೂ ಸಾಲುವುದಿಲ್ಲ ಏಕೆಂದರೆ ನಗರದಲ್ಲಿ ಮನೆ ಬಾಡಿಗೆ ಕನಿಷ್ಟ 3 ಸಾವಿರ ಇದೆ . ಕೆಲ ನಗರಗಳಲ್ಲಿ ಮನೆ ಮಾಲಿಕರು ಕರೋನಾ ಮುಗಿಯುವವರೆಗೆ ಬಾಡಿಗೆ ನೀಡುವುದು ಬೇಡ ಎಂದು ಬಾಡಿಗೆದಾರರಿಗೆ ಹೇಳಿದ್ದಾರೆ ಎಂಬ ಮಾಹಿತಿ ಬರುತ್ತಿದೆ. ಅಂತಹ ಧಾರಳತನ ನಮ್ಮ ದಾವಣಗೆರೆ ಮನೆ ಮಾಲೀಕರುಗಳಿಗೆ ಬಂದಿದೆ ಎಂದರು.
ಕಾರ್ಮಿಕ ಮುಖಂಡರಾದ ಜಬೀನಾ ಇವರು ಮಾತನಾಡಿ, ಎಲ್ಲರೂ ಒಂದು ದಿನ ಅಷ್ಟೇ ಜನತಾ ಕಪ್ರ್ಯೂ ಅಂದುಕೊಂಡಿದ್ದರು. ಆದರೆ ಅದು ಮುಂದುವರೆದಿದೆ ಪಡಿತರರವಿಲ್ಲದೆ ಜನ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹಾಗೂ ಮಾಸಿಕ ಪಿಂಚಣಿ ತೆಗೆದುಕೊಳ್ಳಲು ಹೋಗಲು ಆಗುತ್ತಿಲ್ಲ ಹಾಗಾಗಿ ಪೋಸ್ಟ್ ಮ್ಯಾನಗಳು ಮನೆಗೆ ಬಂದು ವೇತನ ವಿತರಿಸಿದರೆ ಅನೂಕೂಲವಾಗುತ್ತದೆ ಎಂದರು.
ಗ್ಯಾಸ್ ಏಜೆನ್ಸಿಯ ಲೋಕೆಶ್ ಮಾತನಾಡಿ, ಕೇಂದ್ರ ಸರ್ಕಾರದ ಆದೇಶದನ್ವಯ ಉಜ್ವಲ ಯೋಜನೆಯಡಿಯಲ್ಲಿ ಒಳಗೊಂಡಿರುವ ಫಲಾನುಭವಿಗಳಿಗೆ ಮಾತ್ರ 3 ತಿಂಗಳು ಉಚಿತವಾಗಿ ಗ್ಯಾಸ್ ಸಿಲೆಂಡರ್ ವಿತರಣೆ ಮಾಡಲಾಗುತ್ತದೆ. ನಮ್ಮ ಸಂಸ್ಥೆಯಲ್ಲಿ 800 ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ ಅವರಿಗೆ ಹಳ್ಳಿಗಳಲ್ಲಿ ಬೇಲಿ ಹಾಕಿ ಅನಗತ್ಯವಾಗಿ ತೊಂದರೆ ನೀಡುತ್ತಿದ್ದಾರೆ.É ಗ್ಯಾಸ್ ವಿತರಣೆ ಮಾಡಲು ಗಾಡಿಗಳು ಓಡಾಟಕ್ಕೆ ತೊಂದರೆಯಾಗುತ್ತಿದ್ದು, ರಸ್ತೆ ಮಧ್ಯದಲ್ಲಿ ಗಾಡಿ ಕೆಟ್ಟು ನಿಲ್ಲುತ್ತಿದೆ ಹಾಗಾಗಿ ಪಂಚರ್ ಶಾಪ್ ಮತ್ತು ಡೆಲಿವರಿ ಬಾಯ್ಸ್‍ಗಳಿಗೆ ರಸ್ತೆಯ ಮಧ್ಯದಲ್ಲಿ ಊಟದ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರು.
ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಂಘದ ಕಾರ್ಯದರ್ಶಿಯಾದ ರಂಗನಾಥ್ ಮಾತನಾ
ಡಿ, ದಾವಣಗೆರೆ ಜಿಲ್ಲೆಯ ಹಳ್ಳಿಗಳಲ್ಲಿ ಒಟ್ಟು 8 ಲಕ್ಷ ಜನ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆÀಲಸ ನಿರ್ವಹಿಸುತಿದ್ದು ಅವರಿಗೆ ಆದಷ್ಟು ಬೇಗನೆ ಸಂಬಳ ದೊರಕುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮನವಿ ಮಾಡಿದರು.
ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ ಎಂದರು.
ಜಿಲ್ಲಾಧಿಕಾರಿ ಮಾತನಾಡಿ ಮಾ.29 ರಿಂದ ಜಿಲ್ಲೆಯಾದ್ಯಂತ ಲಾಕ್‍ಡೌನ್ ಪೆಟ್ರೋಲ್, ಮತ್ತು ಡಿಸೇಲ್ ಬಂಕ್‍ಗಳು ಬಂದ್ ಆಗಲಿದೆ. ಅಗತ್ಯ ಸೇವೆಗಳಾದ ಆರೋಗ್ಯ ಇಲಾಖೆ, ಮೆಡಿಕಲ್ಸ್, ಖಾಸಗಿ ಸೆಕ್ಯೂರಿಟಿ ಗಾಡ್ರ್ಸ, ಪೆಟ್ರೋಲ್ ಗ್ಯಾಸ್, ಗ್ಯಾಸ್ ವಿತರಕರು, ಬ್ಯಾಂಕ್,ಎಟಿಎಂ, ಇನ್‍ಶ್ಯೂರೆನ್ಸ್ ಕಂಪನಿ ಸಿಬ್ಬಂದಿಗಳು, ಆನ್‍ಲೈನ್ ಫುಡ್ ಡೆಲಿವರಿ ಹಾಗೂ ಆನ್‍ಲೈನ್ ಮೂಲಕ ಔಷಧಿಗಳನ್ನು ಪೂರೈಸುವ ಸಿಬ್ಬಂದಿಗಳು, ಅಮೆಜಾನ್ ಹಾಗೂ ಫ್ಲಿಪ್‍ಕಾರ್ಟ್ ನಂತಹ ಇ-ವಾಣಿಜ್ಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದವರು, ದಿನಸಿ ಅಂಗಡಿಯವರು, ಡೈರಿ, ಮಾಂಸ ಮತ್ತು ಮೀನು ಮಾರಾಟಗಾರರು , ಆಸ್ಪತ್ರೆ ಸಿಬ್ಬಂದಿಗಳು, ಐಟಿ ಕಂಪನಿ ಉದ್ಯೋಗಿಗಳು, ಬೆಸ್ಕಾಂ ಸಿಬ್ಭಂದಿಗಳು, ಬಂಡವಾಳ ಮತ್ತು ಸಾಲು ಮಾರುಕಟ್ಟೆಗಳು, ಕೋಲ್ಡ್ ಸ್ಟೋರೆಜ್ ಹಾಗೂ ವೇರ್‍ಹೌಸಿಂಗ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಹಾಗೂ ಅಗತ್ಯ ಸರಕುಗಳನ್ನು ಪೂರೈಸುವ ಸಿಬ್ಬಂದಿಗಳು, ಹೋಟೆಲ್ ಮತ್ತು ಲಾಡ್ಜ್‍ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು, ಹಾಗೂ ಅಗತ್ಯ ಸರಕು ಸಾಮಾಗ್ರಿಗಳ ಸಾರಿಗೆಯಲ್ಲಿ ತೊಡಗಿರುವ ಸಿಬ್ಬಂದಿಗಳು, ಸರ್ಕಾರಿ ವಾಹನಗಳಿಗೆ ಮಾತ್ರ ಪೆಟ್ರೋಲ್ ಸಿಗುತ್ತದೆ. ಜಿಲ್ಲಾಡಳಿತ ನೀಡಿರುವ ಗುರುತಿನ ಚೀಟಿ ನೀಡಿ ಸೇವೆ ಸಲ್ಲಿಸುತ್ತಿರುವ ಕೆಲವು ಇಲಾಖೆಗಳು ಪೆಟ್ರೋಲ್ ಪಡೆಯಬಹುದು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ನಾಗರಾಜ್, ಎಎಸ್‍ಪಿ ರಾಜೀವ್‍ಸಭೆಯಲ್ಲಿ ಕಾರ್ಮಿಕರ ವಲಯದ ಪದಾಧಿಕಾರಿಗಳು ಮತ್ತು ಇತರರಿದ್ದರು.