ದಾವಣಗೆರೆ ಆ.01
ಕೇಂದ್ರೀಯ ಗೃಹ ಮಂತ್ರಾಲಯದ ಆದೇಶ ಹಾಗೂ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದನ್ವಯ
ಕಂಟೈನ್‍ಮೆಂಟ್ ವಲಯಗಳಲ್ಲಿ ಲಾಕ್‍ಡೌನ್ ಅವಧಿಯನ್ನು ವಿಸ್ತರಿಸಲು
ಹಾಗೂ ಕಂಟೈನ್‍ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ
ಹೆಚ್ಚಿನ ಚಟುವಟಿಕೆಗಳನ್ನು ಪುನಃ ಆರಂಭಿಸಲು ತೆರವು-3
ಮಾರ್ಗಸೂಚಿಗಳನ್ನು ಹೊರಡಿಸಿದ್ದು ಈ ಮಾರ್ಗಸೂಚಿ ಆ.31 ರವರೆಗೆ
ಜಾರಿಯಲ್ಲಿರುತ್ತದೆ.
ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ಪ್ರದತ್ತವಾದ
ಅಧಿಕಾರವನ್ನು ಚಲಾಯಿಸಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ
ಅಧ್ಯಕ್ಷರಾದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು
ಕೆಳಕಂಡಂತೆ ತೆರವು -3ರ ಮಾರ್ಗಸೂಚಿ ಹೊರಡಿಸಿದ್ದು ಈ
ಮಾರ್ಗಸೂಚಿ ಆ.1 ರಿಂದ ಆ.30 ರವರೆಗೆ ಚಾಲ್ತಿಯಲ್ಲಿರುತ್ತದೆ. ಇದನ್ನು
ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಇಲಾಖಾ
ಮುಖ್ಯಸ್ಥರುಗಳು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸತಕ್ಕದ್ದು
ಎಂದು ಅವರು ಆದೇಶಿಸಿರುತ್ತಾರೆ.
ಕಂಟೈನ್ ಮೆಂಟ್ ವಲಯಗಳನ್ನು ಹೊರತುಪಡಿಸಿದ
ಪ್ರದೇಶಗಳಲ್ಲಿ ತೆರವು-3ರ ಅವಧಿಯಲ್ಲಿ
ಅನುಮತಿಸಲಾದ ಚಟುವಟಿಕೆಗಳು:

ಕಂಟೈನ್‍ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಈ
ಕೆಳಗಿನವುಗಳನ್ನು ಹೊರತುಪಡಿಸಿ, ಎಲ್ಲಾ ಚಟುವಟಿಕೆಗಳನ್ನು
ಅನುಮತಿಸಲಾಗುವುದು : ಶಾಲೆಗಳು, ಕಾಲೇಜುಗಳು, ಶಿಕ್ಷಣ
ಮತ್ತು ತರಬೇತಿ ಸಂಸ್ಥೆಗಳು 31ನೇ ಆಗಸ್ಟ್ 2020 ರವರೆಗೆ
ಮುಚ್ಚಲ್ಪಡುತ್ತದೆ. ಆನ್‍ಲೈನ್/ದೂರ ಶಿಕ್ಷಣ ಕಲಿಕೆಗಳಿಗೆ
ಅನುಮತಿಸುವುದನ್ನು ಮುಂದುವರೆಸಲಾಗುವುದು ಮತ್ತು
ಪ್ರೋತ್ಸಾಹಿಸಲಾಗುವುದು.
 ಸಿನಿಮಾ ಮಂದಿರಗಳು, ಈಜುಕೊಳಗಳು, ಮನೋರಂಜನಾ
ಉದ್ಯಾವನಗಳು, ಚಿತ್ರಮಂದಿರಗಳು, ಬಾರ್‍ಗಳು.
ಸಭಾಂಗಣಗಳು, ಅಸೆಂಬ್ಲಿ ಹಾಲ್‍ಗಳು ಮತ್ತು ಅಂತಹುದೇ
ಸ್ಥಳಗಳು.
ಯೋಗಕೇಂದ್ರಗಳನ್ನು ಮತ್ತು ಜಿಮ್ನಾಷಿಯಂಗಳನ್ನು
ತೆರೆಯಲು ಆ.05 ರಿಂದ ಅನುಮತಿಸಲಾಗುವುದು. ಈ ಸಂಬಂಧ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ
ಮತ್ತು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಇಲಾಖೆ ವತಿಯಿಂದ ಪ್ರಯಾಣಿತ ಕಾರ್ಯ ವಿಧಾನ(ಎಸ್‍ಒಜಿ)
ಹೊರಡಿಸಲಾಗುವುದು.
  ಎಂ.ಹೆಚ್.ಎ ಅನುಮತಿಸಿದ ಪ್ರಯಾಣಿಕರ ಅಂತರ ರಾಷ್ಟ್ರೀಯ
ವಿಮಾನ ಪ್ರಯಾಣ ಹೊರತುಪಡಿಸಿ. ಮೆಟ್ರೋರೈಲು
ಸಾಮಾಜಿಕ/ರಾಜಕೀಯ/ಕ್ರೀಡೆ/ಮನೋರಂಜನೆ/ಶೈಕ್ಷಣಿಕ/ಸಾಂಸ್ಕøತಿ
ಕ/ಧಾರ್ಮಿಕ ಕಾರ್ಯಗಳು ಮತ್ತು ಇತರೆ ಬೃಹತ್ ಸಭೆಗಳು.
  ಈ ಮೇಲಿನ ಚಟುವಟಿಕೆಗಳನ್ನು ಪುನರಾರಂಭಿಸುವುದಕ್ಕೆ
ದಿನಾಂಕವನ್ನು ಭಾರತ ಸರ್ಕಾರವು ಪ್ರತ್ಯೇಕವಾಗಿ ನಿರ್ಣಯಿಸಬಹುದು
ಮತ್ತು ಭಾರತ ಸರ್ಕಾರದ ಸಂಬಂಧಪಟ್ಟ ಮಂತ್ರಾಲಯಗಳಿಂದ
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಕೋವಿಡ್-19
ಹರಡುವುಕೆಯನ್ನು ತಡೆಗಟ್ಟಲು ಅಗತ್ಯ ಪ್ರಮಾಣಿತ ಕಾರ್ಯ
ವಿಧಾನ(ಎಸ್‍ಒಪಿ) ಹೊರಡಿಸತಕ್ಕದ್ದು.
ಸ್ವಾತಂತ್ರ್ಯ ದಿನಾಚರಣೆ: ಸ್ವಾತಂತ್ರ್ಯ ದಿನಾಚರಣೆಯನ್ನು ಜಿಲ್ಲೆ,
ಉಪವಿಭಾಗ, ತಾಲ್ಲೂಕುಗಳು, ಮುನ್ಸಿಪಲ್ ಮತ್ತು ಪಂಚಾಯತ್
ವ್ಯಾಪ್ತಿಯಲ್ಲಿ ಹಾಗೂ ಮನೆಗಳಲ್ಲೂ ಆಚರಿಸಲು ಸಾಮಾಜಿಕ ಅಂತರ
ಕಾಯ್ದುಕೊಳ್ಳುವ ಮುಖಾಂತರ ಮತ್ತು ಇತರೆ ಆರೋಗ್ಯ
ಶಿಷ್ಟಾಚಾರಗಳನ್ನು ಪಾಲಿಸುವುದರೊಂದಿಗೆ
ಅನುಮತಿಸಲಾಗುವುದು. ಈ ಸಂಬಂಧ ಭಾರತ ಸರ್ಕಾರದ ಗೃಹ
ಮಂತ್ರಾಲಯವು ಪತ್ರ ಸಂ.2/5/2020 ಪಬ್ಲಿಕ್ ದಿ: 20.07.2020ರಲ್ಲಿ
ಹಿರಡಿಸಿರುವ ಸೂಚನೆಗಳನ್ನು ಪಾಲಿಸತಕ್ಕದ್ದು.
ಕಂಟೈನ್ ಮೆಂಟ್ ವಲಯಗಳಿಗೆ ಸೀಮಿತವಾದ ಲಾಕ್‍ಡೌನ್:
ಕಂಟೈನ್‍ಮೆಂಟ್ ವಲಯಗಳಲ್ಲಿನ ಲಾಕ್ ಡೌನ್ ಆ.31 ರವರೆಗೆ
ಮುಂದುವರೆಯುತ್ತದೆ. ಸೋಂಕಿನ ಪ್ರಸರಣ ಸರಪಳಿಯನ್ನು
ಪರಿಣಾಮಕಾರಿಯಾಗಿ ಮುರಿಯುವ ಉದ್ದೇಶದಿಂದ ಆರೋಗ್ಯ ಕುಟುಂಬ
ಕಲ್ಯಾಣ ಮಂತ್ರಾಲಯ ಹಾಗೂ ಕರ್ನಾಟಕ ಸರ್ಕಾರದ ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಹೊರಡಿಸುವ
ಮಾರ್ಗಸೂಚಿಯನ್ನು ಪರಿಗಣನೆಗೆ ತೆಗೆದುಕೊಂಡ ನಂತರ
ಜಿಲ್ಲಾಧಿಕಾರಿಗಳು/ಸಂಬಂಧಿಸಿದ ಇಲಾಖೆಗಳು ವೆಬ್‍ಸೈಟ್‍ನಲ್ಲಿ ಪ್ರಕಟಿಸಿ ಈ
ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಮಂತ್ರಾಲಯದೊಂದಿಗೆ ಹಂಚಿಕೊಳ್ಳುವುದು.
ಕೋವಿಡ್ 19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳು :
ಮುಖದ ಹೊದಿಕೆ : ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಕೆಲಸದ
ಸ್ಥಳಗಳಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಮುಖದ
ಹೊದಿಕೆಯನ್ನು ಧರಿಸುವುದು ಕಡ್ಡಾಯವಾಗಿದೆ. ಅಗತ್ಯಾನುಸಾರ
ಮುಖದ ಹೊದಿಕೆಯನ್ನು ಧರಿಸದಿದ್ದಲ್ಲಿ ನಗರ ಪ್ರದೇಶಗಳಲ್ಲಿ
ರೂ.200 ಮತ್ತು ಇನ್ನುಳಿದ ಪ್ರದೇಶಗಳಲ್ಲಿ ರೂ.100 ದಂಡ
ವಿಧಿಸತಕ್ಕದ್ದು.
ಸಾಮಾಜಿಕ ಅಂತರ : ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ
ಕನಿಷ್ಟ 6 ಅಡಿ ಅಂತರವನ್ನು (2 ಗಜ ಅಂತರ)
ಕಾಯ್ದುಕೊಳ್ಳಬೇಕು. ಗ್ರಾಹಕರಲ್ಲಿ ದೈಹಿಕ ಅಂತರ
ಇರುವುದನ್ನು ಅಂಗಡಿಗಳು ಖಚಿತಪಡಿಸಿಕೊಳ್ಳತಕ್ಕದ್ದು. ಮದುವೆ
ಸಂಬಂಧಿತ ಕೂಟಗಳಲ್ಲಿ ಅತಿಥಿಗಳ ಸಂಖ್ಯೆ 50 ಕ್ಕೆ ಮೀರಿರಬಾರದು.
ಶವ ಸಂಸ್ಕಾರ/ಅಂತಿಮ ವಿಧಿ ಸಂಬಂಧಿತ ಕಾರ್ಯಗಳಲ್ಲಿ ವ್ಯಕ್ತಿಗಳ
ಸಂಖ್ಯೆ 20 ಕ್ಕೆ ಮೀರಿರಬಾರದು.
ಸ್ಥಳೀಯ ಪ್ರಾಧಿಕಾರಿಗು ಅದರ ಕಾನೂನು ನಿಯಮ ಮತ್ತು
ನಿಬಂಧನೆಗಳಲ್ಲಿ ತಿಳಿಸಿರುವಂತೆ ಸಾರ್ವಜನಿಕ ಸ್ಥಳಗಳಲ್ಲಿ
ಉಗಿಯುವುದು ದಂಡನಾರ್ಹ ಶಿಕ್ಷೆಯಾಗಿರುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಪಾನ್, ಗುಟ್ಕಾ, ತಂಬಾಕು
ಇತ್ಯಾದಿಗಳ ಬಳಕೆಯನ್ನು ನಿಷೇಧಿಸಿದೆ.

ಕೆಲಸದ ಸ್ಥಳಗಳಲ್ಲಿ ಹೆಚ್ಚುವರಿ ನಿರ್ದೇಶನಗಳು :
ಮನೆಯಿಂದ ಕೆಲಸ (Woಡಿಞ ಜಿಡಿom ಊome) : ಸಾಧ್ಯವಾದಷ್ಟು ಮಟ್ಟಿಗೆ
ಮನೆಯಿಂದಲೇ ಕೆಲಸ ಮಾಡುವ ಪದ್ದತಿಯನ್ನು
ಅನುಸರಿಸಬೇಕು.
ಕೆಲಸದಲ್ಲಿ ಪಾಳಿಯ ಪದ್ದತಿ/ವ್ಯವಹಾರ ಸಮಯ: ಕಚೇರಿಗಳಲ್ಲಿ
ಕೆಲಸದ ಸ್ಥಳಗಳಲ್ಲಿ ಅಂಗಡಿಗಳಲ್ಲಿ ಮಾರುಕಟ್ಟೆಗಳಲ್ಲಿ
ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ
ಕೆಲಸ/ವ್ಯವಹಾರದ ಸಮಯದಲ್ಲಿ ಪಾಳಿಯ ಪದ್ದತಿಯನ್ನು
ಅನುಸರಿಸುವುದು.
ಸ್ಕ್ರೀನಿಂಗ್ ಮತ್ತು ನೈರ್ಮಲ್ಯ: ಎಲ್ಲಾ ಸಾಮಾನ್ಯ ಪ್ರದೇಶಗಳಲ್ಲಿ
ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್,
ಕೈ ತೊಳೆಯುವುದಕ್ಕೆ ಮತ್ತು ಸ್ಯಾನಿಟೈಸರ್‍ಗೆ ಅವಕಾಶ
ಕಲ್ಪಿಸುವುದು.
ನಿಯಮಿತ ಸ್ಯಾನಿಟೈಸೇಷನ್ : ಕೆಲಸದ ಸಂಪೂರ್ಣ ಆವರಣ ಸಾಮಾನ್ಯ
ಸೌಲಭ್ಯಗಳು ಮತ್ತು ಮಾನವ ಸಂಪರ್ಕಕ್ಕೆ ಬರುವ ಎಲ್ಲಾ
ಅಂಶಗಳಿಗೆ ಆಗಾಗ್ಗೆ ನೈರ್ಮಲ್ಯೀಕರಣ ಮಾಡತಕ್ಕದು(ಉದಾ: ಬಾಗಿಲ
ಹಿಡಿಕೆಗಳು, ಇತ್ಯಾದಿ) ಇದನ್ನು ಕೆಲಸದ ಪಾಳಿಯ ಮಧ್ಯದಲ್ಲಿ ಸಹ
ಖಾತರಿಪಡಿಸಿಕೊಳ್ಳುವುದು.
ಸಾಮಾಜಿಕ ಅಂತರ: ಕೆಲಸದ ಸ್ಥಳದಲ್ಲಿ ವ್ಯಕ್ತಿಗಳ ನಡುವೆ
ಪಾಳಿಗಳ ನಡುವೆ, ಊಟದ ವಿರಾಮ ಮೊದಲಾದವುಗಳಲ್ಲಿ ಎಲ್ಲಾ
ವ್ಯಕ್ತಿಗಳು ಸಾಕಷ್ಟು ಅಂತರವನ್ನು ಕಾಯ್ದುಕೊಂಡಿರುವ ಬಗ್ಗೆ
ಮೇಲ್ವಿಚಾರಕರು ಖಾತರಿಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
 ವಿಪತ್ತು ನಿರ್ವಹಣಾ ಕಾಯ್ದೆ -2005 ರ ಅಡಿಯಲ್ಲಿ ಹೊರಡಿಸಲಾದ ಈ
ಮಾರ್ಗಸೂಚಿಗಳನ್ನು ಯಾವುದೇ ಪ್ರಾಧಿಕಾರಗಳು
ಯಾವುದೇ ರೀತಿಯಲ್ಲಿ ದುರ್ಬಲಗೊಳಿಸತಕ್ಕದ್ದಲ್ಲ.
 ಎಲ್ಲಾ ಪ್ರಾಧಿಕಾರಗಳು ಮೇಲಿನ ಕ್ರಮಗಳನ್ನು
ಕಟ್ಟುನಿಟ್ಟಾಗಿ ಜಾರಿಗೊಳಿಸತಕ್ಕದ್ದು.
ದಂಡ : ಕೋವಿಡ್ 19 ನಿರ್ವಹಣೆಯ ಲಾಕ್‍ಡೌನ್ ಕ್ರಮಗಳನ್ನು
ರಾಷ್ಟ್ರೀಯ ನಿರ್ದೇಶನಗಳನ್ನು ಉಲ್ಲಂಘಿಸುವ ಯಾವುದೇ
ವ್ಯಕ್ತಿಯು, ವಿಪತ್ತು ನಿರ್ವಹಣಾ ಅಧಿನಿಯಮ 2005 ರ ಸೆಕ್ಷನ್ 51 ರಿಂದ
60 ಉಪಬಂಧಗಳು, ಅಲ್ಲದೇ ಭಾರತೀಯ ದಂಡ ಸಂಹಿತೆ ಸೆಕ್ಷನ್ 188
ರ ಅಡಿಯಲ್ಲಿನ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ
ಇತರೆ ಕಾನೂನು ಉಪಬಂಧಗಳ ಮೇರೆಗೆ ಅವರ ವಿರುದ್ದ ಕ್ರಮ
ಜರುಗಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *