ದಾವಣಗೆರೆ ಆ.18
  ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೈತರಿಂದಲೇ ಬೆಳೆ
ಸಮೀಕ್ಷೆ ನಡೆಸುವ ಆ್ಯಪ್ ಬಿಡುಗಡೆ ಮಾಡಲಾಗಿದೆ. ರೈತರÀ ಈ ಬೆಳೆ
ಸಮೀಕ್ಷೆ ಉತ್ಸವವನ್ನು ಒಂದು ರೀತಿ ಹಬ್ಬದ ರೀತಿಯಲ್ಲಿ ಆಚರಿಸೋಣ
ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
   ಮಂಗಳವಾರ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದ
ನಾರಪ್ಪ ಬಿನ್ ಪರಮೇಶ್ವರಪ್ಪ ಇವರ ಸರ್ವೆ ನಂಬರ್ 218/6 ಜಮೀನಿನಲ್ಲಿ
ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಪ್ರಾತ್ಯಕ್ಷಿಕೆ
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರರೊಂದಿಗೆ
ಮಾತನಾಡಿದ ಅವರು, ಆ.14 ರಿಂದ ಬೆಂಗಳೂರಿನಿಂದ ಹೊರಟು
ತುಮಕೂರು, ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ಗದಗ,
ಧಾರವಾಡ, ಹಾವೇರಿ ಸೇರಿದಂತೆ ಇವತ್ತು ಹೊನ್ನಾಳಿ ಹಾಗೂ ದಾವಣಗೆರೆ
ತಾಲ್ಲೂಕಿನ ಕತ್ತಲಗೆರೆ ಗ್ರಾಮದಲ್ಲಿ ರೈತರ ಬೆಳೆ ಸಮೀಕ್ಷೆ
ಉತ್ಸವದಲ್ಲಿ ಪಾಲ್ಗೊಂಡಿದ್ದೇನೆ ಎಂದರು.
   ಈ ಹಿಂದೆ ರೈತರಿಗೆ ತಮ್ಮ ಬೆಳೆ ಕುರಿತು ಸಮೀಕ್ಷೆ ನಡೆಸುವ
ಸ್ವಾತಂತ್ರ್ಯವನ್ನು ಯಾವತ್ತೂ ಕೊಟ್ಟಿರಲಿಲ್ಲ. ಬೆಳೆ ಸಮೀಕ್ಷೆ
ಮೂಲಕ ರೈತರಿಗೆ ವಿಶೇಷ ಸ್ವಾತಂತ್ರ್ಯ ಲಭಿಸಿದೆ. ಒಮ್ಮೊಮ್ಮೆ
ಪಿಆರ್‍ಒಗಳಿಗೆ ರೈತÀರೊಂದಿಗೆ ವೈಮನಸ್ಸಿದ್ದರೆ ಅವರ ಬೆಳೆ
ಫೋಟೊ ಹಾಕುತ್ತಿರಲಿಲ್ಲ. ಇಂತಹ ಸನ್ನಿವೇಶಗಳಿಂದ ರೈತರಿಗೆ
ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲ್ಲಿ ರೈತರಿಗೆ ಆ್ಯಪ್
ಮೂಲಕ ಅನುಕೂಲವಾಗಿದೆ ಎಂದು ತಿಳಿಸಿದರು.
   ರೈತರ ಬೆಳೆ ಸಮೀಕ್ಷೆ ಆ್ಯಪ್‍ನ್ನು ಗೂಗಲ್ ಪ್ಲೇ ಸ್ಟೋರ್‍ನಲ್ಲಿ
ಡೌನ್ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಪ್ರತಿಯೊಬ್ಬ ರೈತರು
ತಮ್ಮ ಸರ್ವೇ ನಂಬರ್, ವಿಸ್ತೀರ್ಣ ಹಾಗೂ ಅವರು ಬೆಳೆದದಂತಹ ಬೆಳೆ
ಜೊತೆಗೆ ಒಂದು ಸರ್ವೇ ನಂಬರ್‍ನಲ್ಲಿ 4, 5 ರೀತಿಯ ಬೆಳೆಗಳು
ಬೆಳೆದಿದ್ದಲ್ಲಿ ಅದರ ಫೆÇೀಟೋಗಳನ್ನು ನಮೂದಿಸಬಹುದು.
ಇದುವರೆಗೂ ರೈತರು ಬೆಳೆ ಸಮೀಕ್ಷೆ ವೇಳೆ ನಮಗೆ
ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿದ್ದರು. ಆದರೆ ಇದೀಗ ಆ ರೀತಿ
ಹೇಳುವ ಮಾತೇ ಇಲ್ಲ ಎಂದÀರು.

   ರೈತರು ತಾವು ಬೆಳೆದ ಬೆಳೆಯಲ್ಲಿ ಎಷ್ಟು ಇಳುವರಿ ಬಂದಿದೆ. ಯಾವ
ಬೆಳೆ ಬೆಳೆದಿದ್ದಾರೆ ಎಂಬುದರ ನಿಖರ ಮಾಹಿತಿ ತಿಳಿಯಲು ಆ್ಯಪ್ ತುಂಬಾ
ಸಹಕಾರಿಯಾಗಿದೆ. ಈ ಹಿಂದಿನ ಬೆಳೆ ಸಮೀಕ್ಷೆಯಲ್ಲಿನ
ನ್ಯೂನತೆಯನ್ನು ಬಗೆಹರಿಸಲು ರಾಜ್ಯವು ಮೊದಲ ಬಾರಿಗೆ ರೈತರ
ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಳಕೆ ಜಾರಿಗೆ ತಂದಿದ್ದು, ಮೊಬೈಲ್ ಆ್ಯಪ್
ಬಳಕೆಯಿಂದಾಗಿ ವಾಸ್ತವದ ವಿಡಿಯೋ, ಫೋಟೊ ಅಪ್‍ಲೋಡ್
ಮಾಡುವುದರಿಂದ ಪಾರದರ್ಶಕತೆ ಕಾಪಾಡಿಕೊಳ್ಳಬಹುದು ಎಂದರು.
   ಬೆಳೆ ಸಮೀಕ್ಷೆ ಉದ್ದೇಶ ವಿಮೆ ಹಾಗೂ ಬೆಂಬಲ ಬೆಲೆ ಕೊಡುವಂತಹ
ಸಮಯದಲ್ಲಿ ಹಾಗೂ ಅತಿವೃಷ್ಟಿ, ಅನಾವೃಷ್ಟಿ ಉಂಟಾದಾಗ ಬೆಳೆ ಅಂದಾಜು
ಮಾಡಲು ಅನುಕೂವಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರ
ಕೈಯಲ್ಲಿ ಮೊಬೈಲ್ ಆ್ಯಪ್ ಕೊಟ್ಟು ಅವರ ಕಡೆಯಿಂದಲೇ ಬೆಳೆ
ಸಮೀಕ್ಷೆ ಮಾಡಬಹುದು ಎಂದು ಎಲ್ಲರೊಂದಿಗೆ ಚರ್ಚೆ ಮಾಡಿದಾಗ
ಇದೊಂದು ಉತ್ತಮ ಸಲಹೆ ಎಂದು ತೀರ್ಮಾನಿಸಲಾಯಿತು. 21 ನೇ
ಶತಮಾನದಲ್ಲಿ ಪ್ರತಿಯೊಬ್ಬರ ಕೈಯಲ್ಲಿಯೂ ಆಂಡ್ರಾಯ್ಡ್
ಮೊಬೈಲ್ ಇರುತ್ತದೆ. ಎಲ್ಲರೂ ಸಾಮಾನ್ಯವಾಗಿ ವಾಟ್ಸಪ್, ಫೇಸ್ಬುಕ್
ನೋಡುತ್ತಾರೆ. ಆ ಕಾರಣದಿಂದ ಇದೊಂದು ಪ್ರಯತ್ನ ಮಾಡೋಣ
ಎಂದು ಸಿಎಂ ರವರ ಒಪ್ಪಿಗೆ ಪಡೆದು ಆ್ಯಪ್ ಬಿಡುಗಡೆ ಮಾಡಲಾಗಿದೆ
ಎಂದು ತಿಳಿಸಿದರು.
ತಮಗೆ ತಾವೇ ಸರ್ಟಿಫಿಕೇಟ್ ಕೊಟ್ಟಕೊಳ್ಳಬಹುದು: ನನ್ನ ಬೆಳೆ
ನನ್ನ ಹಕ್ಕು, ನನ್ನ ಬೆಳೆ ನನ್ನ ಸ್ವಾತಂತ್ರ್ಯ, ನನ್ನ ಬೆಳÉ ನನ್ನ
ಸಮೀಕ್ಷೆ ಎಂದು ರೈತರು ತಾವು ಬೆಳೆದ ಬೆಳೆಗಳ
ಫೆÇೀಟೋವನ್ನು ಅವರೇ ನಮೂದಿಸಿ ತಮಗೆ ತಾವೇ ಸರ್ಟಿಫಿಕೇಟ್
ಕೊಟ್ಟುಕೊಳ್ಳಬಹುದು. ತಮ್ಮ ಜಮೀನಿನಲ್ಲಿ ತಾವೇ ನಿಂತುಕೊಂಡು
ಮೊಬೈಲ್‍ನಲ್ಲಿ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಬೆಳೆ ಸಮೀಕ್ಷೆ
ಫೆÇೀಟೋ ಹಾಕಿ ಅಪೆÇ್ಲೀಡ್ ಮಾಡುವುದರಿಂದ ರಾಜ್ಯದಲ್ಲಿ ರಾಗಿ,
ಜೋಳ, ಭತ್ತ ಸೇರಿದಂತೆ ಬೆಳೆಗಳು ಎಷ್ಟು ಬೆಳೆದಿದ್ದಾರೆ ಎಂದು
ಮಾಹಿತಿ ಲಭಿಸುತ್ತದೆ. ಇದರಿಂದ ಬೆಳೆಗಳ ಬೇಡಿಕೆ ಎಷ್ಟಿದೆ ಎಂಬುದರ
ಕುರಿತು ಸಂಪೂರ್ಣ ಮಾಹಿತಿ ಸಿಗುತ್ತದೆ ಎಂದು ತಿಳಿಸಿದರು.
   ಸಿಎಂ ಯಡಿಯೂರಪ್ಪನವರು ಕೊರೊನಾ ಸಂಕಷ್ಟದ
ಹಿನ್ನೆಲೆಯಲ್ಲಿ ಮೆಕ್ಕೆಜೋಳ ಬೆಳೆದ ಸುಮಾರು 10 ಲಕ್ಷ ರೈತರಿಗೆ
ರೂ. 500 ಕೋಟಿ ಪರಿಹಾರ ಘೋಷಿಸಿದ್ದು ಕಳೆದ ವರ್ಷದ ಬೆಳೆ
ಸಮೀಕ್ಷೆ ಆಧಾರದ ಮೇಲೆಯೇ. ಈಗಾಗಲೇ 8 ಲಕ್ಷ ರೈತರಿಗೆ
ಹಣವನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಆಗಸ್ಟ್ 16 ರಂದು ರಾಜ್ಯದ ಮುಖ್ಯಮಂತ್ರಿಗಳು ಕಿಸಾನ್ ಸಮ್ಮಾನ್
ಯೋಜನೆಯಡಿ ರೂ. 1000 ಕೋಟಿ ಹಣವನ್ನು ರಾಜ್ಯದ 50 ಲಕ್ಷ
ರೈತರಿಗೆ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ರೈತರ ಅಕೌಂಟ್‍ಗೆ ಹಣ
ಜಮೆ ಮಾಡಲಾಗುತ್ತಿದೆ. ಅದರಂತೆ ಕಳೆದ 19-20ನೇ ಸಾಲಿನ ಹಿಂಗಾರು
ಮುಂಗಾರು ಬೆಳೆ ವಿಮೆಯನ್ನು ಇಂದಿನಿಂದ ಬಿಡುಗಡೆ
ಮಾಡಲಾಗುತ್ತಿದೆ ಎಂದು ತಿಳಿಸಿದರು.
ಯೂರಿಯ ಬಳಕೆ ಕಡಿಮೆ ಮಾಡಿ: ಯೂರಿಯ ಗೊಬ್ಬರ ಕೊರತೆ
ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಬೇಡಿಕೆಗನುಗುಣವಾಗಿ
ಯೂರಿಯಾ ಸರಬರಾಜಾಗುತ್ತಿದ್ದು ಸದ್ಯ ರಾಜ್ಯಕ್ಕೆ 27 ಸಾವಿರ ಟನ್ ಬಂದಿದೆ.
ಬೇಡಿಕೆಯ ಗೊಬ್ಬರವನ್ನು ಮಲೆನಾಡು ಪ್ರದೇಶಗಳಲ್ಲಿ
ಮೊದಲನೇ ಹಂತದಲ್ಲಿ ಬಿಡುಗಡೆ ಮಾಡಲಾಗುವುದು. ಕಳೆದ
ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಈಗಾಗಲೇ ನಾವು 67 ಸಾವಿರ ಮೆಟ್ರಿಕ್ ಟನ್
ಹೆಚ್ಚು ಗೊಬ್ಬರ ನೀಡಿದ್ದೇವೆ. ರೈತರು ಎಷ್ಟು ಗೊಬ್ಬರ ಬೇಕೋ
ಅಷ್ಟೇ ಬಳಕೆ ಮಾಡಬೇಕು. ಬೆಳೆಗಾಗಿ ಹೆಚ್ಚು ಗೊಬ್ಬರ ಬಳಕೆ

ಮಾಡುವುದುನ್ನು ನಿಲ್ಲಿಸಬೇಕು. ಹೆಚ್ಚು ಬಳಕೆ ಮಾಡಿದಷ್ಟು
ಭೂತಾಯಿಗೆ ವಿಷ ಉಣಿಸಿದಂತಾಗುತ್ತದೆ ಎಂದರು.
ರೈತರು ಆರ್ಥಿಕವಾಗಿ ಸದೃಢರಾಗಬೇಕು..
   ಕೃಷಿಯಲ್ಲಿ ರೈತರು ಆರ್ಥಿಕ ಸ್ವಾವಲಂಬನೆ ಹೊಂದಬೇಕು. ಆ
ಮೂಲಕ ಆರ್ಥಿಕವಾಗಿ ಸದೃಢನಾಗಬೇಕು. ಕೃಷಿಯನ್ನು
ಲಾಭದಾಯಕವಾಗಿ ಬಳಸಿಕೊಳ್ಳಬೇಕು. ಆ ಮೂಲಕ ತಾವು ಬೆಳೆದ
ಬೆಳೆಗೆ ತಾವೇ ಬೆಲೆ ನಿಗದಿ ಮಾಡುವಂತಹ ಸಮಯ ಸದ್ಯದಲ್ಲಿಯೇ
ಬರಲಿದೆ.

Leave a Reply

Your email address will not be published. Required fields are marked *