ದಾವಣಗೆರೆ ಸೆ.4
     ಭತ್ತ ಮತ್ತು ಹತ್ತಿ ಬೆಳೆÉಗಳಲ್ಲಿನ್ಲ ಕೀಟಗಳನ್ನು ನಿರ್ವಹಣೆ
ಮಾಡುವುದು ಬಹಳ ಮುಖ್ಯವಾಗಿದ್ದು, ಈ ಕೀಟಗಳನ್ನು ಜೈವಿಕ
ವಿಧಾನಗಳಿಂದ ನಿರ್ವಹಣೆ ಮಾಡಲು ರೈತರು ಟ್ರೈಕೋಗ್ರಾಮ
ಪರತಂತ್ರ ಜೀವಿಗಳನ್ನು ಬಳಸಬಹುದಾಗಿದೆ.
     ಟ್ರೈಕೋಗ್ರಾವiವು ಕಣಜ ಜಾತಿಗೆ ಸೇರಿದ ಅತಿ
ಸೂಕ್ಷ್ಮಕೀಟವಾಗಿದ್ದು. 8 ರಿಂದ 10 ಕಣಜಗಳು ಒಂದು ಗುಂಡು
ಸೂಜಿಯ ತಲೆಯ ಮೇಲೆ ಕುಳಿತು ಕೊಳ್ಳಬಹುದಾದಷ್ಟು
ಸೂಕ್ಷ್ಮ ಕೀಟವಾಗಿರುತ್ತದೆ. ಕಪ್ಪು ಬಣ್ಣದಿಂದ ಕೂಡಿದ ಈ
ಟ್ರೈಕೋಗ್ರಾಮ 200 ವಿವಿಧ ಆಶ್ರಯ ಕೀಟಗಳ ಮೊಟ್ಟೆಯ
ಒಳಗೆ ಪರಾವಲಂಬಿಯಾಗಿ ಜೀವಿಸುತ್ತದೆ. ಮೊಟ್ಟೆ ಹಂತದಲ್ಲಿಯೇ
ಶತ್ರು ಕೀಟಗಳಾದ ಸುಳಿಕೊರಕ, ಕಾಂಡಕೊರಕ,
ಕಾಯಿಕೊರಕ ನಾಶಪಡಿಸುತ್ತದೆ.
    ಮೊಟ್ಟೆ ಪರತಂತ್ರ ಜೀವಿಯಾದ ಈ ಟ್ರೈಕೋಗ್ರಾಮವನ್ನು
ಪ್ರಯೋಗಾಲಯಗಳಲ್ಲಿ ಸುಲಭವಾಗಿ
ಅಭಿವೃದ್ಧಿಗೊಳಿಸಬಹುದಾಗಿದ್ದು,  ಈ ಕಾರ್ಯವನ್ನು ದಾವಣಗೆರೆ
ಜಿಲ್ಲೆಯ ಜೈವಿಕ ನಿಯಂತ್ರಣ ಪ್ರಯೋಗಾಲಯ, ಕಾಡಜ್ಜಿಯಲ್ಲಿ
ಉತ್ಪಾದಿಸಲಾಗುತ್ತಿದೆ.
    ಮಾಹಿತಿಗಾಗಿ ಹಾಗೂ ಟ್ರೈಕೋಗ್ರಾಮಕಾರ್ಡ್‍ಗಳನ್ನು
ಪಡೆಯಲು ಇಚ್ಛಿಸುವವರು ಕೃಷಿ ಅಧಿಕಾರಿ ಬಿ.ವಿ.ಸುಧಾ, ದೂ.ಸಂ-
8277931254 ಜೈವಿಕ ನಿಯಂತ್ರಣ ಪ್ರಯೋಗಾಲಯ, ಕಾಡಜ್ಜಿ
ಇವರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *