ದಾವಣಗೆರೆ ಸೆ.5

       ಜಿಲ್ಲೆಯಾದ್ಯಂತ ಭತ್ತದ ಬೆಳೆಯು ಬೆಳವಣಿಗೆ
ಹಂತದಲ್ಲಿದ್ದು, ಅಲ್ಲಲ್ಲಿ ಹಾಗೂ ತಡವಾಗಿ ನಾಟಿಯಾದ ಭತ್ತದ
ಬೆಳೆಯಲ್ಲಿ ಕೊಳವೆ ಹುಳುವಿನ ಬಾಧೆ ಕಂಡುಬಂದಿರುತ್ತದೆ.
ಕೊಳವೆ ಹುಳುವಿನ  ಬಾಧೆಯನ್ನು ಗುರುತಿಸುವುದು ಬಹಳ
ಸುಲಭವಾಗಿದ್ದು, ಇದು ಎಲೆಗಳನ್ನು ಮಡಿಚಿ ಒಳಗೆ ಸೇರಿಕೊಂಡು
ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ. ಕೆರೆದು ತಿಂದ
ಭಾUವುÀ ಏಣಿಯಾಕಾರವನ್ನು ಹೋಲುತ್ತದೆ. ಹಾಗೂ ಎಲೆಗಳಿಂದ
ವiಡಿಚಿಕೊಂಡ ಕೊಳವೆಗಳು ನೀರಿನಲ್ಲಿ ತೇಲುತ್ತಿರುತ್ತವೆ. ಕೊಳವೆ
ಹುಳುಗಳು ಎಲೆಗಳ ಹಸಿರು ಭಾಗವನ್ನು ಕೆರೆದು
ತಿನ್ನುವುದರಿಂದ ಬೆಳವಣಿಗೆ ಕುಂಠಿತಗೊಂಡು ಇಳುವರಿ ಮೇಲೆ
ಪರಿಣಾಮ ಬೀರುತ್ತದೆ.
ಕೊಳವೆ ಹುಳುಗಳನ್ನು ನಿಯಂತ್ರಿಸಲು ಶಿಫಾರಸ್ಸು ಮಾಡಿದ
ಪ್ರಮಾಣದಲ್ಲಿ ಗೊಬ್ಬರಗಳನ್ನು ಬಳಸಬೇಕು. ಬೆಳೆದು ನಿಂತ
ಬೆಳೆಯ ಮೇಲೆ ಹಗ್ಗ ಆಡಿಸಿ, ಕೊಳವೆಗಳನ್ನು ಕೆಳಗೆ
ಬೀಳುವಂತೆ ಮಾಡಿ, ಗದ್ದೆಯ ನೀರಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸೀಮೆ
ಎಣ್ಣೆ ಹಾಕುವುದರಿಂದ ಹುಳುಗಳನ್ನು ನಿರ್ವಹಣೆ ಮಾಡಬಹುದು.
ಉಪಕಾರಿ ಜೀವಿಗಳಾದ ಜೇಡ, ಡ್ರ್ಯಾಗನ್ ಫ್ಲೈ(ಹೆಲಿಕಾಫ್ಟರ್ ಹುಳು),
ಪಕ್ಷಿಗಳು ಪರಿಸರದಲ್ಲಿ ಇದ್ದಲ್ಲಿ ಈ ಹುಳುವಿನ ಬಾಧೆಯನ್ನು
ನಿರ್ವಹಣೆ ಮಾಡಬಹುದು. ಪರಿಸರ ಪೂರಕ ಈ ವಿಧಾನಗಳನ್ನು
ಅನುಸರಿಸಿದಲ್ಲಿ ಕೊಳವೆ ಹುಳುವಿನ ಬಾಧೆ ನಿಯಂತ್ರಿಸಬಹುದು.
ಹಾಗೂ ನಿರ್ವಹಣಾ ಕ್ರಮಗಳನ್ನು ಸಾಮೂಹಿಕವಾಗಿ ಕೈಗೊಂಡಲ್ಲಿ
ಮಾತ್ರ ಪರಿಣಾಮಕಾರಿಯಾಗಿರುತ್ತದೆ.
       ಈ ಮೇಲ್ಕಂಡ ವಿಧಾನಗಳನ್ನು ಅನುಸರಿಸುವುದರಿಂದ ಹುಳುವಿನ
ಬಾಧೆ ನಿಯಂತ್ರಣಕ್ಕೆ ಬಾರದಿದ್ದ ಪಕ್ಷದಲ್ಲಿ 2 ಮಿ.ಲೀ.
ಕ್ಲೋರೋಪೈರಿಫಾಸ್ 20 ಇಸಿ ಅಥವಾ 2 ಮಿ.ಲೀ. ಕ್ವಿನಾಲ್‍ಫಾಸ್ 25 ಇಸಿ
ಇವುಗಳಲ್ಲಿ ಯಾವುದಾದರೊಂದು ರಾಸಾಯನಿಕವನ್ನು 1 ಲೀ.
ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಎಕರೆಗೆ 225 ರಿಂದ 230 ಲೀ. ಸಿಂಪರಣಾ
ದ್ರಾವಣ ಬೇಕಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರಾದ ಶ್ರೀನಿವಾಸ್
ಚಿಂತಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *