ದಾವಣಗೆರೆ ಸೆ.07
   ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆ ಅತ್ಯಂತ
ಮಹತ್ವಪೂರ್ಣವಾಗಿದ್ದು, ಯೋಜನೆ ಅನುμÁ್ಠನದ ಬಗ್ಗೆ ಜಾಗೃತಿ
ಮೂಡಿಸಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.
   ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ
 ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ)
ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ
ಅವರು, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಭೂಮಿಯನ್ನು
ಗುರುತಿಸಿ ದಾಖಲಾತಿಗಳನ್ನು ಮಾಡುವ ಈ ಯೋಜನೆ ಕುರಿತು ಜನರಿಗೆ
ಮಾಹಿತಿ ನೀಡಬೇಕು ಎಂದರು.
   ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ಡ್ರೋನ್ ಆಧಾರಿತ ಸರ್ವೇ ನಡೆಸಿ, ನಿಖರವಾದ
ಸ್ಥಳ ಗುರುತಿಸಿ ಹಕ್ಕುಪತ್ರ ವಿತರಿಸುವುದು ಯೋಜನೆಯ
ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಪಿಡಿಓ ಅಧಿಕಾರಿಗಳು ತಕ್ಷಣವೇ 6
ತಿಂಗಳೊಳಗೆ ಸರ್ವೇ ಕಾರ್ಯವನ್ನು ಮುಗಿಸುವ ಮೂಲಕ
ಪ್ರಾಪರ್ಟಿ ಕಾರ್ಡ್ ವಿತರಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು
ಸೂಚಿಸಿದರು.
   ಇದಕ್ಕೆ ಪ್ರತಿಕ್ರಿಯಿಸಿದ ಸಿಇಓ ಪದ್ಮಾ ಬಸವಂತಪ್ಪ, ಯೋಜನೆಯ
ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಜನರಲ್ಲಿ ಯೋಜನೆ ಕುರಿತು ಅರಿವು
ಮೂಡಿಸಲಾಗುವುದು. ಈಗಾಗಲೇ ಪ್ರತಿ ತಾಲೂಕಿನ ಎಂಟು

ಗ್ರಾ.ಪಂಗಳಲ್ಲಿ ಗ್ರಾಮ ಸಭೆ ಶುರು ಮಾಡಲಾಗಿದೆ. ಈ ಕಾರ್ಯವು
ಸರ್ವೇ ಮುಖಾಂತರ ಡ್ರೋನ್‍ನಲ್ಲಿ ಅಳತೆ ಕಾರ್ಯ
ಮಾಡಲಾಗುವುದು. ಗ್ರಾಮದ ಗಡಿ ಮತ್ತು ಪ್ರತಿ ಆಸ್ತಿಯನ್ನು
ಮಾಲೀಕರ ಸಮ್ಮುಖದಲ್ಲಿಯೇ ಪರಿಶೀಲಿಸಿ ಬಿಳಿ ಬಣ್ಣದಲ್ಲಿ ಗುರುತು
ಮಾಡುತ್ತಾರೆ. ನಂತರ ಡ್ರೋನ್ ಆಧಾರಿತ ಸರ್ವೇ ನಡೆಸಿ
ಸ್ವತ್ತುಗಳ ಫೆÇೀಟೋಗಳನ್ನು ಸೆರೆ ಹಿಡಿಯಲಾಗುತ್ತದೆ.
ಬಳಿಕ ಆಸ್ತಿಗಳ ನಕಾಶೆ ತಯಾರಿಸಲಾಗುತ್ತದೆ. ಇದೆಲ್ಲವೂ
ಸರಿಯಾಗಿದ್ದರೆ ಸರ್ಕಾರದ ದಾಖಲಾತಿಗೆ ರವಾನಿಸಲಾಗುತ್ತದೆ. ದಾಖಲಾತಿ
ಮುಗಿದ ನಂತರ ಸಂಬಂಧಿಸಿದವರಿಗೆ ಪ್ರಾಪರ್ಟಿ ಕಾರ್ಡ್
ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
   ಸಂಸದರು ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಎನ್‍ಆರ್‍ಇಜಿ
ಯೋಜನೆಯಡಿಯಲ್ಲಿ ಜಾಬ್ ಕಾರ್ಡ್ ನೀಡುವ ಮೂಲಕ ಎಲ್ಲರಿಗೂ ಜಾಬ್
ಒದಗಿಸುವ ಕಾರ್ಯವಾಗಬೇಕು. ಆರ್ಥಿಕ ವರ್ಷಕ್ಕೆ ನಿಗದಿಯಾದ
ಮಾನವ ದಿನಗಳಿಗೆ  ಇನ್ನೂ ಹೆಚ್ಚಿನ ಮಾನವ ದಿನಗಳ ಸಾಧನೆ
ಮಾಡಬೇಕಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು,
ಅವಶ್ಯಕತೆ ಇರುವವರಿಗೆ ಎಲ್ಲರಿಗೂ ಎನ್‍ಆರ್‍ಇಜಿ ಯೋಜನೆಯಡಿಯಲ್ಲಿ
ಕೆಲಸ ನೀಡಲಾಗಿದ್ದು, ಪದವೀಧರರು ಹೆಸರು
ನೊಂದಾಯಿಸಿಕೊಂಡಿದ್ದಾರೆ. ಅವರಿಗೂ ಸಹ ಉದ್ಯೋಗ ನೀಡಲಾಗಿದೆ ಎಂದು
ತಿಳಿಸಿದರು.
   ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿನ ರಸ್ತೆ
ಕಾಮಗಾರಿಗಳು ಪೂರ್ಣಗೊಳಿಸಬೇಕು. ಈ ಕಾಮಗಾರಿಗಳು 5 ವರ್ಷ
ನಿರ್ವಹಣೆಯಾಗಬೇಕು. ಎಲ್ಲಿಯೂ ಕಳಪೆ ಆಗಬಾರದು. 6 ನೇ
ವರ್ಷ ಟಾರ್ ಹಾಕಿಸಿ ಪರಿಶೀಲನೆ ಮಾಡಿಸಬೇಕು. ಒಂದು ವೇಳೆ
ಕಳಪೆಯಾದರೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ
ಎಂದರು.
   ಕಂದಾಯ ಇಲಾಖೆ ಜಾರಿಗೊಳಿಸುತ್ತಿರುವ ಸಾಮಾಜಿಕ ಭದ್ರತೆ
ಯೋಜನೆಗಳಡಿ ವೃದ್ದಾಪ್ಯ ವೇತನ ಜೊತೆಗೆ ವಿಧವಾ ಹಾಗೂ
ಅಂಗವಿಕಲರ ವೇತನವು ಫಲಾನುಭವಿಗಳಿಗೆ ತಲುಪುತ್ತಿಲ್ಲ
ಎಂದು ಪ್ರಶ್ನಿಸಿದಾಗ ಸಾಮಾಜಿಕ ಭದ್ರತಾ ಯೋಜನೆಯ ಸಹಾಯಕ
ನಿರ್ದೇಶಕಿ ಎಸ್.ನೀಲಾ ಉತ್ತರಿಸಿ, ಜುಲೈ ತನಕ ಈಗಾಗಲೇ ಎಲ್ಲ
ಫಲಾನುಭವಿಗಳಿಗೆ ಮಾಶಾಸನ ತಲುಪಿಸಲಾಗಿದೆ. ಈ ಹಿಂದೆ ಕೆಲ
ತಾಂತ್ರಿಕ ತೊಂದರೆಯಿಂದಾಗಿ ಹಾಗೂ ಕೆ2 ಶಿಫ್ಟ್ ಆದ ಕಾರಣ
ನೀಡಲಾಗಿರಲಿಲ್ಲ ಎಂದರು.
   ನಿಮ್ಮಗಳ ತಪ್ಪಿನಿಂದಾಗಿ ಫಲಾನುಭವಿಗಳು ತೊಂದರೆ
ಅನುಭವಿಸಬೇಕಾಗಿದೆ. ಜನಪ್ರತಿನಿಧಿಗಳು ಹೋದ ಸಂದರ್ಭದಲ್ಲಿ
ಜನರು ಹಣ ಬಂದಿಲ್ಲ ಅಂತಾರೆ. ಮುಂದೆ ಈ ರೀತಿ ತೊಂದರೆ ಆದರೆ
ನೇರವಾಗಿ ನೀವೆ ಹೊಣೆಗಾರರಾಗುತ್ತಿರಾ ಎಂದು ಎಚ್ಚರಿಸಿದರು.
   ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ ಮಾತನಾಡಿ, ಇದು ಬಹಳ
ಗಂಭೀರ ವಿಷಯವಾಗಿದೆ. ಈ ಬಗ್ಗೆ ಜನರಿಗೆ ಉತ್ತರ ಕೊಡುವುದು
ಕಷ್ಟವಾಗಿದೆ ಎಂದರು. ಈ ವೇಳೆ ಜಿಲ್ಲಾಧಿಕಾರಿ ಮಾತನಾಡಿ, ಇದಕ್ಕಾಗಿ ವಿಶೇಷ
ಅಂದೋಲನ ಮಾಡಲಾಗಿದೆ. ಜನಸ್ಪಂದನ ಸಂದರ್ಭದಲ್ಲಿಯೂ ಸಹ
ಇಂತಹ  ಕೇಸ್ ಜಾಸ್ತಿ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಅವರ ಮಾಹಿತಿ
ಸಂಗ್ರಹಿಸಿ ಅವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು
ಜೊತೆಗೆ ಈ ತರಹದ ದೂರುಗಳು ಮುಂದೆ ಬಾರದ ಹಾಗೇ
ನೋಡಿಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
   ಪೋಸ್ಟ್‍ಮ್ಯಾನ್‍ಗಳು ಜನರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ.
ಜೊತೆಗೆ ಎಲೆಬೇತೂರಿನಲ್ಲಿ ಪೋಸ್ಟ್‍ಮ್ಯಾನ್ ಒಬ್ಬರ ವರ್ತನೆ ಸರಿಯಿಲ್ಲ
ಎಂದು ದೂರು ಬಂದಿದೆ. ಆಯುಷ್ಮಾನ್ ಕಾರ್ಡ್‍ಗಳನ್ನು ಚರಂಡಿಗೆ

ಹಾಕಿದ್ದಾರೆ ಎಂದು ಮಾಧ್ಯಮದಲ್ಲಿ ಪ್ರಸಾರವಾಗಿದೆ. ಈ ಬಗ್ಗೆ ಏನು
ಕ್ರಮ ಕೈಗೊಂಡಿದ್ದಿರಾ ಎಂದು ಅಂಚೆ ಇಲಾಖಾ ಅಧಿಕಾರಿಗಳನ್ನು
ಪ್ರಶ್ನಿಸಿದರು.
   ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಘಟನೆ ನಡೆದ ಬಳಿಕ
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಈಗಾಗಲೇ ಪಟ್ಟಿ ಮಾಡಿ
ಆಯುಷ್ಮಾನ್ ಕಾರ್ಡ್ ತಲುಪದವರಿಗೆ ತಲುಪಿಸಲಾಗಿದೆ. ಜೊತೆಗೆ
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕ್ಕೆ
ಮೇಲಿನ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗಿದೆ ಎಂದರು.
ಆಯುಷ್ಮಾನ್ ಕಾರ್ಡ್ ಸರಿಯಾಗಿ ತಲುಪಿಸಿ: ವೈದ್ಯಕೀಯ ಚಿಕಿತ್ಸೆಗಾಗಿ
ಆಯುಷ್ಮಾನ್ ಕಾರ್ಡ್ ಬಡವರಿಗೆ 5 ಲಕ್ಷದವರೆಗೆ ಉಚಿತವಾಗಿ ನೀಡುವ
ಸೌಲಭ್ಯವಾಗಿದೆ. ವರ್ಷವಾದರೂ ಕಾರ್ಡ್ ಸರಿಯಾಗಿ ವಿತರಿಸುತ್ತಿಲ್ಲ. ಈ ಬಗ್ಗೆ
ಸಾಕಷ್ಟು ದೂರುಗಳಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ
ಕ್ರಮವಹಿಸಬೇಕು. ಯಾವುದೇ ಲೋಪವಾಗಬಾರದು.
ಅಧಿಕಾರಿಗಳು ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು
ಸೂಚಿಸಿದರು.
ಮನೆ ನಿರ್ಮಿಸದಿದ್ದರೆ ರದ್ದತಿಗೆ ನೋಟಿಸ್: ಮನೆಗಳ ನಿರ್ಮಾಣ ವಿವಿಧ
ಯೋಜನೆಗಳಲ್ಲಿ ಯಾವುದೇ ಪ್ರÀಗತಿ ಇಲ್ಲ. ಬಹಳಷ್ಟು
ಕುಠಿಂತಗೊಂಡಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ
ಉತ್ತರಿಸಿದ ಅಧಿಕಾರಿಗಳು, ಹಂತ ಹಂತವಾಗಿ ಹಣ
ಬಿಡುಗಡೆಯಾಗುವುದರಿಂದ ಫಲಾನುಭವಿಗಳು ಮನೆ
ಕಟ್ಟಿಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ. ಇದರಿಂದಾಗಿ ಕುಂಠಿತಗೊಂಡಿದೆ
ಎಂದರು. ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಮನೆ
ಕಟ್ಟಿಕೊಳ್ಳಲು ಪ್ರಾರಂಭಿಸದಿದ್ದರೆ ರದ್ದು ಮಾಡುವ ಬಗ್ಗೆ
ನೋಟಿಸ್ ನೀಡಿ. ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ ಎಂದು ಕೂಡಲೇ
ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
   ಸ್ವಚ್ಛತೆ ನಿರ್ವಹಣೆಯಲ್ಲಿ ಮೈಸೂರು ಮೊದಲನೇ ಸ್ಥಾನದಲ್ಲಿದೆ.
ಆದರೆ ದಾವಣಗೆರೆ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಈ ಬಗ್ಗೆ ಅಧಿಕಾರಿಗಳು
ಕ್ರಮ ವಹಿಸಬೇಕು ಎಂದರು. ಇದಕ್ಕೆ ಮಹಾನಗರಪಾಲಿಕೆ
ಆಯುಕ್ತ ವಿಶ್ವನಾಥ್ ಮುದಜ್ಜಿ ಪ್ರತಿಕ್ರಿಯಿಸಿ, ಈ ಬಗ್ಗೆ ಈಗಾಗಲೇ
ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು. ಈ ವೇಳೆ
ಸಂಸದರು ಮಾತನಾಡಿ, ನಗರದಲ್ಲಿ ಮುಂದಿನ ದಿನಗಳಲ್ಲಿ
ಎಲ್ಲಾದರೂ ಕಸ ಕಂಡುಬಂದರೆ ನೀವೆ ನೇರ ಜವಾಬ್ದಾರರಾಗುತ್ತಿರಾ
ಎಂದು ಎಚ್ಚರಿಸಿದ ಅವರು, ಎಸ್‍ಡಬ್ಲ್ಯೂಎಂ ಯೋಜನೆಯಡಿಯಲ್ಲಿ ಕಸ
ವಿಲೇವಾರಿಯ ಹಣದ ಕುರಿತು ಸರಿಯಾದ ಮಾಹಿತಿ ನೀಡಬೇಕು.
ಕಾಂಪೋಸ್ಟ್ ಮಾರಾಟ ಮಾಡಿದ ಹಣ ಎಲ್ಲಿಗೆ ಜಮೆಯಾಗಿದೆ ಎಂದು
ತಿಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿ ಅವರು, ಜಲ ಜೀವನ್ ಮಿಷನ್
ಅಡಿಯಲ್ಲಿ ಎಲ್ಲಾ ಊರುಗಳಲ್ಲಿಯೂ ನೀರು ಒದಗಿಸಲಾಗುತ್ತಿದೆಯೇ
ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ಸಿಇಓ ಮಾತನಾಡಿ, ಪ್ರತಿ
ಗ್ರಾಮದಲ್ಲಿನ ಪ್ರತಿ ಮನೆಗೆ ಕೊಳವೆ ನಲ್ಲಿ ಒದಗಿಸುವುದಾಗಿದ್ದು,
ನೀರು ಇರುವ ಊರುಗಳಲ್ಲಿ ಮಾತ್ರ ಈ ಯೋಜನೆ ಅನುಷ್ಠಾನ
ಮಾಡಲಾಗುತ್ತಿದೆ ಎಂದರು.
ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಿ: ಜಿಲ್ಲೆಯಲ್ಲಿ ಶುದ್ಧ
ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿರುವ ಬಗ್ಗೆ
ಬಹಳಷ್ಟು ದೂರುಗಳಿವೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ
ಕ್ರಮವಹಿಸಬೇಕು ಎಂದರು. ಈ ಸಂದರ್ಭದಲ್ಲಿ ಗ್ರಾಮೀಣ ನೀರು
ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್ ಮಾತನಾಡಿ,
ತುಂಬಾ ಹಳೆಯ ಹಾಗೂ ಉಪಯೋಗಿಸದ ಘಟಕಗಳು ಕೆಟ್ಟು
ಹೋಗಿವೆ. ಈ ಬಗ್ಗೆ ಎಚ್ಚರ ವಹಿಸಲಾಗುವುದು ಎಂದು ಉತ್ತರಿಸಿದರು.

ಸರ್ವೇ ಅಧಿಕಾರಿಗಳು ಸರಿಯಾಗಿ ನಮೂದಿಸಿಲ್ಲ: ರೈತರಿಗೆ 19-20ನೇ
ಸಾಲಿನ ಇನ್ಶೂರೆನ್ಸ್ ಕ್ಲೈಮ್ ಆಗಿಲ್ಲ ಎಂದು ಅಧಿಕಾರಿಗಳನ್ನು
ಪ್ರಶ್ನಿಸಿದಾಗ, ಜಂಟಿ ಕೃಷಿ ನಿರ್ದೇಶಕರು ಮಾತನಾಡಿ, ರೈತರು ಬೆಳೆ
ನಮೂದು ವ್ಯತ್ಯಾಸವಾಗಿದೆ. ಈ ಹಿನ್ನೆಲೆಯಲ್ಲಿ ಬೆಳೆ ನಮೂದು
ಹೊಂದಿಕೆಯಾಗದೇ ತೊಂದರೆಯಾಗಿದೆ ಎಂದರು. ಈ ವೇಳೆ
ಸಂಸದರು, ಇದು ರೈತರ ತಪ್ಪಲ್ಲ. ಸರ್ವೇ ಅಧಿಕಾರಿಗಳು ಸರಿಯಾಗಿ
ನಮೂದಿಸಿಲ್ಲ ಎಂದರು. ಇದಕ್ಕೆ ಜಿಲ್ಲಾಧಿಕಾರರಿ ಪ್ರತಿಕ್ರಿಯಿಸಿ, ಈ ಸಲ ಹಾಗೇ
ಆಗಬಾರದು ಎನ್ನುವ ದೃಷ್ಟಿಯಿಂದಲೇ ರೈತರ ಬೆಳೆ ಸಮೀಕ್ಷೆ
ಮೊಬೈಲ್ ಆ್ಯಪ್ ನೀಡಲಾಗಿದೆ. ಈಗಾಗಲೇ ಎಲ್ಲ ರೈತರು ಬೆಳೆ ಸಮೀಕ್ಷೆ
ಫೋಟೊ ಆಪಲೋಡ್ ಮಾಡಿಕೊಂಡಿದ್ದು, ಜಿಲ್ಲೆ 3ನೇ ಸ್ಥಾನದಲ್ಲಿದೆ
ಎಂದು ತಿಳಿಸಿದರು.
   ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಕೊಠಡಿಗಳ ಬೇಡಿಕೆ ಕುರಿತು ಮಾಹಿತಿ ನೀಡಿಲ್ಲ
ಎಂದು ಡಿಡಿಪಿಐ ಅವರನ್ನು ಪ್ರಶಿಸಿದಾಗ, 10 ಕೊಠಡಿಗಳ ಅನುದಾನ ಬಂದಿದೆ.
ನಮಗೆ 600 ಕೊಠಡಿಗಳ ಬೇಡಿಕೆಯಿತ್ತು ಎಂದು ತಿಳಿಸಿದರು.
ಕೈ ಬರಹದ ಮೂಲಕ ಉತ್ತರ ನೀಡಿ: ಡಿಜಿಟಲ್ ಇಂಡಿಯಾದ ಅಡಿಯಲ್ಲಿ ಎಲ್ಲ
ಗ್ರಾಮ ಪಂಚಾಯಿತಿಗಳಿಗೆ ಆನ್‍ಲೈನ್, ನೆಟ್‍ವರ್ಕ್ ನೀಡುವುದಾಗಿದೆ.
ಆದರೆ ಸರ್ವರ್ ತೊಂದರೆಯಿಂದಾಗಿ  ಕೆಲಸ ಆಗುತಿಲ್ಲ ಎಂದು
ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ಬಿಎಸ್‍ಎನ್‍ಎಲ್ ಅಧಿಕಾರಿ ಮಾತನಾಡಿ,
ಎರಡು ಮೂರು ತಿಂಗಳಲ್ಲಿ ಸರಿಪಡಿಸುತ್ತೇವೆ ಎಂದು ಸಬೂಬು
ನೀಡಿದರು. ಇದಕ್ಕೆ ಸಂಸದರು ಪ್ರತಿಕ್ರಿಯಿಸಿ ಸರಿ ಮಾಡಲು ಅಗುತ್ತೋ
ಇಲ್ಲವೋ ಎಂಬುದರ ಕುರಿತು ಕೈ ಬರಹದ ಮೂಲಕ ಉತ್ತರ
ಬರೆದುಕೊಡುವಂತೆ ಸೂಚಿಸಿದರು.
    ಜಿಲ್ಲೆಯಲ್ಲಿನ ವಿವಿಧ ಯೋಜನೆಗಳಲ್ಲಿನ ಸಮಸ್ಯೆಗಳನ್ನು ಪಟ್ಟಿ
ಮಾಡಿಕೊಂಡು ಸರಿಯಾದ ವ್ಯವಸ್ಥೆಯೊಳಗೆ ಕೆಲಸ ನಿರ್ವಹಿಸುವ
ಶಕ್ತಿ ದಿಶಾ ಸಮಿತಿಯ ಸದಸ್ಯರಿಗಿದೆ. ಅದನ್ನು ನೀವುಗಳು ಮಾಡಿ
ತೋರಿಸಬೇಕು ಎಂದು ಸದಸ್ಯರಿಗೆ ಸೂಚಿಸಿದ ಅವರು, ಸಭೆಯಲ್ಲಿನ
ಕೆಲ ಪ್ರಗತಿ ವಿವರ ಸರಿಯಿಲ್ಲ. ನಾಮಕಾವಸ್ಥೆಗೆ ಸುಮ್ಮನೆ ವರದಿ
ಕೊಡಬೇಡಿ. ಈ ಬಗ್ಗೆ ಸಭೆಗೆ ಬರುವ ಮುನ್ನಾ ಅಧಿಕಾರಿಗಳು ಒಮ್ಮೆ
ಪರಿಶೀಲನೆ ನಡೆಸಬೇಕು ಎಂದರು.
   ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ದೀಪಾ ಜಗದೀಶ್, ದಿಶಾ
ಸಮಿತಿಯ ನಾಮನಿರ್ದೇಶಿತ ಸದಸ್ಯರುಗಳು, ತಾಲ್ಲೂಕು ಪಂಚಾಯಿತಿ
ಅಧ್ಯಕ್ಷರುಗಳು

Leave a Reply

Your email address will not be published. Required fields are marked *