ದಾವಣಗೆರೆ ಸೆ.10
ಜಿಲ್ಲೆಯಲ್ಲಿರುವ ಗಾಜಿನ ಮನೆ ಪ್ರೇಕ್ಷಣಿಯ ಸ್ಥಳಗಳಲ್ಲಿ
ಒಂದಾಗಿದ್ದು, ಪೂನಾ-ಬೆಂಗಳೂರು ರಸ್ತೆಗೆ ಹತ್ತಿರವಿರುವುದರಿಂದ
ಹೆಚ್ಚಿನ ಪ್ರಚಾರ ನೀಡಬೇಕು. ಜಿಲ್ಲೆಯ ಮುಖ್ಯ ದ್ವಾರದ ಬಳಿ
ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಫಲಕಗಳನ್ನು ಹಾಕಬೇಕು. ಈ
ಬಗ್ಗೆ ಪ್ರವಾಸೋದ್ಯಮ ಹಾಗೂ ಸಾರಿಗೆ ಸಚಿವರೊಂದಿಗೆ ಚರ್ಚಿಸುತ್ತೇನೆ
ಎಂದು ತೋಟಗಾರಿಕೆ ಸಚಿವರಾದ ಡಾ. ನಾರಾಯಣ ಗೌಡ ಹೇಳಿದರು.
ಜಿಲ್ಲಾಡಳಿತ ಭವನದ ತುಂಗಾಭದ್ರ ಸಭಾಂಗಣದಲ್ಲಿ ಇಂದು
ಏರ್ಪಡಿಸಲಾದ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ
ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ವತೆ ವಹಿಸಿ ಮಾತನಾಡಿದ ಅವರು ್ಲ
ರೈತರು ಬೆಳೆದಂತಹ ಹಣ್ಣು, ತರಕಾರಿ ಹಾಗೂ ಹೂವು ಮಾರಾಟ
ಮಾಡಲು ಮಳಿಗೆಗಳನ್ನು ನಿರ್ಮಿಸಿ ರೈತ ಸಂತೆಗಳನ್ನು
ಮಾಡಬೇಕೆಂದು ತಿಳಿಸಿದರು.
ರೈತರು ಬೆಳೆದಂತಹ ಬೆಳÉಗಳು ಹಾಳಗಾದಂತೆ
ನೋಡಿಕೊಳ್ಳಲು ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಕೋಲ್ಡ್ ಸ್ಟೋರೆಜ್
ಘಟಕ ಅವಶ್ಯಕತೆಯಿರುವುದರಿಂದ ಕೋಲ್ಡ್ ಸ್ಟೋರೆಜ್
ಘಟಕಗಳನ್ನು ಸ್ಥಾಪಿಸಲು ಸೂಕ್ತವಾದ ಪ್ರದೇಶವನ್ನು
ಗುರುತಿಸಲು ಹಾಗೂ ಎಲ್ಲಾ ರೈತರಿಗೂ ಬೆಳೆ ವಿಮೆ ಮಾಡಿಸಿಕೊಡಲು
ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 650 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ
ಬೆಳೆಯಲಾಗುತ್ತಿದ್ದು, ಜಗಳೂರು ಭಾಗದಲ್ಲಿ ಹೆಚ್ಚಿನದಾಗಿ ್ಲ
ಬೆಳೆಯಲಾಗಿದೆÉ. ರಾಜ್ಯದಲ್ಲಿ ಮಳೆ ಹೆಚ್ಚಾಗಿ ಈರುಳ್ಳಿ ಕೊಳೆತು
ಹೊಗುತ್ತಿರುವುದರಿಂದ ಜಿಲ್ಲೆಯಲ್ಲಿ ಈರುಳ್ಳಿ ಹೆಚ್ಚಾಗಿ ಬೆಳೆದಿದ್ದು,
ಈರುಳ್ಳಿ ಬೆಳೆದಂತಹ ರೈತರಿಗೆ ನಷ್ಟವಾಗದಂತೆ ನೋಡಿಕೊಳ್ಳಲು
ಜಿಲ್ಲಾಧಿಕಾರಿಯವರು ಗಮನ ಹರಿಸಬೇಕೆಂದು ಸೂಚಿಸಿದರು
ಸರ್ಕಾರದಿಂದ ಅಗ್ರಿ ಟೂರಿಸಂ ಎಂಬ ಹೂಸ ಯೋಜನೆಯನ್ನು
ತರಲು ಯೋಜನೆ ರೂಪಿಸಿದ್ದು, ಜಿಲ್ಲಾವಾರು ಯಾವ ಬೆಳೆಯನ್ನು

ಬೆಳೆಯಲಾಗುತ್ತಿದೆ ಎಂಬುದರ ಬಗ್ಗೆ ಹಾಗೂ ಆಹಾರ ಶೈಲಿಯ ಬಗ್ಗೆ
ಹೊರದೇಶ ಹಾಗೂ ಪಕ್ಕದ ಜಿಲ್ಲೆಯವರೆಗೆ ತಿಳಿಸಲು ಈ ಯೋಜನೆ
ಉಪಯುಕ್ತ ವಾಗಿದ್ದು, ನಿಮ್ಮ ಜಿಲ್ಲೆಯಲ್ಲಿಯೂ ಸಹ ಅಗ್ರಿ ಟೂರಿಸಂಗೆ
ಸೂಕ್ತವಾದ ಜಾಗವನ್ನು ಗುರುತಿಸಿ ಮಾಹಿತಿ ನೀಡಲು ಸೂಚಿಸಿದರು.
ತೋಟಗಾರಿಕೆ ಇಲಾಖೆಯ ಉಪನೀರ್ದೆಶಕರಾದ ಲಕ್ಷ್ಮಿಕಾಂತ್
ಬೊಮ್ಮನ್ನರ್ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 90614 ಹೆಕ್ಟೇರ್
ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದ್ದು,
ಪ್ರಮುಖ ಬೆಳೆಯಾಗಿ ಅಡಿಕೆಯನ್ನು 65279 ಹೆಕ್ಟೇರ್
ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಮಾಹಿತಿ ನೀಡಿದರು.
ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ 77.56 ಹೆಕ್ಟರ್ ಪ್ರದೇಶದ ಬೆಳೆ
ಹಾನಿಯಾಗಿದ್ದು, 130 ಸಂತ್ರಸ್ತ ರೈತರ ಖಾತೆಗೆÉ ರೂ. 11 ಲಕ್ಷ
ಪರಿಹಾರ ಮೊತ್ತ ಈಗಾಗಲೆ ಜಮಾವಣೆಯಾಗಿದೆ ಉದ್ಯೋಗ ಖಾತ್ರಿ
ಯೋಜನೆಯಲ್ಲಿ ರೈತರಿಗೆ ಬಾಳೆ, ನುಗ್ಗೆ ,ಪಪ್ಪಾಯ, ಕರಿಬೇವು ,
ನಿಂಬು ಎಲ್ಲಾ ರೀತಿಯ ಸಸಿಗಳನ್ನು ನೀಡಲಾಗುತ್ತಿದೆ. ಜೈವಿಕ
ಕೇಂದ್ರದಲ್ಲಿ ರೈತರುಗಳ ಜಮೀನಿನ ಮಣ್ಣಿನ ಪರೀಕ್ಷೆ ಹಾಗೂ
ನೀರಿನ ಪರೀಕ್ಷೆ ಹಾಗೂ ಬಾಳೆ, ದಾಳಿಂಬೆ ಹಣ್ಣಿನ ಅಂಗಾಶ ಕೃಷಿ ಸಸಿಗಳ
ಉತ್ಪಾದನೆಯನ್ನು ಸಹ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಚಿವರು ಮಾತನಾಡಿ ಜಿಲ್ಲೆಯಲ್ಲಿ ತೆಂಗಿನ ಸಸಿಗಳನ್ನು ರೈತರಿಗೆ
ಎಷ್ಟು ವಿತರಣೆ ಮಾಡಿದ್ದೀರಿ ಎಂದು ಮಾಹಿತಿ ಕೇಳಿದರು. ಹಾಗೂ ಕೆಲ
ಜಿಲ್ಲೆಗಳಲ್ಲಿ ಹಳೆಯ ಕೃಷಿ ಹೊಂಡಗಳ ಮಣ್ಣನ್ನು ತೆಗೆದು ಬಿಲ್
ಪಾಸ್ ಮಾಡುತ್ತಿರುವ ಪ್ರಕರಣಗಳು ಕಂಡು ಬಂದಿದ್ದು, ರೈತರಿಗೆ
ಅವರ ಜಮೀನುಗಳಲ್ಲಿ ನೂತನ ಕೃಷಿ ಹೊಂಡಗಳನ್ನು ನಿರ್ಮಾಣ
ಮಾಡಿಕೊಡಬೇಕು. ಹಳೆಯ ಹೊಂಡಗಳ ಬಿಲ್‍ಗಳನ್ನು ಪಾಸ್
ಮಾಡುತ್ತಿರುವುದು ಗಮನಕ್ಕೆ ಬಂದರೆ ಕಠಿಣ ಕ್ರಮ
ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು
ಇದಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಿಕಾಂತ್ ಬೊಮ್ಮನ್ನರ್ 10 ಸಾವಿರ ಹೈ
ಬ್ರೀಡ್ ತಳಿಯ ತೆಂಗಿನ ಸಸಿಗಳನ್ನು ಹಾಗೂ 15 ಸಾವಿರ ಲೋಕಲ್
ತಳಿಯ ಸಸಿಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ ಎಂದರು.
ಹಾಗು ಕಾಳು ಮೆಣಸು , ಅಡಿಕೆ ಸಸಿಗಳನ್ನು ರೈತರಿಗೆ ವಿತರಣೆ
ಮಾಡಲಾಗಿದೆ ಹಾಗೂ ಹೂ ಬೆಳೆಗಾರರಿಗೂ ಪರಿಹಾರ ಧನ ನೀಡಲಾಗಿದೆ
ಎಂದರು.
. ಜಿ.ಪಂ ಉಪಕಾರ್ಯದರ್ಶಿ ಆನಂದ್ ಮಾತನಾಡಿ ಜಿಲ್ಲೆಯಲ್ಲಿ ಡ್ರ್ಯಾಗನ್
ಪ್ರೂಟ್ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿದ್ದು ಉತಮ್ತ
ಫಲಿತಾಂಶ ದೊರಕಿದ್ದು, ನರೇಗಾ ಯೋಜನೆಯಡಿ ಈಗಾಗಲೇ
ರೈತರಿಗೆ ವಿತರಿಸಲಾಗಿದ್ದು ಜಗಳೂರು ಭಾಗದಲ್ಲಿ ರೈತರು
ಹೆಚ್ಚಿನದಾಗಿ ಬೆಳೆಯಲು ಆಸಕ್ತಿ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.
ರೇಷ್ಮೆ ಇಲಾಖೆ: ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ಪ್ರಥಮ
ಸ್ಥಾನದಲ್ಲಿದ್ದು, ಈ ಬಾರಿ ಬಾಂಬೆಯಲ್ಲಿ 4 ರೇಷ್ಮೆ ಸೀರೆಯ ಅಂಗಡಿಯನ್ನು
ಹಾಗೂ ಅಮೆರಿಕಾದಲ್ಲಿ ನಡೆಯುವ ‘ಅಕ್ಕ’ ಸಮ್ಮೇಳನದಲ್ಲಿ
ಕರ್ನಾಟಕದಲ್ಲಿ ಉತ್ಪಾದಿಸುವ ರೇಷ್ಮೆಯ ಮಾರ್ಕೆಟಿಂಗ್
ಮಾಡಲಾಗವುದು. ವಿಶ್ವ ವ್ತಾಪ್ತಿಯಲ್ಲಿ ರೇಷ್ಮೆಯ ಖ್ಯಾತಿಯನ್ನು
ಹೆಚ್ಚಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಮುಚ್ಚಲಾಗಿದ್ದ ಮೈಸೂರು ಸಿಲ್ಕ್ ಸೀರೆಯ
ಅಂಗಡಿಯನ್ನು ತೆರೆಯಲು ಸೂಚಿಸುತ್ತೇನೆ ಹಾಗೂ ರಾಜ್ಯಾದಂತ್ಯ
ರೇಷ್ಮೆ ಸೀರೆ ಅಂಗಡಿಗಳನ್ನು ತೆರೆಯುವುದರಿಂದ
ಮಹಿಳೆಯರಿಗು ಉದ್ಯೋಗ ಕೊರತೆ ಕಡಿಮೆಯಾಗುತ್ತದೆ ಹಾಗೂ
ಅವರಿಗೆ ಸಂಬಳದ ಜೊತೆ ಪ್ರೋತ್ಸಾಹಕ ಭತ್ಯೆಯನ್ನು
ನೀಡಲಾಗುವುದು ಎಂದರು..
ರೇಷ್ಮೆ ಇಲಾಖೆಯ ಉಪನೀರ್ದೇಶಕರಾದ ಶ್ರೀ ಹರ್ಷ ಮಾತನಾಡಿ
ಜಿಲ್ಲೆಯಲ್ಲಿ ಒಟ್ಟು 306 ಹೆಕ್ಟೇರ್ ಪ್ರದೇಶದಲ್ಲಿ ಸಾಕಾಣಿಕೆಯಿದ್ದು,
ಜಗಳೂರು ಭಾಗದಲ್ಲಿ ಅತಿ ಹೆಚ್ಚಿನದಾಗಿ ರೇóಷ್ಮೆ ಸಾಕಾಣಿಕೆ
ಮಾಡಲಾಗುತ್ತಿದೆ. ಈ ಬಾರಿ ಜಗಳೂರು ತಾಲ್ಲೂಕಿನಲ್ಲಿ ಶೇ.30% ಹೆಚ್ಚು
ಮಳೆಯಾಗಿರುವುದರಿಂದ ನರೇಗಾ ಯೋಜನೆಯಡಿಯಲ್ಲಿ
ಮಾಡಲಾಗುವುದು. ಈ ಬಾರಿ ಒಟ್ಟು 9 ರೇಷ್ಮೆ ಸಾಕಾಣಿಕೆಗೆ ಮನೆ
ಬಿಡುಗಡೆಯಾಗಿವೆ ಎಂದರು.
ಜಿ.ಪಂ ಉಪಕಾರ್ಯದರ್ಶಿ ಆನಂದ್ ಮಾತನಾಡಿ ಚನ್ನಗಿರಿ ತಾಲ್ಲೂಕಿನಲ್ಲಿ
ರೇಷ್ಮೆ ಸಾಕಾಣಿಕೆಗೆ ಸಂಬಂಧಿಸಿರುವ 33 ಎಕರೆ ಪ್ರದೇಶ
ಒತ್ತುವರಿಯಾಗುತ್ತಿದ್ದು ಟ್ರನ್ಚ್ ಹಾಗೂ ತಂತಿ ಬೇಲಿ ಹಾಕುವುದಕ್ಕೆ
ಅನುದಾನ ಬೇಕೆಂದು ಸಚಿವರಿಗೆ ಮನವಿ ಮಾಡಿದರು.
ಸಚಿವರು ಮಾತನಾಡಿ ಕಂದಾಯ ಇಲಾಖೆಯವರು ಈ ಬಗ್ಗೆ
ಗಮನ ಹರಿಸಬೇಕೆಂದು ಸೂಚಿಸಿದರು. ಹಾಗೂ ರೇಷ್ಮೆ ಸಾಕಾಣಿಕೆಗೆ
ಹಾಗೂ ಉತ್ಪಾದನೆಗೆ ಯಾವುದೇ ಕೊರತೆಯಾಗದಂತೆ ಅನುದಾನ
ಬಿಡುಗಡೆ ಮಾಡಿದ ಮುಖ್ಯ ಮಂತ್ರಿ ಯಡಿಯೂರಪ್ಪ ನವರಿಗೆ
ಧನ್ಯವಾದ ಹೇಳಿದರು.
ನಗರಾಭಿವೃದ್ಧಿಕೋಶದ ಯೋಜನ ನಿರ್ದೇಶಕಿ ನಜ್ಮಾ
ಮಾತನಾಡಿ, 2020-20 ನೇ ಸಾಲಿನಲ್ಲಿ ಎಸ್.ಎಫ್.ಸಿ ಯೋಜನೆಯಡಿ ಕುಡಿಯುವ
ನೀರಿನ ಯೋಜನೆಗೆ 76 ಲಕ್ಷ ಹಣ ಬಿಡುಗಡೆಯಾಗಿದ್ದು, 
ಬಿಡುಗಡೆಯಾದ ಹಣ ಸಂಪೂರ್ಣ ವೆಚ್ಚಮಾಡಲಾಗಿದೆ. ಹಾಗೂ
ಹೊನ್ನಾಳಿ ನದಿಯಿಂದ ಹಾಗೂ ಚನ್ನಗಿರಿಯ ಶಾಂತಿ ಸಾಗರದಿಂದ
ಜಗಳೂರು ತಾಲ್ಲೂಕಿಗೆ ಕುಡಿಯುವ ನೀರಿನ ಸರಬರಾಜಿನ
ವ್ಯವಸ್ಥೆಯನ್ನು ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಅಂಗಡಿ
ವiಳಿಗೆಗಳ ಟ್ಯಾಕ್ಸ್ ಶೇ20 ರಷ್ಟು ಮಾತ್ರ ಇದೆ.  ಅದರೆ ವiಳಿಗೆಗಳ
ಟ್ಯಾಕ್ಸ್ ಹಣ ಸಂಗ್ರಹಿಸಲು ಸಿಬ್ಬಂದಿಗಳ ಕೊರತೆಯಿಂದ
ಸಾಧ್ಯವಾಗುತ್ತಿಲ್ಲ ಎಂದರು
ನಗರದಲ್ಲಿ 113 ವಾರ್ಡ್‍ಗಳ ಪ್ರತಿ ಮನೆಯಿಂದ ಕಸವನ್ನು
ಸಂಗ್ರಹಿಸಲಾಗುತ್ತಿದೆ ಹಾಗೂ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು
ಶ್ರಮಿಸಲಾಗುತ್ತಿದೆ 64 ವಾರ್ಡ್‍ಗಳಲ್ಲಿ ಸ್ಥಳೀವಾಗಿ ಮತ್ತು
ಪುರಸಭೆಗಳಲ್ಲಿ 451 mನ್ ತ್ಯಾಜ್ಯವನ್ನು ಸಂಗ್ರಹಿಸಿ ಸಂಸ್ಕರಣ ಘಟಕ್ಕೆ
ಕಳುಹಿಸಲಾಗುತ್ತದೆ. ಹಸಿ ಕಸ ಮತ್ತು  ಪ್ಲಾಸ್ಟಿಕ್ ಕಸವನ್ನು ಬೇರೆ
ಮಾಡಿ ಬಾಗಲಕೋಟೆಯ ಸಿಮೆಂಟ್ ಕಾರ್ಖಾನೆಗೆ ಕಳುಸಲು ಪತ್ರ
ಬರೆಯಲಾಗಿತ್ತು É ಅದರೆ ಅವರಿಂದ ಯಾವುದೇ ಪ್ರತಿಕ್ರಿಯೆ
ಬಂದಿರುವುದಿಲ್ಲಾ ಎಂದು ಮಾಹಿತಿ ನೀಡಿದರು
ಪೌರಾಡಳಿತ ಇಲಾಖೆಯ ಕಾರ್ಯ ಚಟುವಟಿಕೆ ಮಾಹಿತಿ ಪಡೆದ
ಸಚಿವರು ಹಸಿ ಕಸ, ಒಣ ಕಸ ವಿಲೇವಾರಿ ಸರಿಯಾಗಿ ನಿರ್ವಹಿಸಿ. ಹಸಿ ಕಸವನ್ನು

ಕಾಂಪ್ಪೋೀಸ್ಟ್ ಆಗಿ ಪರಿವರ್ತಿಸಿ ರೈತರಿಗೆ ನೀಡಿ ಇದರಿಂದ ಸಂಪನ್ಮೂಲ
ಸಂಗ್ರಹ ಹಾಗೂ ಕಸ ವಿಲೇವಾರಿ ಆಗುತ್ತದೆ. ಒಣಕಸವನ್ನು ಸರಿಯಾದ
ಪ್ಯಾಕ್ಟರಿಗಳವರೊಂದಿಗೆ ಮಾತುಕತೆ ನಡೆಸಿ ಅವರಿಗೆ ಕೊಡಿ
ಇಲ್ಲದಿದ್ದರೆ ವೈಜ್ಞಾನಿಕವಾಗಿ ಆಧುನಿಕ ರೀತಿಯಲ್ಲಿ ಕಸವನ್ನು
ಸುಡುವ ತಂತ್ರಜ್ಞಾನವನ್ನು ಬಳಸಿಕೊಳ್ಳಿ ಹಾಗೂ ಇಂದಿರಾ
ಕ್ಯಾಂಟೀನ್‍ಗಳಲ್ಲಿ ಸಾಕಷ್ಟು ಅವ್ಯವಸ್ಥೆಗಳು ಹಾಗೂ ಹೆಚ್ಚು ಬಿಲ್
ಪಾವತಿಸಿರುವ ಬಗ್ಗೆ ದೂರುಗಳಿದ್ದು ಇತ್ತ ಗಮನಹರಿಸಿ. ನಗರ
ವ್ಯಾಪ್ತಿಯಲ್ಲಿ ಕರ ವಸೂಲಿ ಕಡಿಮೆ ಇದ್ದು, ಕಳೆದ ಹತ್ತು
ವರ್ಷಗಳಿಂದ ನಿರೀಕ್ಷಿತ ಪ್ರಮಾಣÀದ ಕರ ವಸೂಲಿಯಾಗಿಲ್ಲ. ಕರ
ವಸೂಲಿಗಾರರು ಮನೆಗಳ ಬಳಿ ಹೋಗಿ ಬರೀ ಪಾಕಿಟ್ ಮನಿ
ತೆಗೆದುಕೊಂಡು ಬರಬೇಡಿ ಸರಿಯಾದ ರೀತಿಯಲ್ಲಿ ಟ್ಯಾಕ್ಸ್ ಸಂಗ್ರಹಿಸಿ
ಇದರಿಂದ ನಾಗರಿಕರಿಗೆ ಮೂಲಭೂತ ಸೌಲಭ್ಯ ನೀಢಲು ಸಾಧ್ಯವಾಗಲಿದೆ
ಎಂದರು.
ಸಭೆಯಲ್ಲಿ ಹರಿಹರ ಶಾಸಕರಾದ ರಾಮಪ್ಪ, ಪೌರಾಡಳಿತ
ನಿರ್ದೇಶನಾಲಯದ ಸ್ಥಾನಿಕ ಅಧಿಕಾರಿ ವೀರೇಶ್ ಕುಮಾರ್, ಅಪರ
ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹಾಗೂ ಇತರೆ ಅಧಿಕಾರಿಗಳು
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *