ದಾವಣಗೆರೆ ಸೆ.11
    ಜೇನು ಸಾಕಾಣಿಕೆ ತರಬೇತಿ ಕುರಿತು ಪ್ರಚಾರ ಕೈಗೊಳ್ಳುವ
ಮೂಲಕ ಜಿಲ್ಲೆಯ ರೈತರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾ
ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್ ಹೇಳಿದರು.
    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ
ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ
ಅವರು, ಎμÉ್ಟೂೀ ರೈತರಿಗೆ ಜೇನು ಸಾಕಾಣಿಕೆ ಕುರಿತು ಮಾಹಿತಿಯಿಲ್ಲ.
ಜಿಲ್ಲೆಯಲ್ಲಿ   ಸಾಕಷ್ಟು ಆಸಕ್ತ ರೈತರು ಇದ್ದಾರೆ. ಅವರಿಗೆ ಈ ಬಗ್ಗೆ
ಮಾಹಿತಿ ನೀಡಬೇಕು ಎಂದರು.
    ಇತ್ತಿಚಿನ ದಿನಗಳಲ್ಲಿ ಜೇನು ಕೃಷಿಗೆ ಪೂರಕವಾದ
ವಾತಾವರಣವಿದ್ದು, ಕಡಿಮೆ ಖರ್ಚಿನಲ್ಲಿ ವೈಜ್ಞಾನಿಕವಾಗಿ ಜೇನು ಸಾಕಾಣಿಕೆ
ಮಾಡುವುದರಿಂದ ಅಧಿಕ ಲಾಭವಿದೆ. ಈ ಹಿನ್ನೆಲೆಯಲ್ಲಿ ರೈತರು
ತರಬೇತಿಯಲ್ಲಿ ಭಾಗವಹಿಸುವಂತೆ ತೋಟಗಾರಿಕೆ
ಇಲಾಖೆಯು ಪ್ರಚಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
    ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನಾರ್
ಮಾತನಾಡಿ, ಆಸಕ್ತ ರೈತರಿಗೆ ಜೇನು ಸಾಕಾಣಿಕೆ ಕುರಿತು ಇಲಾಖಾ

ವತಿಯಿಂದ ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ
ಹೆಚ್ಚಿನ ಮಾಹಿತಿ ನೀಡಲಾಗುವುದು. ಜೊತೆಗೆ ಇಲಾಖೆಯಿಂದ ಹೋಬಳಿ
ಹಾಗೂ ಗ್ರಾಮಮಟ್ಟಗಳಲ್ಲಿ ಕರÀಪತ್ರ ಹಂಚುವ ಮೂಲಕ
ಪ್ರಚಾರ ಮಾಡಲಾಗುವುದು. ಜೊತೆಗೆ ಪ್ರಚಾರ ಮತ್ತು ಸಾಹಿತ್ಯ
ಕಾರ್ಯಕ್ರಮದಡಿಯಲ್ಲಿ ರೂ. 5.33 ಲಕ್ಷ ಅನುದಾನ
ಬಿಡುಗಡೆಯಾಗಿದೆ. ಈ ಅನುದಾನ ಫಲಪುಷ್ಪ ಪ್ರದರ್ಶನಕ್ಕೆ ಬಳಕೆ
ಮಾಡಲಾಗುತಿತ್ತು. ಆದರೆ ಈ ಬಾರಿ ಫಲಪುಷ್ಟ ಪ್ರದರ್ಶನ ಇಲ್ಲದ
ಕಾರಣ ಅನುದಾನವನ್ನು ಇಲಾಖೆಯ ಹಲವು ಯೋಜನೆ ಹಾಗೂ
ರೈತರಿಗೆ ಕಾರ್ಯಕ್ರಮದ ಅರಿವು ಮೂಡಿಸಲು ಅನುದಾನ ಬಳಕೆ
ಮಾಡಿಕೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ 3ನೇ ಸ್ಥಾನ: ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಎಲ್ಲಿ ಆಗಿಲ್ಲವೋ ಅಲ್ಲಲ್ಲಿ
ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಜಿ.ಪಂ ಅಧ್ಯಕ್ಷೆ ಸೂಚಿಸಿದರು. ಈ
ವೇಳೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು, ಬೆಳೆ
ಸಮೀಕ್ಷೆ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಸಲಾಗುತ್ತಿದ್ದು, ರಾಜ್ಯದಲ್ಲಿ
3ನೇ ಸ್ಥಾನದಲ್ಲಿದ್ದೇವೆ ಎಂದರು.
   ಜಿಲ್ಲೆಯಲ್ಲಿ ಸೆಪ್ಟಂಬರ್‍ವರೆಗೆ ಸರಾಸರಿ 400 ಮಿ.ಮೀ ಮಳೆ ಇದೆ.
ವಾಸ್ತವಿಕವಾಗಿ 497 ಮಿ.ಮೀ ಆಗಿದ್ದು, ಶೇ. 24 ರಷ್ಟು ಹೆಚ್ಚು
ಮಳೆಯಾಗಿರುತ್ತದೆ. ಮುಂಗಾರು ಹಂಗಾಮಿನಲ್ಲಿ ಒಟ್ಟು 2,44,294
ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಮ್ಮಿಕೊಂಡಿದ್ದು,
ಇದುವರೆಗೂ 2,22,068 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಜೊತೆಗೆ 1500 ಎಕರೆ ಭತ್ತದ ನಾಟಿ ಬಿತ್ತನೆಯಾಗಿದೆ. ಈ ನಾಟಿ ಬಿತ್ತನೆ
ಪ್ರದೇಶಗಳಲ್ಲಿ ಕ್ಷೇತ್ರೋತ್ಸವ ಪ್ರಚಾರ ಮಾಡಲಾಗುವುದು.
ಅಲ್ಲದೆ ಮುಂಗಾರು ಸಾಲಿನಲ್ಲಿ ವಿವಿಧ ಬೆಳೆಗಳ ಹಾಗೂ ವಿವಿಧ ತಳಿಗಳ
40,381 ಕ್ಷಿಂಟಾಲ್ ಬಿತ್ತನೆ ಬೀಜಗಳ ಬೇಡಿಕೆ ಇದ್ದು, ಪ್ರಾರಂಭಿಕ 41,647
ಕ್ವಿಂಟಾಲ್ ದಾಸ್ತಾನು ಇದ್ದು, 40,150 ಕ್ವಿಂಟಾಲ್ ಬಿತ್ತನೆ ಬೀಜ
ವಿತರಣೆಯಾಗಿರುತ್ತದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ
ನೀಡಿದರು.
ಯೂರಿಯಾ ಗೊಬ್ಬರ ಸಮಸ್ಯೆ: ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ
ಸಾಕಮ್ಮ ಮಾತನಾಡಿ, ಜಿಲ್ಲೆಯ ರೈತರಿಗೆ ಯೂರಿಯಾ ಗೊಬ್ಬರ
ಸಮಸ್ಯೆ ಉಂಟಾಗಿದೆ. ಕೊರೊನಾ ಸಂದರ್ಭ ಇದಾಗಿದ್ದು, ರೈತರಿಗೆ
ಗೊಬ್ಬರ ಪೂರೈಕೆ ಮಾಡುವ ಮೂಲಕ ಯಾವುದೇ ತೊಂದರೆ
ಆಗದಂತೆ ನೋಡಿಕೊಳ್ಳಬೇಕು ತಿಳಿಸಿದರು.
   ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ
ಅಧ್ಯಕ್ಷ ವೀರಶೇಖರಪ್ಪ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ
ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಕೊವೀಡ್ ಸಂದರ್ಭ
ಇದಾಗಿದ್ದು, ಯಾರೊಬ್ಬರಿಗೂ ತೊಂದರೆ ಆಗದಂತೆ
ನೋಡಿಕೊಳ್ಳಬೇಕು ಎಂದರು.
   ಆಸ್ಪತ್ರೆಗಳಲ್ಲಿ ಜನರಿಗೆ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯ
ದೊರೆಯತ್ತಿಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳು
ನಿಷ್ಠೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರಿಗೆ
ಸ್ಪಂದಿಸಬೇಕು. ಜನರಿಗೆ ಸಹಕರಿಸುವ ಮೂಲಕ ಅವರ ಕಷ್ಟಕ್ಕೆ
ಮುಂದಾಗಬೇಕು ಎಂದು ತಿಳಿಸಿದರು.
    ಸಿಜಿ ಆಸ್ಪತ್ರೆಯ ವೈದ್ಯಾಧಿಕಾರಿ ಮಾತನಾಡಿ, ಈ ಬಗ್ಗೆ ಕೂಡಲೇ ಕ್ರಮ
ವಹಿಸಲಾಗುವುದು. ಯಾರಿಗೂ ತೊಂದರೆ ಉಂಟಾಗದಂತೆ ಚಿಕಿತ್ಸೆ
ನೀಡುವಂತೆ ನೋಡಿಕೊಳ್ಳಲಾಗುವುದು ಎಂದ
ಅವರು, ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 10 ವೆಂಟಿಲೇಟರ್‍ಗಳು
ಕಾರ್ಯನಿರ್ವಹಿಸುತ್ತಿವೆ ಎಂದರು.

    ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ ಅಧ್ಯಕ್ಷೆ, ಜನರಿಗೆ ಸರ್ಕಾರಿ ಆಸ್ಪತ್ರೆಯ
ಮೇಲೆ ನಂಬಿಕೆ ಹೋಗಿದೆ. ಆಸ್ಪತ್ರೆಗಳಿಗೆ ಬರಲು ಜನರು
ಭಯಪಡುತ್ತಿದ್ದಾರೆ. ಜೊತೆಗೆ ಚಿಕಿತ್ಸೆ ದೊರೆಯುತ್ತಿಲ್ಲ ಎಂಬುದರ
ಕುರಿತು ದೂರು ಕೇಳಿ ಬಂದಿವೆ ಎಂದರು.
    ಡಿಎಚ್‍ಓ ಡಾ.ರಾಘವೇಂದ್ರಸ್ವಾಮಿ ಮಾತನಾಡಿ, ಸಿಬ್ಬಂದಿ ಕೊರತೆಯಿಂದಾಗಿ ಈ
ರೀತಿಯ ತೊಂದರೆ ಆಗಿದೆ. ಸದ್ಯದಲ್ಲಿಯೇ ಸರಿಪಡಿಸಿ ಚಿಕಿತ್ಸೆ
ನೀಡಲಾಗುವುದು ಎಂದರು. ಈ ವೇಳೆ ಉತ್ತರಿಸಿದ ಜಿ.ಪಂ ಅಧ್ಯಕ್ಷೆ,
ಸರ್ಕಾರಿ ಆಸ್ಪತ್ರೆ ಮೇಲೆ ಜನರಿಗೆ ಗೌರವ ಬರಬೇಕು ಎನ್ನುವ ಉದ್ದೇಶ
ನಮ್ಮದಾಗಿದೆ ಎಂದರು.
ಜೆನರಿಕ್ ಮೆಡಿಸಿನ್ ದರಗಳಲ್ಲಿ ವ್ಯತ್ಯಾಸ: ಸಿಇಓ ಪದ್ಮಾ ಬಸವಂತಪ್ಪ
ಮಾತನಾಡಿ, ಜೆನರಿಕ್ ಮೆಡಿಸಿನ್ ದರಗಳಲ್ಲಿ ವ್ಯತ್ಯಾಸ
ಕಂಡುಬರುತ್ತಿರುವ ಬಗ್ಗೆ ದೂರುಗಳಿವೆ. ಮೆಡಿಸಿನ್ ಮಾರಾಟ ಮಾಡುವ
ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ವೈದ್ಯಾಧಿಕಾರಿಗಳಿಗೆ ತಿಳಿಸಿದರು.
ಇದಕ್ಕೆ ಉತ್ತರಿಸಿದ ಡಿಎಚ್‍ಓ, ಎಲ್ಲ ಜೆನರಿಕ್ ಅಂಗಡಿಗಳಲ್ಲಿ ಔಷಧಗಳಿಗೆ
ಒಂದೇ ದರ ನಿಗದಿಯಾಗಿರುತ್ತದೆ. ಈ ಬಗ್ಗೆ ಪರಿಶೀಲಿಸಿ ವರದಿ
ನೀಡಲಾಗುವುದು ಎಂದರು.
ಆಯುಷ್ ಕೋವಿಡ್ ಕೇರ್ ಸೆಂಟರ್: ಜಿಲ್ಲಾ ಆಯುಷ್ ಅಧಿಕಾರಿ
ಶಂಕರೇಗೌಡ ಮಾತನಾಡಿ, ಆಯುಷ್ ಇಲಾಖಾ ವತಿಯಿಂದ ‘ಆಯುಷ್
ಕೋವಿಡ್ ಕೇರ್ ಸೆಂಟರ್’ ಮಾಡುವ ಉದ್ದೇಶವಿದೆ. ಇದಕ್ಕಾಗಿ ಜಿಲ್ಲಾಧಿಕಾರಿ
ಮತ್ತು ಡಿಎಚ್‍ಓ ಅಧಿಕಾರಿಗಳ ಅನುಮತಿ ಪಡೆಯಬೇಕಿದೆ. ಸರ್ಕಾರದ
ಶಿಷ್ಟಾಚಾರದ ಪ್ರಕಾರ ತೆರೆಯಲು ಅವಕಾಶವಿದೆ. ಇಲ್ಲಿ ವಯಸ್ಸಿನ ಮಿತಿ
ನಿಗದಿಪಡಿಸಿ, ಸೌಮ್ಯ ಲಕ್ಷಣ ಇರುವವರರನ್ನು ದಾಖಲಿಸಿಕೊಂಡು ಚಿಕಿತ್ಸೆ
ನೀಡಲಾಗುವುದು. ಇದು ಜಿಲ್ಲಾಮಟ್ಟದಲ್ಲಿ ಮಾತ್ರ ಎಂದು ತಿಳಿಸಿದರು.
   ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ
ಅಧಿಕಾರಿಗಳು ಮಾತನಾಡಿ, ಜಲಜೀವನ್ ಮಿಷನ್ ಪ್ರತಿ ಮನೆ ಮನೆಗೆ
ನೀರು ಒದಗಿಸುವ ಯೋಜನೆ ಇದಾಗಿದೆ. ಈಗಾಗಲೇ ಕ್ರಿಯಾ ಯೋಜನೆ
ತಯಾರಿಸಲಾಗಿದ್ದು, ಅನುಮೋದನೆಗೊಂಡಿದೆ. ಟೆಂಡರ್
ಕರೆಯುವುದು ಬಾಕಿ ಇದೆ ಎಂದು ಸಭೆಗೆ ಮಾಹಿತಿ ನೀಡಿದರು.
   ಸÀರ್ಕಾರಿ ನೌಕರರು ಹೊಂದಿರುವ ಬಿಪಿಎಲ್ ಕಾರ್ಡ್ ವಾಪಸ್ ಕೊಡದೇ
ಇದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಸರ್ಕಾರ ಎಚ್ಚರಿಸಿದೆ. ಈ
ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್
ಹಿಂದಿರುಗಿಸಿದ್ದಾರೆಯೇ ಎಂದು ವೀರಶೇಖರಪ್ಪ ಪ್ರಶ್ನಿಸಿದರು.
   ಇದಕ್ಕೆ ಪ್ರತಿಕ್ರಿಯಿಸಿದ ಅಹಾರ ನಾಗರಿಕ ಸರಬರಾಜು ಹಾಗೂ
ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು, ಜಿಲ್ಲೆಯಲ್ಲಿ
1500 ಪಡಿತರ ಚೀಟಿಗಳು ಹಿಂದಿರುಗಿಸಿದ್ದಾರೆ. ಇದರಲ್ಲಿ ಸರ್ಕಾರಿ
ನೌಕರರು, ಒಂದು ಸಾವಿರ ಚದರ ಅಡಿ ಮನೆ ಕಟ್ಟಿಕೊಂಡವರು
ಹಾಗೂ ನಾಲ್ಕು ಚಕ್ರದ ವಾಹನಗಳು ಹೊಂದಿರುವವರು ಇದ್ದಾರೆ. 
ಇದರಲ್ಲಿ ಕೆಲವರಿಗೆ ದಂಡ ವಿಧಿಸಲಾಗಿದ್ದು, ಕಾರ್ಡ್ ರದ್ದು ಪಡಿಸಲಾಗಿದೆ
ಎಂದು ಸಭೆಗೆ ಮಾಹಿತಿ ನೀಡಿದರು.
    ಪೋಷಣ್ ಅಭಿಯಾನ ಶುರು ಮಾಡಲಾಗಿದೆಯೇ ಎಂದು ಜಿ.ಪಂ
ಅಧ್ಯಕ್ಷೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ
ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್, ಜಿಲ್ಲೆಯಲ್ಲಿ
ಈಗಾಗಲೇ ಪೋಷಣ್ ಮಾಸಾಚರಣೆ ಅಭಿಯಾನ ಶುರು
ಮಾಡಲಾಗಿದೆ. ಆಯಾ ತಾಲ್ಲೂಕಿನಲ್ಲಿ ಸರಳವಾಗಿ ಮನೆ ಮನೆಗೆ ತೆರಳಿ
ಜನರಿಗೆ ಕಾರ್ಯಕ್ರಮದ ಕುರಿತು ಅರಿವು ಮೂಡಿಸಲಾಗುವುದು
ಎಂದ ಅವರು, ಭಾಗ್ಯಲಕ್ಷ್ಮೀ ಯೋಜನೆಯಡಿ 4 ಸಾವಿರ ಬಾಂಡ್ ಬಾಕಿ ಇದೆ.
ಬಾಂಡ್ ಮೊತ್ತ ಹೆಚ್ಚಿಗೆ ಆದ ಹಿನ್ನೆಲೆಯಲ್ಲಿ ತಡವಾಗಿದೆ ಎಂದು ತಿಳಿಸಿದರು.

    ಪ್ರಾದೇಶಿಕ ಸಾಮಾಜಿಕ ಅರಣ್ಯ ಇಲಾಖೆ ಅಭಿಯಂತರರು ಸಭೆಗೆ
ಮಾಹಿತಿ ನೀಡಿ, ಅರಣ್ಯ ಜಮೀನಿನಲ್ಲಿ ಸಾರ್ವಜನಿಕ ಗ್ರಾಮಕ್ಕೆ ಸೇರಿದ ಜಮೀನಿನಲ್ಲಿ
ಸಸಿ ನೆಡುವ ಕಾರ್ಯಕ್ರಮದಲ್ಲಿ ವಾರ್ಷಿಕ ಗುರಿ 6.14 ಇದೆ. ನಾವು 5.984
ಪ್ರತಿಶತ 95 ರಷ್ಟು ಪೂರ್ಣಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದರು.
    ಕನಿನಿನಿ ಭದ್ರಾ ಯೋಜನಾ ವೃತ್ತದ ಅಭಿಯಂತರರು ಮಾತನಾಡಿ,
2019-20 ನೇ ಸಾಲಿನ  ಟಿಎಸ್‍ಪಿ ಯೋಜನೆಯಲ್ಲಿ ಹರಪನಹಳ್ಳಿ ತಾಲ್ಲೂಕಿನ 50
ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ
ಪ್ರಗತಿಯಲ್ಲಿದ್ದು, ಕೋವಿಡ್ ಸಂಬಂಧ ನಿಧಾನವಾಗಿದೆ. ಜಗಳೂರು
ತಾಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ
ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ಮಳೆಗೆ ನಾವು ನೀರನ್ನು
ನೀಡಲಾಗುವುದು ಎಂದ ಅವರು, ಭರಮಸಾಗರ ತಾಲೂಕಿನ 42
ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ
ಪ್ರಗತಿಯಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
   ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿಗಳು ಮಾತನಾಡಿ,
ಕೈಮಗ್ಗ ಮತ್ತು ವಸ್ತ್ರಾಲಯಗಳಿಗೆ ವೇತನ ಕುರಿತು ಕೆ-2 ನಲ್ಲಿ
ತಾಂತ್ರಿಕ ಸಮಸ್ಯೆ ಇರುವುದರರಿಂದ  ಸಾಧನೆ ಮಾಡಲು
ಸಾಧ್ಯವಾಗಿಲ್ಲ. ಇನ್ನುಳಿದಂತೆ ಕ್ರಿಯಾ ಯೋಜನೆ ಮಾಡಿ
ಅನುಮೋದನೆಗಾಗಿ ಜಿ.ಪಂಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
    ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮದ ವ್ಯವಸ್ಥಾಪಕರು ಮಾಹಿತಿ
ನೀಡಿ, ಗಂಗಾ ಕಲ್ಯಾಣ ಯೋಜನೆ, ಭೂ ಒಡೆತನ ಯೋಜನೆ, ಐಎಸ್‍ಬಿ
ಯೋಜನೆ, ಮೈಕ್ರೊ ಫೈನಾನ್ಸ್ ಕಿರುಸಾಲ ಯೋಜನೆಯಲ್ಲಿ ಒಟ್ಟು  292
ಭೌತಿಕ ಗುರಿ ಹೊಂದಿದ್ದು, ಆರ್ಥಿಕ ಗುರಿಯು 582.50 ರಷ್ಟಿದೆ ಎಂದರು.
ಸೂಕ್ತ ಮಾಹಿತಿಯೊಂದಿಗೆ ಸಭೆಗೆ ಬನ್ನಿ: ಸಭೆಗೆ ಅಧಿಕಾರಿಗಳು
ಸೂಕ್ತ ಮಾಹಿತಿಯೊಂದಿಗೆ ಬರಬೇಕು. ಸುಖಾಸುಮ್ಮನೆ ಇಲ್ಲಿಗೆ
ಬರಬಾರದು. ಅಧಿಕಾರಿಗಳಿಗೆ ಮಾಹಿತಿ ಇರದಿದ್ದರೆ ಸಭೆ ನಡೆಸಿ ಏನೂ
ಪ್ರಯೋಜನ. ಜೊತೆಗೆ ಸಭೆಗೆ ಹಾಜರಾಗದಿರುವ ಬಗ್ಗೆ ಅಧಿಕಾರಿಗಳು
ಗಮನಕ್ಕೆ ತರಬೇಕು. ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ
ಶಿಸ್ತು ಕ್ರಮಕ್ಕೆ ಸಿಇಓ ಹಾಗೂ ಜಿ.ಪಂ ಅಧ್ಯಕ್ಷರು ಸೇರಿ
ತೀರ್ಮಾನಿಸಲಾಯಿತು.
   ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಪಕ್ಕೀರಪ್ಪ, ಉಪಕಾರ್ಯದರ್ಶಿ
ಆನಂದ್, ಜಿಲ್ಲಾಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *