ದಾವಣಗೆರೆ ಸೆ.12
ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಹಣವನ್ನು ಅವರ
ಅಭಿವೃದ್ಧಿಗೆ ಮಾತ್ರ ವಿನಿಯೋಗಿಸಬೇಕೆ ಹೊರತು ರಸ್ತೆ
ಕಾಮಗಾರಿಗೆ ಬಳಸಬೇಡಿ ಎಂದು ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ
ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ
ಇಲಾಖೆಯ ಸಚಿವ ಗೋವಿಂದ ಎಂ.ಕಾರಜೋಳ ಸೂಚಿಸಿದರು.
ಶನಿವಾರ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ
ಮಾತನಾಡಿದ ಅವರು, ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಹಣವನ್ನು
ಸರಿಯಾಗಿ ಬಳಸಿಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ
ಅಧಿಕಾರಿಗಳಿಗೆ ತಿಳಿಸಿದರು.
ರಾಜ್ಯದಲ್ಲಿ ಒಟ್ಟು 7652 ಕಿ.ಮೀ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ
ಹಾಗೂ ಜಿಲ್ಲಾ ಮುಖ್ಯ ರಸ್ತೆಗಳು ನಿರ್ಮಾಣಕ್ಕೆ 2019-20ನೇ ಸಾಲಿನಲ್ಲಿ
390 ಕಿ.ಮೀ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು
ಅಭಿವೃದ್ಧಿಯಾಗಿದ್ದು, 143 ಸೇತುವೆಗಳ ನಿರ್ಮಾಣ ಮಾಡಿದ್ದೇವೆ
ಎಂದರು.
ಹರಿಜನ ಮತ್ತು ಗಿರಿಜನ ಕಲ್ಯಾಣ ಯೋಜನೆಯಡಿಯಲ್ಲಿ 1958 ಕಿ.ಮಿ
ಗುಣಮಟ್ಟದ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಎಸ್‍ಡಿಪಿ
ಯೋಜನೆಯಡಿಯಲ್ಲಿ 588 ಕಿ.ಮೀ ರಸ್ತೆ ಅಭಿವೃದ್ಧಿ ಮತ್ತು
ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ದಿ
ಯೋಜನೆಯಲ್ಲಿ 785 ಕಿ.ಮೀ ರಸ್ತೆ ಅಭಿವೃದ್ಧಿಯಾಗಿವೆ. ಕೆಆರ್‍ಡಿಸಿಎಲ್
ವತಿಯಿಂದ ಬೆಂಗಳೂರು ಸುತ್ತಮುತ್ತಲಿನ 155 ಕಿ.ಮೀ
ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗ್ಗೊಳಲಾಗಿದ್ದು,
ರಾಜ್ಯದಾದ್ಯಂತ ರೂ. 1395 ಕೋಟಿ ವೆಚ್ಚದಲ್ಲಿ 215 ಸೇತುವೆಗಳ
ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಕೇಂದ್ರ ಸರ್ಕಾರದ
ಸಹಯೋಗದೊಂದಿಗೆ ರೂ. 4762 ಕೋಟಿ ಮೊತ್ತದ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅನುಷ್ಟಾನಕ್ಕೆ ಕ್ರಮ
ವಹಿಸಲಾಗಿದ್ದು, ಸಿಂಗದೂರು ಸೇತುವೆಗೆ ರೂ. 423.15 ಕೋಟಿ

ವೆಚ್ಚದಲ್ಲಿ ಕಾಮಗಾರಿ ಕೈಗ್ಗೊಳ್ಳಲು ಶಂಕುಸ್ಥಾಪನೆ
ಮಾಡಲಾಗಿದೆ ಎಂದರು.
ರೂ.220 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ
ಕಾಮಗಾರಿಗೆ ಚಾಲನೆ ನೀಡಲಾಗಿದೆ. ವಿಜಯಪುರದಲ್ಲಿ ವಿಮಾನ ನಿಲ್ದಾಣ
ಕಾಮಗಾರಿಗೆ ರೂ.220 ಕೋಟಿ ವೆಚ್ಚದಲ್ಲಿ ಕಾಮಗಾರಿ
ಕೈಗ್ಗೊಳಲು ಆಡಳಿತಾತ್ಮಕವಾಗಿ ಅನುಮೋದನೆ ನೀಡಲಾಗಿದ್ದು,
ಈ ಕಾಮಗಾರಿ ಪ್ರಗತಿಯಲ್ಲಿದೆ. ನಬಾರ್ಡ್ ಸಹಯೋಗದೊಂದಿಗೆ
ಪ್ರವಾಹ ಪಿಡಿತ ಜಿಲ್ಲೆಗಳಿಗೆ 6143 ಶಾಲ ಕೊಠಡಿಗಳ ಪುನರ್
ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ರೂ 17.0 ಕೋಟಿ ವೆಚ್ಚದಲ್ಲಿ
ಬಿದರ್ ವಿಮಾನ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಹಲವು ವರ್ಷಗಳ ನಂತರ ನಮ್ಮ ಸರ್ಕಾರವು ರಸ್ತೆಗಳ
ಉನ್ನತೀಕರಣವನ್ನು ಮಾಡಲಾಗಿದ್ದು, 961 ಕಿಮೀ ರಾಜ್ಯ ಹೆದ್ದಾರಿ
ಮತ್ತು 1551 ಕಿಮೀ ಜಿಲ್ಲಾ ಮುಖ್ಯ ರಸ್ತೆಗಳ
ಉನ್ನತಿಕರಣವನ್ನು ಸರ್ಕಾರದ ಆದೇಶ ಸಂಖ್ಯೆ ಪಿಡಬ್ಲ್ಯೂಡಿ 85 ಇಎಪಿ
2020 ಜ 9 ರಂದು ಆದೇಶ ಹೊರಡಿಸಲಾಗಿದೆ.
ಎಸ್‍ಸಿಪಿ ಯೋಜನೆಯಡಿಯಲ್ಲಿ ಮಾರ್ಚ್ ಅಂತ್ಯಕ್ಕೆ ಒಟ್ಟು ರೂ.
25.387.20 ಕೋಟಿ ವೆಚ್ಚ ಮಾಡಲಾಗಿದೆ. ಮತ್ತು ಟಿಎಸ್‍ಪಿ
ಯೋಜನೆಯ ಅಡಿಯಲ್ಲಿ ರೂ. 4236.20 ಕೋಟಿ ಒದಗಿಸಿದ್ದು, ಮಾರ್ಚ್
ಅಂತ್ಯಕ್ಕೆ ರೂ 4144.26 ಕೋಟಿ ವೆಚ್ಚ ಮಾಡಲಾಗಿದೆ.
ಪ.ಪಂಗಡದ ಗಂಗಾ ಕಲ್ಯಾಣ ಯೋಜನೆಗೆ ಒಟ್ಟು 8270 ಕೊಳವೆ
ಬಾವಿಗಳನ್ನು ಕೊರೆಸಲಾಗಿದ್ದು, ಭೂ ಒಡೆತನ ಯೋಜನೆಗೆ
ರೂ. 295.00 ಕೋಟಿ ವೆಚ್ಚದಲ್ಲಿ ಫಲಾನುಭವಿಗಳಿಗೆ 3228.00
ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದರು.
22 ನ್ಯಾಯಾಲಯಗಳು, ನ್ಯಾಯಾಧೀಶರ ವಸತಿ
ಗೃಹಗಳು ಹಾಗೂ ಪಿಓಸಿಎಸ್‍ಓ ನ್ಯಾಯಾಲಯಗಳ ಕಟ್ಟಡಗಳ
ನಿರ್ಮಾಣ ಮಾಡಲಾಗಿದೆ. ಹರಿಜನ ಮತ್ತು ಗಿರಿಜನ ಕಾಲೋನಿಗಳಲ್ಲಿ
ಉತ್ತಮ ಗುಣಮಟ್ಟದ 1958 ಕಿ.ಮೀ ಕಾಂಕ್ರೀಟ್ ರಸ್ತೆಗಳನ್ನು
ನಿರ್ಮಿಸಲಾಗಿದೆ. ಎಸ್‍ಡಿಪಿ ಯೋಜನೆಯಡಿಯಲ್ಲಿ 588 ಕಿ.ಮೀ ರಸ್ತೆ ಹಾಗೂ
ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ
ಯೋಜನೆಯಡಿಯಲ್ಲಿ 785 ಕಿ.ಮೀ ರಸ್ತೆಯನ್ನು ಅಭಿವೃದ್ಧಿ
ಪಡಿಸಲಾಗಿದೆ ಎಂದರು.
2019ರ ಆಗಸ್ಟ್ ಪ್ರವಾಹ ಪರಿಹಾರದ 1828 ಕಾಮಗಾರಿಗಳನ್ನು
ರೂ.500 ಕೋಟಿ ವೆಚ್ಚದಲ್ಲಿ  ಕೈಗೊಳ್ಳಲಾಗಿದೆ. ಎಸ್‍ಹೆÀಚ್‍ಡಿಪಿ-ಫೇಸ್-4,
ಹಂತ -1 ರಲ್ಲಿ ರೂ. 4500 ಕೋಟಿ ವೆಚ್ಚದಲ್ಲಿ ಕಾಮಗಾರಿಗಳಿಗೆ
ಅನುಷ್ಟಾನ ನೀಡಲಾಗಿದೆ. ಕೆಶಿಪ್-3ರಡಿ ಎಡಿಬಿ-2 ರಡಿಯಲ್ಲಿ ರೂ. 5334
ಕೋಟಿ ಮೊತ್ತದಲ್ಲಿ 418 ಕಿ.ಮಿ ರಾಜ್ಯ ಹೆದ್ದಾರಿ ಅಭಿವೃದ್ದಿಗೆ ಚಾಲನೆ
ನೀಡಲಾಗಿದೆ ಎಂದರು.
ರಾಜ್ಯಾದ್ಯಂತ ಏಕರೋಪ ದರಪಟ್ಟಿ ಪ್ರಕಟಿಸಲು ಹಾಗೂ
ಅಂರ್ತಜಲ ವೃದ್ಧಿ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ

ಪ್ರಗತಿಯಲ್ಲಿರುವ ಸೇತುವೆಗಳ ತಳಭಾಗದಲ್ಲಿ 1 ಮೀಟರ್
ನೀರಿನ ಸಂಗ್ರಹಣೆಗೆ ಕ್ರಮವಹಿಸಲಾಗಿದೆ ಎಂದು ಮಾಹಿತಿ
ನೀಡಿದರು. ಹಾಗೂ ಇದರೊಂದಿಗೆ ಇತರೆ ಯೋಜನೆಗಳ ಮಾಹಿತಿ
ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು
ಮಾಹಿತಿ ನೀಡಿ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಡಿಯಲ್ಲಿ
133.00 ಬೌತಿಕ ಗುರಿಹೊಂದಿದ್ದು 43 ಲಕ್ಷ ವಿನಿಯೋಗಿಸಲಾಗಿದೆ.
ಸಮೃದ್ದಿಯೋಜನೆ ಗಂಗಾ ಕಲ್ಯಾಣ ಯೋಜನೆ, ಮೈಕ್ರೋ
ಕ್ರೇಡಿಟ್ ಪ್ರೇರಣ ಯೋಜನೆಯು 1 ಲಕ್ಷ ವಿನನಿಯೋಗಿಸಲಾಗಿದೆ
1.25 ಬಾಕಿಯಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಮೈಕ್ರೋ ಪೈನಾನ್ಸ್
ಯೋಜನೆಯು ಮಹಿಳೆಯರಿಗೆ ವಿಶೇಷವಾಗಿ 15 ಸಾವಿರ ನೀಡುವ
ಯೋಜನೆಯಾಗಿದೆ. 3 ದಿನದಲ್ಲಿ ಬಾಕಿ ಇರುವುದನ್ನು ಮಂಜೂರು
ಮಾಡಬೇಕು. ಇಲ್ಲವಾದರೆ ನಿಮ್ಮನ್ನು ಅಮಾನತ್ತು
ಮಾಡಲಾಗುವುದು ಎಂದ ಅವರು, ಹಳ್ಳಿಗಳಲ್ಲಿ ಸ್ಮಶಾನಗಳು
ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳು ಮತ್ತು ನನಗೆ ಮನವಿ ಕೋಡಿ
ಶೀಘ್ರವಾಗಿ ಸ್ಮಶಾನವನ್ನು ಮಂಜೂರು ಮಾಡುತ್ತೇನೆ ಎಂದರು.
ರಾಜ್ಯ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ
ರಾಮಚಂದ್ರಪ್ಪ, ಶಾಸಕರಾದ ರಾಮಪ್ಪ, ಪ್ರೋ.ಲಿಂಗಣ್ಣ,
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ,
ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಹಾಗೂ ಜಿಲ್ಲಾಮಟ್ಟದ
ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed