ದಾವಣಗೆರೆ ಸೆ.22
ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ ವತಿಯಿಂದ
2018-19ನೇ ಸಾಲಿನ ಶ್ರೇಷ್ಟ ಪುಸ್ತಕ ಪ್ರಶಸ್ತಿಗೆ
ಪುಸ್ತಕಗಳನ್ನು ಆಯ್ಕೆ ಮಾಡಿ ಕೃಷಿ, ವಿಜ್ಞಾನ, ತಂತ್ರಜ್ಞಾನ
ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಆಯ್ಕೆಯಾದ
ಪುಸ್ತಕಗಳ ಲೇಖಕರಿಗೆ ಆಗಸ್ಟ್ ಮಾಹೆಯಲ್ಲಿ ಈ ಕೆಳಗಿನಂತೆ
ಪ್ರಶಸ್ತಿ ವಿತರಿಸಲಾಯಿತು.
ವಿಜ್ಞಾನ ಕ್ಷೇತ್ರದಲ್ಲಿ ಡಾ.ಟಿ.ಎಸ್. ಚನ್ನೇಶ ರಚಿಸಿರುವ
ಅನುರಣನ –ವಿಜ್ಞಾನ ಪ್ರಬಂಧಗಳು. ತಂತ್ರಜ್ಞಾನ ಕ್ಷೇತ್ರದಲ್ಲಿ
ಡಾ. ಉದಯ ಶಂಕರ ಪುರಾಣಿಕ ರಚಿಸಿರುವ ಆರ್ಟಿಫಿಷಿಯಲ್
ಇಂಟೆಲಿಜೆನ್ಸ್-ಹೊಸ ತಂತ್ರಜ್ಞಾನ ಹೊಸ ಅವಕಾಶಗಳು, ಹಾಗೂ
ಪ್ರೊ. ಮಹದೇವಯ್ಯ ರಚಿಸಿರುವ ವೃತ್ತಿಪರ ಕಂಪ್ಯೂಟರ್
ಸಾಕ್ಷರತೆ ಪುಸ್ತಕ. ಕೃಷಿ ಕ್ಷೇತ್ರದಲ್ಲಿ ತ್ರಿವೇಣಿ ರಚಿಸಿರುವ
ಮಣ್ಣು- ಉಸಿರಾಡುವ ಜೀವ ವಸ್ತು. ವೈದ್ಯಕೀಯ
ಕ್ಷೇತ್ರದಲ್ಲಿ ಡಾ.ರಣಜಿತ ಬೀರಣ್ಣ ನಾಯಕ ರಚಿಸಿರುವ ವೈದ್ಯ- ವಿಜ್ಞಾನ
ಹಾಗೂ ಡಾ. ಮುರಳಿಮೋಹನ್ ಚೂಂತಾರು ರಚಿಸಿರುವ ಸಂಜೀವಿಸಿ ಭಾಗ-
2- ಆರೋಗ್ಯ ಮಾರ್ಗದರ್ಶಿ ಪ್ರಸ್ತಕಗಳಿಗೆ ಶ್ರೇಷ್ಠ ಪುಸ್ತಕ
ಪ್ರಶಸ್ತಿ ಲಭಿಸಿವೆ ಎಂದು ಕರ್ನಾಟಕ ವಿಜ್ಞಾನ ಮತ್ತ ತಂತ್ರಜ್ಞಾನ
ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಎ.ಎಂ ರಮೇಶ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.