ದಾವಣಗೆರೆ ಸೆ.23
 

2020-21ನೇ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ
ಚೇತನಾ ಯೋಜನೆಯಡಿ ಸಹಾಯಧನ ನೀಡಲು ದಮನಿತ
ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಗೆ ಒಟ್ಟು ಭೌತಿಕ 14 ಗುರಿ ಇದ್ದು, ದಮನಿತ ಮಹಿಳೆಯರು
ತಮ್ಮ ವೃತ್ತಿ ಜೀವನದಿಂದ ಹೊರಬಂದು ಸ್ವಾವಲಂಬಿಗಳಾಗಿ ಜೀವನ
ನಡೆಸಲು ಮತ್ತು ಆದಾಯೋತ್ಪನ್ನಕರ ಚಟುವಟಿಕೆಗಳಲ್ಲಿ
ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಲು ರೂ.25,000/- ಸಾಲ
ಹಾಗು ರೂ.25,000/- ಸಹಾಯಧನ ಸೇರಿ ಒಟ್ಟು ಘಟಕವೆಚ್ಚ
ರೂ.50,000/-ಗಳನ್ನು ನೀಡಲಾಗುತ್ತದೆ.
   18 ವರ್ಷ ವಯೋಮಾನದ ಮೇಲ್ಪಟ್ಟಿರಬೇಕು. ಪುನರ್ವಸತಿಗಾಗಿ
ಸಮುದಾಯಾಧಾರಿತ ಸಂಸ್ಥೆಯಿಂದ ಅಧಿಕೃತ ದೃಢೀಕರಣ ಪತ್ರ
ಹೊಂದಿರಬೇಕು. ಸಾಲ ಪಡೆಯಲು ಉದ್ದೇಶಿತ ಆದಾಯೋತ್ಪನ್ನ
ಚಟುವಟಿಕೆಯ ಯೋಜನಾ ವರದಿ ಸಲ್ಲಿಸುವುದು.  ರಾಷ್ಟ್ರೀಕೃತ
ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಬ್ಯಾಂಕ್‍ಖಾತೆಯೊಂದಿಗೆ ಅರ್ಜಿದಾರರ
ಆಧಾರ್ ಲಿಂಕ್ ಆಗಿರಬೇಕು. ಖಾತೆ ಪುಸ್ತಕದ ನಕಲು ಪ್ರತಿ, ಬ್ಯಾಂಕಿನ
ಹೆಸರು, ಎಫ್.ಎಸ್.ಸಿ. ಕೋಡ್ ಹಾಗು ಆಧಾರ್ ಕಾರ್ಡ್‍ನ ದಾಖಲೆ
ಸಲ್ಲಿಸುವುದು.
   ಅರ್ಜಿದಾರಳು ಯಾವುದೇ ಬ್ಯಾಂಕ್/ ಆರ್ಥಿಕ ಸಂಸ್ಥೆಗಳಲ್ಲಿ
ಸುಸ್ತಿದಾರರಾಗಿರಬಾರದು ಎನ್ನುವುದು ಕಡ್ಡಾಯವಾಗಿರುತ್ತದೆ.
ಖಾತೆ ಹೊಂದಿರುವ ಬ್ಯಾಂಕ್‍ನಲ್ಲಿ ಸಾಲ ಪಡೆದಿಲ್ಲ ಎಂಬ ಬಗ್ಗೆ ದೃಢೀಕರಣ
ಪತ್ರ ಸಲ್ಲಿಸುವುದು. ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರಬೇಕು.
ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು. ಅಧಿಕೃತ ನಿವಾಸದ
ವಿಳಾಸ ಹಾಗು ಮತದಾರರ ಗುರುತಿನ ಚೀಟಿ ಸಲ್ಲಿಸಬೇಕು.
ಅರ್ಜಿಗಳನ್ನು ಶ್ರೀದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ
ಸಂಘ(ರಿ), 2ನೇ ಮೇನ್, 7ನೇ ಕ್ರಾಸ್, ದೇವರಾಜ ಅರಸ್ ಬಡಾವಣೆ, ‘’ಬಿ‘’ ಬ್ಲಾಕ್
ದಾವಣಗೆರೆ ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಎಲ್ಲಾ
ದಾಖಲಾತಿಗಳೊಂದಿಗೆ ಅ.08 ರೊಳಗಾಗಿ ಸಂಸ್ಥೆಯ ಕಚೇರಿಗೆ
ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಮಹಿಳಾ
ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಕರ ಸರ್ಕಾರಿ ಬಾಲಮಂದಿರ
ಕಟ್ಟಡದ ಹಿಂಭಾಗ, ಕುವೆಂಪುನಗರ, ಎಂ.ಸಿ.ಸಿ. ಬಿ. ಬ್ಲಾಕ್, ದಾವಣಗೆರೆ,
ದೂ.ಸಂ: 08192-296268 ನ್ನು ಸಂಪರ್ಕಿಸಬಹುದೆಂದು ಮಹಿಳಾ ಮತ್ತು
ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *