ದಾವಣಗೆರೆ ನ.03
ಭವಿಷ್ಯ ನಿಧಿ ಸಂಸ್ಥೆಯು ಪಿಂಚಣಿದಾರರ ಅನುಕೂಲಕ್ಕಾಗಿ
ಜೀವಂತ ಪ್ರಮಾಣ ಪತ್ರ ಸಲ್ಲಿಸುವ ಅವಧಿಯಲ್ಲಿ
ಮಾರ್ಪಾಡನ್ನು ಮಾಡಲಾಗಿದೆ. ಅದರಂತೆ ಪಿಂಚಣಿದಾರರು ಹಿಂದಿನ
ವರ್ಷದ ಯಾವ ತಿಂಗಳಿನಲ್ಲಿ ಜೀವಂತ ಪತ್ರ ಸಲ್ಲಿಸಿದ್ದಾರೋ ಆ
ತಿಂಗಳಿನಿಂದ ಮುಂದಿನ ಒಂದು ವರ್ಷದವರೆಗೆ ಜೀವಂತ ಪತ್ರ
ಸಲ್ಲಿಸಬೇಕಾಗಿರುತ್ತದೆ.
ಈ ಬದಲಾವಣಿಯಿಂದ ಭವಿಷ್ಯ ನಿಧಿ ಪಿಂಚಣಿದಾರರು ನವೆಂಬರ್
ತಿಂಗಳಿನಲ್ಲಿ ಜೀವಂತ ಪ್ರಮಾಣ ಪತ್ರ ಸಲ್ಲಿಸುವುದು
ಕಡ್ಡಾಯವಾಗಿರುವುದಿಲ್ಲ. ಭವಿಷ್ಯ ನಿಧಿ ಪಿಂಚಣಿ ಪಡೆಯುವ
ಬ್ಯಾಂಕ್ ಅಕೌಂಟ್ ಸಂಖ್ಯೆ, ಪಿಪಿಓ ನಂಬರ್, ಆಧಾರ್ ಕಾರ್ಡ್ ಮಾಹಿತಿ
ಮತ್ತು ಮೊಬೈಲ್‍ನೊಂದಿಗೆ ಖುದ್ದಾಗಿ ಪಿಂಚಣಿ ಪಡೆಯುವ
ಬ್ಯಾಂಕ್ ಅಥವಾ ಕಾಮನ್ ಸರ್ವಿಸ್‍ಸೆಂಟರ್‍ಗಳನ್ನು
ಸಂಪರ್ಕಿಸಬಹುದು.
ಕೋವಿಡ್ 19 ಸಾಂಕ್ರಾಮಿಕ ರೋಗದ ಪ್ರಸ್ತುತ
ಪರಿಸ್ಥಿತಿಯಲ್ಲಿ ಜನಸಂದಣಿಯನ್ನು ತಪ್ಪಿಸಲು ಮತ್ತು ಎಲ್ಲಾ
ಪಿಂಚಣಿದಾರರು ಹಿರಿಯ ನಾಗರೀಕರಾಗಿರುವುದರಿಂದ ಜೀವಂತ
ಪ್ರಮಾಣ ಪತ್ರ ನೋಂದಾಯಿಸಲು ತಮ್ಮ ಹತ್ತಿರದ ಸಾಮಾನ್ಯ
ಸೇವಾ ಕೇಂದ್ರಗಳು ಮತ್ತು ಬ್ಯಾಂಕ್‍ಗಳಿಗೆ ಭೇಟಿ
ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08182-
275101/275105(ಶಿವಮೊಗ್ಗ) ಮತ್ತು 08192-
230240(ದಾವಣಗೆರೆ)ನ್ನು ಸಂಪರ್ಕಿಸಬಹುದೆಂದು ಸಹಾಯಕ
ಭವಿಷ್ಯ ನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.