ದಾವಣಗೆರೆ ನ.05
ಸಾರ್ವಜನಿಕರು ಜಸ್ಟ್ ಇನ್ ಡೀಲ್ ಕಂಪನಿಯಲ್ಲಿ ಹಣ ಹೂಡಿಕೆ
ಮಾಡಿದ್ದು, ಈ ಕಂಪನಿಯವರು ಸಾರ್ವಜನಿಕರ ಹಣವನ್ನು
ಪಡೆದು ಹೂಡಿಕೆದಾರರಿಗೆ ವಾಪಾಸ್ ನೀಡದೇ
ಮೋಸಮಾಡಿರುತ್ತಾರೆಂದು ಸಿ.ಇ.ಎನ್ ಅಪರಾಧ ಪೊಲೀಸ್
ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ಈ ಕಂಪನಿಯ ಮಾಲೀಕರು ಮತ್ತು ಇತರೆಯವರ
ವಿರುದ್ದ ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ
ನವಜಾಕ್ಷಿ ಎಂಬುವವರು ಜು.18 ರಂದು ದೂರು ನೀಡಿದ್ದು, ನಂ-
35/2019 ಕಲಂ 406, 420, 149 ಐಪಿಸಿ ಅಡಿ ಪ್ರಕರಣ ದಾಖಲಾಗಿದ್ದು
ತನಿಖೆಯಲ್ಲಿರುತ್ತದೆ.
ಈ ಪ್ರಕರಣದಲ್ಲಿ ಆರೋಪಿತರು ಸಾರ್ವಜನಿಕರಿಂದ ಹಣವನ್ನು
ಜಸ್ಟ್ ಇನ್ ಡೀಲ್ ಕಂಪನಿಯಲ್ಲಿ ಹೂಡಿಕೆ ಮಾಡಿಸಿಕೊಂಡು ವಾಪಾಸ್
ಕೊಡದೇ ಮೋಸ ಮಾಡಿರುತ್ತಾರೆ. ಈ ವಿಷಯಕ್ಕೆ
ಸಂಬಂಧಿಸಿದಂತೆ ಈ ಕಂಪನಿಯಲ್ಲಿ ಹೂಡಿಕೆ ಮಾಡಿ ಮೋಸ
ಹೋಗಿರುವವರು ಯಾರಾದರೂ ಇದ್ದರೆ ಅಂತಹ
ಹೊಡಿಕೆದಾರರು ಈ ಕೊಡಲೇ ಸೂಕ್ತ ದಾಖಲಾತಿಗಳೊಂದಿಗೆ
ದಾವಣಗೆರೆ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ
ತನಿಖಾಧಿಕಾರಿಯವರನ್ನು ಸಂಪರ್ಕಿಸಿ ದೂರು ಸಲ್ಲಿಸುವಂತೆ
ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.