ದಾವಣಗೆರೆ ನ.26
2025ನೇ ವೇಳೆಗೆ ದೇಶದಲ್ಲಿ ಕ್ಷಯರೋಗವನ್ನು ಕೊನೆಗಾಣಿಸಿ
‘ಕ್ಷಯಮುಕ್ತ ಭಾರತ’ ಎಂದು ಘೋಷಿಸುವ ಗುರಿ ಹೊಂದಿದ್ದು
ಕ್ಷಯ ರೋಗಿಗಳ ಸಂಖ್ಯೆ ತಗ್ಗಿಸುವ ನಿಟ್ಟಿನಲ್ಲಿ ಸಕ್ರಿಯ ಕ್ಷಯ
ರೋಗ ಪತ್ತೆ ಆಂದೋಲನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಡಿ.1
ರಿಂದ 31 ರವರೆಗೆ ಹಮ್ಮಿಕೊಳ್ಳಲಾಗಿದೆ.
ಪ್ರಸ್ತುತ ಒಂದು ಲಕ್ಷ ಜನಸಂಖ್ಯೆಗೆ ಒಂದು ವರ್ಷಕ್ಕೆ ಅಂದಾಜು
194 ಕ್ಷಯರೋಗಿಗಳು ಚಿಕಿತ್ಸೆಗಾಗಿ ದಾಖಲಾಗುತ್ತಿದ್ದಾರೆ. ಈ
ಸಂಖ್ಯೆಯನ್ನು 44 ಕ್ಕಿಂತ ಕಡಿಮೆಗೆ ಇಳಿಸಬೇಕಾಗಿದೆ. ಜಿಲ್ಲೆಯಲ್ಲಿ
ಡಿಸೆಂಬರ್ ಮಾಹೆಯಲ್ಲಿ ಹಮ್ಮಿಕೊಳ್ಳಲಾಗಿರುವ ಸಕ್ರಿಯ
ಕ್ಷಯರೋಗ ಪತ್ತೆಹಚ್ಚುವಿಕೆ() ಕಾರ್ಯಕ್ರಮಕ್ಕೆ ಜಿಲ್ಲೆಯ
ಒಟ್ಟು ಜನಸಂಖ್ಯೆಯ ಶೇ.30 ರಷ್ಟು ಅಂದರೆ 494203
ಜನಸಂಖ್ಯೆಯನ್ನು ಕ್ಷಯರೋಗದ ಅಪಾಯದ
ಅಂಚಿನಲ್ಲಿರುವವರೆಂದು ಗುರುತಿಸಲಾಗಿದ್ದು, ಈ ಜನಸಂಖ್ಯೆಯನ್ನು
ಸಮೀಕ್ಷೆಗೆ ಒಳಪಡಿಸಲಾಗುವುದು.
ಜಿಲ್ಲೆಯಾದ್ಯಂತ ನಗರ ಪ್ರದೇಶಗಳಲ್ಲಿ ಇರುವ ಕೊಳಚೆ
ಪ್ರದೇಶಗಳು, ಕಟ್ಟಡ ನಿರ್ಮಾಣ ಕಾಮಿಕರು, ಉಪಕಾರಾಗೃಹ,
ನಿರಾಶಿತ ಶಿಬಿರಗಳು, ವಸತಿ ಇಲ್ಲದವರು, ಬೀದಿ ಮಕ್ಕಳು ಮತ್ತು
ಅನಾಥಾಶ್ರಮಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ
ತಲುಪಲಾರದ ಕಷ್ಟಕರ ಪ್ರದೇಶಗಳು, ಗಣಿ
ಪ್ರದೇಶಗಳು, ಕಲ್ಲು ಕ್ವಾರಿಗಳು, ಮಿಲ್ ಕೆಲಸಗಾರರು,
ಅಸಂಘಟಿತ ಕಾರ್ಮಿಕರು, ಗುಡ್ಡಗಾಡು ಪ್ರದೇಶಗಳ
ಜನರನ್ನು ಸಮೀಕ್ಷೆಗೆ ಒಳಪಡಿಸಲಾಗುವುದು.
ಇವರಲ್ಲಿ ಕ್ಷಯರೋಗದ ಲಕ್ಷಣಗಳುಳ್ಳ ವ್ಯಕ್ತಿಗಳನ್ನು
ಶಂಕಿತ ಕ್ಷಯರೋಗಿಗಳೆಂದು ಪರಿಗಣಿಸಿ ಕಫ ಪರೀಕ್ಷೆಗೆ
ಒಳಪಡಿಸಲಾಗುವುದು. ಈ ಕಾರ್ಯಕ್ರಮಕ್ಕೆ ಪಲ್ಸ್ ಪೊಲೀಯೋ
ಮಾದರಿಯಲ್ಲಿ ತಂಡಗಳನ್ನು ರಚಿಸಲಾಗಿದ್ದು, ಜಿಲ್ಲೆಯಾದ್ಯಂತ
ಒಟ್ಟು 888 ತಂಡಗಳು 2020 ರ ಡಿ.1 ರಿಂದ 31 ರವರೆಗೆ ಕಾರ್ಯ
ನಿರ್ವಹಿಸಲಿವೆ. ಪ್ರತಿ ತಂಡದಲ್ಲಿ ಒಬ್ಬರು ಆಶಾ ಅಥವಾ ಅಂಗನವಾಡಿ
ಕಾರ್ಯಕರ್ತರು ಮತ್ತು ಒಬ್ಬರು ಆರೋಗ್ಯ ಕಾರ್ಯಕರ್ತರು
ಇರುತ್ತಾರೆ.
ಪ್ರತಿ 4 ತಂಡಗಳಿಗೆ ಒಬ್ಬರಂತೆ ಒಟ್ಟು 95 ಮೇಲ್ವಿಚಾರಕರು
ಕರ್ತವ್ಯ ನಿರ್ವಹಿಸಲಿದ್ದಾರೆ. ತಂಡದ ಸದಸ್ಯರು ಮನೆ-ಮನೆಗೆ ಭೇಟಿ
ನೀಡಿ ಕ್ಷಯರೋಗದ ಲಕ್ಷಣಗಳುಳ್ಳ ವ್ಯಕ್ತಿಗಳನ್ನು
ಸಮೀಕ್ಷೆಗೆ ಒಳಪಡಿಸಿ ಅವರ ಕಫವನ್ನು ಸಂಗ್ರಹಿಸಿ ಹತ್ತಿರದ
ಕಫ ಪರೀಕ್ಷಾ ಕೇಂದ್ರಕ್ಕೆ ತಲುಪಿಸುತ್ತಾರೆ. ಕಫದ ಮಾರಿಯಲ್ಲಿ
ಕ್ಷಯರೋಗದ ಸೂಕ್ಷ್ಮಾಣು ಕಂಡುಬಂದರೆ 2 ದಿಗನಳಲ್ಲಿ
ಚಿಕಿತ್ಸೆಯನ್ನು ಪ್ರಾರಂಭಿಸಲಾಗುವುದು. ತಂಡದ ಸದಸ್ಯರು
ಮನೆ-ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಸೂಕ್ತ
ಸಹಕಾರ ನೀಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿಗಳು ಹಾಗೂ ಜಿಲ್ಲಾ ಕ್ಷಯರೋಗ
ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.