1956 ಕರ್ನಾಟಕ ಏಕೀಕರಣ ವಾಯಿತು.ನಂತರದ ಚುನಾವಣೆಗಳಲ್ಲಿ ವೀರಶೈವ/ಲಿಂಗಾಯತ ಶಾಸಕರ ಸಂಖ್ಯೆ.

1957  ——–68
1962 ———-76
1967 ——— 90
1972 ———- 71

ಹೀಗೆ ೧೫ ವರ್ಷಗಳ ಕಾಲ ವೀರಶೈವ/ಲಿಂಗಾಯತರ ಪ್ರಾಬಲ್ಯ ಇತ್ತು.

ಈ ಅವಧಿಯಲ್ಲಿ ಎಸ್.ನಿಜಲಿಂಗಪ್ಪ, ಎಸ್.ಆರ್.ಕಂಠಿ, ವೀರೇಂದ್ರ ಪಾಟೀಲ್ ಮೂವರು ವೀರಶೈವ/ಲಿಂಗಾಯತ ಮುಖ್ಯ ಮಂತ್ರಿಗಳಾಗಿ ಆಡಳಿತ ನಡೆಸಿದರು. ಇಲ್ಲಿವರೆಗೆ ವೀರಶೈವ/ಲಿಂಗಾಯತರು ಕಾಂಗ್ರೆಸ್ ಬೆಂಬಲಿಸಿದ್ದರು.

1972  ರಲ್ಲಿ ಡಿ.ದೇವರಾಜ್ ಅರಸು ವೀರಶೈವ/ಲಿಂಗಾಯತರನ್ನು ಕಡೆಗಣಿಸಿದರು. ಹೀಗಾಗಿ ವೀರಶೈವ/ಲಿಂಗಾಯತರು ಜನತಾ ಪಕ್ಷದತ್ತ ವಾಲಿದರು.

1978 ———- 68
1983 ———– 77
1985 ———– 67

ಈ ಅವಧಿಗಳಲ್ಲಿ ವೀರಶೈವ/ಲಿಂಗಾಯತರು ಜನತಾ ಪಕ್ಷದ ಬೆಂಬಲಿಗರಾಗಿದ್ದರು. ಪರಿಣಾಮ ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ ವೀರಶೈವ/ಲಿಂಗಾಯತ ನಾಯಕರಾಗಿ ಮುಖ್ಯಮಂತ್ರಿ ಆದರು. ನಂತರದ ವಿದ್ಯಮಾನಗಳಲ್ಲಿ  ಮತ್ತೊಬ್ಬ ವೀರಶೈವ/ಲಿಂಗಾಯತ ನಾಯಕ ಎಸ್. ಆರ್.ಬೊಮ್ಮಾಯಿ ಮುಖ್ಯಮಂತ್ರಿ ಯಾದರು.

1989  ರಲ್ಲಿ ಕಾಂಗ್ರೆಸ್ ಪಕ್ಷ ತನ್ನಿಂದ ದೂರವಾಗಿದ್ದ ವೀರಶೈವ/ಲಿಂಗಾಯತ ಸಮುದಾಯ ಮರು ಸೆಳೆಯಲು ವೀರೇಂದ್ರ ಪಾಟೀಲ್ ರನ್ನು ಮುಂಚೂಣಿಗೆ ತಂದು ಅಧಿಕಾರ ಪಡೆಯಿತು.
ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆಗಿ ಕೇವಲ ಒಂದು ವರ್ಷ ಕಾಲ ಆಡಳಿತ ನಡೆಸಿದರು. ಅನಾರೋಗ್ಯ ಕಾರಣದಿಂದ ವೀರೇಂದ್ರ ಪಾಟೀಲ್ ರನ್ನು ಯೋಗ್ಯವಲ್ಲದ ರೀತಿಯಲ್ಲಿ ಅಧಿಕಾರದಿಂದ ಕೆಳಗಿಳಿಸಲಾಯಿತು. ಇದರಿಂದ ವೀರಶೈವ/ಲಿಂಗಾಯತರು ಕೆರಳಿದರು. ಹೀಗಾಗಿ 1994 ರಲ್ಲಿ ವೀರಶೈವ/ಲಿಂಗಾಯತರು ಜನತಾದಳ ವನ್ನು ಬೆಂಬಲಿಸಿದರು.

 1989 ——  65
1994 ——- 76

1996  ರಲ್ಲಿ ವೀರಶೈವ/ಲಿಂಗಾಯತ ಸಮುದಾಯದ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾದರು.

1999 ರಲ್ಲಿ ಜನತಾದಳ ಒಡೆದ ಪರಿಣಾಮ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಈ ಚುನಾವಣೆಯಲ್ಲಿ ವೀರಶೈವ/ಲಿಂಗಾಯತರು ಚದುರಿ ಹೋಗಿದ್ದರು.

1999 ——-  67
2004 ——– 68
2008 ——– 59
2013 ——- 47

2004,  2008 ರ ಚುನಾವಣೆಗಳಲ್ಲಿ ವೀರಶೈವ/ಲಿಂಗಾಯತರು ಬಿಜೆಪಿ ಬೆಂಬಲಿಸಲಾರಂಭಿಸಿದರು. ಬಿ.ಎಸ್.ಯಡಿಯೂರಪ್ಪ ವೀರಶೈವ/ಲಿಂಗಾಯತ ನಾಯಕರಾಗಿ ಹೊರಹೊಮ್ಮಿದರು.

2004  ರಲ್ಲಿ ಅತಂತ್ರ ವಿಧಾನಸಭೆ ರಚನೆಯಾಯಿತು.
2006 ರಲ್ಲಿ ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರ ಒಂದು ರಚನೆ ಆಗಿ ಬಿ.ಎಸ್.ಯಡಿಯೂರಪ್ಪ  ಉಪಮುಖ್ಯಮಂತ್ರಿಯಾದರು. ಜೆಡಿಎಸ್ ವಚನ ಭ್ರಷ್ಟ ತೆಯಿಂದ ಯಡಿಯೂರಪ್ಪ ನವರಿಗೆ ಮುಖ್ಯ ಮಂತ್ರಿ ಆಗುವ ಅವಕಾಶ ತಪ್ಪಿ ಹೋಯಿತು.

ಹೀಗಾಗಿ ವೀರಶೈವ/ಲಿಂಗಾಯತರು ಸಾರಾಸಗಟವಾಗಿ 2008 ರಲ್ಲಿ ಬಿಜೆಪಿಯನ್ನು ಬೆಂಬಲಿಸಿದರು.ಪರಿಣಾಮ ಯಡಿಯೂರಪ್ಪ ಮುಖ್ಯ ಮಂತ್ರಿ ಯಾದರು.

ಮೂರುವರೆ ವರ್ಷಗಳ ಕಾಲ ಆಡಳಿತ ನಡೆಸಿದ ಯಡಿಯೂರಪ್ಪ ಅಧಿಕಾರ ಬಿಡಬೇಕಾಯಿತು. ಈ ಅವಧಿಯ ಕೊನೆಯ 10 ತಿಂಗಳಿಗೆ ಮತ್ತೊಬ್ಬ ವೀರಶೈವ/ಲಿಂಗಾಯತ ಮುಖಂಡ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದರು.

ನಂತರದ ವಿದ್ಯಾಮಾನಗಳಲ್ಲಿ ವೀರಶೈವ/ಲಿಂಗಾಯತಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದರು.ಹೀಗಾಗಿ ವೀರಶೈವ/ಲಿಂಗಾಯತ ಮತಗಳು ಹಂಚಿಹೋಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು.

ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಕಡಿಮೆ ವೀರಶೈವ/ಲಿಂಗಾಯತ ಶಾಸಕರು (ಕೇವಲ 47)  ಆಯ್ಕೆ ಆಗಿದ್ದರು.

ಈಗ ಮೈಸೂರು ಬಾಗದ 13 ಜಿಲ್ಲೆಗಳಲ್ಲಿ ವೀರಶೈವ/ಲಿಂಗಾಯತ ಸಮಾಜದ ಒಬ್ಬ ಶಾಸಕರು ಇಲ್ಲಾ(ಗುಂಡ್ಲುಪೇಟೆ ಕ್ಷೇತ್ರ ಹೊರತುಪಡಿಸಿ).

ಮೈಸೂರು ಬಾಗದಲ್ಲಿ ವೀರಶೈವ/ಲಿಂಗಾಯತರನ್ನ ರಾಜಕೀಯವಾಗಿ ತುಳಿಯುತ್ತಿರುವವರು ಸಿದ್ದರಾಮಯ್ಯ, ಹಾಗು ದೇವೇಗೌಡರು ಮತ್ತು ಅವರ ಕುಟುಂಬ.

ಒಂದು ಕಾಲಕ್ಕೆ  ವಿಧಾನಸಭೆ ಯ ಅರ್ಧದಷ್ಟು ವೀರಶೈವ/ಲಿಂಗಾಯತ ಶಾಸಕರಿದ್ದರು.

  • ವೀರಶೈವ/ಲಿಂಗಾಯತರು ಬೆಂಬಲಿಸಿದ ಪಕ್ಷ ಮಾತ್ರ ಅಧಿಕಾರಕ್ಕೆ ಬಂದಿದೆ. ವೀರಶೈವ/ಲಿಂಗಾಯತರು ಒಗ್ಗೂಡಿದಾಗಲೆಲ್ಲ ವೀರಶೈವ/ಲಿಂಗಾಯತ ಸಮುದಾಯದ ಮುಖ್ಯಮಂತ್ರಿಗಳಾಗಿದ್ದಾರೆ.*
  • ವೀರಶೈವ/ಲಿಂಗಾಯತರ ಶಕ್ತಿ ಎಂತಹದ್ದು ಎಂದು ಎಲ್ಲರಿಗೂ ತಿಳಿಸಲು ಕರ್ನಾಟಕದ ಪ್ರತಿಯೊಬ್ಬ ವ್ಯಕ್ತಿಗೂ ತಿಳಿಯಬೇಕಾಗಿದೇ.

Leave a Reply

Your email address will not be published. Required fields are marked *