ದಾವಣಗೆರೆ ನ.27
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಬೆಂಗಳೂರು,
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ
ಮತ್ತು ನಿಯಂತ್ರಣ ಘಟಕ, ಸಂಜೀವಿನಿ ಪಾಸಿಟಿವ್ ನೆಟ್ವರ್ಕ್, ಶ್ರೀ
ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ಮತ್ತು
ಅಭಯ ಸ್ಪಂದನ ಸ್ವಯಂ ಸೇವಾ ಸಂಸ್ಥೆ, ಜಿಲ್ಲೆಯ ಎಲ್ಲಾ
ರಕ್ತನಿಧಿ ಕೇಂದ್ರಗಳು, ಜಿಲ್ಲೆಯ ಆರ್ಆರ್ಸಿ ಕಾಲೇಜುಗಳು,
ಜಿಲ್ಲಾ ಎನ್ಎಸ್ಎಸ್ ಘಟಕ, ದಾವಣಗೆರೆ ಹಾಗೂ ಇತರೆ ಸಂಘ
ಸಂಸ್ಥೆಗಳ ಸಂಯುಕ್ತಾಶ್ರಯಲ್ಲಿ ವಿಶ್ವ ಏಡ್ಸ್ ದಿನ-2020
ಕಾರ್ಯಕ್ರಮವನ್ನು ಡಿ.1 ರಂದು ನಗರದ ಕುವೆಂಪು
ಕನ್ನಡ ಭವನದಲ್ಲಿ ಬೆಳಿಗ್ಗೆ 10.30 ಕ್ಕೆ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿ.ಪಂ. ಮುಖ್ಯ
ಕಾರ್ಯ ನಿರ್ವಾಹಕಾಧಿಕಾರಿ ಪದ್ಮಾ ಬಸವಂತಪ್ಪ, ಚಿಗಟೇರಿ ಜಿಲ್ಲಾ
ಆಸ್ಪತ್ರೆಯ ಅಧೀಕ್ಷಕರಾದ ಡಾ.ಎನ್.ಜಯಪ್ರಕಾಶ, ಮಹಿಳಾ
ಮತ್ತು ಮಕ್ಕಳ ಆಸ್ಪತ್ರೆಯ ಅಧೀಕ್ಷಕರಾದ
ಡಾ.ನೀಲಕಂಠ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ನಿವಾಸಿ
ವೈದ್ಯಾಧಿಕಾರಿಗಳಾದ ಡಾ.ಮಂಜುನಾಥ ಪಾಟಿಲ್, ಕನ್ನಡ ಸಾಹಿತ್ಯ
ಪರಿಷತ್ ಅಧ್ಯಕ್ಷ ಡಾ.ಮಂಜುನಾಥ ಕುರ್ಕಿ, ಜಿಲ್ಲಾ ಏಡ್ಸ್
ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ
ಕಾರ್ಯಕ್ರಮ ಅಧಿಕಾರಿ ಡಾ.ಕೆ.ಹೆಚ್.ಗಂಗಾಧರ, ಚಿಗಟೇರಿ
ಜಿಲ್ಲಾಸ್ಪತ್ರೆಯ ರಕ್ತ ಭಂಡಾರದ ವೈದ್ಯಾಧಿಕಾರಿ
ಡಾ.ಡಿ.ಹೆಚ್.ಗೀತಾ ಪಾಲ್ಗೊಳ್ಳುವರು. ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿ ಡಾ.ನಾಗರಾಜ ವಹಿಸುವರು ಎಂದು ಪ್ರಕಟಣೆ
ತಿಳಿಸಿದೆ.