ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಪಟ್ಟಣದಲ್ಲಿ ಇಂದು ಕರ್ನಾಟಕ ಕುಂಬಾರ ಯುವ ಸೈನ್ಯ ಬೆಂಗಳೂರು ರಾಜ್ಯಾಧ್ಯಕ್ಷರಾದ ಶ್ರೀ ಶಂಕರ ಶೆಟ್ಟಿ ಕುಂಬಾರ ನೇತೃತ್ವದಲ್ಲಿ ಕುಂಬಾರ ಸಮಾಜದ ಬೃಹತ್ ಜನಜಾಗೃತಿ ಸಮಾವೇಶ ಮತ್ತು ಸಂಕಲ್ಪ ರಥ ಯಾತ್ರೆಯು ಹೊನ್ನಾಳಿಗೆ.ಆಗಮಿಸಿರುವ ಹಿನ್ನೆಲೆಯಲ್ಲಿ ಹೊನ್ನಾಳಿಯ ಕುಂಬಾರ ಸಮಾಜದ ಹಿರಿಯ ಮುಖಂಡರು ಮತ್ತು ಯುವಕರು ಹಾಗೂ ಮಹಿಳೆಯರು ಗಳು ಸೇರಿ ವಿಜ್ರಂಭಣೆಯಿಂದ ಬರಮಾಡಿಕೊಂಡು ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸ್ವಾಗತ ಕೋರಿ ಮತ್ತು ಶ್ರೀಯುತರಿಗೆ ಸನ್ಮಾನ ಮಾಡಿದರು.
ರಾಜ್ಯಾಧ್ಯಕ್ಷರಾದ ಶಂಕರ್ ಶೆಟ್ಟಿ ಕುಂಬಾರ ಮಾತನಾಡಿ ನಾವು ಬೀದರ್ ಜಿಲ್ಲೆ ಭಾಲ್ಕಿ ತಾಲೂಕು ಭಾಲ್ಕಿ ದಿನಾಂಕ 30-10-2020ರಿಂದ ಕುಂಬಾರ ಗಲ್ಲಿಯಲ್ಲಿರುವ ಕುಂಬಾರೇಶ್ವರ ದೇವಸ್ಥಾನದಿಂದ ಸಂಕಲ್ಪ ಯಾತ್ರೆಯ ಪ್ರಾರಂಭಿಸಿ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದವರೆಗೆ ದಿನಾಂಕ 7-12-2020ರಂದು ಜನಜಾಗೃತಿ ಸಂಕಲ್ಪಯಾತ್ರೆ ರಥಯಾತ್ರೆ ಮುಕ್ತಾಯಗೊಂಡು ಆ ದಿನವೇ ಬೃಹತ್ ಸಮಾವೇಶವು ಕುಂಬಾರ ಸಮಾಜದ ಗುರುಗಳಾದ ಶ್ರೀ ಕುಂಬಾರ ಗುಂಡಯ್ಯ ಸ್ವಾಮಿಗಳು ಮತ್ತು ರಾಜ್ಯಾಧ್ಯಕ್ಷ ಶಂಕರ್ ಶೆಟ್ಟಿ ಕುಂಬಾರ್, ಕಾರ್ಯಧ್ಯಕ್ಷರಾದ ರಾಜಶೇಖರ್ ಕುಂಬಾರ್, ಹಾಗೂ ರಾಜ್ಯದ ಎಲ್ಲಾ ಕುಂಬಾರ ಸಮಾಜದ ಪಂಗಡಗಳಾದ, ಲಿಂಗಾಯತ ಕುಂಬಾರ ,ಕುಲಾಲ್ ಕುಂಬಾರ, ಚಕ್ರಸಾಲಿ, ಕುಂಬಾರ, ತೆಲುಗು ಕುಂಬಾರ ,ಎಲ್ಲಾ ಕುಂಬಾರ ಸಮಾಜದ ಒಳಪಂಗಡಗಳು ಒಟ್ಟಾಗಿ ಸೇರಿ ಸಮಾವೇಶ ಮಾಡಲಾಗುವುದು ಎಂದರು.
ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಮುಗಿದ ನಂತರ ಹೊನ್ನಾಳಿ ಟೌನಿನ ಕುಂಬಾರ ಸಮಾಜದ ಗಂಡು ಮಕ್ಕಳು ಹಾಗೂ ಹೆಣ್ಣುಮಕ್ಕಳು ಭೇದಭಾವವಿಲ್ಲದೆ ಎಲ್ಲರೂ ಸರಿಸಮಾನರಾಗಿ ಅಲ್ಲಿಂದ ಸಂಕಲ್ಪರಥಯಾತ್ರೆಗೆ ಜೊತೆಗೂಡಿ ನಡೆದುಕೊಂಡು ಸಮಾಳ್ ಬಾರಿಸುವುದರ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ತೆರಳಿಗೆ ಸಂಗೊಳ್ಳಿ ರಾಯಣ್ಣ ನವರಿಗೆ ಮಾಲಾರ್ಪಣೆ ಮಾಡಿಸಿ ಮುಂದಿನ ಊರಿಗೆ ಹೋಗಲಿಕ್ಕೆ ಅನುವು ಮಾಡಿಕೊಟ್ಟರು. ಸಂಕಲ್ಪರಥಯಾತ್ರೆಯ ದ್ಯೇಯೂದ್ದೇಶಗಳು ಈ ಕೆಳಗಿನಂತಿವೆ.
ಕುಂಬಾರ ಸಮಾಜ ದೇಶ ಸ್ವತಂತ್ರ್ಯವಾಗಿದ್ದಾಗಿನಿಂದ ಇಲ್ಲಿಯವರೆಗೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಇತರ ಎಲ್ಲಾ ಸಮೂದಾಯಗಳಿಗಿಂತಲು ಅತ್ಯಂತ ಹಿಂದುಳಿದಿದೆ, ಕುಂಬಾರ ಸಮಾಜದಲ್ಲಿ ಶಿಕ್ಷಣ ಮತ್ತು ಆರ್ಥಿಕವಾಗಿ ಸ್ವಾವಲಂಬನೆ ಹೊಂದದ ಕಾರಣ ನಾವು ಸಬಲರಾಗಿ ಬೆಳೆಯದೇ ಸಮಾಜ ಹಿಂದುಳಿದಿದೆ. ಇವುಗಳಿಂದ ಹೊರ ಬರಬೇಕಾದರೆ ವಿದ್ಯಾವಂತ ಯುವಕರು, ಬುದ್ಧಿ ಜೀವಿಗಳು, ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ.
ಕಾರ್ಯಕ್ರಮದ ಉದ್ದೇಶಗಳು :
ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅತಿ ಹಿಂದುಳಿದ ಸಮೂದಾಯದ ಬಾಂಧವರನ್ನು ಒಗ್ಗೂಡಿಸಿ ಸ್ಪರ್ಧಾತ್ಮಕವಾಗಿ ಬೆಳವಣಿಗೆ ಹೊಂದಲು ಜನ ಜಾಗೃತಿ ಮೂಡಿಸುವುದು.
ಹಿಂದುಳಿದ ವರ್ಗಗಳಲ್ಲಿ ಅತಿ ಹಿಂದುಳಿದ ಕುಂಬಾರ ಸಮಾಜಕ್ಕೆ ಸರಕಾರಿ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗದ ಕಾರಣ ವಿಶೇಷ ಒಳ ಮಿಸಲಾತಿಗಾಗಿ ಒತ್ತಾಯ.
ರಾಜ್ಯದ ವಿವಿಧ ಉಪನಾಮಗಳಿಂದ ಕರೆಯಲ್ಪಡುವ ಕುಂಬಾರ ಸಮಾಜದವರಿಗೆ ಜಾತಿ ಪ್ರಮಾಣ ಪತ್ರದ ಗೊಂದಲಗಳನ್ನು ನಿವಾರಿಸಿ ಏಕ ರೂಪದ ಜಾತಿ ಪ್ರಮಾಣ ಪತ್ರ ನೀಡಬೇಕಾಗಿ ಒತ್ತಾಯ.
ಸಮಾಜದ ನಿರ್ದಿಷ್ಟವಾದ ಅಂಕಿ ಅಂಶಗಳನ್ನು ಮತ್ತು ಸ್ಥಿತಿಗತಿಗಳ ಬಗ್ಗೆ ಸರಕಾರ ವರದಿ ಸಂಗ್ರಹಿಸಿ ಸಾಮಾಜಿಕವಾಗಿ ಮುಂಚುಣಿಗೆ ತರುವುದರ ಮೂಲಕ ಅಭಿವೃದ್ಧಿ ಹೊಂದಲು ರೂಪರೇಷಗಳನ್ನು ರೂಪಿಸುವುದು.
ಕುಂಬಾರಿಕೆ ಕಲೆಗೆ ಮರುಜೀವ ನೀಡಿ ಕುಂಬಾರರು ತಯಾರಿಸುವ ಮಡಿಕೆಗಳನ್ನು ಸರಕಾರವೇ ಖರೀದಿಸುವುದು ಅಥವಾ ಸರಕಾರವೇ ಮಡಿಕೆ ಮಾರಾಟ ಕೇಂದ್ರಗಳು ತೆರೆದು ಕುಂಬಾರಿಕೆ ವೃತ್ತಿ ಆವಲಂಬಿಸಿರುವ ಕುಟುಂಬಸ್ಥರಿಗೆ ಸಹಾಯ ಹಸ್ತ ನೀಡುವುದು.
ಮಡಿಕೆ ತಯಾರಿಕರಿಗೆ ಕಚ್ಚಾ ವಸ್ತುಗಳನ್ನು ಶುಲ್ಕ ರಹಿತ ಮುಕ್ತವಾಗಿ ಸರಕಾರವೇ ಪೂರೈಸುವುದು.
ಸರಕಾರವು ಆಧುನಿಕ ತಂತ್ರಜ್ಞಾನ ಹಾಗೂ ಯಂತ್ರಗಳ ಮೂಲಕ ಲಾಭದ ಉದ್ಯಮವಾಗಿ ರೂಪಿಸಲು ಮಾರ್ಗಸೂಚಿ ತೈಯಾರಿಸುವುದು.
ರಾಜ್ಯದಲ್ಲಿ ಸರಿ ಸುಮಾರು 20 ರಿಂದ 30 ಲಕ್ಷ ಜನ ಸಂಖ್ಯೆ ಹೊಂದಿದ ಕುಂಬಾರ ಸಮಾಜವನ್ನು ಪ್ರತಿನಿಧಿಸಲು ಹಾಗೂ ಸಮಾಜದ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ರಾಜಕೀಯ ಪ್ರಾತಿನಿಧ್ಯ ದೊರಕಿಲ್ಲ, ಅದಕ್ಕಾಗಿ ಸಮಾಜದ ರಾಜಕೀಯ ಮುಖಂಡರನ್ನು ಗುರುತಿಸಿ ಮುಖ್ಯ ವೇದಿಕೆಗೆ ತಂದು ಸರಕಾರದಲ್ಲಿ ರಾಜಕೀಯವಾಗಿ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯ.
ಈ ಕಾರ್ಯಕ್ರಮದಲ್ಲಿ ಭಾಗಿಯಾದವರು:- ತಾಲೂಕು ಅಧ್ಯಕ್ಷರಾದ ಬಸವರಾಜ್, ಕಾರ್ಯಧ್ಯಕ್ಷರಾದ ರಾಜಶೇಖರ್ ಕುಂಬಾರ್, ಟೈಲರ್ ಬಸಣ್ಣ, ಮಹೇಶ್ ಕೆ.ಜಿ, ಎಂ.ಪಿ ಗಿರೀಶ್, ಮಂಜುನಾಥ್ ಎಂ ಪೊಲೀಸ್, ಮಹಿಳಾ ಸಂಘದ ಅಧ್ಯಕ್ಷರು ಮತ್ತು ಮಹಿಳೆಯರು ಹಾಗೂ ಪ್ರಭಾಕರ್, ಮೋಹನ್ ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದಾರು.