ಪರಿಗಣಿಸಲು ಸಿಇಓ ಸೂಚನೆ

ದಾವಣಗೆರೆ ಫೆ. 19
ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಆಸಕ್ತಿ ವಹಿಸಿ,
ಜವಾಬ್ದಾರಿಯಿಂದ ಆರೋಗ್ಯ ಕಾರ್ಯಕರ್ತರ ಮತ್ತು
ಫ್ರಂಟ್‍ಲೈನ್ ಸಿಬ್ಬಂದಿಗಳ ಮನವೊಲಿಸಿ ಕೊರೊನಾ ಲಸಿಕೆ
ಹಾಕಿಸುವ ಮೂಲಕ ನಿಗದಿತ ಗುರಿ ಸಾಧಿಸಬೇಕು. ಕೊರೊನಾ
ಲಸಿಕಾಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ
ದಿನಗಳಲ್ಲಿ ಲಸಿಕಾಕರಣ ಹೆಚ್ಚಿಸಬೇಕೆಂದು ಜಿ.ಪಂ. ಸಿಇಓ ಡಾ.ವಿಜಯ
ಮಹಾಂತೇಶ ದಾನಮ್ಮನವರ್ ಅಧಿಕಾರಿಗಳಿಗೆ ಸೂಚನೆ
ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ
ಕೋವಿಡ್ ಲಸಿಕೆ ಟಾಸ್ಕ್‍ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು
ಮೊದಲನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ
ನೀಡಲಾಗುತ್ತಿರುವ ಮೊದಲನೇ ಡೋಸ್‍ಗೆ ಫೆ.25 ಕಡೆಯ
ದಿನವಾಗಿದೆ ಹಾಗೂ ಫ್ರಂಟ್‍ಲೈನ್ ವರ್ಕರ್ಸ್(ಪೋಲಿಸ್, ಕಂದಾಯ,
ನಗರ ಸ್ಥಳೀಯ ಸಂಸ್ಥೆಗಳು, ಇತರೆ)ಗೆ ಮಾರ್ಚ್ 6
ಕಡೆಯ ದಿನವಾಗಿದೆ. ಇಷ್ಟರೊಳಗೆ
ನೋಂದಾಯಿಸಿಕೊಂಡವರೆಲ್ಲರಿಗೆ ಲಸಿಕೆ ನೀಡುವ ಕೆಲಸ
ಆಗಬೇಕು ಎಂದರು.
ದಾವಣಗೆರೆಯಲ್ಲಿ ಪ್ರಗತಿ ಕಡಿಮೆ ಇದೆ. ಜಿಲ್ಲೆ ಲಸಿಕಾಕರಣ
ಕವರೇಜ್‍ನಲ್ಲಿ 13 ನೇ ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ಒಟ್ಟು 18,920
ಜನರು ನೋಂದಾಯಿಸಿಕೊಂಡಿದ್ದು, 10047 ಮೊದಲನೇ ಡೋಸ್,
1590 ಎರಡನೇ ಡೋಸ್ ಲಸಿಕೆ ಪಡೆದು, ಭಾಗಶಃ ಲಸಿಕೆ(1ನೇ
ಡೋಸ್) ಶೇ.53.1 ಆಗಿದೆ. ಮೊದಲನೇ ಹಂತದ
ನೋಂದಾವಣೆಯಲ್ಲಿ ಆಗಿರುವ ನಕಲುಗಳನ್ನು
ರದ್ದುಪಡಿಸುವ ಕೆಲಸ ಪ್ರಗತಿಯಲ್ಲಿದೆ ಎಂದರು.
ಹೋಂ ಗಾಡ್ರ್ಸ್ ಶೇ 14.8, ಪೊಲೀಸ್ ಶೇ.38.8, ನಗರ
ಸ್ಥಳೀಯ ಸಂಸ್ಥೆಗಳಲ್ಲಿ ಶೇ 22 ಮತ್ತು ಕಂದಾಯ
ಇಲಾಖೆಯಲ್ಲಿ ಶೇ.12.6 ಪ್ರಗತಿ ಆಗಿದೆ. ಹಾಗೂ ಬಾಪೂಜಿ ಮತ್ತು
ಎಸ್‍ಎಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರಗತಿ ಕಡಿಮೆ ಇದೆ. ಇಲಾಖೆಗಳ
ಹಾಗೂ ಸಂಸ್ಥೆಗಳ ಮುಖ್ಯಸ್ಥರು ಕಡೆಯ

ದಿನಾಂಕದೊಳಗೆ ಗುರಿ ಸಾಧಿಸಲು ಪರಿಣಾಮಕಾರಿ ಕ್ರಮ
ಕೈಗೊಳ್ಳಬೇಕು. ವೈದ್ಯಕೀಯ ಕ್ಷೇತ್ರದಲ್ಲಿದ್ದವರನ್ನೇ
ಮನವೊಲಿಸದಿದ್ದರೆ ಹೇಗೆ? ವೈದ್ಯರೇ ಉತ್ತಮ
ರಾಯಭಾರಿಗಳಾಗಿದ್ದು ತಮ್ಮ ವೈದ್ಯಕೀಯ ವಿದ್ಯಾರ್ಥಿಗಳು,
ಸಿಬ್ಬಂದಿಗೆ ಮನವೊಲಿಸಿ ಲಸಿಕೆ ಕೊಡಿಸಬೇಕೆಂದರು.
ಬಾಪೂಜಿ ಮೆಡಿಕಲ್ ಕಾಲೇಜಿನ ಡಾ.ಬಾಲು ಮಾತನಾಡಿ ತಮ್ಮ
ಸಂಸ್ಥೆಯಿಂದ ನೋಂದಾಯಿಸಲಾದ 3 ಸಾವಿರ ಸಂಖ್ಯೆಯಲ್ಲಿ 600
ವಿದ್ಯಾರ್ಥಿಗಳಿದ್ದಾರೆ. ಈಗ ಪರೀಕ್ಷೆ ನಡೆಯುತ್ತಿರುವುದರಿಂದ
ವೈದ್ಯಕೀಯ ವಿದ್ಯಾರ್ಥಿಗಳು ಲಸಿಕೆ ತೆಗೆದುಕೊಳ್ಳಲು
ಮುಂದೆ ಬರುತ್ತಿಲ್ಲ. ಪರೀಕ್ಷೆ ಅವರ ಮೊದಲ
ಆದ್ಯತೆಯಾಗಿದ್ದು, ಮಾರ್ಚ್ ಅಂತ್ಯದವರೆಗೆ ಪರೀಕ್ಷೆಗಳು
ನಡೆಯಲಿವೆ. ಇನ್ನುಳಿದಂತೆ 300 ಜನ ಆಸಕ್ತಿ ಹೊಂದದ್ದವರ
ಹೆಸರು ಪೋರ್ಟಲ್‍ನಲ್ಲಿ ಬಂದಿಲ್ಲ. ಜೊತೆಗೆ ಸಾಫ್ಟ್‍ವೇರ್‍ನಲ್ಲಿ
ತಾಂತ್ರಿಕತೊಂದರೆಗಳು ಕಾಣಿಸುತ್ತಿವೆ. ಇದನ್ನು
ಸರಿಪಡಿಸಬೇಕು. ಜೊತೆಗೆ ಆಸಕ್ತರನ್ನು ಸೇರಿಸಲು ಅವಕಾಶ
ಮಾಡಿಕೊಡಬೇಕು. ಹಾಗೂ ಪರೀಕ್ಷೆ ಇರುವ ವಿದ್ಯಾರ್ಥಿಗಳಿಗೆ
ಪರೀಕ್ಷೆ ಮುಗಿದ ಮೇಲೆ ಲಸಿಕೆ ಹಾಕಿಸಿಕೊಳ್ಳಲು ಕಾಲಾವಕಾಶ
ನೀಡಬೇಕೆಂದರು.
ಎಸ್‍ಎಸ್ ಮೆಡಿಕಲ್ ಕಾಲೇಜಿನ ಡಾ.ಅಶ್ವಿನ್ ಮಾತನಾಡಿ, ಸಾಫ್ಟ್‍ವೇರ್‍ನಲ್ಲಿ
2ನೇ ಡೋಸ್‍ಗೆ ಅಲಾಟ್ ಆಗುವಲ್ಲಿ ತಾಂತ್ರಿಕ ದೋಷವಿದೆ.
ಜೊತೆಗೆ ಪ್ರಮಾಣ ಪತ್ರ ಜನರೇಟ್ ಆಗುತ್ತಿಲ್ಲ. ಈ ಸಾಫ್ಟ್‍ವೇರ್
ಸಮಸ್ಯೆಯನ್ನು ಸರಿಪಡಿಸಬೇಕು. ಹಾಗೂ ವಿದ್ಯಾರ್ಥಿಗಳಿಗೆ
ಪರೀಕ್ಷೆ ನಡೆಯುತ್ತಿದ್ದು ಇವರಿಗೆ ನಂತರ ಅವಕಾಶ
ಕೊಡಬೇಕು. ಇತರೆ ಸಿಬ್ಬಂದಿ ಮತ್ತು ಡಿ ಗ್ರೂಪ್ ಸಿಬ್ಬಂದಿಗಳಿಗೆ
ವೈಯಕ್ತಿಕವಾಗಿ ಕರೆದು ಮನವೊಲಿಸಿದರೂ ಲಸಿಕೆಗೆ ಅವರು
ಮುಂದಾಗುತ್ತಿಲ್ಲವೆಂದರು.
ವಿವಿಧ ತಾಲ್ಲೂಕುಗಳ ತಾಲ್ಲೂಕು ವೈದ್ಯಾಧಿಕಾರಿಗಳಿಂದ
ಲಸಿಕಾ ಕರಣದ ಪ್ರಗತಿ ಮಾಹಿತಿ ಪಡೆದ ಸಿಇಓ, ದಾವಣಗೆರೆಯಲ್ಲಿ
ಶೇ.77, ಜಗಳೂರು ಶೇ.70, ಹರಿಹರ ಶೇ.51, ಹೊನ್ನಾಳಿ ಶೇ.75,
ಚನ್ನಗಿರಿಯಲ್ಲಿ ಶೇ.77 ಪ್ರಗತಿ ಆಗಿದೆ. ಅಧಿಕಾರಿಗಳು
ಸಿಬ್ಬಂದಿಗಳ ಮನವೊಲಿಸಿ ಶೇ.100 ಪ್ರಗತಿ ಸಾಧಿಸಲು ಪರಿಣಾಮಕಾರಿ
ಕ್ರಮಗಳನ್ನು ಅನುಸರಿಸಬೇಕು ಎಂದರು.
ಚಿಗಟೇರಿ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್‍ಗೆ ಒಪ್ಪಿಗೆ ಪತ್ರ
ನೀಡಬೇಕೆಂದು ಕೆಲವರು ಲಸಿಕೆಗೆ ಮುಂದಾಗುತ್ತಿಲ್ಲ. ಈ ಬಗ್ಗೆ
ಅಧೀಕ್ಷಕರು ಲಸಿಕೆಯ ಬಗ್ಗೆ ಭಯ ಹೋಗಲಾಡಿಸಿ ಲಸಿಕೆ
ಹಾಕಿಸಲು ಕ್ರಮ ವಹಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ
ಉಪನಿರ್ದೇಶಕರು ಅಂಗನವಾಡಿ ಸೂಪರ್‍ವೈಸರ್,
ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ತಿಳಿ ಹೇಳಿ
ಲಸಿಕೆ ಕೊಡಿಸಬೇಕು. ಅಂಗನವಾಡಿ ಮತ್ತು ಆಶಾ
ಕಾರ್ಯಕರ್ತೆಯರು ಶೇ.80 ಲಸಿಕೆ ಪಡೆದರೂ
ಇನ್ನುಳಿದವರು ಪಡೆಯಬೇಕು. ಅವರೇ ಪಡೆಯದಿದ್ದರೆ
ಅಂಗನವಾಡಿ ಶುರುವಾಗುವುದು ಹೇಗೆ ಎಂದ ಅವರು ಡಿಡಿ
ಯವರು ಸಂಬಂಧಿಸಿದವರ ಸಭೆ ಕರೆದು ತಿಳಿಸಿ ಹೇಳಬೇಕು.
ಲಸಿಕೆಯ ಗಂಭೀರತೆಯನ್ನು ಎಲ್ಲರೂ ಅರಿತು ಲಸಿಕೆ
ಪಡೆಯಬೇಕೆಂದರು.

ಸರ್ಕಾರಿ ಸಂಸ್ಥೆಗಳಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಅದೇ ರೀತಿ
ಖಾಸಗಿ ಮೆಡಿಕಲ್ ಕಾಲೇಜು ಮತ್ತು ಸಂಸ್ಥೆಗಳಲ್ಲಿ
ಪ್ರಗತಿಯಾಗಬೇಕು. ಎಲ್ಲೆಲ್ಲಿ ಅಧಿಕಾರಿಗಳು ಹೆಚ್ಚು ಶ್ರಮ
ವಹಿಸಿ ಕೆಲಸ ಮಾಡಿದ್ದಾರೋ ಅಲ್ಲಿ ಉತ್ತಮ ಪ್ರಗತಿ
ಕಂಡುಬಂದಿದೆ. ಪ್ರಗತಿ ಕಡಿಮೆ ಇರುವಲ್ಲಿ ಅಧಿಕಾರಿಗಳು
ಸಮರ್ಪಕವಾಗಿ ಕೆಲಸ ಮಾಡಿಲ್ಲವೆನ್ನಬಹುದಾಗಿದ್ದು, ಈಗಿನಿಂದಲೇ
ಅಧಿಕಾರಿಗಳು, ಮುಖ್ಯಸ್ಥರು ತಮ್ಮ ವ್ಯಾಪ್ತಿಯ ಲಸಿಕಾಕರಣಕ್ಕೆ
ಚುರುಕು ಮುಟ್ಟಿಸಬೇಕು. ಫೆ.24 ಮತ್ತು ಮಾರ್ಚ್ 6
ರೊಳಗೆ ಆರೋಗ್ಯ ಮತ್ತು ಫ್ರಂಟ್‍ಲೈನ್ ವರ್ಕರ್ಸ್
ಮೊದಲನೇ ಡೋಸ್ ಸಂಪೂರ್ಣವಾಗುವಂತೆ ಕ್ರಮ
ಕೈಗೊಳ್ಳಬೇಕು. ಹಾಗೂ ಲಸಿಕೆಯನ್ನು ವ್ಯರ್ಥ
ಮಾಡದಂತೆ ಕ್ರಮ ವಹಿಸಬೇಕು ಎಂದರು.
ಎಎಸ್‍ಪಿ ರಾಜೀವ್ ಮಾತನಾಡಿ, ಈ ನಡುವೆ ಪೊಲೀಸರಿಗೆ ಬಂದೋಬಸ್ತ್
ಕಾರ್ಯ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಪ್ರಗತಿ ಸ್ವಲ್ಪ
ಕಡಿಮೆಯಾಗಿದೆ. ಇಂದಿನಿಂದ ಲಸಿಕಾಕರಣ ಚುರುಕಾಗಿದ್ದು ಇಂದು
228 ಪೊಲೀಸ್ ಸಿಬ್ಬಂದಿ ಲಸಿಕೆ ಪಡೆದಿದ್ದು, ನಿಗದಿತ ಗುರಿ
ಸಾಧಿಸಲಾಗುವುದು ಎಂದರು.
ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ಕೋವಿಡ್ ಲಸಿಕೆ
ಸಾಫ್ಟ್‍ವೇರ್ ದೇಶಾದ್ಯಂತ ಒಂದೇ ಆಗಿದ್ದು, ಎಲ್ಲೆಡೆ ಸಾಫ್ಟ್‍ವೇರ್
ಕುರಿತು ಕೆಲವು ಸಮಸ್ಯೆ ಇದ್ದು, ರಾಜ್ಯ ಸರ್ಕಾರ ಈ ಬಗ್ಗೆ
ಕೇಂದ್ರದ ಗಮನ ಸೆಳೆದಿದೆ. ಇದರ ಹೊರತಾಗಿ ಸರ್ಕಾರಿ
ಸಂಸ್ಥೆಗಳು, ಪ್ಯಾರಾಮೆಡಿಕಲ್, ಅಂಗನವಾಡಿ, ಆಶಾ ಕಾರ್ಯಕರ್ತ
ಲಸಿಕಾಕರಣದಲ್ಲಿ ಸಾಕಷ್ಟು ಪ್ರಗತಿ ಇದೆ. ಆದರೆ ಕೆಲವರು ಲಸಿಕೆ
ಪಡೆಯಲು ಹಿಂಜರಿಯುತ್ತಿದ್ದು ಅವರ ಮನವೊಲಿಸುವ
ಪ್ರಯತ್ನ ಮಾಡಲಾಗುತ್ತಿದೆ. ಇನ್ನು ಖಾಸಗಿ ಮೆಡಿಕಲ್
ಕಾಲೇಜಿನ ಪಟ್ಟಿಯನ್ನು ನೀಡಿ, ಹೊಸ ಸೇರ್ಪಡೆ ಮತ್ತು
ತಾಂತ್ರಿಕ ಸಮಸ್ಯೆಗಳನ್ನು ನಿರ್ವಹಿಸಲು
ಪ್ರಯತ್ನಿಸಲಾಗುವುದು ಎಂದರು.
ತೀವ್ರತರ ಮಿಷನ್ ಇಂದ್ರಧನುಷ್ 3.0 : ಸಾರ್ವತ್ರಿಕ ಲಸಿಕೆ
ಕಾರ್ಯಕ್ರಮದಲ್ಲಿ ಬಿಟ್ಟು ಹೋದ ಮಕ್ಕಳು ಮತ್ತು
ಗರ್ಭಿಣಿಯರನ್ನು ಗುರುತಿಸಿ ಲಸಿಕೆ ಹಾಕಿಸುವ
ತೀವ್ರಗೊಂಡ ಇಂದ್ರಧನುಷ್ ಲಸಿಕಾ ಅಭಿಯಾನವನ್ನು
ಫೆಬ್ರವರಿ ಮತ್ತು ಮಾರ್ಚ್ ಮಾಹೆಯ 22, 23, 24 ಮತ್ತು 26
ರಂದು ಏರ್ಪಡಿಸಲಾಗಿದ್ದು ಈ ಲಸಿಕಾ ಕಾರ್ಯಕ್ರಮವನ್ನು
ಯಶಸ್ವಿಗೊಳಿಸಬೇಕೆಂದು ಸಿಇಓ ತಿಳಿಸಿದರು.
ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ರಾಜ್ಯದಲ್ಲಿ
ಇಂಟೆನ್ಸಿಫೈಡ್ ಮಿಷನ್ 3.0 ಕಾರ್ಯಕ್ರಮದಲ್ಲಿ ರಾಜ್ಯದ 13
ಜಿಲ್ಲೆಗಳ ಪೈಕಿ ದಾವಣಗೆರೆಯೂ ಒಂದಾಗಿದೆ. ಈ
ಕಾರ್ಯಕ್ರಮದಲ್ಲಿ ಲಸಿಕೆಗಳಾದ ಡಿಟಿಪಿ, ಮೀಸಲ್ಸ್, ಟಿಟಿ, ಬಿಸಿಜಿ,
ರುಬೇಲ್ಲಾ ಸೇರಿದಂತೆ ಸಾರ್ವತ್ರಿಕೆ ಲಸಿಕೆಗಳನ್ನು
ಹಾಕಿಸಿಕೊಳ್ಳುವಲ್ಲಿ ಬಿಟ್ಟುಹೋದ 2 ವರ್ಷದೊಳಗಿನ ಮಕ್ಕಳು
ಮತ್ತು ಗರ್ಭಿಣಿಯನ್ನು ಗುರುತಿಸಿ ಈ ಲಸಿಕೆಗಳನ್ನು
ನೀಡಲಾಗುವುದು.
ಈ ಲಸಿಕಾ ಕಾರ್ಯಕ್ರಮವನ್ನು ಫೆಬ್ರವರಿ ಮತ್ತು ಮಾರ್ಚ್
ಮಾಹೆಗಳ 22, 23, 24 ಮತ್ತು 26 ನೇ ದಿನಾಂಕಗಳಂದು
ದಾವಣಗೆರೆ ಮತ್ತು ಹರಿಹರ ನಗರಗಳ ಈಗಾಗಲೇ

ಗುರುತಿಸಲಾದ ಸ್ಥಳಗಳಲ್ಲಿ ನಡೆಸಲಾಗುವುದು.
ಕೋವಿಡ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಸಿಕಾಕರಣದಲ್ಲಿ ಶೇ.26
ಇಳಿಕೆ ಕಂಡು ಬಂದಿದ್ದು, ಇದನ್ನು ಸರಿದೂಗಿಸಲು ಮತ್ತು
ಲಸಿಕಾಕರಣದಲ್ಲಿ ಶೇ.90 ಗುರಿ ಸಾಧಿಸುವ ಉದ್ದೇಶದಿಂದ ಈ
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಾವಣಗೆರೆ ಮತ್ತು ಹರಿಹರ ನಗರಗಳ ವಲಸೆ ಪ್ರದೇಶ,
ಕೊಳಚೆ ಪ್ರದೇಶಗಳಲ್ಲಿ ಲಸಿಕೆ ಬಿಟ್ಟು ಹೋದ ಮಕ್ಕಳು
ಮತ್ತು ಗರ್ಭಿಣಿಯರನ್ನು ಗುರುತಿಸಿ ಮೈಕ್ರೊ
ಯೋಜನೆ ತಯಾರಿಸಿದ್ದು ಈ ಪ್ರಕಾರ ಲಸಿಕೆಗಳನ್ನು
ನೀಡಲಾಗುವುದು ಎಂದರು.
ಈ ಕಾರ್ಯಕ್ರಮದ ಉಪಯೋಗವನ್ನು ಮಕ್ಕಳು
ಮತ್ತು ಮಹಿಳೆಯರು ಪಡೆದುಕೊಂಡು ಲಸಿಕೆಯಿಂದ
ತಡೆಯಬಹುದಾದ ರೋಗಗಳನ್ನು ತಡೆದು ಸುಧಾರಣೆ
ತರಬಹುದಾಗಿದೆ. ಆದ ಕಾರಣ ಗುರುತಿಸಲಾದ ಗುಂಪಿನನವರು
ಈ ತಿಂಗಳ ಮತ್ತು ಮಾರ್ಚ್ ಮಾಹೆಯ 22, 23, 24 ಮತ್ತು 26
ರಂದು ಲಸಿಕೆ ಪಡೆಯಬೇಕು. ಹಾಗೂ ಶೇ.90 ಲಸಿಕಾಕರಣಕ್ಕೆ
ಸಹಕರಿಸಬೇಕೆಂದರು.
ಇದೇ ವೇಳೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸಿಇಓ ಡಾ.ವಿಜಯ
ಮಹಾಂತೇಶ ದಾನಮ್ಮನವರ್, ಡಿಹೆಚ್‍ಓ ಡಾ.ನಾಗರಾಜ್ ಸೇರಿದಂತೆ
ಅಧಿಕಾರಿಗಳು ತೀವ್ರತರವಾದ ಮಿಷನ್ ಇಂದ್ರಧನುಷ್ 3.0
ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು.
ಸಭೆಯಲ್ಲಿ ಡಿಹೆಚ್‍ಓ ಡಾ.ನಾಗರಾಜ್, ಚಿಗಟೇರಿ ಆಸ್ಪತ್ರೆ
ಅಧೀಕ್ಷಕ ಡಾ.ಜಯಪ್ರಕಾಶ್, ಜಿಲ್ಲಾ ಮಟ್ಟದ ಕಾರ್ಯಕ್ರಮ
ಅನುಷ್ಟಾನಾಧಿಕಾರಿಗಳಾದ ಡಾ.ಗಂಗಾಧರ್, ಡಾ.ನಟರಾಜ್,
ಡಾ.ರೇಣುಕಾರಾಧ್ಯ, ಡಾ.ಮುರಳೀಧರ, ನಗರಾಭಿವೃದ್ದಿ
ಕೋಶದ ಎಇಇ ವಂಸತಕುಮಾರ್, ಮಹಿಳಾ ಮತ್ತು ಮಕ್ಕಳ
ಅಭಿವೃದ್ದಿ ಇಲಾಖೆಯ ಡಿಡಿ ವಿಜಯಕುಮಾರ್, ತಾಲ್ಲೂಕು
ವೈದ್ಯಾಧಿಕಾರಿಗಳಾದ ಡಾ.ವೆಂಕಟೇಶ್, ಡಾ.ಪ್ರಭು,
ಡಾ.ಚಂದ್ರಮೋಹನ್, ಡಾ.ಕೆಂಚಪ್ಪ ಇತರೆ ವೈದ್ಯಾಧಿಕಾರಿಗಳು,
ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *