: ನ್ಯಾ.ಗೀತಾ.ಕೆ.ಬಿ
ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು
ವಿಶೇಷವಾದ ಸ್ಥಾನಮಾನಗಳಿಗೆ ಪಾತ್ರರಾಗಿದ್ದರೂ ಒದಗಿ
ಬರುವ ಸಂಕೋಲೆಗಳನ್ನು ಬದಿಗೊತ್ತಿ ಸಾಧನೆ
ಮಾಡುವತ್ತ ಗಮನಹರಿಸಬೇಕು ಎಂದು ಪ್ರಧಾನ ಜಿಲ್ಲಾ
ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು
ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಗೀತಾ.ಕೆ.ಬಿ ತಿಳಿಸಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ,
ತಾಂತ್ರಿಕ ಮತ್ತು ಕಾಲೇಜು ಶಿಕ್ಷಣ ಇಲಾಖೆ, ಮಹಿಳಾ ದೌರ್ಜನ್ಯ
ನಿವಾರಣೆ ಹಾಗು ಅಭಿವೃದ್ಧಿ ಕೋಶ ಮತ್ತು ಇತರೆ ಸಂಘ
ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಾನೂನು ಅರಿವು
ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ದಿನಾಚರಣೆಯನ್ನು
ಕಳೆದ ಒಂದು ಶತಕದಿಂದಲೂ ಆಚರಿಸಲಾಗುತ್ತಿದ್ದು, 1911
ರಲ್ಲಿ ಡೆನ್ಮಾರ್ಕ್, ಆಸ್ಟ್ರಿಯ, ಜರ್ಮನ್, ಸ್ವಿಡ್ಜರ್‍ಲ್ಯಾಂಡ್
ದೇಶಗಳಲ್ಲಿ ದಶಲಕ್ಷಗಟ್ಟಲೇ ಜನರು ಒಂದೆಡೆ ಸೇರುವ
ಮೂಲಕ ಮಹಿಳಾ ದಿನಾಚರಣೆಯನ್ನು ಆರಂಭಿಸಿದರು.
ಅಂತರಾಷ್ಟ್ರೀಯ ಮಹಿಳೆಯರ ದಿನವನ್ನು ಮೊದಲ ಬಾರಿಗೆ
ಕೂಲಿ ಚಳುವಳಿಯ ಮೂಲಕ ಉತ್ತರ ಅಮೆರಿಕ ಮತ್ತು
ಯೂರೋಪ್ ದೇಶಗಳಲ್ಲಿ ಆಚರಿಸಲಾಯಿತು. ಕೆಲವೇ
ರಾಷ್ಟ್ರಗಳಿಗೆ ಸೀಮಿತವಾಗಿದ್ದ ಈ ದಿನಕ್ಕೆ ಸಂಯುಕ್ತ
ರಾಷ್ಟ್ರಗಳು ಒಗ್ಗೂಡಿ 1977 ರಲ್ಲಿ ವಿಶ್ವಸಂಸ್ಥೆ ಮೂಲಕ
ಅಧಿಕೃತ ಅನುಮೋದನೆ ನೀಡಿ ಮಾರ್ಚ್ 8 ಅನ್ನು
ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸುವಂತೆ
ಘೋಷಿಸಿತು.
ಅಂದಿನ ದಿನಗಳಲ್ಲಿ ಮಹಿಳೆಯರಿಂದ ಪುರುಷರಿಗಿಂತ
ಹೆಚ್ಚಾಗಿ ದುಡಿಸಿಕೊಂಡು ಕಡಿಮೆ ವೇತನ ನೀಡಿ, ಕೀಳಾಗಿ
ಕಾಣಲಾಗುತ್ತಿತ್ತು. ಶೋಷಣೆ ಮಾಡುತ್ತಿದ್ದರು. ಇದರಿಂದ
ಬೇಸತ್ತ ಮಹಿಳೆಯರು ಪ್ರಪಂಚದಲ್ಲಿ ಮಹಿಳೆಯರ
ಅಸ್ತಿತ್ವ ಉಳಿಯಬೇಕಾದರೆ ಸಂಘಟಿತರಾಗಬೇಕು. ಸ್ತ್ರೀ ಅಬಲೆ
ಅಲ್ಲ ಸಬಲೆ. ಹೆಣ್ಣಿನ ಅಸ್ತಿತ್ವವನ್ನು ಮಹಿಳೆಯರೇ
ಉಳಿಸಬೇಕು ಎಂದು ಮಹಿಳೆಯರ ಮತದಾನಕ್ಕೆ, ಸಮಾನ
ಕೆಲಸಕ್ಕೆ, ಸಮಾನ ವೇತನಕ್ಕಾಗಿ ರಾಷ್ಟ್ರದಾದ್ಯಂತ ಪ್ರತಿಭಟನೆ
ನಡೆಸಿದರು. ವೇದ
ಕಾಲದಲ್ಲಿರದ ಲಿಂಗ ತಾರತಮ್ಯವು ನಂತರದ ಪುರುಷ
ಪ್ರಧಾನ ಸಮಾಜದಲ್ಲಿ ತನ್ನ ಅಸ್ತಿತ್ವ ಪಡೆದು
ಮಹಿಳೆಯರನ್ನು ಹತ್ತಿಕ್ಕಲು ಆರಂಭಿಸಿತು. ಪುರುಷ
ಪ್ರಧಾನ ಸಮಾಜವು ಸ್ತ್ರೀ ಸಮಾನತೆಯನ್ನು
ಕಸಿದುಕೊಂಡು ಅತೀ ಹೆಚ್ಚು ಶೋಷಣೆಗೆ ಒಳಪಡಿಸಿ,
ದೌರ್ಜನ್ಯವೆಸಗಿತು. ಇಂತಹ ಧಾರುಣ ಸ್ಥಿತಿಯಲ್ಲಿ ಅಕ್ಕಮಹಾದೇವಿ
ಸೇರಿದಂತೆ ಎಲ್ಲಾ ಶಿವಶರಣೆಯರು ಕ್ರಾಂತಿಕಾರಿ
ಕಹಳೆಯನ್ನು ಊದಿ, ಆಧ್ಯಾತ್ಮದತ್ತ ಹೆಜ್ಜೆ ಹಾಕಿದರು.
ಕಳೆದ 20
ವರ್ಷಗಳಲ್ಲಿ ಅನೇಕ ಬದಲಾವಣೆಗಳು ಕಂಡುಬಂದಿದೆ.
ಕಾನೂನುಗಳು ಸೇರಿದಂತೆ ಸರ್ಕಾರವು ಮಹಿಳೆಯರಿಗಾಗಿ
ಎಲ್ಲಾ ಸ್ತರಗಳಲ್ಲೂ ಶೇ.33 ರಷ್ಟು ಮೀಸಲಾತಿ ಒದಗಿಸಿದ್ದು,
ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಎಲ್ಲಾ
ಕ್ಷೇತ್ರಗಳಲ್ಲೂ ಪುರುಷರಿಗಿಂತ ಯಾವುದರಲ್ಲೂ
ಕಡಿಮೆಯಿಲ್ಲ ಎಂದು ಸಾಬೀತುಪಡಿಸುತ್ತಿದ್ದಾಳೆ. ಮಾನಸಿಕವಾಗಿ
ಹಾಗೂ ದೈಹಿಕವಾಗಿ ಪುರುಷನೊಂದಿಗೆ ಪೈಪೋಟಿ
ನಡೆಸುತ್ತಿದ್ದಾಳೆ. ಇಡೀ ಕುಟುಂಬದ ಜವಾಬ್ಧಾರಿಯನ್ನು
ವಹಿಸಿಕೊಳ್ಳುತ್ತಿದ್ದಾಳೆ ಎಂದರು. ಸರ್ಕಾರಿ
ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ
ಪ್ರೊ.ತೂ.ಕ.ಶಂಕರಯ್ಯ ಮಾತನಾಡಿ,
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮಹಿಳೆಯರನ್ನು
ಕುರಿತು ಸ್ತ್ರೀ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು
ಮನುಸ್ಮøತಿಯು ವಿಧಿಸಿದ ಕಟ್ಟುಪಾಡು ವೈಜ್ಞಾನಿಕ
ಯುಗದಲ್ಲೂ ಮುಂದುವರೆಯುತ್ತಿರುವುದು
ದುರಂತ. ಆದರೆ ಈಗ ಕಾಲ ಬದಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ
ಸಿಕ್ಕಿದೆ. ಭಾರತೀಯ ನಾರಿ ಈಗ ಪುರುಷನಿಗೆ ಸಮಾನಳು.
ಹೆಣ್ಣು-ಗಂಡು ಸರಿಸಮಾನರೆಂದು ತಾತ್ವಿಕವಾಗಿ ಒಪ್ಪಿಕೊಂಡಿರುವ
ಅಂಶವಾಗಿದೆ ಎಂದರು.
ಪುರುಷನ ಪ್ರತೀ ಸಾಧನೆಯ ಹಿಂದೆ ಹೆಣ್ಣಿರುತ್ತಾಳೆ.
ಮಹಿಳೆಯಿಲ್ಲದೇ ಗಂಡು ಪರಿಪೂರ್ಣನಾಗಲಾರ. 12ನೇ
ಶತಮಾನದಲ್ಲಿ ಆಯ್ದಕ್ಕಿ ಲಕ್ಕಮ್ಮ ತನ್ನೆಲ್ಲಾ ಆಸೆ
ಆಕಾಂಕ್ಷೆಗಳನ್ನು ಬದಿಗೊತ್ತಿ ತನ್ನ ಗಂಡನನ್ನು ತಿದ್ದುವ
ಮೂಲಕ ಕಾಯಕ ನಿಷ್ಠೆಯನ್ನು ಬೆಳೆಸುತ್ತಾಳೆ. ಇಂದಿನ
ಭ್ರಷ್ಟಾಚಾರ ಯುಗದಲ್ಲಿ ಆಯ್ದಕ್ಕಿ ಲಕ್ಕಮ್ಮ ಸಮಾಜಕ್ಕೆ
ಮಾದರಿಯಾಗುತ್ತಾಳೆ. ತನ್ನ ಮನೆಯವರನ್ನು ತಿದ್ದುವ
ಮೂಲಕ ಸಂಸಾರದ ಆರ್ಥಿಕ ಸ್ಥಿತಿಯನ್ನು
ಸುಧಾರಿಸುತ್ತಿದ್ದಾಳೆ. ಪ್ರಸ್ತುತ ದಿನಮಾನಗಳಲ್ಲಿ
ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ
ಮುನ್ನುಗ್ಗುತ್ತಿದ್ದು, ಆಕೆಯನ್ನು ಕೇವಲ
ಗೌರವಿಸುವುದಲ್ಲದೇ ಸರಿಸಮಾನವಾಗಿ ಕಾಣುವ ಮನಸ್ಥಿತಿ
ಬೆಳೆಸಿಕೊಳ್ಳಬೇಕು ಎಂದರು. ಪ್ರಧಾನ ಹಿರಿಯ ಸಿವಿಲ್
ನ್ಯಾಯಧೀಶರು ಹಾಗೂ ಮುಖ್ಯನ್ಯಾಯಿಕ
ದಂಡಾಧಿಕಾರಿಗಳಾದ ಪ್ರೀತಿ ಎಸ್. ಜೋಶಿ
ಮಾತನಾಡಿ, ಮಹಿಳೆಯರು ಕಾನೂನುಗಳನ್ನು
ಅರ್ಥಮಾಡಿಕೊಳ್ಳುವ ಮೂಲಕ ಅವುಗಳನ್ನು ಸಮರ್ಥವಾಗಿ
ಬಳಸಿಕೊಳ್ಳಬೇಕು. ಉದ್ಯೋಗಸ್ಥ ಮಹಿಳೆಯರ ಮೇಲಿನ
ದೌರ್ಜನ್ಯ ತಡೆಯಲು ಅನೇಕ ಕಾಯ್ದೆ ಕಾನೂನುಗಳು
ಜಾರಿಯಾಗಿದ್ದು ಮಹಿಳೆಯರು ಅದನ್ನು ದುರುಪಯೋಗ
ಪಡಿಸಿಕೊಳ್ಳಬಾರದು. ನಾವು ಅನಪೇಕ್ಷಿತ ವ್ಯಕ್ತಿಗಳಿಂದ
ತೊಂದರೆಯುಂಟಾದಾಗ ಮಾತ್ರ ಬಳಸಿಕೊಳ್ಳಬೇಕು.
ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು.
ಬಾಲ್ಯವಿವಾಹ, ಮಹಿಳೆಯರ ಮೇಲೆ ಆಗುವ ದೌರ್ಜನ್ಯ,
ಶೋಷಣೆಗಳಂತಹ ಸಂದರ್ಭದಲ್ಲಿ ಕಾನೂನಿನ ಸಹಾಯ
ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ
ಪ್ರಾಧಿಕಾರದ ಸದಸ್ಯರಾದ ಎಲ್.ಹೆಚ್. ಅರುಣ್‍ಕುಮಾರ್, ಹಿರಿಯ
ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ
ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರವೀಣ್
ನಾಯಕ್, ನ್ಯಾಯಾಧೀಶರಾದ ರಶ್ಮೀ ಎಂ.ಮರಡಿ, ಪ್ರಥಮ
ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ನಂದಿನಿ.ಎಂ.ಎನ್, ಸರ್ಕಾರಿ
ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎಸ್.ಸಿ. ಸಂಚಾಲಕ
ಪ್ರೊ.ಟಿ.ವೀರೇಶ್, ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ
ಎಂ.ಎಲ್.ತ್ರೀವೇಣಿ, ಪ್ರೋ.ಭೀಮಣ್ಣ ಸುಣಗಾರ್,
ಡಾ.ಮಹೇಶ್.ಎನ್.ಪಾಟೀಲ್, ಡಾ.ದಾದಾಪೀರ್ ನವೀಲೆಹಾಳ್ ಸೇರಿದಂತೆ
ಮತ್ತಿತರರು ಪಾಲ್ಗೊಂಡಿದ್ದರು.