ಮಂಡನೆ

12.49 ಕೋಟಿ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದ

ಮಹಾಪೌರ ಎಸ್.ಟಿ. ವೀರೇಶ್

ದಾವಣಗೆರೆ ಮಹಾನಗರ ಪಾಲಿಕೆಯ 2021-22ನೇ ಆರ್ಥಿಕ
ವರ್ಷಕ್ಕೆ ಮಹಾಪೌರರಾದ ಎಸ್.ಟಿ. ವೀರೇಶ್ ಅವರು 433.32 ಕೋಟಿ
ರೂ. ಗಳ ಬಜೆಟ್ ಅನ್ನು 12.49 ಕೋಟಿ ರೂ. ಗಳ
ಉಳಿತಾಯದ ನಿರೀಕ್ಷೆಯೊಂದಿಗಿನ ಬಜೆಟ್ ಮಂಡಿಸಿದರು.
ಇಲ್ಲಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ
ಶುಕ್ರವಾರ ನಡೆದ 2020-21 ನೇ ಸಾಲಿನ ಪರಿಷ್ಕೃತ ಹಾಗೂ
2021-22 ನೇ ಸಾಲಿನ ಆಯ-ವ್ಯಯ ಮಂಡನ ಸಾಮಾನ್ಯ
ಸಭೆಯಲ್ಲಿ 1249.60 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿ, ಆಯ-
ವ್ಯಯ ಕುರಿತ ವಿವರಣೆ ನೀಡಿದರು.
ಪಾಲಿಕೆಯಲ್ಲಿ ಪ್ರಸ್ತುತ ಇರುವ ಆರಂಭಿಕ ಶಿಲ್ಕು 8414.50
ಲಕ್ಷ ರೂ.ಗಳ ಜತೆಗೆ ರಾಜಸ್ವ ಸ್ವೀಕೃತಿಯಿಂದ 12710.85 ಲಕ್ಷ
ರೂ, ಬಂಡವಾಳ ಸ್ವೀಕೃತಿಯಿಂದ 9970 ಲಕ್ಷ ರೂ. ಅಸಾಮಾನ್ಯ
ಸ್ವೀಕೃತಿಯಿಂದ 12,234 ಲಕ್ಷ ರೂ. ಸೇರಿದಂತೆ 2020-21ನೇ ಸಾಲಿನಲ್ಲಿ
ಪಾಲಿಕೆಯು ಒಟ್ಟು 43,329.35 ಲಕ್ಷ ರೂಪಾಯಿ ಆದಾಯ
ಕ್ರೊಢೀಕರಿಸುವ ನಿರೀಕ್ಷೆ ಹೊಂದಿದೆ.
ರಾಜಸ್ವ ಪಾವತಿಗಾಗಿ 11431.25 ಲಕ್ಷ ರೂ, ಬಂಡವಾಳ
ಪಾವತಿಗಾಗಿ 14643 ಲಕ್ಷ ಹಾಗೂ ಅಸಾಮಾನ್ಯ ಪಾವತಿಗಾಗಿ 16005.50
ಲಕ್ಷ ಸೇರಿದಂತೆ ಒಟ್ಟು 42079.75 ಲಕ್ಷ ರೂ.ಗಳನ್ನು ಪಾಲಿಕೆ
ಸಿಬ್ಬಂದಿಯ ವೇತನ, ವಿವಿಧ ಅಭಿವೃದ್ಧಿ ಕಾಮಗಾರಿ, ನಾಗರಿಕರಿಗೆ
ವಿವಿಧ ಸೌಲಭ್ಯಗಳನ್ನು ಕಲ್ಪಿಸಿ 1249.60 ಲಕ್ಷ
ರೂಪಾಯಿಗಳನ್ನು ಉಳಿಸುವ ಗುರಿಯನ್ನು ಪಾಲಿಕೆ
ಹಾಕಿಕೊಂಡಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ವಿವಿಧ
ಆದಾಯ ಮೂಲಗಳಾದ ರಾಜಸ್ವ ಅನುದಾನದಡಿಯಲ್ಲಿ ಎಸ್‍ಎಫ್‍ಸಿ
ಮುಕ್ತ ನಿಧಿಯಿಂದ 672 ಲಕ್ಷ ರೂ., ಎಸ್‍ಎಫ್‍ಸಿ ವಿದ್ಯುತ್

ಅನುದಾನದಡಿ 2476 ಲಕ್ಷ ರೂ, ಎಸ್.ಎಫ್.ಸಿ. ವೇತನ
ಅನುದಾನದಡಿಯಲ್ಲಿ 3796 ಲಕ್ಷ ರೂ ಆದಾಯವನ್ನು ನಿರೀಕ್ಷಿಸಿದೆ.
ಹಾಗೂ 15ನೇ ಹಣಕಾಸು ಆಯೋಗ ಅನುದಾನದಡಿಯಲ್ಲಿ
ಕೇಂದ್ರ ಸರ್ಕಾರವು ಸಂಗ್ರಹಿಸುವ ತೆರಿಗೆಗಳಲ್ಲಿ ರಾಜ್ಯ
ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳಿಗೆ 3463 ಲಕ್ಷ ರೂ.
ಅನುದಾನ ಹಂಚಿಕೆ ಮಾಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ
ಕಾಮಗಾರಿಗಳನ್ನು ಕೈಗೊಳ್ಳಲು 2579 ಲಕ್ಷ ರೂ.
ಅನುದಾನವನ್ನು ನಿಗದಿಪಡಿಸಿದೆ.
ಪಾಲಿಕೆಯ ಸ್ವಂತ ಆದಾಯದ ಮೂಲಗಳಾದ ಆಸ್ತಿ
ತೆರಿಗೆಯಿಂದ 2200 ಲಕ್ಷ ರೂ, ವಾಣಿಜ್ಯ ಮಳಿಗೆಗಳ ಬಾಡಿಗೆಯಿಂದ
55 ಲಕ್ಷ ರೂ, ನೀರು ಸರಬರಾಜು ಬಳಕೆದಾರರ ಶುಲ್ಕದಿಂದ 600
ಲಕ್ಷ ರೂ. ನೀರು ಸರಬರಾಜು ಸಂಪರ್ಕ ಶುಲ್ಕದಿಂದ 25 ಲಕ್ಷ
ರೂ., ಒಳಚರಂಡಿ ಸಂಪರ್ಕ ಬಳಕೆದಾರರಿಂದ ಶುಲ್ಕದ
ರೂಪದಲ್ಲಿ 40 ಲಕ್ಷ ರೂ. ಸಂತೆ ಸುಂಕದಿಂದ 50 ಲಕ್ಷ ರೂ.
ಘನತಾಜ್ಯ ನಿರ್ವಹಣೆ ಬಳಕೆದಾರರ ಶುಲ್ಕದಿಂದ 35 ಲಕ್ಷ ರೂ.
ಕಟ್ಟಡ ಪರವಾನಿಗೆ ಶುಲ್ಕದಿಂದ 100 ಲಕ್ಷ ರೂ. ಉದ್ದಿಮೆ
ಪರವಾನಿಗೆ ಶುಲ್ಕದಿಂದ 80 ಲಕ್ಷ, ರಸ್ತೆ ಕಡಿತ ಶುಲ್ಕದಿಂದ 75
ಲಕ್ಷ ರೂ, ಆಸ್ತಿಗಳ ವರ್ಗಾವಣೆ ಮೇಲಿನ ಹೆಚ್ಚುವರಿ ಅಧಿಬಾರ
ಶುಲ್ಕದಿಂದ 50 ಲಕ್ಷ ರೂ. ಅಭಿವೃದ್ಧಿ ಶುಲ್ಕ 60 ಲಕ್ಷ ರೂ.
ಎಸ್.ಎಫ್.ಸಿ ಇತರೆ ಅವತರಣಗಳಡಿ ಎಸ್.ಸಿ.ಎಸ್.ಪಿ ಅಥವಾ ಟಿ.ಎಸ್.ಪಿ
ಕಾರ್ಯಕ್ರಮಕ್ಕೆ 275 ಲಕ್ಷ ರೂ. ಅನುದಾನ ನಿರೀಕ್ಷಿಸಲಾಗಿದೆ.
ಒಟ್ಟಾರೆಯಾಗಿ 2020-21 ನೇ ಸಾಲಿನಲ್ಲಿ ಎಲ್ಲಾ ಸ್ವಂತ
ಮೂಲಗಳಿಂದ ಒಟ್ಟು 3991.85 ಲಕ್ಷ ರೂ. ರಾಜಸ್ವ
ಅನುದಾನಗಳಿಂದ 7219 ಲಕ್ಷ ರೂ. ಬಂಡವಾಳ ಅಥವಾ ವಿಶೇಷ
ಅನುದಾನಗಳಿಂದ 9614 ಲಕ್ಷ ರೂ ಆದಾಯ ಸಂಗ್ರಹಣೆಯ
ಗುರಿ ಹೊಂದಿದ್ದು, ಒಟ್ಟಾರೆಯಾಗಿ 20824.85 ಲಕ್ಷ ರೂ ಆದಾಯ
ಸಂಗ್ರಹಣೆ ಗುರಿ ನಿರೀಕ್ಷಿಸಿದೆ.
ಪಾಲಿಕೆಯ ಆಡಳಿತ ನಿರ್ವಹಣೆಗಾಗಿ 361.75 ಲಕ್ಷ ರೂ,
ಮಾನವ ಸಂಪನ್ಮೂಲ ವೆಚ್ಚಗಳಿಗೆ 3784.50 ಲಕ್ಷ ರೂ,
ಮೂಲಭೂತ ಸೌಕರ್ಯ ಆಸ್ತಿಗಳ ನಿರ್ವಹಣೆ ಮತ್ತು
ದುರಸ್ತಿಗಾಗಿ 750 ಲಕ್ಷ ರೂ. ಹೊರಗುತ್ತಿಗೆ ವೆಚ್ಚಗಳಿಗೆ 685
ಲಕ್ಷ ರೂ. ಉಗ್ರಾಣ ಸಾಮಾಗ್ರಿಗಳ ಖರೀದಿಗಾಗಿ 185 ಲಕ್ಷ ರೂ,
ಇಂಧನ ವೆಚ್ಚಗಳಿಗೆ 3380 ಲಕ್ಷ ರೂ ಅನುದಾನ
ನಿರೀಕ್ಷಿಸಲಾಗಿದೆ.
ಬೆಳೆಯುತ್ತಿರುವ ನಗರದ ಅವಶ್ಯಕತೆಗಳನ್ನು
ಗಮನದಲ್ಲಿರಿಸಿಕೊಂಡು ಹಾಗೂ ಸಾರ್ವಜನಿಕರು ಮತ್ತು
ಸಂಘ ಸಂಸ್ಥೆಗಳೊಂದಿಗೆ ನಡೆದ ಆಯ ವ್ಯಯ ಪೂರ್ವಭಾವಿ
ಸಭೆಗಳಲ್ಲಿ ಬಂದ ಸಲಹೆ ಅಭಿಪ್ರಾಯಗಳನ್ನು
ಗಮನದಲ್ಲಿರಿಸಿಕೊಂಡು ಸ್ಮಶಾನಗಳ ಅಭಿವೃದ್ಧಿಗೆ 200 ಲಕ್ಷ
ರೂ, ಮಾದರಿ ಉದ್ಯಾನವನ ನಿರ್ಮಾಣಕ್ಕೆ 100 ಲಕ್ಷ ರೂ, ಮಾದರಿ
ರಸ್ತೆ ನಿರ್ಮಾಣಕ್ಕೆ 200 ಲಕ್ಷ ರೂ. ಶುದ್ಧ ಕುಡಿಯುವ ನೀರಿನ
ವ್ಯವಸ್ಥೆ ಕಲ್ಪಿಸಲು 25 ಲಕ್ಷ ರೂ. ಪಾಲಿಕೆ ಕಚೇರಿಯನ್ನು
ಹಸುರೀಕರಣಗೊಳಿಸಲು 100 ಲಕ್ಷ ರೂ. ಮಹಿಳೆಯರಿಗಾಗಿ
ಪ್ರತ್ಯೇಕವಾದ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕಾಗಿ 25 ಲಕ್ಷ
ರೂ ಅನುದಾನ ಕಾಯ್ದಿರಿಸಲಾಗಿದೆ.

ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಐ.ಎ.ಎಸ್ ಅಥವಾ ಕೆ.ಎ.ಎಸ್
ಗೆ ಆಯ್ಕೆಯಾಗಲು ತರಬೇತಿ ನೀಡುವ ಉದ್ದೇಶಕ್ಕಾಗಿ 20
ಲಕ್ಷ ರೂ. ಅನಗತ್ಯವಾಗಿ ನಿರ್ಮಿಸಿರುವ ರಸ್ತೆ ಉಬ್ಬುಗಳನ್ನು
ತೆರವುಗೊಳಿಸಲು ಹಾಗೂ ರಸ್ತೆಗಳ ಗುಂಡಿಗಳನ್ನು
ಮುಚ್ಚುವ ಕಾಮಗಾರಿ ಉದ್ದೇಶಕ್ಕೆ 50 ಲಕ್ಷ ರೂ. ನಗರದ
5000 ಬೀಡಾಡಿ ಶ್ವಾನಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಲು
20 ಲಕ್ಷ ಮೀಸಲಿಡಲಾಗಿದೆ. ಇನ್ನೂ ನಗರದ ಬೀಡಾಡಿ
ವರಾಹಗಳಿಗೆ ವರಾಹಶಾಲೆ ನಿರ್ಮಾಣಕ್ಕೆ 35 ಲಕ್ಷ ರೂ. ಪಾಲಿಕೆ
ವ್ಯಾಪ್ತಿಗೆ ಒಳಪಡುವಂತಹ ನಿವೇಶನಗಳಲ್ಲಿ ವಾಣಿಜ್ಯ ಮಳಿಗೆ
ನಿರ್ಮಾಣ ಮತ್ತು ನಿರ್ವಾಹಣೆಯ ಜವಾಬ್ದಾರಿಯನ್ನು ನೀಡಲು
ಉದ್ದೇಶಿಸಲಾಗಿದೆ.
ನಗರ ಅರಣ್ಯೀಕರಣ ಹಾಗೂ ವನ ಮಹೋತ್ಸವ
ಆಚರಿಸುವ ಉದ್ದೇಶಕ್ಕಾಗಿ 50 ಲಕ್ಷ ರೂ., ಪತ್ರಕರ್ತರು
ಹಾಗೂ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಗೆ 10 ಲಕ್ಷ
ರೂ. ಪಾಲಿಕೆ ಒಡೆತನದ ನಿಟ್ಟುವಳ್ಳಿ ಸಮುದಾಯ ಭವನದ
ಮುಂದುವರೆದ ಕಾಮಗಾರಿ ನಿರ್ವಹಿಸಲು 25 ಲಕ್ಷ ರೂ ಹಾಗೂ
ವಾರ್ಡ್ ನಂ. 35ರ ಕೊರಚರಹಟ್ಟಿಯಲ್ಲಿ ಅಪೂರ್ಣಗೊಂಡ
ಸಮುದಾಯ ಭವನವನ್ನು ಪೂರ್ಣಗೊಳಿಸಲು 5 ಲಕ್ಷ ರೂ.,
ಇಂಗು ಗುಂಡಿಗಳ ನಿರ್ಮಾಣಕ್ಕೆ 60 ಲಕ್ಷ ರೂಗಳನ್ನು
ಅಂದಾಜಿಸಲಾಗಿದೆ.
ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ
ಕ್ರೀಡೆಗಳಲ್ಲಿ ಭಾಗವಹಿಸುವ ನಗರದ ಕ್ರೀಡಾಪಟುಗಳಿಗೆ
ಪ್ರವಾಸ ಭತ್ಯೆ, ತಂಗುವಿಕೆ ಭತ್ಯೆ, ಪೆÇ್ರೀತ್ಸಾಹಧನ
ಇತ್ಯಾದಿಗಳನ್ನು ನೀಡಲು 10 ಲಕ್ಷ ರೂ., ನಗರದ ಸ್ವಚ್ಛತೆ
ಕಾಪಾಡದ ನಿವೇಶನ ಮಾಲೀಕರಿಗೆ ದಂಡ ವಿಧಿಸಲಾಗುವುದು.
ಇದರಿಂದ ಪಾಲಿಕೆಯ ಆದಾಯ ಹೆಚ್ಚುವುದಲ್ಲದೇ ನಗರ
ಸೌಂದರೀಕರಣವಾಗುತ್ತದೆ. ಹಾಗೂ ಸಾಂಕ್ರಾಮಿಕ
ರೋಗಗಳನ್ನು ತಡೆಗಟ್ಟಲು 20 ಲಕ್ಷ ರೂ,
ವೃದ್ಧಾಶ್ರಮಗಳಿಗೆ ಪರಿಕರ ವ್ಯವಸ್ಥೆಯನ್ನು ಸರ್ಕಾರದ
ಅನುಮೋದನೆಯೊಂದಿಗೆ ಕಲ್ಪಿಸುವ ಉದ್ದೇಶಕ್ಕಾಗಿ 10 ಲಕ್ಷ
ರೂ. ಅನುದಾನವನ್ನು ಕಾಯ್ದಿರಿಸಲಾಗಿದೆ.
ನಗರದ ಸ್ವಚ್ಛತೆಯನ್ನು ಗಮನದಲ್ಲಿರಿಸಿಕೊಂಡು
ಒಂದು ಬಡಾವಣೆಯನ್ನು ಮಾದರಿ ಬಡಾವಣೆಯಾಗಿ
ಅಭಿವೃದ್ಧಿಪಡಿಸಲು 200 ಲಕ್ಷ ರೂ, ಪಾಲಿಕೆಯ ಖಾಯಂ ಅಧಿಕಾರಿ
ಅಥವಾ ನೌಕರರ ವಸತಿ ಗೃಹ ನಿರ್ವಹಣೆಗೆ 50 ಲಕ್ಷ ರೂ.,
ಉದ್ಯಾನವನಗಳನ್ನು ನಿರ್ವಹಣೆ ಮಾಡಲು ಪರಿಕರಗಳ
ಖರೀದಿಗೆ 10 ಲಕ್ಷ ರೂ. ಡಿಜಿಟಲ್ ನಿರ್ಮಾಣಕ್ಕೆ 50 ಲಕ್ಷ ರೂ, ಪಾಲಿಕೆ
ಒಡೆತನದಲ್ಲಿ ಬರುವ ನಿವೇಶನದಲ್ಲಿ ಒಂದು ಸುಸಜ್ಜಿತವಾದ
ಸಮುದಾಯ ಭವನ ನಿರ್ಮಿಸಲು 150 ಲಕ್ಷ ರೂ. ಬೀದಿ
ದೀಪಗಳ ನಿರ್ವಹಣೆಗೆ 350 ಲಕ್ಷ ರೂ,
ಕೆ.ಹೆಚ್.ಬಿ.ತುಂಗಭದ್ರ ಬಡಾವಣೆ ಅಭಿವೃದ್ಧಿಗೆ 10 ಕೋಟಿ ರೂ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅಭಿವೃದ್ಧಿ ಯೋಜನೆ 25
ಲಕ್ಷ ರೂ. ಅಂದಾಜಿಸಲಾಗಿದೆ.
ಅಂಗವಿಕಲತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಉತ್ತಮ
ಪರಿಕರಗಳನ್ನು ವಿತರಿಸುವ ಉದ್ದೇಶಕ್ಕಾಗಿ 15 ಲಕ್ಷ ರೂ.,
ಪೌರಸನ್ಮಾನ ಕಾರ್ಯಕ್ರಮಕ್ಕೆ 5 ಲಕ್ಷ ರೂ, ಇ-ತ್ಯಾಜ್ಯ

ನಿರ್ವಹಣಾ ಘಟಕಕ್ಕೆ 30 ಲಕ್ಷ ರೂ. ಮಹಾನಗರ ಪಾಲಿಕೆ
ಸದಸ್ಯರುಗಳ ಜ್ಞಾನಾರ್ಜನೆಗಾಗಿ ಅಧ್ಯಯನ ಪ್ರವಾಸಕ್ಕಾಗಿ
30 ಲಕ್ಷ ರೂ., ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಹಾಗೂ ಕಿತ್ತೂರು
ರಾಣಿ ಚೆನ್ನಮ್ಮರವರ ಪ್ರತಿಮೆಗಳ ನಿರ್ಮಾಣಕ್ಕಾಗಿ 50 ಲಕ್ಷ
ರೂ., ಪಾಲಿಕೆಗಳ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ
ಸಾಂಸ್ಕೃತಿಕ ಕೂಟ ಆಯೋಜನೆಗೆ 15 ಲಕ್ಷ ರೂ., ರಾಜ್ಯ ಮಟ್ಟದ
ಪಂದ್ಯಾವಳಿಗಳನ್ನು ಆಯೋಜಿಸಲು, ಕ್ರೀಡಾ
ಪ್ರತಿಭೆಗಳನ್ನು ಗುರುತಿಸಲು, ಮೇಯರ್ ಕಪ್ ಗಾಗಿ 10
ಲಕ್ಷ ರೂ., ಪಾಲಿಕೆಯ ಒಟ್ಟು 549 ಜನ ಪೌರಕಾರ್ಮಿಕರಿಗೆ
ನಗರದ ಆಯ್ದ ನಾಲ್ಕು ಭಾಗಗಳಲ್ಲಿ ವಿಶ್ರಾಂತಿ ಗೃಹ
ನಿರ್ಮಾಣದ ಉದ್ದೇಶಕ್ಕಾಗಿ 30 ಲಕ್ಷ ರೂ., ಪಾಲಿಕೆ
ವ್ಯಾಪ್ತಿಯಲ್ಲಿರುವ ಉದ್ಯಾನವನಗಳು ಹಾಗೂ ಪಾಲಿಕೆ
ಒಡೆತನದ ಖಾಲಿ ನಿವೇಶನಗಳ ಸಂರಕ್ಷಣೆಗೆ 200 ಲಕ್ಷ ರೂ.,
ಯಾಂತ್ರಿಕೃತ ಕಸ ಗೂಡಿಸುವ ಯಂತ್ರಗಳ ಖರೀದಿಗಾಗಿ
130 ಲಕ್ಷ ರೂ., ಬೀದಿ ಬದಿ ವ್ಯಾಪಾರಸ್ಥರ ಕಲ್ಯಾಣನಿಧಿ ಸ್ಥಾಪನೆಗೆ 10
ಲಕ್ಷ ರೂ. ಕಾಯ್ದಿರಿಸಲಾಗಿದೆ.
ಬಜೆಟ್ ಮಂಡನೆಯ ಬಳಿಕ ಸರ್ವ ಸದಸ್ಯರ ಅಭಿಪ್ರಾಯ,
ಸಲಹೆಗಳ ನಂತರ ಮಾತನಾಡಿದ ಮಹಾಪೌರ ಎಸ್.ಟಿ.ವೀರೇಶ್,
ಸ್ವಚ್ಛ ದಾವಣಗೆರೆ, ಕಸ ಹಾಗೂ ಧೂಳು ಮುಕ್ತ ದಾವಣಗೆರೆ
ಕುರಿತಂತೆ ಮೂರು ಅಂಶಗಳನ್ನು
ಉದ್ದೇಶವನ್ನಾಗಿಟ್ಟುಕೊಂಡು ಬಜೆಟ್ ಮಂಡನೆ ಮಾಡಿದ್ದು, ಈ
ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರಗಳನ್ನು
ನೀಡಿದ್ದೇವೆ ಎಂದರು.
ಸ್ವಚ್ಛ ದಾವಣಗೆರೆಗೆ ಈಗಾಗಲೇ ಪೌರಕಾರ್ಮಿಕರು
ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಜಿಲ್ಲೆಯ ಜನಸಂಖ್ಯೆಗೆ
ತಕ್ಕಂತೆ ಪೌರಕಾರ್ಮಿಕರು ಇಲ್ಲ. ಈ ನಿಮಿತ್ತ ಸರ್ಕಾರಕ್ಕೆ ಪತ್ರ
ಬರೆದು ಮನವಿ ಮಾಡುತ್ತೇವೆ. ಪ್ರಸ್ತುತ ಇರುವ
ಪೌರಕಾರ್ಮಿಕರಿಗೆ ಸಹಾಯವಾಗಲು ಯಾಂತ್ರಿಕೃತ ಕಸ
ಗುಡಿಸುವ ಯಂತ್ರಗಳನ್ನು ಖರೀದಿ ಮಾಡುತ್ತಿದ್ದು,
ಇದರಿಂದ ನಗರವನ್ನು ಧೂಳು ಮುಕ್ತ
ಮಾಡುವುದಲ್ಲದೇ, ಕಾರ್ಮಿಕರ ಹೊರೆಯನ್ನು
ಕಡಿಮೆಬಹುದಾಗಿದೆ ಎಂದು ತಿಳಿಸಿದರು.
ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ದಾವಣಗೆರೆಯು
ಇನ್ನು ಒಂದು ವರ್ಷದಲ್ಲಿ 10ನೇ ದರ್ಜೆಯೊಳಗೆ ಬರಬೇಕು
ಹಾಗೂ 2-3 ವರ್ಷದೊಳಗೆ 5 ರಿಂದ 6 ನೇ ರ್ಯಾಂಕ್‍ಗೆ ಬರಬೇಕು
ಎಂಬ ಉದ್ದೇಶದಿಂದ ಕಸಮುಕ್ತ ನಗರವನ್ನಾಗಿ ಮಾಡಲು
ಶ್ರಮಿಸುತ್ತಿದ್ದೇವೆ. ಹಾಗೂ ಕಸಮುಕ್ತ ನಗರಕ್ಕಾಗಿ
ಮೂಲದಲ್ಲೆ ಕಸ ವಿಂಗಡನೆ ಅಗತ್ಯವಾಗಿದ್ದು, ಮನೆ ಬಾಗಿಲಿಗೆ
ಬರುವ ಕಸದ ಗಾಡಿಗೆ ವಾರದಲ್ಲಿ ಆರು ದಿನ ಹಸಿ ಕಸ ಹಾಗೂ
ಶುಕ್ರವಾರ ಮಾತ್ರ ಒಣ ಕಸ ಹಾಕುವಂತೆ ಕೋರಿದರು.
ಇದೇ ಸಂದರ್ಭದಲ್ಲಿ 2021-22 ನೇ ಸಾಲಿನ ಬಜೆಟ್ ಅನ್ನು
ಸಭೆಯ ಸರ್ವ ಸದಸ್ಯರು ಬಹುಮತದಿಂದ
ಅನುಮೋದಿಸಿದರು.
ಈ ಸಂದರ್ಭದಲ್ಲಿ ಉಪಮಹಾಪೌರರಾದÀ ಶಿಲ್ಪ ಜಯಪ್ರಕಾಶ್,
ಆಯುಕ್ತ ವಿಶ್ವನಾಥ್ ಮುದಜ್ಜಿ, ಸ್ಥಾಯಿ ಸಮಿತಿ
ಅಧ್ಯಕ್ಷರುಗಳಾದ ರೇಣುಕಾ ಶ್ರೀನಿವಾಸ್, ಎಲ್.ಡಿ.ಗೋಣೆಪ್ಪ,

ಉಮಾ ಪ್ರಕಾಶ್, ಗೀತಾ ದಿಳ್ಳಪ್ಪ, ಸೇರಿದಂತೆ ವಿರೋಧ ಪಕ್ಷದ
ನಾಯಕ ಎ.ನಾಗರಾಜ್, ನಾಮನಿರ್ದೇಶಿತ ಸದಸ್ಯರು,
ಮಹಾನಗರಪಾಲಿಕೆ ಸದಸ್ಯರು ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *