ಲೇಖಕನಿಗೆ ನ್ಯಾಯ ಸಿಗುತ್ತಿದಿಯಾ..? ಅದೇಷ್ಟು ಜೀವದುಂಬಿದ ಬಡ ಪ್ರತಿಭಾನ್ವಿತ ಲೇಖಕರ ಸಾಲುಗಳು ಬಹುತೇಕ ಯಾರ ಪಾಲಾಗುತ್ತಿವೆ..? ಪುಸ್ತಕ ಪ್ರಾಧಿಕಾರ, ಕೇಂದ್ರ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ಪ್ರಕಾರತೆಯ ಸಂಕಲನಗಳ ಪುಸ್ತಕಕ್ಕೆ ನೀಡಲಾಗುವ ಸಹಾಯಧನಗಳನ್ನು, ಬಂಡವಾಳಷಾಹಿಗಳು ಹೇಗೆ ಲಪಟಾಯಿಸುತ್ತಿವೆ, ಈ ಕುರಿತಂತೆ ಯಾವ ಸಂಘಟಿತ ಶಕ್ತಿಗಳು ದನಿಯಾಗಿವೆ..? ಇದರ ಬದಲಾವಣೆಯಾಗುವುದು, ಸದಾ ದನಿಯಾಗುವುದು ಲೇಖಕನಿಗೆ ಸಿಗುವ ಮೊದಲ ನ್ಯಾಯವಾಗಿದೆ ಎಂದೇ ಭಾವಿಸುತ್ತೇನೆ.
ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ನ್ಯೂನ್ಯತೆಗಳು ಇಲ್ಲಿ ಕಾಣ ಸಿಗುತ್ತವೆ, ಅಸಲಿನ ಸತ್ಯ ಎನೆಂದರೆ ಕಥಾ ಸಂಕಲನ ಅಥವಾ ಸಾಹಿತ್ಯ ಸಂಕಲನ ಬರೆದಿಟ್ಟುಕೊಂಡು, ಮುದ್ರಣವಾದರೆ ಸಾಕು ಎಂದು ಕಾದು ಕುಳಿತ ಲೇಖಕರೇ ಅತೀ ಹೆಚ್ಚು..! ಇಂತಹ ದಯನೀಯ ಸ್ಥಿತಿಯಿಂದಲೇ ಇಲ್ಲಿ ಕಮರ್ಷಿಯಲ್ ಬಂಡವಾಳ ಷಾಹಿಗಳು ತಮ್ಮ ಪ್ರಕಾಶನಗಳ ಹೆಸರಿನಲ್ಲಿ ಮುದ್ರಣಕ್ಕೆ ಬಂಡವಾಳವನ್ನು ತೊಡಗಿಸುತ್ತಾರೆ, ಇಂತಿವರ ಕುರಿತಾಗಿ ಎಂದಾದರು ಪ್ರತಿ ದನಿಯಾಗಬೇಕಾದ ಹಿರಿಯ ಮುಖವಾಣಿಗಳು ದನಿಯಾಗಿದ್ದಾರೆಯೇ..? ಮುದ್ರಣಗೊಂಡ ಪುಸ್ತಕದ ಮೂಲ ಲೇಖಕನ ಹಕ್ಕುಗಳನ್ನೆಲ್ಲಾ ತನ್ನದಾಗಿಸಿಕೊಂಡು ಕನಿಷ್ಠ ಸಂಖ್ಯೆಯ ೨೦ ಪುಸ್ತಕಗಳನ್ನು ಮಾತ್ರ ನೀಡಿ ಇನ್ನುಳಿದಿರುವ ಸಂಪೂರ್ಣ ಎಲ್ಲಾ ಸರಕಾರಿ ಸೌಲಭ್ಯಗಳನ್ನು ತನ್ನದಾಗಿಸಿಕೊಳ್ಳುವ ಕೆಲ ಖಾಸಗಿ ಪ್ರಕಾಶಕರು ಮಾರುಕಟ್ಟೆಯಲ್ಲಿ ಇದೇ ಪುಸ್ತಕಗಳನ್ನು ಬಿಡುಗಡೆ ಮಾಡಿ ಲಾಭದಾಯಕ ಉದ್ದಿಮೆಯಾಗಿ ಪರಿವರ್ತನೆ ಮಾಡಿಕೊಂಡಿರುವ ನಗ್ನ ಸತ್ಯಗಳ ಅರಿವಿದ್ದರೂ ದನಿಯಾಗಬೇಕಾದ ಸಂಬಂಧಿತ ಇಲಾಖೆಗಳು ಹಾಗೂ ಕಸಾಪ ಕೂಡ ನೀರವ ಮೌನ ವಹಿಸುತ್ತಿರುವುದು ನಾವುಗಳು ಮುಖ್ಯವಾಗಿ ಗಮನಿಸಬೇಕಿದೆ.
ಹೀಗೆ ಖಾಸಗಿ ಒಡೆತನದ ಬಂಡವಾಳ ಷಾಹಿ ಪ್ರಕಾಶಕರು ವರುಷಕ್ಕೆ ಕನಿಷ್ಠ ೩೦ ರಿಂದ ೫೦ ರವರೆಗೆ ಬಡವರ್ಗದ ಪ್ರತಿಭಾನ್ವಿತ ಲೇಖಕರ ಪುಸ್ತಕಗಳನ್ನು ಮುದ್ರಿಸಿ, ಹಕ್ಕುಗಳನ್ನು ಕಸಿದುಕೊಂಡ ಪರಿಣಾಮವಾಗಿ ಸರಕಾರಿ ಸೌಲಭ್ಯ ಹಾಗೂ ಖಾಸಗಿ ಮಾರುಕಟ್ಟೆಯಿಂದ ಬರುವ ಆದಾಯ ಸರಿಸುಮಾರು ಕೋಟ್ಯಾಂತರ ರೂ/- ಎಂದರೆ ಅಸಲಿಗೆ ಇಲ್ಲಿ ನಡೆಯುತ್ತಿರುವುದೇನು.. ಪುಸ್ತಕ ಪ್ರಾಧಿಕಾರ, ಕೇಂದ್ರ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕರ ಕಛೇರಿ, ಕನ್ನಡ ಸಂಸ್ಕೃತಿ ಇಲಾಖೆಯಿಂದ ರಾಜ್ಯ ಸರ್ಕಾರ ಬಡ ಪ್ರತಿಭಾನ್ಚಿತ ಲೇಖಕನಿಗೆ ಕೊಡುತ್ತಿರುವ ನ್ಯಾಯ ಇದೇನಾ..? ಲೇಖಕರ ಪ್ರತಿಭೆಗಳಿಗೆ ಸಿಕ್ಕ ನ್ಯಾಯವೇನು..?
ಬಂಧುಗಳೇ ಇಂದೇ ಯೋಚಿಸಿ ನಾವು ಇನ್ನಾವುದೇ ಕಾರಣಕ್ಕಾಗಿ ದನಿಯಾಗದ ಮಂದಿಗಳಿಗೆ ಬೆಂಬಲಿಸಿ ಲೇಖಕನ ಮೌಲ್ಯಗಳಿಗೆ ಮಸಿ ಬಳಿಯುವುದು ಬೇಡ, ಕನ್ನಡ ಸಾಹಿತ್ಯ ಪರಿಷತ್ತು ಇರುವುದು ಉಳಿವಿಗಾಗಿ ದನಿಯಾಗಬೇಕಿದೆ, ಅಳಿವಿಗಾಗಿ ಮೌನವಹಿಸುವುದಕ್ಕಲ್ಲ, ಎನ್ನುವುದು ನಾವುಗಳು ಮನಗಾಣಬೇಕಿದೆ. ಮತ-ಪಂಥ, ಪಂಥೀಯ ವಾದಗಳಿಗಾಗಿ, ಸ್ವಜನ ಪಕ್ಷಪಾತದ ವ್ಯಾಮೋಹಕ್ಕೆ ಒಳಗಾಗಿ ಮತ ಚಲಾಯಿಸುವುದು ಸಮಂಜಸವಲ್ಲ ಆದುದ್ದರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಧ್ಯೇಯವನ್ನು ನಾವೆಲ್ಲರೂ ಸೇರಿಯೇ ಉಳಿಸೋಣ.
ವಿವಿಧ ಸಮ್ಮೇಳನಗಳು, ಬರಹಗಾರರಿಗೆ ಪ್ರೋತ್ಸಾಹಗಳು, ಕವಿ ಮಾಶಾಸನಕ್ಕಾಗಿ ಆಗ್ರಹ, ಎಲ್ಲಾ ಸ್ತರದ ಸಾಹಿತ್ಯ ಕೃಷಿ ಕೈಂಕರ್ಯಗಳು, ಚಳುವಳಿ ಕಾಲಘಟ್ಟದ ಸಾಹಿತ್ಯಗಳು, ಶರಣ ಸಾಹಿತ್ಯ, ಸಮಾಜಮುಖಿ ಸಾಹಿತ್ಯ, ಜೀವಪರ ನಿಲುವಿನ ಸಾಹಿತ್ಯ/ವೇದಿಕೆಗಳಿಂದ ಇಂದಿನ ಪೀಳಿಗೆಗಳಿಗೆ ಅರ್ಥೈಸುವ, ಜಾಗೃತಗೊಳಿಸುವ ಹೆಜ್ಜೆ ಇದಾಗಬೇಕಿದೆ. ವೇದಿಕೆ ಎಂದಿಗೂ ನಿವೃತ್ತ ಮಾನಸಿಕತೆಗಳಿಗೆ, ಗುಂಪುಗಾರಿಕೆಗೆ ಸಲ್ಲದಾಗಿದೆ. ಇದನ್ನು ಮುಕ್ತ ಮನಸಿನ ಸ್ವಚ್ಚಂದತೆಯ ಸ್ವತಂತ್ರ ಹಕ್ಕಿಂiiಂತಾಗಿಸಬೇಕಾದ ಜರೂರತ್ತಿದೆ, ಕೇವಲ ಚುನಾವಣಾ ಕಾಲಕ್ಕಾಗಿ ಸ್ವಜನ ಮತಗಳನ್ನು ಹೆಚ್ಚಿಸಿಕೊಳ್ಳುವ ಹಂತಕ್ಕೆ ಹೋದರೆ ಅದು ಸಾರಸ್ವತಾ ಲೋಕಕ್ಕೆ ದ್ರೋಹ ಬಗೆದಂತಾಗಲಿಲ್ಲವೇ..? ನಾವುಗಳು ಆತ್ಮದ ದನಿಯನ್ನು ಆಲಿಸಿ ಇಂತಹ ಭಾವುಕ ವೇದಿಕೆಗೆ ಬಂದವರು ಕನ್ನಡವೇ ಧರ್ಮ ಕನ್ನಡವೇ ಜಾತಿ ಎನ್ನುವ ಮನೋದೃಡತೆ ನಮ್ಮದಾಗಿರಬೇಕು ಅಲ್ಲವೇ.. ಸಾಹಿತ್ಯದಲ್ಲೂ ರಾಜಕೀಯ ಹುಡುಕುವ, ಮತ-ಪಂಥಗಳನ್ನು ತಡಕಾಡುವ ಆತ್ಮವಂಚನೆಗೆ ಮುಂದಾಗಿರುವವರನ್ನು ಬೆಂಬಲಿಸದೇ ಇಂತಹ ಅನೀತಿಗಳ ಮೈದಡವಿಕೊಂಡ ಅವಕಾಶವಾದಿಗಳ ವಿರುದ್ದ ನಾವುಗಳು ಸಿಡಿದೇಳಬೇಕಿದೆ, ಇನ್ನೂ ರಾಜಕೀಯ ವ್ಯವಸ್ಥೆಗಳು ಕೂಡ ಕಸಾಪ ಚುನಾವಣಾ ಕಾಲಕ್ಕಾಗಿ ಕಾಣಿಸಿಕೊಂಡು ನಂತರ ಕಣ್ಮರೆಯಾಗಿ ಬಿಡುವ ಕೆಟ್ಟ ವ್ಯವಸ್ಥೆಗಳು ಸೂತಕದ ಛಾಯೇಯಾಗಿದ್ದಾರೆ.
ಒಟ್ಟಿನಲ್ಲಿ ಕಸಾಪ ಎನ್ನುವುದು ಯಾರ ಮನೆಯ ಸ್ವತ್ತಲ್ಲ ಅದೊಂದು ಮುಕ್ತ ವೇದಿಕೆಯಾಗಿರಬೇಕು, ಕೇವಲ ಅಧಿಕಾರ ದಾಹಿತನದಿಂದ ಸದಾ ಕಸಾಪದ ಗದ್ದಿಗೆ ತನ್ನದಾಗಿರಬೇಕು ಎನ್ನುವುದು ಕೂಡ ಅಕ್ಷಮ್ಯ ದುರುಪಯೋಗ ಎನ್ನಬಹುದಾಗಿದೆ. ಹೀಗೆ ಹೇಳುವ ಸಾಲುಗಳು ಸಗಟುಗಳಾಗುತ್ತದೆ ಎಂದು ಅಂಬೋಣಿಸುತ್ತಾ ಬನ್ನಿರಿ ಮಲೆನಾಡ ಹೆಬ್ಬಾಗಿಲಿನ ಶಿವಮೊಗ್ಗದ ಅನೇಕ ಕನ್ನಡಪರ ಚಳುವಳಿಗಳಲ್ಲಿ ತೊಡಗಿಸಿಕೊಂಡಿರುವ ಕನ್ನಡದ ಕಟ್ಟಾಳುಗಳ ಜೊತೆ-ಜೊತೆಗೆ ಉದಯೋನ್ಮುಖಿ ಲೇಖಕರನ್ನೊಳಗೊಂಡ ಸಮಗ್ರ ವೇದಿಕೆಯನ್ನಾಗಿಸುವುದೇ ಮುಖ್ಯ ಧ್ಯೇಯವಾಗಿಸೋಣ, ಬದಲಾವಣೆ ಅನಿವಾರ್ಯ, ಅದು ನಮ್ಮಗಳಿಂದಾಗಲಿ ಅರ್ಹತೆ ಹೊಂದಿರುವ ಪ್ರತಿ ಸದಸ್ಯರು ಬದಲಾವಣೆಗಾಗಿ ಇಂದೇ ಸಂಕಲ್ಪತೊಟ್ಟು ಒಟ್ಟಾಗಿ ಸಾಹಿತ್ಯ ಕೃಷಿಯನ್ನು ಹೊಸಬಗೆಯಲ್ಲಿ ಆರಂಭಿಸೋಣ, ಈ ಎಲ್ಲಾ ಕಾರಣಗಳಿಗಾಗಿ ನಿಮ್ಮ ಈ ಗಾರಾ.ಶ್ರೀನಿವಾಸ್‌ಗೆ ಮತ ನೀಡಿ ಬೆಂಬಲಿಸಿ.

Leave a Reply

Your email address will not be published. Required fields are marked *