ಜನರು ಪ್ಲಾಸ್ಟಿಕ್‍ನ್ನು ಎಲ್ಲೆಂದರಲ್ಲಿ
ಬಿಸಾಡುತ್ತಿರುವುದರಿಂದ ಪರಿಸರ
ಮಾಲಿನ್ಯ ಹೆಚ್ಚಾಗುತ್ತಿದೆ,
ರಸ್ತೆಬದಿಗಳಲ್ಲಿ, ಚರಂಡಿಗಳಲ್ಲಿ,
ನದಿಗಳಲ್ಲಿ, ಕೆರೆಬಾವಿಗಳಲ್ಲಿ,
ಹೊಂಡಗಳಲ್ಲಿ ಪ್ಲಾಸ್ಟಿಕ್
ತೇಲಾಡುತ್ತಿದ್ದು, ಅದು
ನೋಡುಗರಿಗೆ ಅಸಹ್ಯ ಉಂಟು
ಮಾಡುತ್ತಿದೆ ಹಾಗೂ
ಸೊಳ್ಳೆಗಳಿಗೆ ವಾಸ ಸ್ಥಳವಾಗಿ
ಪರಿಣಮಿಸುತ್ತಿದೆ. ಘನತ್ಯಾಜ್ಯ
ವಿಲೇವಾರಿಯಲ್ಲಿ ನಾವು ಇನ್ನೂ
ಹೆಚ್ಚಿನ ಮಟ್ಟದ, ಗುಣಾತ್ಮಕ
ಪರಿಹಾರವನ್ನು ಕಂಡು
ಹಿಡಿದುಕೊಳ್ಳಬೇಕು, ಇಲ್ಲವಾದರೆ
ನಮ್ಮ ಸುತ್ತಮುತ್ತಲಿನ
ಪರಿಸರವನ್ನು ಸಂಪೂರ್ಣ ನಾಶ
ಮಾಡಿಕೊಳ್ಳುವ ಸಂಭವ
ಹೆಚ್ಚಾಗುತ್ತದೆ ಎಂದು ಕರ್ನಾಟಕ
ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ
ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.
ಅವರು ನಗರದ ತರಳಬಾಳು
ನಗರದ ಒಂದನೇ
ಮುಖ್ಯರಸ್ತೆಯಲ್ಲಿ ಕರ್ನಾಟಕ
ಜ್ಞಾನ ವಿಜ್ಞಾನ ಸಮಿತಿ ಮತ್ತು
ಮಲ್ಲನಕಟ್ಟೆ ಗ್ರಾಮದ
ಸಹಯೋಗದೊಂದಿಗೆ ಆಯೋಜಿಸಿದ್ದ
“ಪ್ಲಾಸ್ಟಿಕ್ ಮರುಬಳಕೆ ಬಗ್ಗೆ
ಜನಜಾಗೃತಿ” ಕಾರ್ಯಕ್ರಮದಲ್ಲಿ
ಮಾತನಾಡಿದರು.
ಪ್ಲಾಸ್ಟಿಕ್ ಅನ್ನು ಮರು
ಬಳಸಬೇಕು, ಇಲ್ಲಾ ಕಡಿಮೆ
ಬಳಸಬೇಕು ಮತ್ತು
ಅವುಗಳನ್ನು ತಿರಸ್ಕರಿಸುವ
ಭಾವನೆಯನ್ನ ಸಹ ಜನರು
ಒಪ್ಪಿಕೊಳ್ಳಬೇಕು. ಸಾಮಾನ್ಯವಾಗಿ
ಹಣ್ಣಿನ ವ್ಯಾಪಾರಿಗಳು, ತರಕಾರಿ
ವ್ಯಾಪಾರಿಗಳು, ಪ್ಲಾಸ್ಟಿಕ್ ಚೀಲದಲ್ಲಿ
ವಸ್ತುಗಳನ್ನು ಗ್ರಾಹಕರಿಗೆ
ನೀಡುತ್ತಿದ್ದು, ಸರ್ಕಾರದ
ಕಣ್ಣಿಗೆ ಕಾಣದ ಹಾಗೇ ತೆಳು
ಪ್ಲಾಸ್ಟಿಕ್‍ಗಳನ್ನು
ಕಳ್ಳಮಾರ್ಗದಲ್ಲಿ ತಂದು
ಮಾರುಕಟ್ಟೆಯಲ್ಲಿ ಬಳಕೆ
ಮಾಡುತ್ತಿದ್ದಾರೆ. ಚಿಪ್ಸ್
ಮಾರಾಟಗಾರರು, ಸಣ್ಣಸಣ್ಣ
ವಸ್ತುಗಳನ್ನು ಪ್ಯಾಕೇಜ್
ಮಾಡುವಂತಹ ಎಲ್ಲ
ವಸ್ತುಗಳನ್ನೂ ಸಹ,
ತೆಳುವಾದ ಪ್ಲಾಸ್ಟಿಕ್‍ನಿಂದ ಪ್ಯಾಕ್
ಮಾಡಿ ಮಾರಾಟಮಾಡುತ್ತಿದ್ದಾರೆ.
ಇದರಿಂದ ಪರಿಸರದಲ್ಲಿ ಹೆಚ್ಚು
ಮಾಲಿನ್ಯ ಕಾಣುತ್ತಿದೆ. ಪ್ಲಾಸ್ಟಿಕ್‍ನ
ದಪ್ಪ ಜಾಸ್ತಿಯಾದಷ್ಟು, ನಾವು
ಅವುಗಳನ್ನು ಸಂಗ್ರಹಿಸಿ
ಮರುಬಳಕೆ ಮಾಡಬಹುದು
ಎಂದರು.
ತೆಳು ಪ್ಲಾಸ್ಟಿಕ್ ನಿಷೇಧದ ಬಗ್ಗೆ
ಜನರಲ್ಲಿ ಜಾಗೃತಿ ಮೂಡಿಸಬೇಕು,
ಜನರು ಸಹ ಬಟ್ಟೆ ಚೀಲವನ್ನು,
ಮರುಬಳಕೆಯಾಗುವಂತೆ ಚೀಲ
ಅಥವಾ ಪರಿಸರ ಸ್ನೇಹಿಯಾದ,
ಕೊಳೆಯುವಂತಹ,
ಚೀಲಗಳನ್ನು ಬಳಸಬಹುದು.
ಇವೆಲ್ಲವನ್ನು ನಾವು ಗ್ರಾಹಕರಿಗೆ
ಕಡಿಮೆ ದರದಲ್ಲಿ ಸಿಗುವಂತೆ
ಏರ್ಪಾಡು ಮಾಡಿ
ಕೊಡಬೇಕಾಗುತ್ತದೆ. ಬಟ್ಟೆ
ಚೀಲಕ್ಕಿಂತ ಪ್ಲಾಸ್ಟಿಕ್ ಚೀಲ ಕಡಿಮೆ
ವೆಚ್ಚದ್ದಾಗಿರುವುದರಿಂದ, ಹೆಚ್ಚು
ಜನ ಪ್ಲಾಸ್ಟಿಕ್ ಚೀಲವನ್ನೇ ಖರೀದಿ
ಮಾಡುತ್ತಿದ್ದಾರೆ. ಕಡಿಮೆ
ವೆಚ್ಚದಲ್ಲಿ, ಬಟ್ಟೆಗಳಲ್ಲಿ
ಚೀಲಗಳನ್ನ ಹೊಲಿದು, ಮಾರಾಟ
ಮಾಡಿದಾಗ, ಜನರು ಪ್ಲಾಸ್ಟಿಕ್‍ನಿಂದ
ವಿಮುಖರಾಗುತ್ತಾರೆ. ಸಾರ್ವಜನಿಕ
ಸ್ಥಳಗಳಲ್ಲಿ, ನದಿತೀರಗಳಲ್ಲಿ,
ಹೊಂಡಗಳ ಸುತ್ತ ಮುತ್ತ,
ದೇವಸ್ಥಾನದ ಬಳಿ, ಪ್ಲಾಸ್ಟಿಕ್
ನಿಷೇಧದ ಬೋರ್ಡ್‍ಗಳಿದ್ದರೂ
ಸಹ ಜನರು ಅವುಗಳನ್ನು
ಪಾಲಿಸುತ್ತಿಲ್ಲ. ಹಾಗಾಗಿ
ಜನಜಾಗೃತಿಯನ್ನು ಇನ್ನು
ತೀರ್ವಗತಿಯಲ್ಲಿ ಹೆಚ್ಚಿಸಿ, ಮುಂದಿನ
ಜನಾಂಗಕ್ಕಾದರೂ ನಾವು
ಪರಿಸರವನ್ನು ಉಳಿಸಬೇಕು.
ಇಲ್ಲದಿದ್ದರೆ ನಾವು ನಾಶದ ಕಡೆ
ಹೆಜ್ಜೆ ಹಾಕುತ್ತಿದ್ದೇವೆ
ಎಂಬುದನ್ನು ಅರಿಯಬೇಕು
ಎಂದರು.
ಎಲ್ಲಾ ಪ್ಲಾಸ್ಟಿಕ್‍ಗಳನ್ನು ಮರು
ಬಳಸುವಂತಹ ಕಲಾ
ಚೈತನ್ಯವನ್ನು,
ಕಲಾಕೌಶಲ್ಯವನ್ನು ನಾವು
ಪಡೆದರೆ ಪ್ರತಿಯೊಂದು
ವಸ್ತುವನ್ನೂ ಸಹ, ನಾವು ಮತ್ತೆ
ಮರು ಬಳಸಿ ಪರಿಸರದ ಮೇಲೆ
ಬೀಳುತ್ತಿರುವ ಒತ್ತಡವನ್ನು
ಕಡಿಮೆ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಜನರಿಗೆ
ಪ್ಲಾಸ್ಟಿಕ್ಕಿನ ಮರುಬಳಕೆ
ಮಾಡುವ ಮಾದರಿಗಳನ್ನು
ಪ್ರದರ್ಶಿಸಿ, ಬಿತ್ತಿ ಪತ್ರಗಳನ್ನ
ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಮದ್,
ಅನುಷಾ, ಸಿಂಚನ, ರಾಧಾ,
ಹೆಚ್.ಎಸ್.ರಚನ, ಹೆಚ್.ಎಸ್. ಪ್ರೇರಣ,
ಮೌನಿಷ್ ಹಾಜರಿದ್ದರು.