ಆ ಮೌನದಲ್ಲೂ ವಿಶೇಷತೆ ಇತ್ತು!
ಅವರು 2004 ರಲ್ಲಿ ಆಡಳಿತ ಚುಕ್ಕಾಣಿ ಹಿಡಿದಾಗ ಸೆನ್ಸೆಕ್ಸ್ 8000 ರಷ್ಟಿತ್ತು. ಅವರು 2014 ರಲ್ಲಿ ಪದ ತ್ಯಜಿಸುವಾಗ ಅದು 24000 ಕ್ಕೆ ಮುಟ್ಟಿತ್ತು.
ಆ ಮೌನದಲ್ಲೂ ವಿಶೇಷತೆ ಇತ್ತು!
ಅವರು ಅಧಿಕಾರ ಆರಂಭಿಸಿದಾಗ ದೇಶದ ಕೆಲವು ಆಯ್ದ ಜನರ ಕೈಯಲ್ಲಿ ಮಾತ್ರ Nokia 3100 ಮೊಬೈಲ್ ಫೋನ್ ಇರುತ್ತಿತ್ತು. ಆದರೆ ಅವರು ಅಧಿಕಾರದಿಂದ ಇಳಿಯುವಾಗ ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್ ಫೋನ್ಗಳು ಬಂದಿದ್ದವು.
ಅವರು ಸ್ವತಃ ಮೌನಿಯಾಗಿದ್ದರು ಆದರೆ ಅವರು ಜಾರಿಗೆ ತಂದ ಜಗತ್ತಿನಲ್ಲೇ ಬಹು ದೊಡ್ಡ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳ ಹಳ್ಳಿಗಳು ಮಾತನಾಡಲಾರಂಭಿಸಿದವು ಮತ್ತು ಹಳ್ಳಿಗರು ಸುಖದಿಂದ ಬದುಕು ಕಟ್ಟಿಕೊಂಡಿದ್ದರು.
ಆ ಮೌನದಲ್ಲೂ ವಿಶೇಷತೆ ಇತ್ತು!
ಅವರು ಸ್ವತಃ ಕಡಿಮೆ ಮಾತನಾಡುತ್ತಿದ್ದರು ಆದರೆ ಜನರ ಮಾತಿಗೆ ಮೌಲ್ಯ ಬರಲು ಮಾಹಿತಿ ಹಕ್ಕು ಕಾನೂನು ತಂದಿದ್ದರು.
ಆ ಮೌನದಲ್ಲೂ ವಿಶೇಷತೆ ಇತ್ತು!
ಅವರು ಮೌನವಾಗಿ ಕಾಯಕ ಮಾಡುತ್ತ ಭಾರತವನ್ನು ತಿಂಗಳ ಮತ್ತು ಮಂಗಳನ ವರೆಗೆ ತಲುಪಿಸುವ ಶಕ್ತಿಶಾಲಿ ದೇಶವಾಗಿ ರೂಪಿಸಿದರು.
ಆ ಮೌನದಲ್ಲೂ ವಿಶೇಷತೆ ಇತ್ತು!
ಅವರು ಅಧುನಿಕ ಭಾರತ ನಿರ್ಮಾಣಕ್ಕಾಗಿ ಐಐಟಿˌ ಏಮ್ಸ್ ˌ ಅಧುನಿಕ ವಿಮಾನ ನಿಲ್ದಾಣಗಳುˌ ಮೆಟ್ರೊˌ ಮುಂತಾದ ಅಭಿವ್ರದ್ಧಿ ಕಾರ್ಯಗಳು ಮಾಡಿದ್ದರು.
ಆ ಮೌನದಲ್ಲೂ ವಿಶೇಷತೆ ಇತ್ತು!
ಅವರು ಸ್ವತಃ ಕಡಿಮೆ ಮಾತನಾಡುತ್ತಿದ್ದರು ಆದರೆ ಅವರ ವಿಕಾಸದ ಕೆಲಸಗಳು ಹೆಚ್ಚು ಮಾತನಾಡುತ್ತವೆ.
ಆ ಮೌನದಲ್ಲೂ ವಿಶೇಷತೆ ಇತ್ತು!
ಅವರು ಮೌನವಾಗಿ ಕೆಲಸ ಮಾಡುತ್ತಲೆ ಪಾಕಿಸ್ತಾನವನ್ನು ಭಯೋತ್ಪಾದಕ ದೇಶವೆಂದು ಅಂತರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿಸಿದ್ದರು.
ಆ ಮೌನದಲ್ಲೂ ವಿಶೇಷತೆ ಇತ್ತು!
ಅವರು ಹಲವು ವರ್ಷಗಳ ಮುಂಚೆಯೇ ದೇಶದ ವಿಕಾಸಕ್ಕೆ ಎಫ್ಡಿಐ, ಭೂಮಿ ಅಧಿಗ್ರಹಣ, ಜಿಎಸ್ಟಿ, ಇವುಗಳ ಅವಶ್ಯಕತೆ ಇದೆ ಎಂದು ಹೇಳಿದ್ದರು. ಆದರೆ ದೇಶದ ಅಭಿವ್ರದ್ಧಿಯನ್ನು ತಡೆಯಲು ಅಂದು ಬಿಜೆಪಿ ಈ ಕಾನೂನುಗಳನ್ನು ವಿರೋಧಿಸಿತ್ತು.
ಆ ಮೌನದಲ್ಲೂ ವಿಶೇಷತೆ ಇತ್ತು!
ಅವರು ಇಡೀ ಜಗತ್ತು ಆರ್ಥಿಕ ಕುಸಿತಕ್ಕೆ ತುತ್ತಾಗಿದ್ದಾಗ ತಮ್ಮ ಕೌಶಲ್ಯ, ಹಾಗು ಬುದ್ಧಿವಂತಿಕೆಯಿಂದ ಭಾರತದ ಆರ್ಥಿಕತೆ ಕುಸಿಯದಂತೆ ತಡೆದಿದ್ದರು.
ಆ ಮೌನದಲ್ಲೂ ವಿಶೇಷತೆ ಇತ್ತು!
ಅವರು ಭಾರತವನ್ನು ಪೋಲಿಯೊ ಮುಕ್ತ ಮಾಡಿದ್ದರು ಮತ್ತು ಅನೇಕ ಮಾರಣಾಂತಿಕ ರೋಗಗಳ ಚಿಕಿತ್ಸಾ ವೆಚ್ಚವನ್ನು ಒಂದು ಲಕ್ಷದಿಂದ ಕೆಲವು ಸಾವಿರ ರೂಪಾಯಿಗೆ ತಗ್ಗಿಸಿದ್ದರು.
ಜಗತ್ತಿನ ಅತ್ಯಂತ ದಕ್ಷ, ಪಾರದರ್ಶಕ, ನಿಷ್ಟಾವಂತ, ಪ್ರಧಾನಿಯಾಗಿ ಕಾರ್ಯ ಮಾಡಿದ ಸರದಾರ್ ಡಾ. ಮನಮೋಹನ್ ಸಿಂಗ್ ಅವರು ಸ್ವತಃ ಕಡಿಮೆ ಮಾತನಾಡುತ್ತಿದ್ದರೆ ಅವರು ಮಾಡಿದ ಅಸಂಖ್ಯಾತ ಜನಪರ ಕೆಲಸಗಳು ಸ್ವತಃ ಮಾತನಾಡುತ್ತವೆ.
~ ಡಾ. ಜೆ ಎಸ್ ಪಾಟೀಲ.