ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ
ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ
ಕಾರ್ಯದರ್ಶಿಯಾಗಿರುವ ಎಸ್.ಆರ್ ಉಮಾಶಂಕರ್ ಅವರು ಆ.12
ರಂದು ಜಿಲ್ಲಾ ಪ್ರವಾಸ ಮಾಡುವರು.
ಅಂದು ಬೆಳಗ್ಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12
ಗಂಟೆಗೆ ದಾವಣಗೆರೆಗೆ ಆಗಮಿಸುವರು. 12.30ಕ್ಕೆ ಜಿಲ್ಲಾ
ಪಂಚಾಯತ್ ಸಭಾಂಗಣದಲ್ಲಿ ಮುಖ್ಯ
ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಪಂಚಾಯತ್
ಸಮಸ್ಯೆಗಳ ಕುರಿತು ಚರ್ಚಿಸುವರು. ಮಧ್ಯಾಹ್ನ 4
ಗಂಟೆಗೆ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಪ್ರಗತಿ ಪರಿಶೀಲನೆ
ಹಾಗೂ ಕೋವಿಡ್-19 ಕುರಿತಂತೆ ಸಭೆ ನಡೆಸುವರು. ಸಂಜೆ 5
ಗಂಟೆಗೆ ಸ್ಮಾರ್ಟ್ ಸಿಟಿ ಕಚೇರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ
ಭಾಗವಹಿಸುವರು. ಸಂಜೆ 7 ಗಂಟೆಗೆ ದಾವಣಗೆರೆಯಿಂದ
ಬೆಂಗಳೂರಿಗೆ ನಿರ್ಗಮಿಸುವರೆಂದು ಆಪ್ತ ಕಾರ್ಯದರ್ಶಿ
ತಿಳಿಸಿದ್ದಾರೆ.