ಮಕ್ಕಳ ವಿದ್ಯಾಭ್ಯಾಸದ ಬುನಾದಿಯೇ ಅಂಗನವಾಡಿ ಶಾಲೆ ಎಂದರೆ ತಪ್ಪಾಗಲಾರದು ಆದರೆ ಅಂಗನವಾಡಿ ಕಾರ್ಯಕರ್ತರಿಗೆ ಆಗುತ್ತಿರುವ ತೊಂದರೆಗಳಿಗೆ ಮಾತ್ರ ಸರ್ಕಾರ ಸ್ಪಂದನೆ ನೀಡುತ್ತಿಲ್ಲ ಎಂಬುದು ಮಾತ್ರ ಸತ್ಯ.ಸರ್ಕಾರ ಮಾಡುವ ಕಾನೂನುಗಳು ಉಳ್ಳವರಿಗೆ ಅನುಕೂಲವಾಗುತ್ತದೆಯೇ ವಿನಹ ಸಾಮಾನ್ಯ ಜನರಿಗೆ ಅನುಕೂಲವಾಗುವುದಿಲ್ಲ ಎಂಬುದಕ್ಕೆ ಅಂಗನವಾಡಿ ಕಾರ್ಯಕರ್ತರು ಅನುಭವಿಸುತ್ತಿರುವ ಕಷ್ಟಗಳೇ ಸಾಕ್ಷಿ…
ಮಕ್ಕಳ ದಾಖಲಾತಿಯ ಆಧಾರದ ಮೇಲೆ ಅಂಗನವಾಡಿ ಶಾಲೆಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದ್ದು, ಸರ್ಕಾರಿ ಕಟ್ಟಡವಿಲ್ಲದೆ ತುಂಬಾ ಕಡೆ ಖಾಸಗಿ ಕಟ್ಟಡದಲ್ಲಿ ಅಂಗನವಾಡಿ ಶಾಲೆ ನಡೆಸಲಾಗುತ್ತಿದೆ, ಈ ಖಾಸಗಿ ಕಟ್ಟಡಗಳಿಗೆ ಸರ್ಕಾರದಿಂದ ಬಾಡಿಗೆ ನೀಡುತ್ತಿದ್ದರೂ ಸಹ ಅದು ಪ್ರತಿ ತಿಂಗಳು ನೀಡದೆ ಐದಾರು ತಿಂಗಳಿಗೊಮ್ಮೆ ಬಾಡಿಗೆ ನೀಡಲಾಗುತ್ತಿದೆ, ಕಟ್ಟಡ ಮಾಲೀಕರಿಗೆ ಪ್ರತಿ ತಿಂಗಳು ಬಾಡಿಗೆ ನೀಡಬೇಕಾದ ಪರಿಸ್ಥಿತಿ ಇರುವುದರಿಂದ ಅಂಗನವಾಡಿ ಕಾರ್ಯಕರ್ತರು ತಮ್ಮ ಸ್ವಂತ ಹಣದಲ್ಲಿ ಮಾಲೀಕರಿಗೆ ಬಾಡಿಗೆ ನೀಡುತ್ತಿದ್ದು, ಸರ್ಕಾರದ ಸಂಬಳವನ್ನು ನೆಚ್ಚಿಕೊಂಡು ಜೀವನ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತರಿಗೆ ಇದು ತುಂಬಾ ಹೊರೆಯಾಗಿದೆ, ಆದ್ದರಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಬಾಡಿಗೆ ನೀಡಲು ಮನವಿ ಮಾಡಬೇಕಾದ ಕೆಲಸ ಜಿಲ್ಲಾಡಳಿತ ಮಾಡಬೇಕಾಗಿದೆ.
ಅಂಗನವಾಡಿಯಲ್ಲಿ 3 ರಿಂದ 6 ವರ್ಷದ ಮಕ್ಕಳಿಗೆ, ಗರ್ಬಿಣಿ, ಬಾಣಂತಿಯರಿಗೆ ಮೊಟ್ಟೆಗಳನ್ನು ನೀಡಲಾಗುತ್ತಿದ್ದು, ಪ್ರತಿ ಮೊಟ್ಟೆಗೆ ಸರ್ಕಾರದಿಂದ 5 ರೂಪಾಯಿ ನೀಡಲಾಗುತ್ತದೆ, ಮಾರುಕಟ್ಟೆಯಲ್ಲಿ ಪ್ರತಿ ಮೊಟ್ಟೆಗೆ 5.75 ರಿಂದ 6 ರೂಪಾಯಿ ಇದ್ದು ಅಂಗನವಾಡಿ ಕಾರ್ಯಕರ್ತರು ಹೆಚ್ಚಿನ ಹೊರೆ ಭರಿಸಬೇಕಾಗಿದೆ, ಈ ತಿಂಗಳು ಮೊಟ್ಟೆಯ ಬೆಲೆ 4.75 ಇದ್ದು ಹಾಗಾಗಿ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಅಂಗನವಾಡಿ ಕಾರ್ಯಕರ್ತರೇ ಮುಂಗಡ ಹಣ ಕೊಟ್ಟು ಮೊಟ್ಟೆ ಖರೀದಿಸಬೇಕಾಗಿದ್ದು, ಸರ್ಕಾರದಿಂದ ಎರಡು ಮೂರು ತಿಂಗಳು ಬಿಟ್ಟು ಇವರಿಗೆ ಹಣ ಬರುತ್ತದೆ. ಸಂಬಳವನ್ನು ನೆಚ್ಚಿಕೊಂಡು ಜೀವನ ನಡೆಸುವ ಅಂಗವಿಕಲರಿಗೆ ಕಾರ್ಯಕರ್ತರಿಗೆ ಇದು ಹೊರೆಯಲ್ಲವೇ????
ಕೆ.ಎಲ್.ಹರೀಶ್ ಬಸಾಪುರ
ರಾಜ್ಯ ಕಾರ್ಯದರ್ಶಿ
ಕೆಪಿಸಿಸಿ ಸಾಮಾಜಿಕ ಜಾಲತಾಣ.