ಚಿತ್ರಕಲೆ ಪ್ರತಿಯೊಂದು
ಮಗುವಿನಲ್ಲಿರುವ ಪ್ರತಿಭೆಯನ್ನು,
ಸೃಜನಾತ್ಮಕ ಶಕ್ತಿಯನ್ನು
ಹೊರಹೊಮ್ಮಿಸುತ್ತದೆ. ಮಕ್ಕಳು ಬಿಳಿ
ಹಾಳೆ ಮೇಲೆ, ಬಣ್ಣದ ಪೆನ್ಸಿಲ್ನಿಂದ ಗೀಚಿ
ಬರೆದಾಗ, ಅವರುಗಳ ಶಿಕ್ಷಣ
ಪ್ರಾರಂಭವಾಗುತ್ತದೆ. ಪ್ರತಿಯೊಂದು
ಮಗುವಿನ ಶಿಕ್ಷಣವೂ ಸಹ ಚಿತ್ರಕಲೆಯ
ಮುಖಾಂತರವೇ ಪ್ರಾರಂಭವಾಗಬೇಕು.
ಅದರಿಂದ ಮಗುವಿನ ಬರವಣಿಗೆ ಸಹ
ಸುಂದರಗೊಂಡು ಶಿಕ್ಷಣ
ಅರ್ಥಪೂರ್ಣವಾಗುವುದು ಎಂದು ಕರ್ನಾಟಕ
ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್.
ಕೆ. ಎಸ್. ಸ್ವಾಮಿ ತಿಳಿಸಿದರು.
ಅವರು ನಗರದ ತಮಟಕಲ್ಲು
ರಸ್ತೆಯಲ್ಲಿರುವ ಸುಡುಗಾಡು ಸಿದ್ಧರ
ಕಾಲೊನಿಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ
ಸಮಿತಿ, ವಿಷ್ಣು ಆಟ್ರ್ಸ್ ಮತ್ತು ಮೆದೇಹಳ್ಳಿ
ಗ್ರಾಮದ ಜನರ ಸಹಯೋಗದೊಂದಿಗೆ
ಆಯೋಜಿಸಿದ್ದ “ಚಿತ್ರಕಲೆ ಸ್ಪರ್ಧೆ ಮತ್ತು
ತರಬೇತಿ ಜನಜಾಗೃತಿ”
ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಗು ಬಿಳಿ ಹಾಳೆಯ ಮೇಲೆ ಸುರುಳಿ
ಸುತ್ತುವುದು, ಚೌಕಾಬರ ಸುತ್ತುವುದು,
ಎಲೆ, ಹೂವಿನ ಚಿತ್ರಗಳನ್ನು ಬಿಡಿಸುವ
ಮುಖಾಂತರ ಪರಿಸರದ ಜ್ಞಾನವನ್ನು
ತುಂಬಿಕೊಳ್ಳುತ್ತದೆ. ಮನೇಲಿ ಕೂತು,
ಒಂದೇ ಮಗು ಚಿತ್ರ ಬಿಡಿಸುವುದಕ್ಕೂ,
ಗುಂಪಾಗಿ ಕೂತು, ಸಂಘಟನೆ ಮುಖಾಂತರ
ಚಿತ್ರ ಬಿಡಿಸುವುದಕ್ಕೂ ಬಹಳ
ವ್ಯತ್ಯಾಸವುಂಟು. ಅದರ ಜ್ಞಾನದ
ಅಭಿವೃದ್ಧಿಗೆ, ಗುಂಪು ಚಟುವಟಿಕೆ ಸಹಕಾರಿ,
ಮಕ್ಕಳು ಒಬ್ಬರಿಂದೊಬ್ಬರಿಗೆ ಸ್ನೇಹಾ,
ಭಾಂದವ್ಯ. ಒಗ್ಗಟ್ಟು, ತಾಳ್ಮೆ ಮೂಡಿಸಲು
ಸಹಕಾರಿ ಆಗುತ್ತದೆ. ಒಂಟಿಯಾಗಿ ಕುಳಿತು
ಯೋಗ ಮಾಡುವುದಕ್ಕಿಂತ,
ಸಂಘಟನೆಯಿಂದ ಯೋಗ ಮಾಡುವುದು
ಅತ್ಯುತ್ತಮವೆಂಬಂತೆ, ಚಿತ್ರ ಕಲೆಯಲ್ಲೂ
ಸಹ ಸತ್ಯ.
ಚಿತ್ರಕಲೆಯಲ್ಲೂ ಸಹ ಮಕ್ಕಳಿಗೆ
ಸಂಘಟಿತರಾಗಿ ತರಬೇತಿ ನೀಡಿದಾಗ,
ಪ್ರತಿಯೊಂದು ಮಗುವೂ ಸಹ
ತನ್ನಲ್ಲಿರುವ ಪ್ರತಿಭೆಯನ್ನು ಹೊರ
ಹಾಕುತ್ತದೆ. ಮಗು ಚಿತ್ರ ಬರೆಯುವಾಗ
ಸಾಮಾಜಿಕ ಸಮಸ್ಯೆಗಳಿರಬಹುದು,
ಪರಿಸರದ ಬಗ್ಗೆ. ಮೂಢನಂಬಿಕೆಗಳ
ವಿರುದ್ಧ, ವೈಜ್ಞಾನಿಕ ತಿಳುವಳಿಕೆ ಬಗ್ಗೆ,
ಚಿತ್ರಗಳನ್ನ ಮಗುವಿಗೆ ಬರೆಯಲು
ಹೇಳಿದಾಗ, ಅದು ತನ್ನಿಂದ ತಾನೇ ಅದನ್ನು
ಸೃಷ್ಟಿ ಮಾಡಿಕೊಂಡು, ಚಿತ್ರವನ್ನು
ಬಿಡಿಸುತ್ತವೆ ಎಂದರು.
ಚಿತ್ರ ಬಿಡಿಸಿದ ಮಗುವಿಗೆ ನಾವು
ಪ್ರತಿಭಾನುಸಾರವಾಗಿ, ವಯಸ್ಸಿನ
ಅನುಸಾರವಾಗಿ ಬಹುಮಾನಗಳ ನೀಡಿದಾಗ, ಆ
ಮಗು ಮುಂದೆ ಉತ್ತಮ ಸಾಧನೆ
ಮಾಡುತ್ತಾ ಸಾಗುತ್ತದೆ. ಪ್ರತಿ
ಶಾಲೆಯಲ್ಲೂ ಮಕ್ಕಳಿಗೆ ಚಿತ್ರಕಲೆ
ಹೇಳಿಕೊಡಲು ಶಿಕ್ಷಕರ ನೇಮಕ
ಮಾಡಬೇಕು, ಕಲಾ ಶಿಕ್ಷಕರಿಲ್ಲದ ಶಾಲೆ
ಬರಡು ಭೂಮಿಯಂತಾಗುವುದು,
ಕಲೆವುಳ್ಳಂಥಾ ಶಾಲೆ ಚೈತನ್ಯದ,
ಚಿಲುಮೆಯಂತಾಗುತ್ತವೆ ಎಂದರು.
ಬಹಳಷ್ಟು ಬಡ ಮಕ್ಕಳು ಬಣ್ಣದ
ಪೆನ್ಸಿಲ್ಲನ್ನೇ ಮುಟ್ಟಿಲ್ಲ, ಬಣ್ಣದ
ಹಾಳೆಗಳನ್ನು ಸಹ ಮುಟ್ಟಿಲ್ಲ, ಬಡತನ
ಇರುವ ದೇಶದಲ್ಲಿ, ನಾವು ಮಕ್ಕಳಿಗೆ
ಚಿತ್ರಕಲೆಯನ್ನು ಪೆÇ್ರೀತ್ಸಾಹಿಸಬೇಕು.
ನಮ್ಮ ವಾಸ್ತುಶಿಲ್ಪ, ನಮ್ಮ ಚಿತ್ರಕಲೆ,
ಸಂಸ್ಕೃತಿಯನ್ನು ಬಿಂಬಿಸುವಂಥ ಶಿಕ್ಷಣ
ನೀಡಿದಾಗ, ಉತ್ತಮ ನಾಗರಿಕನಾಗಿ
ಹೊರಹೊಮ್ಮಬಹುದು, ಬಡ ಮಕ್ಕಳಿಗೆ
ಇಂತಹ ಅವಕಾಶವನ್ನು ಕಲ್ಪಿಸಿ ಕೊಡಲು
ಸಾಕಷ್ಟು ಸಂಘಸಂಸ್ಥೆಗಳು
ಪ್ರಯತ್ನ ಪಡಬೇಕಾಗುತ್ತದೆ
ಎಂದರು.
ಚಿತ್ರ ಕಲೆ ಸ್ಪರ್ಧೆಯಲ್ಲಿ 5ಂ ಕ್ಕೂ ಹೆಚ್ಚು
ಮಕ್ಕಳು ಬಾಗವಹಿಸಿದ್ದರು.
ವಿದ್ಯಾರ್ಥಿಗಳಾದ ಸಿಂಹಾದ್ರಿ, ಅಬ್ರಹಂ, ಲಕ್ಷಣ್ಣ,
ಮಮತ, ಗಂಗಮ್ಮ, ಶಿವಕುಮಾರ
ಬಹುಮಾನ ಗಳಿಸಿದಿರು. ಎಚ್. ಎಸ್. ಪ್ರೇರಣಾ
ಎಚ್. ಎಸ್. ರಚನಾ, ಅಜ್ಜಪ್ಪ, ಮಹಾನಂದ
ಹಾಜರಿದ್ದರು.