ಜಿಲ್ಲೆಯಲ್ಲಿ ಹಲವು ತಿಂಗಳುಗಳಿಂದ ವಿವಿಧ ಇಲಾಖೆಗಳಲ್ಲಿ
ನೆನೆಗುದಿಗೆ ಬಿದ್ದಿರುವ ಕೈಗಾರಿಕೋದ್ಯಮಿಗಳ
ಸಮಸ್ಯೆಗಳನ್ನು ಬಗೆಹರಿಸಲು ಬೃಹತ್ ಮತ್ತು ಮಧ್ಯಮ
ಕೈಗಾರಿಕೆ ಸಚಿವರು ವಿಭಾಗ ಮಟ್ಟದಲ್ಲಿ ಕೈಗಾರಿಕಾ ಅದಾಲತ್ ನಡೆಸಲು
ತೀರ್ಮಾನಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕೈಗಾರಿಕೋದ್ಯಮಿಗಳು ತಮ್ಮ
ಸಮಸ್ಯೆಗಳ ಕುರಿತು ಕೈಗಾರಿಕಾ ಅದಾಲತ್‍ನ ನಮೂನೆ-1 ಮತ್ತು 2
ಅರ್ಜಿಗಳನ್ನು ತುರ್ತಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ
ನಿರ್ದೇಶಕರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು ಜಿಲ್ಲಾ
ಕೈಗಾರಿಕಾ ಕೇಂದ್ರ ಜಂಟಿನಿರ್ದೇಶಕರ ಕಚೇರಿಯಿಂದ
ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *