ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಹರಡುವಿಕೆಯನ್ನು
ಪರಿಣಾಮಕಾರಿಯಾಗಿ ತಡೆಗಟ್ಟಲು, ಮುಂಬರುವ ಹಬ್ಬಗಳ
ಸಂದರ್ಭದಲ್ಲಿ ಜನಜಂಗುಳಿ ನಿಯಂತ್ರಣ ಕೈಗೊಳ್ಳಲು ಹಾಗೂ
ಸಾರ್ವಜನಿಕರ ಆರೋಗ್ಯ, ಕಾನೂನು ಸುವ್ಯವಸ್ಥೆ ಕಾಪಾಡಲು
ಕೋವಿಡ್-19 ಮಾರ್ಗಸೂಚಿಯನ್ವಯ ಪ್ರತಿ ದಿನ ರಾತ್ರಿ 9
ಗಂಟೆಯಿಂದ ಬೆಳಿಗ್ಗೆ 05 ಗಂಟೆಯವರೆಗೆ ರಾತ್ರಿ ಕಫ್ರ್ಯೂ
ಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಆದೇಶ
ಹೊರಡಿಸಿದ್ದು, ಈ ಆದೇಶ ಸೆ. 13 ರವರೆಗೆ ಜಾರಿಯಲ್ಲಿರುತ್ತದೆ.
ಈ ಮೊದಲು ರಾತ್ರಿ ಕಫ್ರ್ಯೂವನ್ನು ಆ.30 ವರೆಗೆ
ಜಾರಿಗೊಳಿಸಲಾಗಿತ್ತು. ಇದೀಗ ಸರ್ಕಾರದ ಸೂಚನೆಯಂತೆ ಸೆ.13 ರ
ಬೆಳಿಗ್ಗೆ 6 ಗಂಟೆಯವರೆಗೆ ಪ್ರತಿ ದಿನ ರಾತ್ರಿ ಕಫ್ರ್ಯೂ
ಮುಂದುವರೆಸಿದೆ.      
ರಾಜ್ಯ ಸರ್ಕಾರ ಪ್ರಸ್ತುತ ರಾಜ್ಯದಲ್ಲಿನ ಕೋವಿಡ್-19
ಪರಿಸ್ಥಿತಿಯನ್ನು ಅವಲೋಕಿಸಿ ವೈದ್ಯಕೀಯ ಪರಿಣಿತರು ನೀಡಿರುವ
ಸಲಹೆ ಮೇರೆಗೆ ಕಣ್ಗಾವಲು ನಿಯಂತ್ರಣ ಮತ್ತು ಜಾಗೃತಿ
ಮಾರ್ಗಸೂಚಿಗಳನ್ನು ಮುಂದುವರೆಸಲು ಆದೇಶ ನೀಡಿರುವ
ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಈ ಕೂಡಲೇ ಜಾರಿಗೆ ಬರುವಂತೆ ಸೆ.13
ರವರೆಗೆ ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5
ಗಂಟೆಯವರೆಗೆ ರಾತ್ರಿ ಕಫ್ರ್ಯೂ ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ
ಸಾರ್ವಜನಿಕರು ಮುಖಗವಸು ಧರಿಸುವುದು, ದೈಹಿಕ ಅಂತರ
ಕಾಯ್ದುಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ.
ಮದುವೆ ಮತ್ತಿತರ ಕುಟುಂಬ ಸಮಾರಂಭಗಳಿಗೆ
ನೀಡಲಾಗಿದ್ದು, ಸಮಾರಂಭ ಜರುಗುವ ಹಾಲ್‍ನ ಒಟ್ಟು ಸಾಮಥ್ರ್ಯದ
ಶೇಕಡಾ 50 ರಷ್ಟು ಜನ, ಆದರೆ ಗರಿಷ್ಠ 400 ರವರೆಗೆ ಮಾತ್ರ
ಸೇರಲು ಅವಕಾಶ ನೀಡಲಾಗಿದೆ.
   ಸಾರ್ವಜನಿಕರು ಕೋವಿಡ್-19 ಮಾರ್ಗಸೂಚಿಗಳನ್ನು
ಅನುಸರಿಸದೇ ಇದ್ದಲ್ಲಿ ಸಾಂಕ್ರಾಮಿಕ ರೋಗ ಕಾಯ್ದೆ ಹಾಗೂ
ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ಕಾನೂನು ಕ್ರಮ
ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *