ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ
ಅವರು ಅಕ್ಟೋಬರ್ 01 ಮತ್ತು 02 ರಂದು ಎರಡು ದಿನಗಳ ಜಿಲ್ಲಾ
ಪ್ರವಾಸ ಕೈಗೊಳ್ಳಲಿದ್ದಾರೆ.
ಸಚಿವರು ಅ.01 ರ ರಾತ್ರಿ ಹಿರಿಯೂರಿನಿಂದ ಹೊರಟು ರಾತ್ರಿ 10
ಗಂಟೆಗೆ ದಾವಣಗೆರೆಗೆ ಆಗಮಿಸಿ, ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ
ಮಾಡುವರು.
ಅ.02 ರಂದು ಬೆಳಿಗ್ಗೆ 8.30ಕ್ಕೆ ಎ.ವಿ.ಕೆ. ಕಾಲೇಜ್ ರಸ್ತೆಯಲ್ಲಿರುವ ಆದಿ
ಕರ್ನಾಟಕ ವಿದ್ಯಾ ಅಭಿವೃದ್ದಿ ಸಂಘದಲ್ಲಿರುವ ಮಹಾತ್ಮ ಗಾಂಧೀಜಿ
ಪುತ್ಥಳಿಗೆ ಮಾಲಾರ್ಪಣೆ ಮಾಡುವರು. ಬೆ.9 ಗಂಟೆಗೆ
ಶ್ರೀರಾಮನಗರದಲ್ಲಿರುವ ಗಾಂಧಿಭವನದಲ್ಲಿ ರಾಷ್ಟ್ರಪಿತ ಮಹಾತ್ಮಾ
ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ಜನ್ಮ ದಿನಾಚರಣೆ
ಹಾಗೂ ಅಜಾದಿ ಕಾ ಅಮೃತ್ ಮಹೋತ್ಸವ್ ಶೀರ್ಷಿಕೆಯಡಿ ಏರ್ಪಡಿಸಿದ
ಮ್ಯಾರಾಥಾನ್ ಓಟ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ
ಪ್ರಶಸ್ತಿ ಪ್ರಧಾನ ಮಾಡುವರು.
ಬೆಳಿಗ್ಗೆ 11 ಗಂಟೆಗೆ ಮಹಾನಗರಪಾಲಿಕೆಯ ಆವರಣದಲ್ಲಿ, ಸ್ವಚ್ಚ
ಭಾರತ ಅಭಿಯಾನದಡಿ ಪಾಲಿಕೆಯಿಂದ ಹೊಸದಾಗಿ ಖರೀದಿಸಿರುವ ಕಸ
ವಿಲೇವಾರಿ ವಾಹನಗಳಿಗೆ ಚಾಲನೆ ನೀಡುವರು. 11.15ಕ್ಕೆ
ವಿದ್ಯಾನಗರದಲ್ಲಿರುವ ಕುವೆಂಪು ಕನ್ನಡಭವನದಲ್ಲಿ ದಾವಣಗೆರೆ
ಜಿಲ್ಲಾ ವರದಿಗಾರರ ಕೂಟದ ವತಿಯಿಂದ ಆಯೋಜಿಸಿರುವ ಮಾಧ್ಯಮ
ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ
ಭಾಗವಹಿಸುವರು. ಮಧ್ಯಾಹ್ನ 12 ಗಂಟೆಗೆ ಚಿಗಟೇರಿ ಜಿಲ್ಲಾ
ಆಸ್ಪತ್ರೆಗೆ ಭೇಟಿ ನೀಡಿ, ಎರಡು ಆಕ್ಸಿಜನ್ ಜನರೇಷನ್ ಪ್ಲಾಂಟ್, ಪವರ್
ರೂಂ, ಜನರೇಟರ್ ಸೆಟ್ ಹಾಗೂ ಆಸ್ಪತ್ರೆಯ 65 ಮತ್ತು 66ನೇ
ವಾರ್ಡ್ಗಳ ಉದ್ಘಾಟನೆಯನ್ನು ನೆರವೇರಿಸುವರು. ಮಧ್ಯಾಹ್ನ 12.30ಕ್ಕೆ
ಬೆಂಗಳೂರಿಗೆ ಪ್ರಯಾಣ ಬೆಳೆಸುವರೆಂದು ಸಚಿವರ ಆಪ್ತ
ಕಾರ್ಯದರ್ಶಿ ತಿಳಿಸಿದ್ದಾರೆ.