ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು
ಪ್ರಸಕ್ತ ಸಾಲಿನಲ್ಲಿ ಬಾಲಕರಿಗಾಗಿ ಹೊಯ್ಸಳ ಮತ್ತು ಬಾಲಕಿಯರಿಗಾಗಿ
ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಮಕ್ಕಳ
ದಿನಾಚರಣೆಯಂದು ಪ್ರದಾನ ಮಾಡಲು ಉದ್ದೇಶಿಸಿದ್ದು, ಧೈರ್ಯ,
ಸಾಹಸ ಪ್ರದರ್ಶಿಸಿದ 5 ರಿಂದ 18 ವರ್ಷದೊಳಗಿನ ಮಕ್ಕಳಿಂದ
ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
2003 ರ ಆಗಸ್ಟ್ 01 ಹಾಗೂ ನಂತರ ಜನಿಸಿದ ಮಕ್ಕಳು ಈ
ಪ್ರಶಸ್ತಿಗೆ ಅರ್ಹರಿರುತ್ತಾರೆ. ಪ್ರಶಸ್ತಿ ಪಡೆಯುವ ಮಕ್ಕಳು
ಅಸಾಧಾರಣ ಧೈರ್ಯ ಕಾರ್ಯವನ್ನು ಸಾಧಿಸಿದ್ದು, ಜಿಲ್ಲಾ ಮಟ್ಟದಲ್ಲಿ
ಗುರುತಿಸಿರಬೇಕು. ಪ್ರಕರಣವು ಆಗಸ್ಟ್ 2020 ರಿಂದ ಜುಲೈ 2021
ರೊಳಗೆ ನಡೆದಿರಬೇಕು. ಧೈರ್ಯ, ಶೌರ್ಯವನ್ನು ಪ್ರದರ್ಶಿಸಿದ
ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರಬೇಕು. ಗ್ರಾಮ
ಪಂಚಾಯತ್, ತಾಲ್ಲೂಕು ಪಂಚಾಯತ್, ಶಾಲಾ ಶಿಕ್ಷಕರು
ಸಾಧನೆಯನ್ನು ಗುರುತಿಸಿ ಜಿಲ್ಲಾ ಮಟ್ಟಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಸಲು ಇಚ್ಚಿಸುವವರು ಮಗುವಿನ ಭಾವಚಿತ್ರ,
ಕಾರ್ಯಸಾಧನೆ ತೋರಿದ ಬಗ್ಗೆ ಆರಕ್ಷಕ ಇಲಾಖೆಯ ಪ್ರಾಥಮಿಕ
ತನಿಖಾ ವರದಿ (ಎಫ್.ಐ.ಆರ್), ಜನ್ಮದಿನಾಂಕದ ಬಗ್ಗೆ ಪ್ರಮಾಣಪತ್ರ
ಸಲ್ಲಿಸಬೇಕು. ಧೈರ್ಯ, ಶೌರ್ಯ ತೋರಿಸಿದ ಬಗ್ಗೆ ಪತ್ರಿಕಾ
ಪ್ರಕಟಣೆಗಳು, ಕನ್ನಡ ಭಾಷೆಯಲ್ಲಿ ಭರ್ತಿ ಮಾಡಿದ
ಅರ್ಜಿಗಳೊಂದಿಗೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ
ಅಭಿವೃದ್ಧಿ ಇಲಾಖೆ, 14ನೇ ಮುಖ್ಯರಸ್ತೆ, ಎಂಸಿಸಿ ‘ಬಿ’ ಬ್ಲಾಕ್, ಕುವೆಂಪು

ನಗರ, ದಾವಣಗೆರೆ-4 ಇವರಿಗೆ ಅಕ್ಟೋಬರ್ 16 ರೊಳಗೆ
ದ್ವಿಪ್ರತಿಯಲ್ಲಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು
ಮಕ್ಕಳ ಅಭಿವೃದ್ಧಿ ಇಲಾಖೆ, ದೂರವಾಣಿ ಸಂಖ್ಯೆ 08192-264056 ಕ್ಕೆ
ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *