ಖಾಸಗಿ ಬಸ್ ಮಾಲೀಕರ ಗೋಳು ಕೇಳುವರು ಯಾರು
ಶಿಕಾರಿಪುರ
ಕಾಸಗಿ ಬಸ್ ಮಾಲೀಕರು ಮತ್ತು ಕಾರ್ಮೀಕರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ.
ರಾಜ್ಯದಲ್ಲಿ ಷ್ಟೇಜ್ ಕ್ಯಾರೇಜ ಬಸ್ 17 ಜಿಲ್ಲೆಯಿಂದ 9 ಸಾವಿರ ಬಸ್ ಆರ್ ಟಿ.ಓ.ಪರ್ಮಿಟ್ ಪಡೆದು ಚಲಿಸುತ್ತವೆ ಅದರಲ್ಲಿ ಶಿವಮೊಗ್ಗ ಜಿಲ್ಲೆನಲ್ಲಿ ಸುಮಾರು 700 ಷ್ಟೇಜ್ ಕ್ಯಾರೇಜ ಬಸ್ ಸಂಚರಿಸುತ್ತವೆ. ಪ್ರತಿ 10 ನಿಮಿಷಕೊಮ್ಮೆ ಪೈಪೋಟಿನಲ್ಲಿ ಚಲಿಸುತ್ತವೆ.
ಸುಮಾರು 100 ವರ್ಷ ದಿಂದ ಈ ಕಾಸಗಿ ಬಸ್ ಚಾಲ್ತಿಯಲ್ಲಿವೆ.
ರಾಜ್ಯ ಸರ್ಕಾರ .ಕೆ.ಎಸ್.ಆರ್.ಟಿ.ಸಿ. ಬಸ್ ನಡೆಸಲು ಸಂಸ್ತೆಗೆ ವಹಿಸಿ ಸುಮಾರು 1960 ರಿಂದ ಷ್ಟೇಜಕ್ಯಾರೇಜ ಬಸ್ ಚಾಲ್ತಿನಲ್ಲಿವೆ ಅಂದರೆ 60 ವರ್ಷದಿಂದ ಇಚೆಗೆ ಬಂದಿರುತ್ತವೆ.
ಕೆ.ಎಸ್.ಆರ್.ಟಿ.ಸಿ. ಸುಮಾರು 24 ಸಾವಿರ ಬಸ್ ಗಳಿರುತ್ತವೆ.
ಕೆ.ಎಸ್.ಆರ್.ಟಿ.ಸಿ ಬಸ್ ಕಾಸಗಿಬಸ್ ಎರಡೂ ಷ್ಟೇಜ್ ಕ್ಯಾರೇಜ ಬಸ್ ಆಗಿರುವದರಿಂದ ಎರಡೂ ಸಾರಿಗೆ ಸರ್ಕಾರದ ಕಾನೂನಿನ ಅಡಿನಲ್ಲಿ ಬರುತ್ತವೆ.
ಕಾಸಗಿ ಷ್ಟೇಜ್ ಕ್ಯಾರೇಜ್ ಒಂದು ಬಸ್ ಗೆ 3 ತಿಂಗಳಿಗೆ 48 ಸಾವಿರ ರೂಪಾಯಿ ಅಡವಾನ್ಸ ಟ್ಯಾಕ್ಸ ಕಟ್ಟುತ್ತಾರೆ ಒಂದು ಬಸ್ಸಿಗೆ ವರ್ಷಕ್ಕೆ ಸುಮಾರು2 ಲಕ್ಷ ಟ್ಯಾಕ್ಷ ಕಟ್ಟುತ್ತಾರೆ.ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ಟ್ಯಾಕ್ಷ ಆದಾಯ ಸರ್ಕಾರಕ್ಕೆ ಬರುತ್ತದೆ. ಒಂದು ಬಸ್ಸಿಗೆ ಇನ್ಸೂರೆನ್ಸ ವರ್ಷಕ್ಕೆ 90 ಸಾವಿರ ರೂಪಾಯಿ ಕಟ್ಟುತ್ತಾರೆ. ಡೀಜಲ್ ನಿಂದ ದಿನಕ್ಕೆ 3 ರಿಂದ 4 ಸಾವಿರ ಟ್ಯಾಕ್ಷ ಒಂದು ಬಸ್ಸನಿಂದ ಸರ್ಕಾರಕ್ಕೆ ಆದಾಯ ಬರುತ್ತದೆ.ಅಂದರೆ ಒಂದು ಬಸ್ಸಿಗೆ ಸುಮಾರು 100 ಲೀಟರ್ ಡೀಜಲ್ ಬೇಕು ಅಲ್ಲಿಗೆ 10 ಸಾವಿರ ರೂಪಾಯಿ ಆಗುತ್ತದೆ. ಇದರಲ್ಲಿ 60% ಪರ್ಸಂಟ್ ಸರ್ಕಾರದ ಟ್ಯಾಕ್ಷ ಸೇರಿರುತ್ತದೆ.
ಕೆ.ಎಸ್.ಆರ್.ಟಿ.ಸಿ. ಮಾಸಿಕ ಕಲೆಕ್ಷನ್ ಮೇಲೆ 5% ಪರ್ಸಂಟ್ ಟ್ಯಾಕ್ಷ ಕಟ್ಟಬೇಕು ಒಂದು ರೂಪಾಯಿ ಟ್ಯಾಕ್ಷ ಕೂಡ ಕಟ್ಟುತ್ತಿಲ್ಲ ನಷ್ದಲ್ಲಿದ್ದೇವೆ ಎನ್ನುತ್ತಾರೆ. ಇನ್ಸೂರೆನ್ಸ ಕಟ್ಟುವದಿಲ್ಲ ಕ್ಲೈಮ್ ಕೆ.ಎಸ್.ಆರ್.ಟಿ.ಸಿ.ರವರೆ ಬರಿಸುತ್ತಾರೆ..ಆರ್.ಟಿ.ಓ.ದಿಂದ ಪರ್ಮಿಟ್ ಕೂಡ ಪಡೆಯುವದಿಲ್ಲ.
ಆದರೆ 8-10 ಸಾವಿರ ಕೋಟಿ ರೂಪಾಯಿ ನಷ್ಟ ತೋರಿಸುತ್ತಾರೆ ಇದೆಲ್ಲ ಸರ್ಕಾರ ಬರಿಸುತ್ತದೆ ಶಾಲಾ ಮಕ್ಕಳ ಪಾಸ್ ಹಿರಿಯ ನಾಗರಿಕರ ಪಾಸ್ ಸಬ್ಸಿಡಿ ಸರ್ಕಾರ ಬರಿಸುತ್ತದೆ. ಆದರೆ ಈ ಬಿಳಿಯಾನೆ ಗಳನ್ನಮಾತ್ರ ಸರ್ಕಾರ ಸಾಕುತ್ತಾರೆ.
ಕಾಸಗಿ ಬಸ್ ಮಾಲೀಕರು ಎಲ್ಲಾತರದ ಶಾಲಾ ಮಕ್ಕಳ ಮತ್ತು ಹಿರಿಯನಾಗರಿಕರ ರಿಯಾಯಿತಿ ಪಾಸ್ ಕೊಡುತ್ತಾರೆ ಸರ್ಕಾರ ಒಂದು ಪೈಸೆ ಕೊಡುವದಿಲ್ಲ.
ಇದರ ಮದ್ಯೆ ಕೆ.ಎಸ್.ಆರ್.ಟಿ.ಸಿ. ಬಸ್ ಪರ್ಮಿಟ್ ಪಡೆಯದೆ
ಕಾಸಗಿ ಬಸ್ ಮುಂದೆ ಕಾಂಪಿಟೆಷನ್ ಮಾಡಿ ಪೈಪೋಟಿ ಮಾಡುತ್ತಾರೆ.
ಶಿವಮೊಗ್ಗ ಜಿಲ್ಲೆನಲ್ಲಿ ಕೆ.ಎಸ್.ಆರ್ ಟಿ.ಸಿ. ಬಸ್ ಕಾಸಗಿ ಬಸ್ ಮುಂದೆ ಪೈಪೋಟಿ ನಲ್ಲಿ ಪರ್ಮಿಟ್ ಇಲ್ಲದೆ ಡಿಪೋ ದಿಂದ ಪಾರಂ 4 ನಲ್ಲಿ ಅವರೆ ಟಾಯಮಿಂಗ್ ಮಾಡಿ ಕೊಂಡು ಬಸ್ ಓಡಿಸುತ್ತಾರೆ.
ಇದರಿಂದ ಕಾಸಗಿ ಬಸ್ ಮಾಲೀಕರು ಜಿಲ್ಲಾದಿಕಾರಿಗಳಿಗೆ ಆರ್.ಟಿ.ಓ ಮುಂದೆ ಬಿಕ್ಷುಕರಂತೆ ನಿಂತು ಬೇಡಿಕೊಂಡು. ದೂರು ಕೊಟ್ಟರೂ ಪ್ರಯೋಜನ ವಿಲ್ಲ ಕೆ.ಎಸ್.ಆರ್.ಟಿ.ಸಿ. ಬಸ್ ಪರವಾಗಿ ಅವರಿಗೆ ಸಪೋರ್ಟ ಕೊಡುತ್ತಾರೆ.ಸಾವಿರಾರು ಕೋಟಿ ರೂಪಾಯಿ ಅಡವಾನ್ಸ ಟ್ಯಾಕ್ಷ ಕಟ್ಟುವಂತ ಮಾಲೀಕನಿಗೆ ಗೌರವಕೂಡ ಇರುವದಿಲ್ಲ.ಜಿಲ್ಲಾಧಿಕಾರಿ ಆಫೀಸಿಗೆ ಹೋದರೆ ಬಿಕ್ಷುಕರಂತೆ ನಿಲ್ಲಬೇಕು ಸೌಜನ್ಯಕ್ಕೂ ಕುಳಿತು ಕೊಳ್ಳಲು ಹೇಳುವುದಿಲ್ಲ ಹಾಗಾದರೆ ನಮ್ಮ ರಕ್ಷಿಸುವುದು ಯಾರು ಅಧಿಕಾರಿಗಳ ದಿವ್ಯ ನಿರ್ಲಕ್ಷ ಒಂದು ಕಡೆ ರಾಜಕಾರಣಿಗಳ ಕುತಂತ್ರ ಇನ್ನೊಂದು ರೀತಿ ಹಾಗಾದರೆ ನ್ಯಾಯ ಸಿಗುವುದು ಯಾವಾಗ ನಾವು ನಮ್ಮ ಸಿಬ್ಬಂದಿಗಳು ಆತ್ಮಹತ್ಯೆ ಮಾಡಿಕೊಂಡ ಮೇಲೆ ನಾ
ಕೋವಿಡ್ ನಿಂದ 2 ವರ್ಷದಿಂದ ಬಸ್ ನಿಂತು ಎಷ್ಟೋ ಕಾಸಗಿ ಬಸ್ ಮಾಲೀಕರು ಬ್ಯಾಂಕ ಸಾಲ ಇತರೆ ಸಾಲ ಕಟ್ಟಲಿಕ್ಕಾಗದೆ ಆತ್ಮಹತ್ಯೆಕೂಡ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ಕಾಸಗಿ ಬಸ್ ಮಾಲೀಕರು 6 ತಿಂಗಳ ಟ್ಯಾಕ್ಷ ಮನ್ನಾ ಮಾಡಲು ಭೀಕ್ಷೆ ಬೇಡಿದಹಾಗೆ ಕೇಳಿದರೂ ಒಂದು ರೂಪಾಯಿ ಮನ್ನಾಮಾಡಲಿಲ್ಲ
ಒಂದೆರಡು ತಿಂಗಳಿಂದ ಲೈನಿಗೆ ಬಸ್ ಬಿಟ್ಟಿರುತ್ತಾರೆ ಡೀಜಲ್ ಲೀಟರ್ 103 ಆಗಿದೆ ಇದರ ಮಧ್ಯೆ ಕೆ.ಎಸ್.ಆರ್.ಟಿ.ಸಿ.ಪೈಪೋಟಿ ಇದರಿಂದ ಕಾಸಗಿ ಬಸ್.ಮಾಲೀಕರು ತುಂಬಾ ನೋವಿನಿಂದ ವಿಷ ಕುಡಿಯುವದೊಂದೆ ದಾರಿಯನ್ನುತ್ತಾರೆ.
ಬಸ್ ಒಂದು ಲೀಟರ ಡೀಜಲ್ ಗೆ 4 ಕಿ.ಮೀಟರ್ ಓಡುತ್ತದೆ ಈ ಗಿನ ಕಲೆಕ್ಷನ್ ಒಂದು ಕಿ.ಮೀಟರಗೆ 45 ರೂಪಾಯಿ ಬರಬೇಕು ಕಾರಣ ಡೀಜಲ್ 103 ರೂ.ಲೀಟರ್ ಆಗಿದೆ. ಕಿ.ಮೀ. ಗೆ 20 ರೂ.ಕೂಡ ಬರುತ್ತಿಲ್ಲ ಎನ್ನುತ್ತಾರೆ.
ಜಿಲ್ಲಾದಿಕಾರಿಗಳ ಹತ್ತಿರ ಹೋಗಿ ಈ ಎಲ್ಲ ನೋವಿನ ಬಗ್ಗೆ ವಿವರವಾಗಿ ಹೇಳಿದರೂ ಕೆ.ಎಸ್.ಆರ್.ಟಿ.ಸಿ. ಪರವಾಗಿದ್ದಾರೆ.ತಾವು ಸಮಕ್ಷಮ ಕಾಸಗಿ ಬಸ್ ಮಾಲೀಕರಿಗೆ ಮತ್ತು ಆರ್.ಟಿ.ಓ. ರವರಿಗೆ ಕರೆಸಿ ತಮ್ಮ ಸಮಕ್ಷಮ ಚರ್ಚೆಮಾಡಿ ಎಲ್ಲಿ ಬಸ್ಸಿನ ಅವಶ್ಯಕತೆ ಇದೆ ನೋಡಿ ಕಾನೂನಿನ ಅಡಿ ಪರ್ಮೀಟ್ ನೀಡಿದರೆ ಒಳಿತಾಗಿದ್ದು ನೂರಾರು ವರ್ಷದಿಂದ ಕಾಸಗಿ ಬಸ್ ನಡೆಸಿಕೊಂಡು ಬಂದಂತ ಮಾಲೀಕರಿಗೆ ಮತ್ತುಲಕ್ಷಾಂತರ ಕಾರ್ಮೀಕರಿಗೆ ನಿರುದ್ಯೋಗವಾಗುವದನ್ನ ತಪ್ಪಿಸ ಬಹುದು.
ಪಕ್ಕದ ತಮಿಳ್ ನಾಡಲ್ಲಿ ಈ ರೀತಿ ಕಾಸಗಿ ಬಸ್ ಮತ್ತು ಸರ್ಕಾರಿ ಬಸ್ ಕಾಂಪಿಟೆಷನ್ (ಪೈಪೋಟಿ) ಇರುವದಿಲ್ಲ ಇಡೀ ರಾಜ್ಯದಲ್ಲಿ 60 %ಪರ್ಷಂಟ್ ಸರ್ಕಾರಿಬಸ್ 40% ಪರ್ಸಂಟ್ ಕಾಸಗಿಬಸ್ ಎಲ್ಲಾ ಬಸ್ ಸ್ಟೇಜ ಕ್ಯಾರೇಜ ಮತ್ತು ಆರ್.ಟಿ.ಓ. ಪರ್ಮಿಟ್ ಪಡೆದು ಓಡಿಸುತ್ತಾರೆ.ಮತ್ತು ಟ್ಯಾಕ್ಷ ಅಲ್ಲಿ ನಮ್ಮ ರಾಜ್ಯಕಿಂತ ಕಡಿಮೆ ಇರುತ್ತದೆ. ಎರಡು ಬಸ್ ತುಂಬಾ ಹೊಂದಾಣಿಕೆಯಿಂದ ನಡೆಸುತ್ತಾರೆ.
ನಮ್ಮಲ್ಲಿ ಇದೆ ರೀತಿ ಪೈಪೋಟಿ ಮುಂದು ವರೆದರೆ ಕಾಸಗಿಬಸ್ ಮಾಲೀಕರು ಕಾರ್ಮೀಕರು. ರೈತರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಆತ್ಮಹತ್ಯೆಗೆ ಒಳಗಾಗುತ್ತಾರೆ ಡೀಜಲ್ ರೇಟ್ ದಿನದಿಂದ ದಿನ ಏರುತ್ತಾಯಿದೆ ಟ್ಯಾಕ್ಷ ಬ್ಯಾಂಕ ಸಾಲ ಇತರೆ ಸಾಲ ಕಟ್ಟಲಿಕ್ಕಾಗದೆ ಆತ್ಮಹತ್ಯೆ ಒಂದೆ ದಾರಿಯಾಗಬಾರದು .ಸರ್ಕಾರ ಎಚ್ಚೆತ್ತು ಕೊಂಡು ಕಾಸಗಿಬಸ್ ಮಾಲೀಕರಿಗೆ ಮತ್ತು ಕೆ.ಎಸ್.ಆರ್.ಟಿ.ಸಿ. ಯವರಿಗೆ ಕರೆಸಿ ಚರ್ಚೆಮಾಡಿ ಬಸ್ಸಿನ ಅವಶ್ಯಕತೆ ಇದ್ದಲ್ಲಿ ಪರ್ಮಿಟ್ ಪಡೆದು ಆರ್.ಟಿ.ಓ. ಕೊಟ್ಟ ಟ್ಯಮಿಂಗ್ ಪ್ರಕಾರ ಓಡಿಸಿದರೆ. ಒಳಿತಾಗುತ್ತದೆ. ಇಲ್ಲದೆ ಹೋದರೆ ಕಾಸಗಿ ಬಸ್ ಮಾಲೀಕರು ಮತ್ತು ಇದನ್ನೆ ನಂಬಿಕೊಂಡು ಬಂದಂತ ಕಾರ್ಮಿಕರು ಗ್ಯಾರೇಜ ಮೆಕ್ಯಾನಿಕ್ ಅಟೋಮೊ ಬೈಲ್ ರಿಸೋಲ್ ಟಯರ್ ಡೀಜಲ್ ಬಂಕ್ ಡ್ರೈವರ್ ಕಂಡಕ್ಟರ್ ಎಲ್ಲಾಸೇರಿ ಸುಮಾರು 8-10 ಲಕ್ಷ ಕಾರ್ಮಿಕರು ಬೀದಿ ಪಾಲಾಗುತ್ತಾರೆ
ಇಲ್ಲದೆ ಹೋದರೆ ಶಿವಮೊಗ್ಗ ಜಿಲ್ಲೆ ಬಸ್ ಮಾಲೀಕರು ಹಾಗೂ ಸಿಬ್ಬಂದಿಗಳು ಹೋರಾಟಕ್ಕೆ ಮುಂದಾಗುವುದಲ್ಲದೆ ಅವರ ಜೀವಕ್ಕೆ ತೊಂದರೆ ಆದರೆ ಅಧಿಕಾರಿಗಳು ಹಾಗೂ ಸರ್ಕಾರ ಹೊಣೆ ಯಾಗಬೇಕಾಗುತ್ತದೆ.ಅಧಿಕಾರಿಗಳು ಈ ಕೂಡಲೇ ಗಮನ ಹರಿಸುವುದು ಸೂಕ್ತ
ಮಾದ್ಯಮ ಮಿತ್ರ
ಜಿ ಕೆ ಹೆಬ್ಬಾರ್ ಶಿಕಾರಿಪುರ