ನೊಂದಣಿ ಮಾಡಿಸಲು ರೈತರಿಗೆ ಸೂಚನೆ 

ಜಿಲ್ಲೆಯಲ್ಲಿ 2021-22ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ
ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್
ಬಿಮಾ(ವಿಮಾ) ಯೋಜನೆಯನ್ನು ಜಾರಿಗೊಳಿಸಿದ್ದು, ವಿವಿಧ ವಿಮಾ
ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಬೆಳೆ ಸಾಲ ಪಡೆದ,
ಪಡೆಯದ ರೈತರು ನೋಂದಾಯಿಸಿಕೊಳ್ಳÀಬಹುದು ಎಂದು ಜಂಟಿ
ಕೃಷಿ ನಿರ್ದೇಶಕರು ಸೂಚನೆ ನೀಡಿದ್ದಾರೆ.
       ಬೆಳೆಸಾಲ ಪಡೆದ ರೈತರನ್ನು ಬೆಳೆಸಾಲ ಮಂಜೂರು
ಮಾಡುವಾಗ, ಕಡ್ಡಾಯವಾಗಿ ಬೆಳೆವಿಮೆಗೆ ಒಳಪಡಿಸಲಾಗುವುದು,
ಬೆಳೆ ಸಾಲ ಪಡೆಯದ ಇಚ್ಚೆಯುಳ್ಳ ರೈತರು ಅರ್ಜಿಯೊಂದಿಗೆ
ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ,  ಖಾತೆ ಪುಸ್ತಕ,
ಪಾಸ್ ಪುಸ್ತಕ, ಕಂದಾಯ ರಶೀದಿ ಹಾಗೂ ಆಧಾರ ಸಂಖ್ಯೆಯನ್ನು
ನೀಡಿ ಹತ್ತಿರದ ಬ್ಯಾಂಕ್, ಆರ್ಥಿಕ ಸಂಸ್ಥೆಗಳು ಅಥವಾ ಸಾಮಾನ್ಯ ಸೇವಾ
ಕೇಂದ್ರಗಳಲ್ಲಿ ವಿಮಾ ಕಂತನ್ನು ಪಾವತಿಸಿ ನೋಂದಾಯಿಸಬಹುದು.
ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಕರ್ನಾಟಕ ರೈತ
ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ
ಜಿಲ್ಲೆಯಲ್ಲಿ ಅಧಿಸೂಚನೆಗೊಂಡ ಬೆಳೆಗಳ ವಿವರಗಳ ಪೈಕಿ
ಚನ್ನಗಿರಿ ತಾಲ್ಲೂಕಿನಲ್ಲಿ ಮಳೆ ಆಶ್ರಿತ ಜೋಳ ಮತ್ತು
ಸೂರ್ಯಕಾಂತಿ ಹಿಂಗಾರು ಹಂಗಾಮು ಬೆಳೆಯಾದರೆ ನೀರಾವರಿ ಭತ್ತ
ಬೇಸಿಗೆ ಹಂಗಾಮು ಬೆಳೆಯಾಗಿದೆ.
ಜಗಳೂರು ತಾಲ್ಲೂಕಿನಲ್ಲಿ ಮುಸುಕಿನ ಜೋಳ (ನೀ), ಕಡಲೆ
(ಮ. ಆ), ಈರುಳ್ಳಿ (ನೀ), ರಾಗಿ (ನೀ), ಜೋಳ (ನೀ), ಜೋಳ (ಮ. ಆ),
ಸೂರ್ಯಕಾಂತಿ (ನೀ), ಸೂರ್ಯಕಾಂತಿ (ಮ.ಆ), ಟೋಮ್ಯಾಟೋ
ಹಿಂಗಾರು ಬೆಳೆಯಾದರೆ, ನೀರಾವರಿ ಶೇಂಗಾ ಬೇಸಿಗೆ ಹಂಗಾಮು
ಬೆಳೆಯಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ ಸೂರ್ಯಕಾಂತಿ (ನೀ), ಜೋಳ (ಮ. ಆ),
ರಾಗಿ (ನೀ), ಮುಸುಕಿನ ಜೋಳ (ನೀ), ಟೋಮ್ಯಾಟೋ ಹಿಂಗಾರು
ಹಂಗಾಮು ಬೆಳೆಯಾದರೆ, ನೀರಾವರಿ ಟೋಮ್ಯಾಟೋ, ಶೇಂಗಾ
ಬೇಸಿಗೆ ಹಂಗಾಮು ಬೆಳೆಯಾಗಿದೆ.
ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಜೋಳ (ಮ. ಆ),
ಸೂರ್ಯಕಾಂತಿ (ನೀ), ಹುರುಳಿ (ಮ.ಆ), ಕಡಲೆ (ಮ.ಆ), ಮುಸುಕಿನ
ಜೋಳ (ನೀ) ಹಿಂಗಾರು ಹಂಗಾಮು ಬೆಳೆಯಾದರೆ, ನೀರಾವರಿ ಭತ್ತ,
ಶೇಂಗಾ, ಸೂರ್ಯಕಾಂತಿ ಬೇಸಿಗೆ ಹಂಗಾಮು ಬೆಳೆಯಾಗಿದೆ.
ಹರಿಹರ ತಾಲ್ಲೂಕಿನಲ್ಲಿ ಜೋಳ (ನೀ), ಜೋಳ (ಮ. ಆ),
ಸೂರ್ಯಕಾಂತಿ (ನೀ), ಸೂರ್ಯಕಾಂತಿ (ಮ.ಆ) ಹಿಂಗಾರು ಹಂಗಾಮು
ಬೆಳೆಯಾದರೆ, ನೀರಾವರಿ ಭತ್ತ, ಶೇಂಗಾ ಬೇಸಿಗೆ ಹಂಗಾಮು
ಬೆಳೆಯಾಗಿದೆ.
ಹಿಂಗಾರು ಹಂಗಾಮಿಗಾಗಿ ಮೆಕ್ಕೆಜೋಳ, ಸೂರ್ಯಕಾಂತಿ,
ಹುರುಳಿ, ರಾಗಿ, ಜೋಳ ಬೆಳೆಗಳಿಗೆ ನ.15  ರೈತ ಬೆಳೆ ವಿಮೆಗೆ
ನೋಂದಾಯಿಸಲು ಕೊನೆಯ ದಿನವಾಗಿರುತ್ತದೆ. ಈರುಳ್ಳಿ,
ಟೋಮ್ಯಾಟೊ ಬೆಳೆಗಳಿಗೆ ನ.30 ಕೊನೆಯ ದಿನವಾಗಿರುತ್ತದೆ.
ಕಡಲೆ ಬೆಳೆಗೆ ಡಿ.12 ಕಡೆಯ ದಿನಾಂಕವಾಗಿರುತ್ತದೆ.
ಬೇಸಿಗೆ ಹಂಗಾಮಿಗೆ ಭತ್ತ, ಶೇಂಗಾ, ಸೂರ್ಯಕಾಂತಿ,
ಟೊಮ್ಯಾಟೋ ಈ ಬೆಳೆಗಳಿಗೆ 2022 ರ ಫೆ.28 ಕೊನೆಯ
ದಿನಾಂಕವಾಗಿರುತ್ತದೆ.
ರೈತಬಾಂಧವರು ಅರ್ಜಿಯೊಂದಿಗೆ ಆಧಾರ್ ಸಂಖ್ಯೆ ನಮೂದಿಸಿ,
ನಿಗಧಿತ ದಿನಾಂಕದೊಳಗೆ ಬೆಳೆ ವಿಮೆ ಯೋಜನೆಯಡಿ ನೋಂದಾವಣಿ

ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ
ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ತೋಟಗಾರಿಕೆ
ಇಲಾಖೆ, ಬ್ಯಾಂಕ್ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳನ್ನು
ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *