ಹೊನ್ನಾಳಿಯಲ್ಲಿಂದ ವಿವಿಧ ಸಂಘಟನೆಗಳ ಪಕ್ಷದ ಅಭ್ಯರ್ಥಿ ಶಶಿಕುಮಾರ ಪರ ಪ್ರಚಾರ ಸಭೆಯನ್ನು ಉದ್ದೇಶಿಸಿ ಸಂಯುಕ್ತ ಜನತಾದಳದ ರಾಜ್ಯಧಕ್ಷ ಮಹಿಮಾಪಟೆಲ್ ಮಾತನಾಡಿದರು.

ಚನ್ನಗಿರಿ ಹಾಗೂ ಹೊನ್ನಾಳಿ ತಾಲೂಕುಗಳನ್ನು ಒಳಗೊಡಂತೆ ಶಿವಮೊಗ್ಗ ಜಿಲ್ಲೆಯ ಸಂಯುಕ್ತ ಜನತಾದಳವು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಭದ್ರಾವತಿ ಶಶಿಕುಮಾರ ಇವರನ್ನು ಚುನಾವಣೆ ಕಣಕ್ಕೆ ಇಳಿಸಿದೆ ಎಂದು ಸಂಯುಕ್ತ ಜನತಾದಳದ ರಾಜ್ಯಧಕ್ಷ ಮಹಿಮಾಪಟೆಲ್ ಹೇಳಿದರು.
ಹೊನ್ನಾಳಿಯಲ್ಲಿಂದ ವಿವಿಧ ಸಂಘಟನೆಗಳ ಪಕ್ಷದ ಅಭ್ಯರ್ಥಿ ಶಶಿಕುಮಾರ ಪರ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪಾರದರ್ಶಕ ಆಡಳಿತ ನೀಡುವ ಮೂಲಕ ಮಾಧರಿರಾಜ್ಯವನ್ನಾಗಿ ಮಾಡುವ ಸಂಕಲ್ಪದ ಮೊದಲ ಹೆಜ್ಜೆಯಾಗಿ ಈ ಚುನಾವಣೆ ಪ್ರಯತ್ನ ನೆಡೆಸಿರುವುದಾಗಿ ವಿವರಿಸಿದರು.
ಇಂದಿನ ಪ್ರಜಾಪ್ರಭುತ್ವವು ಭಯ-ಆತಂಕದೊಂದಿಗೆ ಕೆಲವೇ ಜನರ ಕಪಿಮುಷ್ಠಿಯಲ್ಲಿ ಗುಲಾಮಗಿರಿಯ ಮನಸ್ಥಿಯನ್ನು ಜನತೆ ಎದುರಿಸುವುದರಿಂದ ಹೊರಬರುವ ನೈಜ ಸ್ವಾತಂತ್ರ್ಯದ ಪರಿಕಲ್ಪನೆ ಮೂಡಿಸುವ ಉದ್ದೇಶವಾಗಿದ್ದು. ಬಿಹಾರದ ನಿತೀಶ್‍ಕುಮಾರ ರೀತಿಯಲ್ಲಿ ರಾಜ್ಯದಲ್ಲೂ ಶೀಘ್ರತರಹದ ಅಭಿವೃದ್ದಿ ಕಾರ್ಯಗಳಿಗೆ ಪಕ್ಷ ಮುಂದಾಗಲಿದೆ ಎಂದರು.
ಕರ್ನಾಟಕ ರಾಷ್ಟ್ರೀಯ ಸಮಿತಿಯ ರಾಜ್ಯಧಕ್ಷ ರವಿಕೃಷ್ಟರೆಡ್ಡಿ ಮಾತನಾಡಿ ರಾಜ್ಯದ ರಾಜಕಾರಣದಲ್ಲಿ ಪರ್ಯಾಯ ವ್ಯವಸ್ಥೆ ಆಗಬೇಕು ಎಂಬ ದೃಷ್ಟಿಯಲ್ಲಿ ರಾಜ್ಯದ 55 ವಿಧಾನ ಸಭೆಗಳ ಮುಂದಿನ ಅಭ್ಯರ್ಥಿ ಆಕಾಂಕ್ಷಿಗಳ ಸಬೆ ನಡೆಸಿದ್ದು.ಶೀಘ್ರದಲ್ಲೇ 2 ಮತ್ತು 3ನೇ ಹಂತದ ಉಳಿದ ತಾಲೂಕು ಅಭ್ಯರ್ಥಿಗಳ ಸಬೆ ನಡೆಸುವ ಮೂಲಕ “Àರ್ನಾಟಕ ಜನತಾರಂಗ”ಎಂಬ ಹೆಸರಿನಿಂದ ವಿಧಾನ ಸಭೆ ಚುನಾವಣೆಗೆ ಮುಂದಾಗಿರುವುದಾಗಿ ವಿವರಿಸಿದರು.
ಇದೀಗ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಗೆ ಶಿವಮೊಗ್ಗ ಹಾಗೂ ತುಮಕೂರು ಮಾತ್ರ ಸ್ಪರ್ದಿಸಿ ಪ್ರಚಾರ ಕಾರ್ಯ ನಡೆಸುತ್ತಿದ್ದೆವೆ ಎಂದರು.
ಶಿವಮೊಗ್ಗ ಸಂಯುಕ್ತ ಜನತಾದಳದ ಜಿಲ್ಲಾ ಸಂಚಾಲಕ ಎಂ.ಡಿ. ದೇವರಾಜ ಶಿಂಧೆ ಮಾತನಾಡಿ ಪಂಚಾಯ್ತಿ ವಿಕೇಂದ್ರಿಕರಣವಾಗಬೇಕು,ಗ್ರಾಮಗಳ ಸರ್ಕಾರವಾಗಬೇಕಿದೆ.ಸ್ಥಳಿಯ ಗ್ರಾಮ ಪಂಚಾಯ್ತಿ ನಿರ್ದಾರದಿಂದ ತಾಲೂಕು,ಜಿಲ್ಲಾ ಪಂಚಾಯ್ತಿ ಹಾಗೂ ರಾಜ್ಯ ಸರ್ಕಾರದಲ್ಲಿ ಇಲಾಖಾವಾರು ಅಭಿವೃದ್ದಿ ಕಾರ್ಯಗಳ ನಿರ್ದಾರವಾಗಬೇಕಿದೆ ಎಂದರು.
ಶಿವಮೊಗ್ಗ ವಿಧಾನ ಪರಿಷತ್ ಸಂಯುಕ್ತ ಜನತಾದಳದ ಅಭ್ಯರ್ಥಿ ಶಶಿಕುಮಾರ ಅವರು ಮಾತನಾಡಿ ಗ್ರಾಮ ಪಂಚಾಯ್ತಿಯ ಸದಸ್ಯರು ಪಕ್ಷತೀತವಾಗಿ ಗೆಲುವುಸಾಧಿಸಿದ್ದು ಯಾವುದೇ ಪಕ್ಷದ ನಾಯಕರ ಬೆಂಬಲವಿಲ್ಲದೆ ವಯಕ್ತಿಕವಾಗಿ ವರ್ಚಸ್ಸ್‍ನಿಂದ ಗೆದ್ದವರಾಗಿರುವ ನೀವು ನನಗೆ ಮೊದಲ ಪ್ರಶ್ಯಸ್ಥದ ಮತ ನೀಡಿ ಪಕ್ಷದ ನಾಯಕರ ಬೆಂಬಲಿತರಾಗಿ ಗೆದ್ದಿದ್ದರೆ ಪಕ್ಷ ನಿಷ್ಠಗಾಗಿ ನಿಮ್ಮ ಪಕ್ಷದ ನಂತರ ಎರಡನೇ ಪ್ರಶ್ಯಸ್ಥದ ಮತ ನೀಡಿ ಬೆಂಬಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾರಕ ರಾಷ್ಟ್ರೀಯ ಸಮಿತಿಯ ಪ್ರಧಾನಾ ಕಾರ್ಯಧರ್ಶಿ ನಾಗರಾಜ,ಯುವ ಘಟಕದ ಅಧ್ಯಕ್ಷ ನಾಗರಾಜ,ಪಕ್ಷದ ಮುಖಂಡರಾದ ಕೋಲಾರದ ಗಂಗಾಧರ,ಗದಗ ನ ಎಸ್.ಎಸ್.ರೆಡ್ಡಿ,ಮಹಿಳಾ ಘಟಕದ ಅಧ್ಯಕ್ಷೆ ಶಾಂತಕುಮಾರಿ,ಕಾರ್ತಿಕ.ಮುಲ್ಲಾ,ಲಕ್ಷ್ಮೀಶ್ ಇತರರು ಇದ್ದರು.

Leave a Reply

Your email address will not be published. Required fields are marked *