ನಮ್ಮ ಕನ್ನಡ ಭಾಷೆಯಲ್ಲಿ ಉತ್ತಮ ಹೆಸರುಗಳಿವೆ ಆದರೂ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಬಲಿಯಾಗಿ ಮುಸಾಂಬ್ರ. ರಕ್ತ ಪವಲ.ರಕ್ತ ಬಾಳೆ. ಸೀಮೆ ಕತ್ತಾಳೆ ಎಂದು ಹಲವಾರು ಹೆಸರುಗಳಿಂದ ಕರೆಯಲ್ಪಡುವ ಲೋಳೆಸರ ವೇ ಅಲೋವೆರಾ .ಕಾಂಡ ವಿಲ್ಲದೆ ಬೇರುಗಳ ಮೇಲೆ ಗೆಲ್ಲುಗಳಾಗಿ ಬೆಳೆಯುವ ಇದು.ನೀರಿಲ್ಲದೆ ವರ್ಷಗಟ್ಟಲೆ ಬದುಕುವ ವಿಶೇಷ ಸಸ್ಯ.ಹಿಂದೆ ಹಳ್ಳಿಗಳಲ್ಲಿ ದ್ವಾರ್ಬಾಗಿಲಿನ ಒಳಗಡೆ ಮೇಲ್ಬಾಗದಲ್ಲಿ ಇದನ್ನು ಸೆಣಬಿನ ಸಹಾಯದಿಂದ ತಲೆ ಕೆಳಗಾಗಿ ಕಟ್ಟು ತಿದ್ದರು.ತನ್ನ ನೀರನ್ನು ತಾನೇ ತಯಾರಿಸುವ ವಿಶೇಷ ಗುಣದ ಸಸ್ಯ ಈ ಲೋಳೆಸರ.ಇದು ತಂಪು ಗುಣ ಹೊಂದಿದ ಔಷಧಿ ಸಸ್ಯ.ಕೆಂಡದ ಮೇಲೆ ಕಾಯಿಸಿ ಒಳಗಿನ ತಿರುಳು ಸೇವಿಸುವುದರಿಂದ ಕೆಮ್ಮು ವಾಸಿಯಾಗುತ್ತದೆ.
ಅಂದಾಜು ಹತ್ತು ಗ್ರಾಂ ತಿರುಳು ಹಾಗೂ ಒಣ ಶುಂಠಿ ಪುಡಿ ಬೇರಸಿದರೆ ಹೊಟ್ಟೆ ನೋವಿಗೆ ಮದ್ದಾಗುತ್ತದೆ.
ಮಕ್ಕಳಿಗೆ ಮಲ ವಿಸರ್ಜನೆಗೆ ತೊಂದರೆ ಕಂಡು ಬಂದಲ್ಲಿ ತಿರುಳಿನ ರಸದಲ್ಲಿ ಸಾಬೂನು ಸೇರಿಸಿ ಮಗುವಿನ ಸಾಭಿ ಬಳಿ ಸವರುವುದರಿಂದ ಮಲ ವಿಸರ್ಜನೆ ಅನುಕೂಲಕರ ವಾಗುತ್ತದೆ.ಕಾಮಾಲೆ ರೋಗಕ್ಕೆ ತಿರುಳಿನ ರಸ ಉತ್ತಮ ಔಷದಿ.ಇದರ ತಿರುಳಿನ ಜೊತೆ ಅರಿಶಿನ ಪುಡಿಯನ್ನು ಸೇರಿಸಿ ಕಣ್ಣು ನೋವು ಬಂದಾಗ ಸ ಬಾಗದಾ ಕಾಲಿನ ಅಂಗಾಲಿಗೆ ಕಟ್ಟಿದರೆ ಕಣ್ಣು ನೋವು ವಾಸಿಯಾಗುತ್ತದೆ.ತಿರುಳು ಸೇವಿಸಿದರೆ ದೇಹದ ಗಂಟ್ಟು ಮಾಯವಾಗುತ್ತದೆ.ಸ್ನಾನ ಕಿಂತ ಮುಂಚೆ ಕೂದಲು ಹಾಗೂ ಮುಖಕ್ಕೆ ಲೇಪಿಸಿ ಸ್ವಲ್ಪ ಸಮಯದ ಬಳಿಕ ಸ್ನಾನ ಮಾಡಿದರೆ ಶಾಂಪೂ ಅಗತ್ಯವಿರುವುದಿಲ್ಲ.ಲೋಳೆಸರ ಸದ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.ಮೂರುನಾಲ್ಕು ದಶಕಗಳಿಂದ ಹೆಚ್ಚು ಪ್ರಚಾರಕ್ಕೆ ಬಂದಿದೆ.ಅಲೋವೆರಾ ಶಾಂಪೂ. ಕ್ರೀಂ.ಸೋಪು.ಜ್ಯೂಸ್.ಹಲವಾರು ಔಷದಿ ರೂಪದಲ್ಲಿ ಬಳಕೆಯಾಗುತ್ತದೆ.
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ
ಮಾದ್ಯಮ ಮಿತ್ರ
ಜಿ ಕೆ ಹೆಬ್ಬಾರ್ ಶಿಕಾರಿಪುರ