ದಾವಣಗೆರೆ ಜಿಲ್ಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ
ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳ
ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶ್ಯಲ್ಯಗಳ ತರಬೇತಿ
(ಕರಾಟೆ/ಜುಡೋ/ಟೈಕ್ವಾಂಡೋ) ತರಬೇತಿ ನೀಡಲು, ಅರ್ಹ
ತರಬೇತಿ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ನುರಿತ ಬ್ಲಾಕ್‍ಬೆಲ್ಟ್ (ಬ್ಲಾಕ್‍ಬೆಲ್ಟ್) ಮಹಿಳಾ ತರಬೇತಿ
ಶಿಕ್ಷಕರನ್ನು ಹೊಂದಿರುವ ಸಂಸ್ಥೆಗಳಿಗೆ ಪ್ರಥಮ ಆದ್ಯತೆ
ನೀಡಲಾಗುವುದು. ವಾರದಲ್ಲಿ ಎರಡು ದಿನಗಳಂತೆ ಮತ್ತು ದಿನಕ್ಕೆ
60 ನಿಮಿಷಗಳ ಸಮಯದಂತೆ ಒಟ್ಟು 6 ತಿಂಗಳಿಗೆ 48 ಭೋಧನಾ
ಅವಧಿಗಳಲ್ಲಿ ತರಬೇತಿ ನೀಡಬೇಕು. ಮುಖ್ಯ ಕಾರ್ಯನಿರ್ವಾಹಕ
ಅಧಿಕಾರಿಗಳು, ಜಿಲ್ಲಾ ಪಂಚಾಯತ್, ದಾವಣಗೆರೆ ರವರ ನೇತೃತ್ವದ
ಸಮಿತಿಯ ಮೂಲಕ ಜಿಲ್ಲಾ ಮಟ್ಟದಲ್ಲಿ ಗುರುತಿಸಲ್ಪಟ್ಟ
ತರಬೇತಿದಾರರನ್ನು ಆಯ್ಕೆ ಮಾಡಲಾಗುವುದು. ಆಯಾ
ತಾಲ್ಲೂಕಿನ ಕಲ್ಯಾಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ
ಇಲಾಖೆ ಕಲ್ಯಾಣ ಇಲಾಖೆ ಇವರು ಅನುಷ್ಠಾನಾಧಿಕಾರಿ ಆಗಿರುತ್ತಾರೆ. ಪ್ರತಿ
ಒಬ್ಬ ತರಬೇತುದಾರರಿಗೆ ಪ್ರತಿ ಭೋಧನಾ ಅವಧಿಗೆ ಸಂಭಾವನೆ
ರೂ.500/- ಹಾಗೂ ತರಬೇತಿದಾರರ ಪ್ರಯಾಣ ವೆಚ್ಚ ಹಾಗೂ ಇತರೆ
ವೆಚ್ಚಕ್ಕಾಗಿ ರೂ.100/- ರಂತೆ ಪಾವತಿಸಲಾಗುವುದು. ತರಬೇತಿ
ಕಾರ್ಯಕ್ರಮದ ಕುರಿತು ದೂರುಗಳು ಬಾರದಂತೆ ಎಚ್ಚರವಹಿಸಿ,
ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ತರಬೇತಿ
ನೀಡಬೇಕು.
ಅರ್ಜಿಯನ್ನು ಡಿ.31 ರವರೆಗೆ ಆಫ್‍ಲೈನ್‍ನಲ್ಲಿ ಸಲ್ಲಿಸಲು ಅವಕಾಶ
ಕಲ್ಪಿಸಲಾಗಿದ್ದು, ಕಛೇರಿ ಸಮಯದಲ್ಲಿ ಜಿಲ್ಲಾ ಅಧಿಕಾರಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಛೇರಿ, ಜಿಲ್ಲಾಡಳಿತ
ಭವನ, ರೂಂ:46 ದಾವಣಗೆರೆ ಇಲ್ಲಿ ಮುದ್ದಾ ಸಲ್ಲಿಸಬಹುದಾಗಿದೆ. ಹೆಚ್ಚಿನ
ಮಾಹಿತಿಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಛೇರಿಯ
ದೂರವಾಣಿ ಸಂಖ್ಯೆ:08192-262973 ಗೆ ಸಂರ್ಪಕಿಸಬಹುದೆಂದು
ಪ್ರಕಟಣೆ ತಿಳಿಸಿದೆ.