ಹೊನ್ನಾಳಿ; ಪಟ್ಟಣದಲ್ಲಿ 104 ನೇ ದಿಂಡಿ ಮಹೋತ್ಸವವು ಫ್ರೆಬ್ರವರಿ 11 ರಿಂದ 3 ದಿನಗಳು ನಡೆಯಲಿದೆ ಎಂದು ನಾವದೇವ ಶಿಂಪಿ ಸಮಾಜದ ಅಧ್ಯಕ್ಷ ನಾಗರಾಜ್ ಮೌಳೆ ಹೇಳಿದರು.
ದೊಡ್ಡಪೇಟೆ ಪಂಡುರಂಗ ದೇವಸ್ಥಾನದಲ್ಲಿ ನಾಗದೇವ ಶಿಂಪಿ ಸಮಾಜದ ವತಿಯಿಂದ ನಡೆದ ದಿಂಡಿ ಮಹೋತ್ಸವದ ಪೂರ್ವ ಬಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಫ್ರೆಬ್ರವರಿ 13 ರ ದ್ವಾದಸಿಯೆಂದು ಪಾಂಡುರಂಗ ವಿಠಲ ಖುಕುಮಾಯಿ ರಥೋತ್ಸವ ನಡೆಸಲು ಸಮಿತಿ ತಿರ್ಮಾನಿಸಿದ್ದು 11 ರ ದಶಮಿ ಹಾಗು 12 ಎಕಾದಶಿಗಳಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುವುದೆಂದರು.
ಸಭೆಯಲ್ಲಿ ಉಪಧ್ಯಕ್ಷ ಹೆಚ್‍ಕೆ ಜಗನಾಥ್‍ರಾವ್,ಕಾರ್ಯದರ್ಶಿ ಬಿಆರ್ ಜಗನಾಥ್,ಗೌರವ ಅಧ್ಯಕ್ಷ ಪ್ರಹ್ಲಾದ್‍ರಾವ್,ಸತ್ಯನಾರಯಣ್ ಕಠಾರಿ,ಸಹ ಕಾರ್ಯದರ್ಶಿ ನಾಮದೇವ್,ಖಜಾಂಚಿ ಆನಂದರಾವ್,ಸಂತರುಗಳಾದ ಟಿ ಹಾಲೇಶಪ್ಪ,ಬಾಲಕೃಷ್ಣರಾವ್,ಪ್ರೇಮ್‍ನಾಥ್,ಸದಸ್ಯರಾದ ವಿಠಲ ರಾವ್,ಶ್ರೀನಿವಾಸ್,ಗಣಪತಿ,ವಿಜಯಕುಮಾರ,ಮಂಜುನಾಥ,ಪ್ರಶಾಂತ,ಗೋಪಾಲಕೃಷ್ಣ,ಮಹಿಳಾ ಮಂಡಳಿ ಸದಸ್ಯರು ಇದ್ದರು.

Leave a Reply

Your email address will not be published. Required fields are marked *