ಹೊನ್ನಾಳಿ: ಶಿಕ್ಷಣ ಕ್ಷೇತ್ರವು ನಿಂತ ನೀರಲ್ಲ. ಹೊಸ ಪ್ರಯೋಗಗಳ ಮೂಲಕ ಸಮಾಜಕ್ಕೆ ಹಲವು ಹೊಸತನಗಳನ್ನು ನೀಡುವಲ್ಲಿ ಪ್ರಯತ್ನ ಪಟ್ಟಿದ್ದಾರೆ. ಗಾಂಧೀಜಿಯವರ ಮೂಲ ಶಿಕ್ಷಣ, ಕಿಂಟರ್ ಗಾರ್ಡನ್ ಅವರ ಮಕ್ಕಳ ಉದ್ಯಾನವನ ಹೀಗೆ ನಾನ ಶಿಕ್ಷಣ ತಜ್ಞರು ಹೊಸ ಪ್ರಯೋಗಗಳ ಮೂಲಕ ಕಲಿಕೆಯನ್ನು ಸರಳೀಕರಿಸುತ್ತಿದ್ದಾರೆ. ಆ ನಿಟ್ಟನಲ್ಲಿ ಹೊನ್ನಾಳಿ ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ.
1986-87 ನೇ ಸಾಲಿನಲ್ಲಿ ಶಿಕ್ಷಣವು ಹೊನ್ನಾಳಿ ಪಟ್ಟಣದಲ್ಲಿ ನಿಂತ ನೀರಾಗಿತ್ತು ಅಂದು ಹಲವು ಶಿಕ್ಷಣ ಪ್ರೇಮಿಗಳು ತಮ್ಮ ಮಕ್ಕಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂಬ ಆಶಯ ಹೊತ್ತು ಭಾರತೀಯ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಏಕ ವ್ಯಕ್ತಿಯ ಸಂಸ್ಥೆಯಾಗಿಲ್ಲ. ಈ ಸಂಸ್ಥೆಯು 130 ಹೆಚ್ಚು ಸದಸ್ಯರನ್ನು ಹೊಂದಿದ್ದು, ಎಲ್ಲಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. ಇದು ಹೆಸರಿಗೆ ಮಾತ್ರ ಖಾಸಗಿ ಒಡೆತನಕ್ಕೆ ಸೇರಿದ್ದರೂ ಇದೊಂದು ಸಾರ್ವಜನಿಕ ಸಂಸ್ಥೆಯಾಗಿದೆ. 1987ರ ಜನವರಿ 13 ರಂದು ನೋಂದಣಿಯಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಹೊಸತನಗಳನ್ನೆ ಮೈಗೂಡಿಸಿಕೊಂಡು ಬೆಳೆಯುತ್ತಾ ಈ ಸಂಸ್ಥೆಯು ಬೆಳೆಯುತ್ತಿದೆ.
ಪ್ರಾರಂಭದಲ್ಲಿ ಸಣ್ಣ ಬಾಡಿಗೆ ಮನೆಯಲ್ಲಿ ಪ್ರಾಥಮಿಕ ಹಂತದ ಶಾಲೆ ಪ್ರಾರಂಭವಾದ ಈ ಸಂಸ್ಥೆಯು ಈಗ ಸುಸಜ್ಜಿತ ಕಟ್ಟಡಗಳೊಂದಿಗೆ ಪಟ್ಟಣದ ಕೇಂದ್ರದಲ್ಲಿ ವೈಟ್ ಹೌಸ್ ನಂತೆ ಕಂಗೊಳಿಸುತ್ತಿದೆ. 2004 ರಲ್ಲಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, 2009 ರಲ್ಲಿ ರಜತ ಮಹೋತ್ಸವದ ಸವಿನೆನಪಿಗೆ ಕನ್ನಡ ಮಾಧ್ಯಮ ಪ್ರೌಢ ಶಾಲೆ ಪ್ರಾರಂಭವಾಗಿದೆ. ಸ್ಥಳೀಯರಿಂದ ಎಷ್ಟೇ ಒತ್ತಡ ಬಂದರೂ ಇಲ್ಲಿಯವರೆಗೂ ಕನ್ನಡ ಮಾಧ್ಯಮದಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡಲು ಈ ಸಂಸ್ಥೆ ಕಟಿಬದ್ಧವಾಗಿ ಯಶಸ್ಸನ್ನು ಕಂಡಿದೆ. ಪ್ರಾಥಮಿಕ ಶಾಲೆಯಲ್ಲಿ ಸರಾಸರಿ 400 ವಿದ್ಯಾರ್ಥಿಗಳು ವಾರ್ಷಿಕವಾಗಿ ಓದುತ್ತಿದ್ದಾರೆ ಎಂದರೆ ಕನ್ನಡ ಮಾಧ್ಯಮದ ಮಹತ್ವವನ್ನು ಇಲ್ಲಿ ಕಾಣಬಹುದಾಗಿದೆ.
ಕನ್ನಡ ಮಾಧ್ಯಮ: ಸಂಸ್ಥೆಯ ಮೂಲ ಉದ್ದೇಶ ಕನ್ನಡ ಮಾಧ್ಯಮವಾಗಿರುವುದರಿಂದ ಇಲ್ಲಿ ಕನ್ನಡದಲ್ಲಿಯೇ ಶಿಕ್ಷಣವನ್ನು ನೀಡಲಾಗುತ್ತಿದೆ. ಈ ಶಿಕ್ಷಣ ಪಡೆದ ಸಹಸ್ರಾರು ಸಂಖ್ಯೆ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹೊಸ ಪ್ರಯೋಗಗಳು: ಪ್ರತಿ ಶನಿವಾರ ಪುಸ್ತಕ ರಹಿತ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನ ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳಿಗೆ ಅವಕಾಶವನ್ನು ನೀಡಲಾಗುತ್ತದೆ.
ಕ್ಷೇತ್ರ ವೀಕ್ಷಣೆ: ಪೋಲೀಸ್ ಠಾಣೆ, ಬ್ಯಾಂಕ್, ಅಂಚೆ ಕಚೇರಿ, ತಾಲ್ಲೂಕು ಕಚೇರಿ, ಕೋರ್ಟ್, ಹೊನ್ನಾಳಿಯ ಹೊಳೆ, ದಿಡ್ಡಿ ಬಾಗಿಲು, ದೇವಸ್ಥಾನಗಳ ಸ್ವಚ್ಛತೆ ಯಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಸಾಮಾಜಿಕರಣ ಹೊಂದಲು ಸಹಕಾರಿ ನೀಡಲಾಗುತ್ತಿದೆ.
ನೂರಾರು ಕಾರ್ಯಕ್ರಮಗಳು: ಶಾಲಾ ಚಟುವಟಿಕೆಯಲ್ಲಿ ಇಲಾಖೆ ನಿರ್ದೇಶಿಸಿದ ಕಾರ್ಯಕ್ರಮಗಳ ಜೊತೆಜೊತೆಯಲಿ, ಪತ್ರಿಕಾ ದಿನಾಚರಣೆಯಲ್ಲಿ ಸಾಧನೆ ಮಾಡಿದ ಹಿರಿಯ ಪತ್ರಕರ್ತರಿಗೆ ಸನ್ಮಾನ, ಸ್ವಾತಂತ್ರ್ಯ ಮುನ್ನ ದಿನದ ಮೂಲಕ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಇಮ್ಮಡಿಗೊಳಿಸುವುದು, ಪುಸ್ತಕ ಜೋಳಿಗೆಯ ಮೂಲಕ ಪುಸ್ತಕ ಓದುವ ಚಟವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದು, ವಿಜ್ಞಾನ ಹಬ್ಬದ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವುದು, ಕರಾಟೆ, ನೃತ್ಯ, ಜಾನಪದ ಗೀತೆ ಗಾಯನದಂತಹ ಕಾರ್ಯಕ್ರಮಗಳ ಮೂಲಕ ಕಲಾಭಿಮಾನವನ್ನು ಮೂಡಿಸುವುದು ಸೇರಿ ನೂರಾರು ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬೆಳೆಸುವ ಜೊತೆಗೆ ಸಾಮಾಜೀಕರಣಗೊಳಿಸುವ ಪ್ರಯತ್ನವು ನಿರಂತರವಾಗಿ ನಡೆಯುತ್ತಿದೆ.
ವಾರ್ಷಿಕ ಕನಿಷ್ಠ ಮೂರು ಪೋಷಕರ ಸಭೆಯ ಆಯೋಜನೆಯ ಮೂಲಕ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಅವಲೋಕಿಸಲಾಗುತ್ತದೆ. ಸಂಸ್ಥೆಯ ಹಾಲಿ ಕಾರ್ಯದರ್ಶಿಯಾಗಿ ಶಿಕ್ಷಣ ಪ್ರೇಮಿ ಡಾ. ಎಚ್.ಪಿ ರಾಜ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ವೈದ್ಯ ವೃತ್ತಿಯ ಜೊತೆಗೆ ಶಿಕ್ಷಕರನ್ನು ರೂಪುಗೊಳಿಸುವಲ್ಲಿ ಹಲವು ಸಭೆಗಳ ಮೂಲಕ ಹೊಸ ಪ್ರಯೋಗಗಳಿಗೆ ಪ್ರೋತ್ಸಾಹವನ್ನ ನೀಡುತ್ತಿದ್ದಾರೆ. ಸರಳ ಸಜ್ಜಿನಿಕೆಯ ನಿವೃತ್ತ ಇಂಜಿನಿಯರ್ ಎಲ್.ಎಸ್ ವೈಶ್ಯರ ಅಧ್ಯಕ್ಷರಾಗಿದ್ದಾರೆ. ಇವರ ನೇತೃತ್ವದ ತಂಡವು ನಿರಂತರವಾಗಿ ಸಂಸ್ಥೆಯನ್ನು ಬೆಳೆಸುತ್ತಿದೆ. ಇಲ್ಲಿನ ಶಿಕ್ಷಕರಲಿ ಕವಿಗಳಿದ್ದಾರೆ, ಹಾಡುಗಾರರಿದ್ದಾರೆ, ಭಾಷಣಕಾರರು ಇದ್ದಾರೆ. ಇವರ ನೇತೃತ್ವದಲ್ಲಿ ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆಯಾಗುವುದರಲ್ಲಿ ಸಂದೇಹ ಇಲ್ಲ ಎನ್ನಬಹುದಾಗಿದೆ. ಪ್ರತಿಭಾ ಕಾರಂಜಿ, ಕ್ರೀಡೆಯಲ್ಲಿ ರಾಜ್ಯ ಮಟ್ಟ ಪ್ರತಿನಿಧಿಸಿದ ವಿದ್ಯಾರ್ಥಿಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ.
ವಿಜ್ಞಾನ ಜಾತ್ರ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಯವರೊಂದಿಗೆ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ವಿದ್ಯಾರ್ಥಿಗಳು ಮಾಡಿರುವ ಪ್ರಯೋಗ ವೀಕ್ಷಣೆ.
1ಎ
ವಿಜ್ಞಾನ ಜಾತ್ರೆಯಲ್ಲಿ ವಿದ್ಯಾರ್ಥಿಗಳು ತಾವು ಸಂಗ್ರಹಿಸಿರುವ ಎಲೆಗಳೊಂದಿಗೆ
1ಬಿ
ಸೂರ್ಯಗ್ರಹಣ ವೀಕ್ಷಿಸುತ್ತಿರು ವಿದ್ಯಾರ್ಥಿಗಳು ಮಾರ್ಗದರ್ಶನ ಮಾಡುತ್ತಿರುವ ಶಿಕ್ಷಕರು.
1ಸಿ
ಮಹತ್ಮಾ ಗಾಂಧೀಜಿ, ಶಾಸ್ತ್ರೀಜಿ ಹಾಗೂ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಆರ್ ಎಸ್ ಸಿದ್ದಪ್ಪಜಿಯ ಜಯಂತಿ.
1ಡಿ.
ತುಂಗಾಭದ್ರಾ ನದಿ ವೀಕ್ಷಣೆಗೆ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಮಾಹಿತಿ ನೀಡಿದರು.