ಶಿಕ್ಷಣ ಯಾರಿಗೆ ಬೇಕಾಗಿಲ್ಲ ಎಲ್ಲರಿಗೂ ಬೇಕು, ಶಿಕ್ಷಣದ ಅವಶ್ಯಕತೆ ತುಂಬಾ ಇದೆ, ದೇಶ ಸುತ್ತಿ ನೋಡು ಕೋಶ ಓದಿ ನೋಡು ಅಂತ ಹಿಂದಿನ ಕಾಲದ ಹಿರಿಯರು ಸುಮ್ಮನೆ ಹೇಳಿಲ್ಲ ಶಿಕ್ಷಣವೆಂಬುದು ಎಲ್ಲರಿಗೂ ಅವಶ್ಯಕವಾಗಿದೆ, ಅದು ಯಾರ ಮನೆಯ ಸ್ವಂತವಲ್ಲ ಎಲ್ಲರಿಗೂ ದೊರೆಯಬೇಕು.
ಕೆಲವು ವರ್ಷಗಳ ಹಿಂದೆ ಶಿಕ್ಷಣಕ್ಕೆ ತನ್ನದೇ ಆದ ಬೆಲೆ , ತೂಕ,ಗೌರವ,ಮಹತ್ವ ತುಂಬಾನೆ ಇತ್ತು, ಅದೇ ಇವತ್ತಿನ ಕಾಲದಲ್ಲಿ ಶಿಕ್ಷಣ ವ್ಯವಸ್ಥೆ ವ್ಯಾಪಾರಿಕರಣವಾಗಿ ಮಾರ್ಪಟ್ಟಿದೆ. ಇವತ್ತಿನ ಶಿಕ್ಷಣ ವ್ಯವಸ್ಥೆ ಯಾವ ಮಟ್ಟದಲ್ಲಿ ಇದೆ ಎಂದರೆ ತಿಳಿಯುವುದಕ್ಕೆ ಕಷ್ಟಸಾಧ್ಯ ವ್ಯವಸ್ಥೆಯಾಗಿದೆ. ಪ್ರಾಚೀನ ಕಾಲದ ಶಿಕ್ಷಣ ವ್ಯವಸ್ಥೆಯೆಂಬುದು ಅವರಿಗೊಂದು ನ್ಯಾಯ,ಇವರಿಗೊಂದು ನ್ಯಾಯದ ರೂಪದಲ್ಲಿತ್ತು. ಓದಿನಿಂದಲೇ ಏನಾದರೂ ಸಾಧಿಸಬೇಕೆಂಬ ಆಸೆಯನ್ನಿಟ್ಟುಕೊಂಡು ಕೆಲವು ವ್ಯಕ್ತಿಗಳು ಬಂದ ಕಷ್ಟಗಳನ್ನೆಲ್ಲ ಎದುರಿಸಿಕೊಂಡು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ಉದಾಹರಣೆಗಳಿವೆ..
ಗುರುಕುಲ ಶಿಕ್ಷಣ:
ಪ್ರಾಚೀನ ಯುಗದಲ್ಲಿ ಗುರುಕುಲ ಶಿಕ್ಷಣ ವ್ಯವಸ್ಥೆಯಲ್ಲಿ ಉನ್ನತ ವರ್ಗದವರ ಮಕ್ಕಳಿಗೆ ಹಾಗೂ ರಾಜಮನೆತನದ ಮಕ್ಕಳಿಗೆ ಗುರುಕುಲ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಕಲಿಸಿಕೊಡುತ್ತಿದ್ದರು. ಅದರಲ್ಲಿ ಪುರುಷರೆ ಹೆಚ್ಚು ವ್ಯಾಸಂಗ ಮಾಡಬೇಕು ಎಂಬ ಪ್ರತೀತಿಯೂ ಆ ದಿನಗಳಲ್ಲಿ ಇತ್ತು. ಹೆಣ್ಣುಮಕ್ಕಳಿಗೆ ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾಗಿದ್ದರು. ಸಾಮಾನ್ಯ ವರ್ಗದ ಮಕ್ಕಳಿಗೆ, ಕಾರ್ಮಿಕ ವರ್ಗದ ಜನಗಳ ಮಕ್ಕಳಿಗೆ ವಿದ್ಯಾಭ್ಯಾಸದ ಅರಿವೇ ಇರುತ್ತಿರಲಿಲ್ಲ. ರಾಜಮನೆತನದ ಮನೆಗಳಲ್ಲಿ ಕೆಲಸ ಮಾಡುತ್ತಾ ಕೊಟ್ಟಷ್ಟು ಊಟ ಮಾಡುತ್ತಾ ಮುಂಜಾನೆಯಿಂದ ಸಂಜೆಯವರೆಗೆ ಮೈಮುರಿದು ಕೆಲಸ ಮಾಡುವುದರಲ್ಲಿ ತಲ್ಲೀನರಾಗಿ ಶಿಕ್ಷಣ ವಂಚಿತರಾಗುತ್ತಿದ್ದರು.
ಶಿಕ್ಷಣವೆಂಬುದು ಯಾರಪ್ಪನ ಸ್ವತ್ತಲ್ಲ ಶಿಕ್ಷಣ ಎಂಬ ಹಾಲನ್ನು ಕುಡಿದವರು ಒಂದಲ್ಲ ಒಂದು ದಿನ ಗರ್ಜನೆ ಮಾಡಲೇಬೇಕು ಎಂಬ ವಾಕ್ಯದಂತೆ ಕೆಲವು ಮಹಾನ್ ವ್ಯಕ್ತಿಯಾದ ಎಪಿಜೆ ಅಬ್ದುಲ್ ಕಲಾಂ ಕಡುಬಡತನದಲ್ಲಿ ಓದಿ ದೇಶದ ಉನ್ನತ ಮಟ್ಟದ ಹುದ್ದೆಯನ್ನು ಹೇರುವುದರ ಮೂಲಕ ದೇಶದ ಗೌರವವನ್ನು ತರುವುದರ ಮೂಲಕ ಅನೇಕ ವಿಜ್ಞಾನಿಗಳಿಗೆ ಮಾದರಿಯಾಗಿದ್ದಾರೆ. ಅದೇ ರೀತಿಯಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಜಾತಿಯ ಕೆನ್ನಾಲಿಗೆಯಲ್ಲಿ ಬೆಂದು ಹಸಿದ ಹೊಟ್ಟೆಯಲ್ಲಿ ಓದಿ ದೇಶಗಳನ್ನೆಲ್ಲ ಸುತ್ತಾಡಿ ಉನ್ನತ ವ್ಯಾಸಂಗ ಮಾಡುವುದರ ಮೂಲಕ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಅಸಮಾನತೆಯ ವಿರುದ್ಧ ಹೋರಾಟ ಮಾಡಿ ಒಳ್ಳೆಯ ಪ್ರಶಂಸೆಯನ್ನು ಪಡೆದು ದೇಶಕ್ಕೆ ಕಾನೂನು ರೂಪಿಸಿ ಕೊಟ್ಟಂತಹ ಮಹಾನ್ ವ್ಯಕ್ತಿಯ ಚರಿತ್ರೆಯನ್ನು ನಾವು ನೋಡಬಹುದಾಗಿದೆ.
ದಿನಗಳು ಕಳೆಯುತ್ತಿದ್ದಂತೆ ಶಿಕ್ಷಣದಲ್ಲಿ ಕೂಡ ಬದಲಾವಣೆಗಳನ್ನು ನಾವು ನೋಡುತ್ತಾ ಬಂದಿದ್ದೇವೆ. ಪ್ರತಿಯೊಬ್ಬರಿಗೂ ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು ಹಾಗೂ ಅವರ ಕರ್ತವ್ಯ,ಯಾರುಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡುತ್ತಾ ಬಂದಿವೆ. ಅದರೊಟ್ಟಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಸಮುದಾಯಗಳಿಗೆ ಶಿಕ್ಷಣ ವ್ಯವಸ್ಥೆಯನ್ನು ಉಚಿತವಾಗಿ ನೀಡುತ್ತ ಬಂದಿದೆ. ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ರೀತಿಯಲ್ಲಿ ಒತ್ತು ನೀಡುವುದರ ಮೂಲಕ ದೇಶದಲ್ಲಿ ಅಜ್ಞಾನದಿಂದ ಸುಜ್ಞಾನದ ಕಡೆಗೆ ತರಬೇಕೆಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತ ಬಂದಿವೆ. ಅನೇಕ ಶಿಕ್ಷಣದ ಜೊತೆಗೆ ಮಧ್ಯಾಹ್ನದ ಉಪಹಾರ, ಹಾಲು, ಮೊಟ್ಟೆ, ಪುಸ್ತಕಗಳು, ಸಮವಸ್ತ್ರಗಳು, ವಿದ್ಯಾರ್ಥಿವೇತನ, ಶೈಕ್ಷಣಿಕ ಪ್ರವಾಸ ಹೀಗೆ ಹಲವಾರು ರೀತಿಯ ಕಾರ್ಯ ಯೋಜನೆಗಳನ್ನು ಜಾರಿಗೆ ತಂದು ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಸರ್ಕಾರಗಳು. ಇμÉ್ಟಲ್ಲಾ ಯೋಜನೆಗಳಿಗೆ ಚಾಲನೆ ನೀಡಿದ್ದರು ಕೂಡ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದಕ್ಕೆ ಜನರು ಇದೇಟ್ಟು ಹಾಕುತ್ತಿದರೆ.
ತರಕಾರಿ ಮಾರುಕಟ್ಟೆಯಂತಹದ ಶಿಕ್ಷಣ :
ಇವತ್ತಿನ ದಿನಮಾನಗಳಲ್ಲಿ ಖಾಸಗೀಕರಣಕ್ಕೆ ಹೆಚ್ಚಿನ ಮಹತ್ವ ಹಾಗೂ ಆದ್ಯತೆಯನ್ನು ನೀಡುತ್ತಾ ಬಂದಿದೆ ಸರ್ಕಾರಗಳು ಶಿಕ್ಷಣ ಎಂಬುವುದು ವ್ಯಾಪಾರೀಕರಣದ ಮಾರುಕಟ್ಟೆಯಾಗಿ ಪರಿಭ್ರಮಣಿಸಿದೆ. ಮಾರುಕಟ್ಟೆಗಳಲ್ಲಿ ವಿಧವಿಧವಾದ ತರಕಾರಿಗಳು,ಹಣ್ಣುಗಳಿಗೆ ಬೆಲೆಯಿಟ್ಟು ಮಾರಾಟ ಮಾಡಿದರೆ, ಶಿಕ್ಷಣ ಎಂಬ ಅಸ್ತ್ರವೇ ಇಡಿದು ಲಕ್ಷ ಲಕ್ಷಗಟ್ಟಲೆ ಹಣಗಳನ್ನು ಗಳಿಸುವ ವ್ಯಾಪಾರಿ ಸಂಸ್ಥೆಗಳನ್ನು ಈ ಜಗದಲಿ ನಾವು ನೋಡಬಹುದು.
ಹಳ್ಳಿಯಿಂದ ಹಿಡಿದು ನಗರದವರೆಗೂ ಕೂಡ ಖಾಸಗಿಕರಣಕ್ಕೆ ಹೆಚ್ಚಿನ ಮಹತ್ವ ದೊರಕುತ್ತಾ ಬಂದಿದೆ. ಹಳ್ಳಿಗಾಡಿನ ಮಕ್ಕಳು ಕೂಡ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಒಬ್ಬ ಸರ್ಕಾರಿ ನೌಕರ ಸರ್ಕಾರದ ಸೌಲಭ್ಯಗಳನ್ನು ಪಡೆಯುವುದಕ್ಕೆ ಸರ್ಕಾರ ಬೇಕು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ವಿದ್ಯಾಭ್ಯಾಸ ಕೊಡಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಸರ್ಕಾರಿ ನೌಕರಿದಾರರು ಮತ್ತು ರಾಜಕೀಯ ವ್ಯಕ್ತಿಗಳ ಮಕ್ಕಳು ಯಾಕೆ ಸರ್ಕಾರಿ ಶಾಲೆಗೆ ಹೋಗುತ್ತಿಲ್ಲ?
ರಾಜಕೀಯ ವ್ಯಕ್ತಿಗಳು ಕೂಡ ತಮ್ಮ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸುತ್ತಿದ್ದಾರೆ. ಇವರಿಗೆ ಸರ್ಕಾರ ಬೇಕು ಸರ್ಕಾರಿ ಶಾಲೆ ಬೇಕಾಗಿಲ್ಲ ಎಂತಹ ವಿಪರ್ಯಾಸ!! ಯಾವುದೇ ನೌಕರಿದಾರನಗಿರಲಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸಿ ವಿದ್ಯಾಭ್ಯಾಸವನ್ನು ಕೊಡಿಸುವುದು ಇವತ್ತು ದಿನಮಾನಗಳಲ್ಲಿ ಹೆಚ್ಚಾಗಿವೆ.
ಪ್ರಸ್ತುತ ದಿನಮಾನಗಳಲ್ಲಿ ಫೌಡ ಶಾಲೆಗಳಲ್ಲಿ 10ನೇ ತರಗತಿ ಯ ಫಲಿತಾಂಶ ಪ್ರಕಟವಾಗಿವೆ ಶಾಲೆಯಲ್ಲಿ ದಾಖಲಾಗಿರುವ ಎಲ್ಲಾ ಮಕ್ಕಳು ಕೂಡ ಅತ್ಯುನ್ನತ ಶ್ರೇಣಿ, ಪ್ರಥಮ ದರ್ಜೆ, ದ್ವಿತೀಯ ದರ್ಜೆಗಳಲ್ಲಿ ತೇರ್ಗಡೆ ಹೊಂದಿದ್ದಾರೆ. ಮಕ್ಕಳಲ್ಲಿ ಗುಣಾತ್ಮಕವಾದ ಬೌದ್ಧಿಕ ಮಟ್ಟ ಕಡಿಮೆ ಇರುತ್ತದೆ ಸ್ವಂತ ಆಲೋಚನೆಗಳು ಇರುವುದಿಲ್ಲ ಅಂತಹ ವ್ಯವಸ್ಥೆ ಇಂದಿನ ಶಿಕ್ಷಣದಲ್ಲಿ ಬಂದೊದಗಿದೆ.
ಕೆಲವೊಮ್ಮೆ ಸರ್ಕಾರಗಳು ಮಾಡುವ ಎಡವಟ್ಟು ಗಳಿಂದ ಮಕ್ಕಳಿಗೆ ವಿದ್ಯಾಭ್ಯಾಸದ ಕೊರತೆಗಳು ಉಂಟಾಗುತ್ತವೆ. ಅದರಲ್ಲಿ ಹಳ್ಳಿಯ ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ ಪ್ರಸ್ತುತ ದಿನಮಾನದಲ್ಲಿ ಕರೋನವೈರಸ್ ಎಂಬ ಸೋಂಕಿನಿಂದ ಅನೇಕ ತಿಂಗಳು ಕಾಲ ಶಾಲೆಗಳಿಗೆ ಬೀಗ ಹಾಕಿದ್ದರು ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆಗಳನ್ನು ನೀಡಿದ್ದೇವೆ ಎನ್ನುತ್ತಿದೆ ಸರ್ಕಾರ. ಆದರೆ ರಾಜಕೀಯ ಬೃಹತ್ ಸಭೆ ಸಮಾರಂಭಗಳಿಗೆ ಅವಕಾಶವನ್ನು ಮಾಡಿಕೊಳ್ಳುವುದು ಎಷ್ಟು ಸರಿ?, ಲಾಕ್ ಡೌನ್ ವೇಳೆ ರಜೆಗಳು ಹೆಚ್ಚುತ ಹೋಗುತ್ತಿದ್ದಂತೆ. ಹಳ್ಳಿ ಮಕ್ಕಳ ವಿದ್ಯಾಭ್ಯಾಸವು ಹದಗೆಟ್ಟು ಹೋಗಿದೆ. ಗ್ರಾಮೀಣ ವಿದ್ಯಾರ್ಥಿಗಳು ಹೊಲ ಮನೆಕೆಲಸಗಳನ್ನು ಮಾಡುವುದರಲ್ಲಿ ತಲ್ಲೀನರಾಗಿದರು ವಿದ್ಯಾಭ್ಯಾಸದ ಕಡೆ ಗಮನ ಹರಿಸುತ್ತಿಲ್ಲ ಎಂಬ ಮಾತುಗಳು ಶಿಕ್ಷಣ ತಜ್ಞರಿಂದ ಕೇಳಿ ಬರುತ್ತಿದೆ. ಶಿಕ್ಷಣ ವ್ಯವಸ್ಥೆ ಅತಂತ್ರ ಸ್ಥಿತಿಗೆ ಬಂದು ತಲುಪಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆಯ ಮುಖವನ್ನೇ ನೋಡದೆ ಬೆಂಗಳೂರು ಕಡೆಗೆ ಕೂಲಿ ಕೆಲಸಕ್ಕೆ ಹೋಗುತ್ತ ಇದರೆ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಾಲೆಯ ಕಡೆ ಹೋಗದೆ ಇರುವುದು ವಿಪರ್ಯಾಸ ಇವತ್ತಿನ ಶಿಕ್ಷಣ ವ್ಯವಸ್ಥೆಲ್ಲಿ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಗಳ ಮನೆ ಮನೆಯ ಬಾಗಿಲಿಗೆ ಹೋಗಿ ನಾವು ಶಿಕ್ಷಣ ನೀಡುತ್ತೇವೆ ನೀವು ಬನ್ನಿ ಶಾಲೆಗೆ ಅಂದ್ರೂ ಕೂಡ ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಹೋಗುವ ನಿರ್ಧಾರ ಮಾಡಿಲ್ಲ. ಎಂಥ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಶಿಕ್ಷಣ ಸಿಗುವುದೇ ಕಷ್ಟ ಸಾಧ್ಯ, ಅದೆಷ್ಟು ಮಹಾನ್ ವ್ಯಕ್ತಿಗಳು ಓದಿ ತನ್ನ ದೇಶಕ್ಕೆ ಮಾದರಿಯಾಗಿದ್ದಾರೆ. ಇವತ್ತಿನ ಶಿಕ್ಷಣ ವ್ಯವಸ್ಥೆ ಉಚಿತವಾಗಿ ಎಲ್ಲರಿಗೂ ನೀಡಿದರೂ ಕೂಡ ಅದೆμÉ್ಟೂೀ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಖಾಸಗಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಮಕ್ಕಳ ವ್ಯಕ್ತಿತ್ವ ವಿಕಾಸ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತ ಬಂದಿವೆ, ಇನ್ನೊಂದು ಕಡೆ ಸರ್ಕಾರಿ ಶಾಲೆಗಳಲ್ಲಿ ಓದಿಕೊಂಡು ಕೂಲಿ ಕೆಲಸಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳು ಒಂದುಕಡೆ ಒಟ್ಟಿನಲ್ಲಿ ಇಬ್ಬರೂ ಪಡೆಯುತ್ತಿರುವ ಶಿಕ್ಷಣವೆಂಬುದು ಒಂದೇ. ಸರ್ಕಾರಗಳು ಶಿಕ್ಷಣದಲ್ಲಿ ಹೊಸ ಹೊಸ ರೂಪುರೇμÉಗಳನ್ನು ತರುವುದರ ಮೂಲಕ ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗಿಸುತ್ತಾ ಬಂದಿದೆ. ಶಿಕ್ಷಣವೆಂಬುದು ಎಲ್ಲರಿಗೂ ಅವಶ್ಯಕ ಅದನ್ನು ಕಡ್ಡಾಯವಾಗಿ ಎಲ್ಲರೂ ಪಡೆಯಲೇಬೇಕು ಎನ್ನುವ ಸರಕಾರಗಳು ಇವತ್ತಿನ ದಿನಮಾನಗಳಲ್ಲಿ ಯಾವುದೇ ಒಂದು ನೌಕರಿ ಪಡೆಯುವುದಕ್ಕೆ ಬೇರೆ-ಬೇರೆ ರೀತಿಯ ಪದವಿಗಳು ಅವಶ್ಯಕವೆಂದು ಹೇಳುತ್ತದೆ. ಆದರೆ ನಮ್ಮನ್ನಾಳುವ ರಾಜಕೀಯ ವ್ಯಕ್ತಿಗಳಿಗೆ ಯಾಕಿಲ್ಲ ಶಿಕ್ಷಣ? ನಾವೆಲ್ಲರೂ ಒಂದೇ ಕಾನೂನಿನ ಚೌಕಟ್ಟಿನಲ್ಲಿ ಬದುಕುತ್ತಿದ್ದೇವೆ. ಹಾಗಿದ್ದಲ್ಲಿ ಅವರಿಗೂ ಬೇಕಲ್ಲವೇ ಶಿಕ್ಷಣ, ನಮ್ಮನ್ನಾಳುವ ರಾಜಕೀಯ ವ್ಯಕ್ತಿಗಳೆ ಶಿಕ್ಷಣದಿಂದ ವಂಚಿತರಾಗಿ ದೇಶವನ್ನು ಯಾವ ಕಡೆಗೆ ಸಾಗಿಸುತ್ತಾರೆ ಯೋಚಿಸಿ….
ವಿಶೇಷ ಲೇಖನಗಳ ಬರಹಗಾರ ಆನಂದ್. ಡಿ ಆಲಘಟ್ಟ