ನಗರದಲ್ಲಿ ರಸ್ತೆ ಉಬ್ಬುಗಳು, ಯುಜಿಡಿ
ಗುಂಡಿಯ ಉಬ್ಬುಗಳು,
ಮುಚ್ಚಳಗಳು, ವೇಗವಾಗಿ
ಸಂಚರಿಸುವ ವಾಹನ ಚಾಲಕರಿಗೆ ಕಾಣದೆ
ಅಪಘಾತಗಳು ಹೆಚ್ಚಾಗುತ್ತಿವೆ. ಹಾಗಾಗಿ
ಹಂಪ್ಸ್‍ಗಳಿಗೆ ಮತ್ತು ಯುಜಿಡಿಯ
ಗುಂಡಿಗಳ ಹುಬ್ಬುಗಳಿಗೆ ಕಪ್ಪು ಬಣ್ಣ
ಅಥವಾ ಕಪ್ಪು ಬಣ್ಣದ ಮೇಲೆ ಬಿಳಿಯ
ಬಣ್ಣವನ್ನು ಹಚ್ಚಿ, ಅದು ಸವಾರರಿಗೆ
ಎದ್ದುಕಾಣುವಂತೆ ಮಾಡುವುದರಿಂದ
ರಸ್ತೆ ಅಪಘಾತಗಳನ್ನು
ತಡೆಯಬಹುದು ಎಂದು ಕರ್ನಾಟಕ
ಜ್ಞಾನ ವಿಜ್ಞಾನ ಸಮಿತಿಯ
ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ
ತಿಳಿಸಿದರು.

ಅವರು ಚಿತ್ರದುರ್ಗ ನಗರದ
ತರಳಬಾಳು ನಗರದಲ್ಲಿ ಕರ್ನಾಟಕ
ಜ್ಞಾನ ವಿಜ್ಞಾನ ಸಮಿತಿ, ಕಲ್ಪವೃಕ್ಷ
ಚಾರಿಟೇಬಲ್ ಟ್ರಸ್ಟ್ ಸಂಯುಕ್ತವಾಗಿ
ಆಯೋಜಿಸಿದ್ದ ರಸ್ತೆ ಉಬ್ಬುಗಳ
ಸುರಕ್ಷತೆ ಕಾರ್ಯಕ್ರಮದಲ್ಲಿ ಯುಜಿಡಿ
ಗುಂಡಿಗೆ ಮುಚ್ಚಿದ್ದ ಸಿಮೆಂಟಿನ ಉಬ್ಬಿಗೆ ಬಣ್ಣ
ಹಾಕುತ್ತಾ ಮಾತನಾಡುತ್ತಿದ್ದರು.

ಸಾಮಾನ್ಯವಾಗಿ ನಗರಗಳಲ್ಲಿರುವ
ಹಂಪ್ಸ್‍ಗಳಿಗೆ ಕೆಲವೊಮ್ಮೆ ಬಣ್ಣಗಳು ಮಾಸಿ
ಹೋಗಿರುತ್ತದೆ, ಕೆಲವಕ್ಕೆ ಬಣ್ಣವನ್ನೇ
ಹೊಡೆದಿರುವುದಿಲ್ಲ, ನಗರ
ವಿಸ್ತಾರವಾಗುತ್ತಿದ್ದು, ಎಲ್ಲೆಲ್ಲಿ ಹಂಪ್ಸ್‍ಗಳಿವೆ
ಎಂಬುದರ ಬಗ್ಗೆ ಗಮನ ಹರಿಸುವುದು
ಸಾಧ್ಯವಾಗುವುದಿಲ್ಲ. ಹಾಗಾಗಿ ಕಡಿಮೆ
ಖರ್ಚಿನಲ್ಲಿ ಹಂಫ್ಸ್ ಗಳಿಗೆ ಬಣ್ಣ ಬಳಿಯುವ
ಮಾರ್ಗವನ್ನು ಕಂಡುಹಿಡಿದು
ಕೊಳ್ಳಬೇಕಾಗಿದೆ ಎಂದರು.
ಫ್ಲೆಕ್ಸ್ ಅಂಗಡಿಗಳಲ್ಲಿ ಫ್ಲೆಕ್ಸ್‍ಗಳನ್ನು
ಪ್ರಿಂಟ್ ಹಾಕುವಾಗ ನಾಲ್ಕೈದು ಬಣ್ಣಗಳು
ವ್ಯರ್ಥವಾಗಿ ಹೊರ ಹೋಗುವುದನ್ನು
ಸಂಗ್ರಹಿಸಿಟ್ಟುಕೊಂಡಿರುತ್ತಾರೆ. ಆ
ಬಣ್ಣಗಳು ತ್ಯಾಜ್ಯದ ರೂಪದಲ್ಲಿ ಪರಿಸರ

ಮಾಲಿನ್ಯ ಉಂಟು ಮಾಡುತ್ತವೆ.
ಅವುಗಳನ್ನು ವಿಲೇವಾರಿ ಮಾಡುವುದರ
ಬಗ್ಗೆ ಫ್ಲೆಕ್ಸ್ ಅಂಗಡಿಯ ಮಾಲೀಕರಿಗೆ
ಕಷ್ಟವೇ ಆಗಿರುತ್ತದೆ. ಅಂಥ ಬಣ್ಣವನ್ನ
ಸಂಗ್ರಹಿಸಿ ಹಂಪ್ಸ್Àಗಳ ಮೇಲೆ ಸುರಿದರೆ
ಸಾಕು, ಅದು ಕಪ್ಪು ಬಣ್ಣ ನೀಡುತ್ತದೆ.
ಕಪ್ಪು ಬಣ್ಣದ ಮೇಲೆ ಸಾಧ್ಯವಾದರೆ ಬಿಳಿ
ಬಣ್ಣ ಹಚ್ಚಬಹುದು, ಈಗೀಗ ಸಿಮೆಂಟ್
ರಸ್ತೆಗಳ ಮೇಲೆ ಕಪ್ಪು ಬಣ್ಣ ಎದ್ದು
ಕಾಣುತ್ತದೆ. ಹಾಗಾಗಿ ಫ್ಲೆಕ್ಸ್ ಅಂಗಡಿಗಳಲ್ಲಿ
ಬಿಸಾಡುವ ಕಪ್ಪು ಬಣ್ಣವನ್ನು ಸಂಗ್ರಹಿಸಿ,
ತಮ್ಮ ನಗರದ ಸುತ್ತಮುತ್ತ,
ಮನೆಯ ಸುತ್ತಮುತ್ತ ಇರುವ
ಹಂಪ್ಸ್‍ಗಳಿಗೆ ಜನರೇ ಸ್ವಇಚ್ಛೆಯಿಂದ
ಕಪ್ಪು ಬಣ್ಣವನ್ನು ಹಚ್ಚಬಹುದು.
ಬಣ್ಣವನ್ನ ಅದರ ಮೇಲೆ ಸುರಿದರೂ ಸಾಕು
ಬಣ್ಣ ಹರಡಿಕೊಳ್ಳುತ್ತದೆ, ಅದರ
ಗುರುತು ಸಂಚಾಲಕರಿಗೆ ಅರಿವುಂಟು
ಮಾಡುತ್ತದೆ, ಮತ್ತು ರಸ್ತೆ
ಅಪಘಾತಗಳನ್ನು ತಡೆಯಬಹುದು
ಎಂದರು.
ಸರ್ಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಎಚ್. ಎಸ್.
ರಚನಾ, ಮಾತನಾಡುತ್ತಾ ಅಪಘಾತ
ತಡೆಯಲು ನಿರ್ಮಿಸಿರುವ ಹಂಪ್ಸ್‍ಗಳೇ

ಕೆಲವೊಮ್ಮೆ ಅಪಘಾತವನ್ನು
ಸೃಷ್ಟಿಮಾಡುತ್ತವೆ, ಹಂಪ್ಸ್‍ಗಳು
ವೈಜ್ಞಾನಿಕವಾಗಿ ನಿರ್ಮಾಣ ಮಾಡಿರಬೇಕು,
ಕೆಲವೊಮ್ಮೆ ಅವುಗಳನ್ನು ಅತಿ
ಎತ್ತರವಾಗಿ ನಿರ್ಮಾಣ ಮಾಡಿದಾಗ ವಾಹನ
ಚಾಲಕರಿಗೆ ತೊಂದರೆಯನ್ನು
ಉಂಟುಮಾಡುತ್ತದೆ. ಯುಜಿಡಿ
ಗುಂಡಿಗಳು ನೀರನ್ನು ಹೊರ
ಸೂಸುತ್ತಿರುವುದರಿಂದ, ಅದರ ಮೇಲೆ
ಕಾರ್ಮಿಕರು ಗುಡ್ಡೆಯ ತರ
ಸಿಮೆಂಟನ್ನು ಹಾಕಿ ಹೋಗಿರುತ್ತಾರೆ.
ಗುಡ್ಡೆ ಮೇಲೆ ಗಾಡಿಗಳು ಸಂಚರಿಸಿದಾಗ
ಅಪಘಾತಗಳಾಗುವುದು ಶತಸಿದ್ಧ,
ಹಾಗೆ ಕೆಳಮಟ್ಟದ ಕಾರುಗಳ
ಎಂಜಿನ್‍ಗಳಿಗೆ ಘಾಸಿ ಮಾಡುತ್ತವೆ. ವೇಗವಾಗಿ
ಬಂದಾಗಲಂತೂ ಒಂದು ದೊಡ್ಡ
ಅನಾಹುತವನ್ನೇ ಸೃಷ್ಟಿಸುತ್ತದೆ. ಹಾಗಾಗಿ
ಯುಜಿಡಿ ಗುಂಡಿಗಳ ಮೇಲೆ
ಸಮತಟ್ಟಾಗಿ ಸಿಮೆಂಟ್ ಹಾಕಿ
ಮುಚ್ಚಬೇಕು, ಹೊರತು ಅವುಗಳ
ಎತ್ತರವನ್ನು ರಸ್ತೆಗಿಂತ ಹೆಚ್ಚು
ಮಾಡಬಾರದು ಎಂದರು.
ಸಕಾರಿ ಬಾಲಕೀಯರ ಪದವಿ ಪೂರ್ವ
ಕಾಲೇಜಿನ ವಿದ್ಯಾರ್ಥಿನಿ ಎಚ್. ಎಸ್. ಪ್ರೇರಣ

ಮಾತನಾಡುತ್ತಾ ಉಬ್ಬಿದ ಯಜಿಡಿ
ಗುಂಡಿಗಳಿಗೆ ಆದಷ್ಟು ಬೇಗ
ಬಣ್ಣಗಳನ್ನು ಲೇಪಿಸಿ, ಸವಾರರಿಗೆ
ಸುಗಮವಾಗುವಂತೆ ಗಾಡಿ
ಚಲಾಯಿಸುವಂತೆ ಮಾಡಿಕೊಡಬೇಕಾದ್ದು
ನಗರಸಭೆಯವರ ಅಥವಾ ರಸ್ತೆ
ನಿಗಮದವರ ಜವಾಬ್ದಾರಿಯಾಗುತ್ತದೆ.
ಸರ್ಕಾರದ ಅಧಿಕಾರಿಗಳು
ಬರುವವರೆಗೂ ಅಪಘಾತಗಳನ್ನು
ತಡೆಯಲು ಸರಳವಾದ ಉಪಾಯವನ್ನು
ಜನಸಾಮಾನ್ಯರು ಅಳವಡಿಸಿಕೊಂಡು,
ರಚನಾತ್ಮಕ ಕಾರ್ಯಕ್ರಮಗಳ
ಅಡಿಯಲ್ಲಿ ಇವುಗಳನ್ನ ಮಾಡಿ,
ಜನಜಾಗೃತಿ ಮೂಡಿಸಿ ಸಂಚಾರದಿಂದಾಗುವ
ಅಪಘಾತಗಳನ್ನು ತಡೆಯಬಹುದು
ಎಂದರು.
ಹಂಫ್ಸ್ ಗಳಿಗೆ ಬಣ್ಣ ಇಲ್ಲದ ಪರಿಣಾಮ
ನಗರದ ಬಹುತೇಕ ಭಾಗಗಳಲ್ಲಿ
ಅಪಗಾತ ವಲಯವೇ
ಸೃಷ್ಟಿಯಾಗಿರುತ್ತದೆ ಹಂಪ್ಸ್ ಬಗ್ಗೆ
ತಿಳಿಯದೆ ವೇಗವಾಗಿ ಬಂದರೆ, ಆಪತ್ತು
ಕಟ್ಟಿಟ್ಟ ಬುತ್ತಿಯಾಗಿರುತ್ತದೆ.
ಅದರಲ್ಲೂ ರಾತ್ರಿ ಸಂಚರಿಸುವವರು
ಹೆಚ್ಚು ಅಪಾಯಕ್ಕೆ ಸಿಲುಕುತ್ತಾರೆ,

ಮಹಿಳೆಯರು ಮತ್ತು ಮಕ್ಕಳು
ಸಂಚಾರಿಸುವಾಗ ಬಹಳ ಎಚ್ಚರಿಕೆಯಿಂದ
ಗಾಡಿಗಳನ್ನ ಚಲಾಯಿಸಬೇಕಾಗಿದೆ
ಎಂದರು.
ಬಣ್ಣ ಹಚ್ಚುವ ಕಾರ್ಯಕ್ರಮದಲ್ಲಿ
ಮಹಾಂತೇಶ್, ಶ್ರೀನಿವಾಸ್ ಮಂಜುನಾಥ್ ಹಾಗೂ
ತರಳಬಾಳು ನಿವಾಸಿಗಳು
ಭಾಗವಹಿಸಿದ್ದರು.
ಜನರಿಗೆ ಹಂಪ್ಸ್‍ಗಳಿವೆ ನಿಧಾನವಾಗಿ ಗಾಡಿ
ಚಲಾಯಿಸಿ ಎಂಬ ಭಿತ್ತಿಪತ್ರಗಳನ್ನು
ಪ್ರದರ್ಶಿಸಿ ಜನಜಾಗೃತಿ ಮೂಡಿಸಲಾಯಿತು.

Leave a Reply

Your email address will not be published. Required fields are marked *