ಅತಿವೃಷ್ಟಿ ಸಂದರ್ಭಗಳಲ್ಲಿ ಜೀವಹಾನಿ, ಮಳೆಹಾನಿ ಹಾಗೂ
ಜಾನುವಾರುಗಳ ಹಾನಿಗಳಿಗೆ ಸಂಬಂಧಿಸಿದಂತೆ ಘಟನೆ ವರದಿಯಾದ 24
ಗಂಟೆಯೊಳಗೆ ಪರಿಹಾರ ನೀಡಿ, ಅನಂತರ ದಾಖಲೆಗಳನ್ನು
ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ
ಸೂಚಿಸಿದರು.
ಬುಧವಾರ ನಗರದ ಜಿಲ್ಲಾಡಳಿತ
ಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯ
ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾನ್ಯ ಮುಖ್ಯಮಂತ್ರಿಗಳು ಈ ಕುರಿತು ಸೂಚನೆ ನೀಡಿದ್ದು,
ಅವಘಡಗಳು ಸಂಭವಿದಂತಹ ಸಂದರ್ಭಗಳಲ್ಲಿ ಸಂತ್ರಸ್ತರಿಗೆ
ತಕ್ಷಣದ ಪರಿಹಾರದ ಅವಶ್ಯಕತೆ ಇರುತ್ತದೆ ಹಾಗಾಗಿ ಪರಿಹಾರ
ನೀಡುವ ಮೂಲಕ ಅವರ ನೋವಿಗೆ ಸ್ಪಂದಿಸಲು ತಿಳಿಸಿದ್ದು ಅದರಂತೆ
ಎಲ್ಲಾ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದರು.
ಈ ಬಾರಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗುತ್ತಿದ್ದು, ಈ ಬಾರಿಯ
ಹಿಂಗಾರು ಮಳೆಯಿಂದ ಆಗಬಹುದಾದ ಅವಘಡ ಹಾನಿಗಳ ಬಗೆಗೆ
ಜಾಗರೂಕರಾಗಿರಬೇಕು, ಹಿಂದಿನ 3 ವರ್ಷಗಳ ಪ್ರವಾಹ
ಪರಿಸ್ಥಿತಿಯನ್ನು ನಿರ್ವಹಿಸಿದ ಅನುಭವ ನಮ್ಮಲ್ಲಿದೆ ಹಾಗಾಗಿ
ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನೆದುರಿಸಲು
ಸಿದ್ದರಾಗಿರಬೇಕು.ಮಳೆಹಾನಿ ಪ್ರದೇಶಗಳಲ್ಲಿ ಸ್ಥಾಪಿಸುವ ಕಾಳಜಿ
ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆಯ ವ್ಯವಸ್ಥೆ ಮಾಡಬೇಕು,
ಹಿಂದಿನ 5 ವರ್ಷಗಳಲ್ಲಿ ಗ್ರಾಮ ಹಾಗೂ ನಗರಗಳಲ್ಲಿ ನೀರು ತುಂಬಿ
ಸಮಸ್ಯೆಯಾಗುತ್ತಿದ್ದ ಪ್ರದೇಶಗಳನ್ನು ಗುರುತಿಸಿ
ಸರಿಪಡಿಸಬೇಕು ನದಿಪಾತ್ರದಲ್ಲಿ ಪ್ರತಿ ಮೂರು ಗಂಟೆಗಳಿಗೊಮ್ಮೆ
ನೀರಿನ ಮಟ್ಟ ಒಳಹರಿವು ಹಾಗೂ ಹೊರಹರಿವು  ಮಾಹಿತಿ
ಕಲೆಹಾಕಬೇಕು.ಹರಿಹರ ಹಾಗೂ ಹೊನ್ನಾಳಿ ಪಟ್ಟಣದ ಕೆಲ
ಪ್ರದೇಶಗಳು ಮುಳುಗಡೆಗೆ ಒಳಗಾಗುವ ಕಡೆಗಳಲ್ಲಿ
ಮುಂಜಾಗ್ರತೆಯಿಂದ ಎಲ್ಲಾಸಿದ್ದತೆಗಳನ್ನು ಮುಂಚಿತವಾಗಿಯೇ
ಮಾಡಿಟ್ಟುಕೊಳ್ಳಿ ಎಂದರು.
ಜಿಲ್ಲೆಯಲ್ಲಿ ನಾಲ್ಕೈದು ಅತಿ ದೊಡ್ಡ ದೊಡ್ಡ ಹಳ್ಳಿಗಳಿದ್ದು,
ಯಾವ ಯಾವ ಹಳ್ಳಗಳು ತುಂಬಿ ಹರಿದರೆ ಎಲ್ಲಿ ಎಲ್ಲಿ
ಹಾನಿಯಾಗುತ್ತದೆ ಎಂಬ ನಿಖರವಾದ  ಮಾಹಿತಿ ನೀಡಿ, ಹಾಗೂ ಅದರಿಂದ
ಸಂಭವಿಸಬಹುದಾದ ತೊಂದರೆಗಳನ್ನು ಗ್ರಹಿಸಿ ಈ ಮುಂಚೆ ಕಾಳಜಿ
ಕೇಂದ್ರಗಳು ಎಲ್ಲೆಲ್ಲಿ ತೆರೆದಿತ್ತು ಹಾಗೂ ಈಗ ಎಲ್ಲೆಲ್ಲಿ ಕಾಳಜಿ
ಕೇಂದ್ರ ತೆರೆಯಬೇಕು ಎಂಬುದರ ಕಾರ್ಯಯೋಜನೆ
ರೂಪಿಸಬೇಕು ಎಂದರು.
ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುಜ್ಜಿ ಮಾತನಾಡಿ ,
2019 ಕ್ಕೆ ಹೋಲಿಸಿದರೆ ಸ್ಮಾರ್ಟ್ ಸಿಟಿ ಹಾಗೂ ಕಾಪೆರ್Çರೇಷನ್ ವತಿಯಿಂದ
ಆಗಿರುವ ಕಾಮಗಾರಿಗಳಿಂದ ಈಗ ಎಲ್ಲಿಯೂ ನೀರು  ಮನೆಗಳಿಗೆ
ನುಗ್ಗುತ್ತಿಲ್ಲ ಎಂದು ಮಾಹಿತಿ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ಸ್ವಚ್ಛಗೊಳಿಸಿ, ಮಳೆ
ನೀರು ಸಲೀಸಾಗಿ ಹರಿಯುವಂತೆ ವ್ಯವಸ್ಥೆ ಮಾಡಬೇಕು. ವಿದ್ಯುತ್

ಕಂಬಗಳು, ಬೀದಿ ದೀಪಗಳ ಅಥಿರ್ಂಗ್ ವ್ಯವಸ್ಥೆ ಸರಿಯಾಗಿ ಮಾಡಿ
ಯಾವುದೇ ರೀತಿಯ ವಿದ್ಯುತ್ ಅವಘಡ ಸಂಭವಿಸಿದಂತೆ
ನಿಗಾವಹಿಸಬೇಕು. ಮಳೆಗಾಲದಲ್ಲಿ  ಜಾನುವಾರುಗಳಿಗೆ ಅನೇಕ
ರೋಗ ಲಕ್ಷಣಗಳು ಹರಡುವ ಸಂಭವವಿರುತ್ತದೆ ಅದು ಹಾಗಾಗಿ
ಮುಂಜಾಗ್ರತಾ ಕ್ರಮಗಳನ್ನು ಮಾಡಿಕೊಳ್ಳಿ ಎಂದು ಸಂಬಂಧ
ಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
 ಮಳೆಯ ಪ್ರಮಾಣ, ಹಾನಿ ವಿವರ ಹಾಗೂ ನದಿ ನೀರಿನ ಮಟ್ಟದ
ವರದಿಯನ್ನು  ಪ್ರತಿನಿತ್ಯವು ಎ.ಸಿ ಕಚೇರಿಯ ಮೂಲಕ
 ಛಾಯಾಚಿತ್ರದ ಸಮೇತ  ವರದಿ ಕಳಿಸಬೇಕು. ಗ್ರಾಮ ಲೆಕ್ಕಾಧಿಕಾರಿ,
ಕಂದಾಯ ನಿರೀಕ್ಷಕರು ಹಾಗೂ ತಹಶೀಲ್ದಾರರು ಒಳಗೊಂಡಂತೆ
ಎಲ್ಲ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿಯೇ ಇರಬೇಕು
ಯಾರು ಕೂಡ ರಜೆ ಹಾಕುವಂತಿಲ್ಲ ಎಂದು ಸೂಚಿಸಿದರು.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆ
ಹೆಚ್ಚಾಗಿರುತ್ತದೆ ಆದ್ದರಿಂದ ಮುನ್ನೆಚ್ಚರಿಕೆಯಿಂದ ಎಲ್ಲ ತಾಲ್ಲೂಕು
ವೈದ್ಯಾಧಿಕಾರಿಗಳೊಂದಿಗೆ ಆರೋಗ್ಯ ಸಭೆ ನಡೆಸಿ ಸೂಕ್ತಕ್ರಮ
ಕೈಗೊಳ್ಳಿ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಕಂದಾಯ ಸಚಿವರ ಆದೇಶದ ಮೇರೆಗೆ ಜಿಲ್ಲೆಯ ಹರಿಹರ
ಹಾಗೂ ಹೊನ್ನಾಳಿ ತಾಲ್ಲೂಕಿಗೆ ಅಗ್ನಿಶಾಮಕ ಇಲಾಖೆಗೆ  ಎರಡು ಬೋಟ್
ಹಾಗೂ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದಂತೆ ಎಲ್ಲಾ
ಉಪಕರಣಗಳನ್ನು ತರಿಸಲು ಜಿಲ್ಲಾಧಿಕಾರಿಗಳು ನಿರ್ದೇಶನ
ನೀಡಿದರು.
ಕೃಷಿ ಇಲಾಖೆ ಜಂಟಿನಿರ್ದೇಶಕರು ರಸಗೊಬ್ಬರ ಹಾಗೂ ಬಿತ್ತನೆ
ಬೀಜ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಬೇಕು,
ರಸಗೊಬ್ಬರಗಳಿಗೆ ಸರ್ಕಾರ ನಿಯೋಜಿಸಿದ ದರಕ್ಕಿಂತ ಜಾಸ್ತಿ ದರಕ್ಕೆ
ಮಾರಿದರೆ  ರೈತರಿಂದ ಮಾಹಿತಿ ಪಡೆದು ಮಾರಾಟಗಾರರ
ಪರವಾನಿಗೆಯನ್ನು ರದ್ದು ಪಡಿಸಲಾಗುವುದು ಎಂದು ಎಚ್ಚರಿಕೆ
ನೀಡಿದ ಅವರು 2007 ರಲ್ಲಿ ರಸಗೊಬ್ಬರ ವಿಷಯಕ್ಕೆ ಸಂಬಂಧಿಸಿದಂತೆ
ಆಹಾಕಾರ ಉಂಟಾಗಿ  ಗೋಲಿಬಾರ್ ನಂತಹ ಪ್ರಕರಣಗಳು ನಡೆದಿರುವ
ಉದಾಹರಣೆಗಳಿವೆ ಎಂದರು.
ಬಿತ್ತನೆ ಬೀಜಕ್ಕೆ ಸಂಭಂಧಿಸಿದಂತೆ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿ, 
1.36 ಲಕ್ಷ ಹೆಕ್ಟೇರ್‍ಗೆ ಬೇಕಾಗುವ ಮೆಕ್ಕೆಜೋಳ ಬಿತ್ತನೆ
ಬೀಜಗಳು ಲಭ್ಯವಿದ್ದು, ರೈತರು ಮೆಕ್ಕೆಜೋಳದ ಜೊತೆಗೆ
ತೊಗರಿ ಬೆಳೆಯನ್ನು ಆಂತರ ಬೇಸಾಯದಲ್ಲಿ ಬೆಳೆಯಲು
ರೈತರಿಗೆ ಮಾಹಿತಿ ನೀಡಲಾಗಿದೆ. ಹಾಗೂ ಜಿಲ್ಲೆಯಲ್ಲಿ ಬೆದ್ದಲು ಜಮೀನಿನಲ್ಲಿ
ಸೋಯಾಬೀನ್ ಬೆಳೆಯನ್ನು ಬೆಳೆಯುವ ಮೂಲಕ  ಹೊಸ
ಪದ್ಧತಿಗಳು ಆವಿμÁ್ಕರ ವಾಗಬೇಕು ಎಂದು ಸೋಯಾಬೀನ್
ಬೆಳೆಯಲು ರೈತರನ್ನು ಪ್ರೋತ್ಸಾಹಿಸಲಾಗಿದೆ ಇದರಿಂದ ರೈತರು
ಅಭಿವೃದ್ಧಿ ಕಾಣಬಹುದು. ರೈತರಿಗೆ ಬಿತ್ತನೆ ಬೀಜದ ತೊಂದರೆ
ಆಗದಂತೆ ನೋಡಿಕೊಳ್ಳಲಾಗಿದೆ.  ಕಳಪೆ ಬೀಜ ಮಾರಾಟ ಮಾಡುವ
ಏಜೆನ್ಸಿಗಳಿಗೆ  ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಅವರ ಮೇಲೆ
ಸೂಕ್ತಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಸಭೆಯಲ್ಲಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಚನ್ನಪ್ಪ
ಎ,  ಹೆಚ್ಚುವರಿ ಪೆÇಲೀಸ್ ವರಿμÁ್ಠಧಿಕಾರಿ ಆರ್.ಬಿ.ಬಸರಗಿ, ಮಹಾನಗರಪಾಲಿಕೆ
ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಡಿಯುಡಿಸಿ ಅಧಿಕಾರಿ ನಜ್ಮಾ, ಜಿಲ್ಲಾ
ಆರೋಗ್ಯ ಅಧಿಕಾರಿ ಡಾ.ನಾಗರಾಜ್, ಎಲ್ಲಾ ತಾಲ್ಲೂಕುಗಳ
ತಹಶೀಲ್ದಾರರು ಸೇರಿದಂತೆ  ಜಿಲ್ಲಾ ಮಟ್ಟದ ವಿವಧ ಇಲಾಖೆಗಳ
ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *