ದಾವಣಗೆರೆ ಜೂ.29
ಒಂದು ದೇಶದ ಸಮಗ್ರ ಅಭಿವೃದ್ದಿಯಲ್ಲಿ ಹಿಂದಿನ ಹಾಗೂ
ಇಂದಿನ ಅಂಕಿ ಅಂಶಗಳು ಮುಖ್ಯವಾಗುತ್ತವೆ, ಯಾವುದೇ
ಯೋಜನೆಯನ್ನು ಸರ್ಕಾರ ರೂಪಿಸಿದಾಗ ಆ ಯೋಜನೆ ಎಷ್ಟರ
ಮಟ್ಟಿಗೆ ಜನರಿಗೆ ತಲುಪಿ ಯಶಸ್ವಿಯಾಗಿದೆ ಎಂಬುದು ಅಂಕಿ
ಅಂಶಗಳನ್ನ ತಾಳೆಹಾಕುವುದರಿಂದ ವಿಶ್ಲೇಶಿಸಬಹುದು ಎಂದು
ಜಿ.ಪಂ.ಸಿಇಓ ಡಾ. ಚನ್ನಪ್ಪ ಹೇಳಿದರು.
 ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸಾಂಖಿಕ ಇಲಾಖೆ
ವತಿಯಿಂದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ
ಸಂಖ್ಯಾಶಾಸ್ತ್ರಜÐ ಪ್ರೊ.ಪಿ.ಸಿ.ಮಹಾಲನೋಬಿಸ್ ಇವರ ಜನ್ಮದಿನ ಹಾಗೂ
2021-22ನೇ ಸಾಲಿನ ಸ್ವಚ್ಚ ವಿದ್ಯಾಲಯ ಪುರಸ್ಕಾರ ಪಡೆದ ಶಾಲೆಗಳಿಗೆ
ಅಭಿನಂದನಾ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.
ಸಾಂಖ್ಯಿಕ ಶಾಸ್ತ್ರಕ್ಕೆ ಅವರು ಸಲ್ಲಿಸಿದ ಕೊಡುಗೆ ಅಪಾರ, ಸಾಂಖಿಕ
ಶಾಸ್ತ್ರದ ಬಗೆಗೆ ಅವರ ಜ್ಞಾನ ತಿಳುವಳಿಕೆ ಅಗಾಧವಾದುದು ಹಾಗಾಗಿ
ಅವರನ್ನು ‘ಸಾಂಖಿಕ ಪಿತಾಮಹ’ ಎನ್ನುತ್ತೇವೆ, ಈ ಬಾರಿ ಶಿಕ್ಷಣ, ಆರೋಗ್ಯ
ಮತ್ತು ಮಹಿಳೆ ಹಾಗೂ ಮಕ್ಕಳ ಬಗೆಗಿನ ವಿಷಯಗಳಲ್ಲಿ
ಆಗಿರುವ ಬದಲಾವಣೆಗಳು, ಕುಂದುಕೊರತೆಗಳ ಬಗೆಗೆ ಆಯಾ
ಇಲಾಖೆಗಳು ಈ ಗುರಿಗಳನ್ನು ಈಡೇರಿಸಲು ತೆಗೆದುಕೊಂಡಿರುವ
ಕ್ರಮಗಳ ಬಗೆಗೆ ವಿಶ್ಲೇಶಣೆ ಮಾಡಲಾಗಿದೆ, ಶಿಕ್ಷಣಕ್ಕೆ
ಸಂಭಂಧಿಸಿದಂತೆ ಸರ್ಕಾರಿ ಶಾಲೆಗಳಲ್ಲಿ ಹಲವಾರು ಕೊರತೆಗಳಿವೆ,
ನಮ್ಮಲ್ಲಿನ ಮಾನಸಿಕ ಕೊರತೆಯನ್ನು ನೀಗಿಸಿಕೊಂಡರೆ ಭೌತಿಕ
ಕೊರತೆಯನ್ನು ನೀಗಿಸಿಕೊಳ್ಳಬಹುದು, ಶಾಲೆಗಳ ಶೌಚಾಲಯ,
ಕಾಂಪೋಂಡ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ
ಡಾ.ನಾಗರಾಜ್ ಮಾತನಾಡಿ, 2030 ರ ವೇಳೆಗೆÉ ಭಾರತವನ್ನು ಕ್ಷಯ
ಮತ್ತು ಮಲೇರಿಯಾ ಮುಕ್ತ ದೇಶವನ್ನಾಗಿ ಮಾಡುವ ಸಂಕಲ್ಪ
ಹೊಂದಲಾಗಿದೆ. ಎಲ್ಲರಿಗೂ ಆರೋಗ್ಯ-ಎಲ್ಲೆಡೆಯೂ ಆರೋಗ್ಯ ಎಂಬ
ಧ್ಯೇಯದೊಂದಿಗೆ ಜಿಲ್ಲೆಯಲ್ಲಿ 3.5 ಲಕ್ಷ ಜನರಿಗೆ ಆಯುμÁ್ಮನ್
ಭಾರತ್ ಯೋಜನೆಯಡಿ ಆರೋಗ್ಯ ಕಾರ್ಡನ್ನು ವಿತರಿಸಲಾಗಿದೆ,
ಇದರಲ್ಲಿ 74,000 ಜನ ಉಚಿತ ಚಿಕಿತ್ಸೆಯನ್ನು ಪಡೆದಿದ್ದಾರೆ ಹಾಗೂ 23,000
ಜನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಒಟ್ಟಾರೆ ಎಲ್ಲರಿಗೂ

ಉತ್ತಮ ಆರೋಗ್ಯ ಒದಗಿಸುವುದು ಕೇಂದ್ರ ಮತ್ತು ರಾಜ್ಯ
ಸರ್ಕಾರಗಳ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.
ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್ ಮಾತನಾಡಿ,
ಯಾವುದೇ ಯೋಜನೆಯನ್ನು ರೂಪಿಸಲು ಅಂಕಿ-ಅಂಶಗಳು
ಮುಖ್ಯವಾಗುತ್ತವೆ. ಯಾವ್ಯಾವ ಇಲಾಖೆಯಿಂದ ಮಾಹಿತಿ ಪಡೆದು
ಯಾವೆಲ್ಲಾ ಹೊಸ ಯೋಜನೆಗಳನ್ನು ರೂಪಿಸಬಹುದು ಎನ್ನುವ
ಉದ್ದೇಶದಿಂದ ಮಹಾಲನೋಬಿಸ್ ಅವರ ಜನ್ಮದಿನದ ಪ್ರಯುಕ್ತ
ಸಾಂಖಿಕ್ಯ ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಆಯುμï ಅಧಿಕಾರಿ ಡಾ.ಶಂಕರಗೌಡ ಮಾತನಾಡಿ, ಪ್ರಸ್ತುತ
ಇಂದು ಅನೇಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ,
ಅಪೌಷ್ಟಿಕತೆ ನಿರ್ಮೂಲನೆ ಮಾಡಿದ್ದೇ ಆದಲ್ಲಿ ಸಧೃಡ ಭಾರತ ನಿರ್ಮಾಣ
ಸಾಧ್ಯ. ಆಯಾ ವಯಸ್ಸಿಗೆ ತಕ್ಕಂತೆ ಮಕ್ಕಳು ತೂಕ ಹೊಂದಿದ್ದರೆ
ಮಾತ್ರ ಪೌಷ್ಟಿಕವಾಗಿದ್ದಾರೆ ಎಂದರ್ಥ.  ಕೋವಿಡ್ 3ನೇ ಅಲೆಯ
ಸಂದರ್ಭದಲ್ಲಿ ಅಪೌಷ್ಟಿಕತೆಗೆ ತುತ್ತಾಗಿದ್ದ ಜಿಲ್ಲೆಯ 5612 ಮಕ್ಕಳಿಗೆ
100 ದಿನಗಳ ಕಾಲ ಆಯುರ್ವೇದ ಔಷಧಿ ನೀಡುವ ಮೂಲಕ ಆ
ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಿ ಮರಳಿ ಸಾಮಾನ್ಯ ಸ್ಥಿತಿಗೆ
ತರಲಾಗಿದೆ. ಈ ಪ್ರಯೋಗವನ್ನು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ
ದಾವಣಗೆರೆ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತರಲಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ
ಉಪನಿರ್ದೇಶಕರಾದ ವಾಸಂತಿ ಉಪ್ಪಾರ ಮಾತನಾಡಿ, ಯಾವುದೇ
ವ್ಯಕ್ತಿಯ ಗರ್ಭ ವ್ಯವಸ್ಥೆಯಿಂದ ಮರಣದವರೆಗಿನ ಪೋಷಣೆ-
ಪಾಲನೆ ಮಾಡುವ ಜವಬ್ದಾರಿಯನ್ನು ಸರ್ಕಾರ ವಹಿಸುತ್ತದೆ, ಇಂದು
ಅನೇಕ ಮಕ್ಕಳು ಮತ್ತು ಗರ್ಭೀಣಿಯರು ಪೌಷ್ಠಿಕ ಆಹಾರದ
ಕೊರತೆ ಅನುಭವಿಸುತ್ತಿದ್ದಾರೆ. ಸರ್ಕಾರ ಇದನ್ನು ಮನಃಗಂಡು
ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳಲ್ಲಿ ಹಾಲು, ಮೊಟ್ಟೆಯನ್ನು
ನೀಡುತ್ತಿದೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ
ಮೂಲಕ ಗರ್ಭೀಣಿ ಮಹಿಳೆಯರಿಗೆ ವಿಶೇಷ ಸೌಲಭ್ಯಗಳನ್ನು
ಒದಗಿಸಲಾಗುತ್ತಿದೆ. ಉತ್ತಮವಾದ ಆರೋಗ್ಯ ಹೊಂದಲು ಪ್ರತಿನಿತ್ಯ
ನಾವು ಸೇವಿಸುವ ಆರೋಗ್ಯದಲ್ಲಿ ಹಸಿರು ಸೊಪ್ಪಿನ ತರಕಾರಿಗಳು,
ಮೊಳಕೆಕಾಳು ಒಳಗೊಂಡಿರಬೇಕು ಆಗ ಆರೋಗ್ಯದಲ್ಲಿ
ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ಲೋಕೇಶ್ ಮಾತನಾಡಿ ಕತಾರ್‍ನ ದೋಹ ಎಂಬಲ್ಲಿ
ವಿಶ್ವದ 193 ದೇಶಗಳು ಕೂಡಿ ಜಾಗತಿಕ ಮಟ್ಟದಲ್ಲಿ ಸುಸ್ಥಿರ
ಆರೋಗ್ಯದ ವಾತಾವರಣ ನಿರ್ಮಿಸುವ ಹಿನ್ನೆಲೆಯಲ್ಲಿ ಒಡಂಬಡಿಕೆ
ಮಾಡಿಕೊಂಡಿವೆ, ಅಭಿವೃದ್ದಿ ಮತ್ತು ಸುಸ್ಥಿರ ಅಭಿವೃದ್ದಿ ಇವುಗಳ
ಸಮತೋಲನವನ್ನ ವಿವಿಧ ಮಾನದಂಡಗಳಲ್ಲಿ ಅಳೆಯುವ
ಮೂಲಕ ದೇಶದ ಪ್ರಗತಿಯಲ್ಲಿ ಎಲ್ಲರೂ ಪಾಲ್ಗೊಳ್ಳುವುದು
ಹಾಗೂ ಸ್ಥಿರತೆ ಕಾಪಾಡಿಕೊಳ್ಳಲು ಶ್ರಮಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ
ಕೌಸರ್, ಡಿಡಿಪಿಐ ತಿಪ್ಪೇಶಪ್ಪ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣ
ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು
ಭಾಗವಹಿಸಿದ್ದರು.

Leave a Reply

Your email address will not be published. Required fields are marked *