ಚನ್ನಗಿರಿ ತಾಲ್ಲೂಕು ಕೆರಬಿಳಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸೂರು ಗ್ರಾಮದ ಹೊರ ವಲಯದ ಕಾಶೀಪುರ ಕ್ಯಾಂಪ್ ಕಡೆ ಹೋಗುವ ದಾರಿಯಲ್ಲಿನ ಎಸ್ಸಾರ್ ಪೆಟ್ರೋಲ್ ಬಂಕ್ ಬಳಿಯ ಟಾರ್ ರಸ್ತೆಯ ಪಕ್ಕದಲ್ಲಿ ಗಸ್ತುವೇಳೆ ಮುನ್ನಾಫ್ ಅಲಿಯಾಸ್ ಮುನ್ನಾ ಸುಮಾರು 43 ವರ್ಷ ರಾಮಗೊಂಡನಹಳ್ಳಿ ಗ್ರಾಮದ ಆರೋಪಿ ಪ್ಲಾಸ್ಟಿಕ್ ಚೀಲದಲ್ಲಿ 1.770 ಕೆ.ಜಿ ಎಲೆ ಸೊಪ್ಪು, ಒಣಗಿದ ಕಡ್ಡಿ, ಹೂ ತೆನೆಭರಿತ ಬೀಜ ಹಾಗೂ ಘಾಟು ವಾಸನೆಯಿಂದ ಕೂಡಿದ ಒಣ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶ ಹೊಂದಿರುವುದನ್ನು ಪತ್ತೆ ಹಚ್ಚಿ ಜುಲೈ 30 ರಂದು ಬೆಳಗ್ಗೆ 9.30 ಕ್ಕೆ ವಶಕ್ಕೆ ಪಡೆದು ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಶಪಡಿಸಿಕೊಂಡ ಗಾಂಜಾದ ಅಂದಾಜು ಮೊತ್ತ ರೂ.30010 ಗಳಾಗಿರುತ್ತದೆ. ಅಬಕಾರಿ ಜಂಟಿ ಆಯುಕ್ತರು ಹಾಗೂ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ದಾವಣಗೆರೆ ಹೊನ್ನಾಳಿ ಅಬಕಾರಿ ಉಪ ಅಧೀಕ್ಷಕರು ಮುರುಡೇಶ ಎಸ್.ಆರ್, ಅಬಕಾರಿ ನಿರೀಕ್ಷಕರು ರಶ್ಮಿ ಕೆ.ಆರ್ ಹಾಗೂ ಸಿಬ್ಬಂದಿಯವರು ದಾಳಿಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *