ಹೊನ್ನಾಳಿ: ತಾಲ್ಲುಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಿರೇಕಲ್ಮಠ ಹೊನ್ನಾಳಿ ಇವರುಗಳ ಸಹಯೋಗದೊಂದಿಗೆ 75ನೇ ಸ್ವಾತಂತ್ರದ ಅಮೃತ ಮಹೋತ್ವದ ಸಮಾರಂಭದ ಕಾರ್ಯಕ್ರಮದ ಮೋಹನ್ & ಶಾಲಾ ಮುಖ್ಯೋಪಾಧ್ಯಾಯರು ಧ್ವಜರೋಹಣ ನೆರವೇರಿಸಿದರು.
ಕಾರ್ಯದರ್ಶಿಗಳಾದ ಕೆ ಶೇಖರಪ್ಪ ಸರ್ವರಿಗೂ ಸ್ವಾಗತ ಕೋರಿದರು.
ಗೌರವ ಕೋಶಾಧ್ಯಕ್ಷರಾದ ಡಿ.ಎಂ ನಿಜಲಿಂಗಪ್ಪ ನಿರೂಪಣೆ ಮಾಡಿದರು.
ತದನಂತರ ಸಭೆಗೆ ಮುಖ್ಯ ಅತಿಥಿಗಳಾಗೆ ಆಗಮಿಸಿದ್ದ ಯು.ಎನ್ ಸಂಗನಾಳ ಮಠ ಸಾಹಿತಿಗಳು ಇವರುಗಳು ಪ್ರಸ್ತುತ ವಿಚಾರವನ್ನು ಕುರಿತು ಮಾತನಾಡುತ್ತಾ ತ್ರಿವರ್ಣಧ್ವಜದ ವಿವರವನ್ನು ಮಕ್ಕಳಿಗೆ ತಿಳಿಸುತ್ತಾ ಹೊನ್ನಾಳಿಗೆ ಗಾಂಧಿಯವರು ಭೇಟಿ ಕೊಟ್ಟಿದ್ದರ ಬಗ್ಗೆ ಪ್ರಸ್ತಾಪಿಸಿ 40 ರಾಷ್ರೀಯ ಲಾಂಛನಗಳ ಬಗ್ಗೆ ವಿವರಣೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮುರಿಗಪ್ಪಗೌಡರು ಮಹಾತ್ಮ ಗಾಂಧೀಜಿ ಅವರ ನಾಯಕತ್ವದಲ್ಲಿ ಅಹಿಂಸಾ ಮಾರ್ಗದಲ್ಲಿ ಮುನ್ನೆಡೆದು ಸ್ವಾತಂತ್ರಗಳಿಸಿದ ಹೆಮ್ಮ ನಮ್ಮದು ಅಸಂಖ್ಯಾತ ರಾಷ್ರ ಪೇಮಿಗಳ ತ್ಯಾಗ ಬಲಿದಾನಗಳಿಂದ ನಾವು ಪಡೆದಿರುವ ಸ್ವಾತಂತ್ರಕ್ಕೆ ಬೆಲೆಕಟ್ಟಲಾಗದು ಎಂದು ನುಡಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಮೋಹನ್ ಸಹ ಮಾತನಾಡಿದರು.
ಈ ಸಂದರ್ಭದಲ್ಲಿ:-ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸರ್ವ ಸದಸ್ಯರು, ಹಾಗೂ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಸಹ ಭಾಗಿಯಾಗಿದರು.

Leave a Reply

Your email address will not be published. Required fields are marked *