ನ್ಯಾಮತಿ ಃ ಬರುವ sಭಾನುವಾರದಿಂದ ಜೋಕುಮಾರನ ಮೂರ್ತಿ ಬುಟ್ಟಿಯಲ್ಲಿಟ್ಟು ತಲೆ ಮೇಲೆ ಹೊತ್ತು ರೈತರ – ಭಕ್ತರ ಮನೆ ಮನೆಗೆ ತೆರಳಲು ನ್ಯಾಮತಿ ಪಟ್ಟಣದ ಕುಂಬಾರರ ಮನೆಯಲ್ಲಿ ಸಿದ್ದವಾಗಿದ್ದನೆ.
ಗಣೇಶ ಹಬ್ಬವು ಮುಕ್ತಾಯವಾಗುತ್ತಿದ್ದಂತೆಯೆ ನ್ಯಾಮತಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಗಂಗಾಮತಸ್ಥರ ಮನೆಯಲ್ಲಿ ಭಾದ್ರಪದ ಶುದ್ದ ಸಮಿಯಂದು ಜೋಕುಮಾರಸ್ವಾಮಿ ಹುಟ್ಟಿ ಅಷ್ಟಮಿಯಿಂದ ಊರೂರು ಸುತ್ತುತ್ತಾನೆ ಜಾನಪದ ಸಂಸ್ಕೃತಿ ಹಿನ್ನೆಲೆ ಹೊಂದಿರುವ ಜೋಕುಮಾರಸ್ವಾಮಿ ಅಂದೇ (ಶನಿವಾರ) ರಾತ್ರಿ ಗಂಗಾಮತಸ್ಥ ಸಮಾಜದ ಮನೆಯಲ್ಲಿ ಜೋಕುಮಾರಸ್ವಾಮಿ ಹುಟ್ಟುತ್ತಾನೆ ಎಂಬ ಜನರಲ್ಲಿ ಪ್ರತೀತಿ ಇದೆ.
ಅಗಲವಾದ ಬಿದಿರಿನ ಬುಟ್ಟಿಯಲ್ಲಿ ಬೇವಿನಸೊಪ್ಪನ್ನು ಹಾಕಿ, ಮಧ್ಯಭಾಗದಲ್ಲಿ ಜೋಕುಮಾರಸ್ವಾಮಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಜೋಕುಮಾರನ ಮುಖಕ್ಕೆ ಕಪ್ಪು ಕಾಡಿಗೆ ಬಾಯಿಗೆ ಬೆಣ್ಣೆ ಬಳಿದು, ಹಣೆಗೆ ವಿಭೂತಿ, ಕುಂಕುಮ ಹೀಗೆ ಅಲಂಕೃತ ಜೋಕುಮಾರಸ್ವಾಮಿಯ ಮೂರ್ತಿಯ ನ್ಯಾಮತಿ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಗಂಗಾಮತಸ್ಥ ಸಮಾಜದ ಕೆಲ ಮನೆತನದ ಮಹಿಳೆಯರು, ಕುಂಬಾರರ ಮನೆಯಲ್ಲಿ ಮಣ್ಣಿನಿಂದ ತಯಾರಿಸಿದ ಜೋಕುಮಾರನ ಮೂರ್ತಿ ಬುಟ್ಟಿಯಲ್ಲಿಟ್ಟು ತಲೆ ಮೇಲೆ ಹೊತ್ತು ಮಹಿಳೆಯರು ‘ಅಡ್ಡಡ್ಡ ಮಳಿಬಂದ್ ದೊಡ್ಡದೊಡ್ಡ, ಕೆರೆತುಂಬಿ ಒಡ್ಡುಗಳೆಲ್ಲ ಒಡೆದಾವೊ ಜೋಕುಮಾರ… ಗೊಡ್ಡುಗಳೆಲ್ಲ ಹೈನಾವೊ ಜೋಕುಮಾರ’ ಎಂದು ಸುಶ್ರಾವ್ಯವಾಗಿ ಹಾಡುತ್ತಾ ಮನೆ ಮನೆಗಳಿಗೆ ತೆರಳಿ ಜೋಕುಮಾರನ ಹೊತ್ತು ತಂದ ಮಹಿಳೆಯರು ಮನೆ ಮುಂದೆ ಇಳಿಸಿ ಮನೆಯವರು ಪೂಜೆಸಿ ಮರದಲ್ಲಿ ಜೋಳ, ಅಕ್ಕಿ, ಮೆಣಸಿನಕಾಯಿ, ಉಪ್ಪು, ತರಕಾರಿ ಎಣ್ಣಿ , ಬೆಣ್ಣೆ ಸೇರಿದಂತೆ ವಿವಿದ ಧಾನ್ಯಗಳನ್ನು ಪಡೆದು ಇದಕ್ಕೆ ಪ್ರತಿಯಾಗಿ ಪ್ರಸಾದವನ್ನು ಅಳಲು ರೂಪದಲ್ಲಿ ನೀಡುವ ಸಂಪ್ರದಾಯ ಇದೆ ಎನ್ನುತ್ತಾರೆ ಗಂಗಾಮತಸ್ಥ ಸಮಾಜದ ಲೀಲಾಮ್ಮ.
ಮಣ್ಣಿನಿಂದ ಸಿದ್ಧಗೊಂಡ ಜೋಕುಮಾರನ ಮೂರ್ತಿ ಪೂಜೆ, ವಿವಿಧ ಆಚರಣೆ ಸುಮಾರು ವರ್ಷಗಳಿಂದ ಗಂಗಾಮತಸ್ಥದವರಿಂದ ಜೋಕುಮಾರನ ಹೊತ್ತು ತಂದ ಮಹಿಳೆಯರು ಪಟ್ಟಣದಲ್ಲಷ್ಟೇ ಅಲ್ಲದೇ ಮಲ್ಲಿಗೆನಹಳ್ಳಿ , ಬೆಳಗುತ್ತಿ , ರಾಮೇಶ್ವರ , ಫಲವನಹಳ್ಳಿ , ಚೀಲೂರು , ಗೋವಿನಕೋವಿ , ಕುಂಕುವ , ದಾನಿಹಳ್ಳಿ ಹೀಗೆ ಹತ್ತಾರು ಗ್ರಾಮಗಳಲ್ಲಿ ಸಂಚರಿಸಿ ರೈತರು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ.
ಜೋಕುಮಾರಸ್ವಾಮಿಯ ಆಚರಣೆಯು ಒಂದು ಜಾನಪದೀಯ ಆಚರಣೆಯಾಗಿದ್ದು, ಅವನು ಕೃಷಿ ಚಟುವಟಿಕೆಗಳಿಗೆ ಹಾಗೂ ರೈತರಿಗೆ ಉಪಕಾರಿಯಾಗಿರುತ್ತಾನೆ ಸತ್ತ ನಂತರ ಸ್ವರ್ಗಕ್ಕೆ ಹೋಗುವ ಜೋಕುಮಾರನು ತನಗಾಗಿ ಏನನ್ನು ಬೇಡದೆ ರೈತರ ಬದುಕು ಹಸನಾಗಬೇಕು ಅದಕ್ಕಾಗಿ ಭೂಲೋಕದಲ್ಲಿ ಕಾಲ ಕಾಲಕ್ಕೆ ಮಳೆ ಬೆಳೆ , ಕೆರೆ ಕಟ್ಟೆಗಳೆಲ್ಲ ನೀರಿನಿಂದ ತುಂಬಬೇಕು ಎಂದು ದೇವತೆಗಳಲ್ಲಿ ಬೇಡಿಕೊಳ್ಳುತ್ತಾನೆ. ಜೋಕುಮಾರನು ಸತ್ತ ನಂತರ ಸಮಾಜದವರು ನೀಡುವ ಅಳಲನ್ನು (ಅಂಬಲಿಯಿಂದ ತಯಾರಿಸಿದ ಪ್ರಸಾದ) ರೈತರು ತಮ್ಮ ಜಮೀನುಗಳಲ್ಲಿ ಚೆಲ್ಲೇದ್ದರೆ ಒಳ್ಳೆಯ ಬೆಳೆ ಬರುತ್ತದೆ ನಂಬಿಕೆ ರೈತರಿಗೆ ಅದರೆ ಮಕ್ಕಳಾಗದ ಮಹಿಳೆಯರು ಜೋಕುಮಾರನನ್ನು ಪೂಜಿಸಿದರೆ ಮಕ್ಕಳಾಗುತ್ತವೆ ಎಂಬ ಪ್ರತೀತಿಯೂ ಇದೆ ಎನ್ನುತ್ತಾರೆ ಪಟ್ಟಣದ ಹಿರಿಯರಾದ ರೇಣುಕಮ್ಮ
ಕೋಟ್ ಃ – ಜೋಕುಮಾರನ ಮಣ್ಣಿನ ಮೂರ್ತಿಯನ್ನು ಒಂದೇ ಎರಡು ಕುಟುಂಬಗಳು ಮಾತ್ರ ಮಾಡುತ್ತಾರೆ ಗಣೇಶನಮೂರ್ತಿಗೆ ಇರುವಷ್ಟು ಬೇಡಿಕೆ ಇದಕ್ಕೆ ಇರುವುದಿಲ್ಲ ಸೀಮಿತ ಕುಟುಂಬಗಳು ಆಚರಣೆ ಮಾಡುತ್ತಾರೆ ಒಂದು ಅಥವಾ ಎರಡು ಜೋಕುಮಾರನ ಮಣ್ಣಿನ ಮೂರ್ತಿಯನ್ನು ಮಾಡಿಕೊಡಲಾಗುತ್ತದೆ, ದೊಡ್ಡಮನೆ ಯಶೋದಮ್ಮ ಕುಂಬಾರ ಕಲಾವಿದ ನ್ಯಾಮತಿ.
–ಜೋಕುಮಾರನ ಮೂರ್ತಿ ಬುಟ್ಟಿಯಲ್ಲಿಟ್ಟು ಮನೆಯಲ್ಲಿ ಪೂಜೆ ಮಾಡಲಾಗಿದ್ದು ನಾವು ಹೋಗುತ್ತಿದ್ದ ಹಳ್ಳಿಗಳ ಜನರು ಬನ್ನಿ ಎಂದು ಕರೆದಿದ್ದರು ಅದರೆ ಯಾವ ಹಳ್ಳಿಗಳಿಗೆ ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಹೋಗಿರಲಿಲ್ಲ ಈ ಬಾರಿ ನಮ್ಮ ಸಂಪ್ರದಾಯವನ್ನು ಹಳ್ಳಿಗಳಿಗೆ ತೆರಳಿ ಕಾಯಕ ಮಾಡಲಾಗುತ್ತದೆ. ಲೀಲಾಮ್ಮ.
ಜೋಕುಮಾರನ ಹುಟ್ಟಿದ ಮೇಲೆ ಮನೆಗಳಲ್ಲಿ ಹೆಣ್ಣು ನೋಡುವ ಶಾಸ್ತ್ರ , ಮಾತುಕತೆ ಭೂಮಿ ಖರೀದಿ ಸೇರಿದಂತೆ ವಿವಿಧ ಶುಭ ಕಾರ್ಯಗಳು ಮಹಾಲಯ ಅಮಾವಾಸ್ಯೆಯವರಿಗೆ ನಿಷೇದ ಈ ಸಮಯದಲ್ಲಿ ಯಾರು ಮಾಡುವುದಿಲ್ಲ. ಇದಕ್ಕೆ ಜೋಕುಮಾರನ ಆಳಲು ಮತ್ತು ಪಿತೃ ಪಕ್ಷ ಎಂದು ಕರೆಯುತ್ತಾರೆ ಹಾಗಾಗಿ ಶುಭ ಕಾರ್ಯವನ್ನು ಮಾಡುವುದಿಲ್ಲ ಎಂ.ಎಸ್.ಶಾಸ್ತ್ರೀಹೊಳೆಮಠ್ ಪುರೋಹಿತರು, ಜ್ಯೋತಿಷ್ಯಿಗಳು.
ಪಟ್ಟಣದ ಕುಂಬಾರ ಬೀದಿಯ ಮನೆಯಲ್ಲಿ ಜೋಕುಮಾರ (ಮಣ್ಣಿನ ಮೂರ್ತಿ) ಅಂತಿಮ ರೂಪ ನೀಡುತ್ತಿರುವ ಕುಂಬಾರರ ಕಲಾವಿದ.
ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನ ಮೂರ್ತಿಯನ್ನು ಇಟ್ಟುಕೊಂಡು ನ್ಯಾಮತಿ ಪಟ್ಟಣದ ಶ್ರೀ ಕಾಳಮ್ಮ ಬೀದಿಯ ಮನೆಯೊಂದರಲ್ಲಿ ಧಾನ್ಯಗಳನ್ನು ಪಡೆಯುತ್ತಿರುವುದು ( ಸಂಗ್ರಹ ಚಿತ್ರ)